ಅಪಘಾತ

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು

ಸುಳ್ಯದ ಸೋಂಣಂಗೇರಿ ಸಮೀಪ ಸಂಭವಿಸಿದ ಅಪಘಾತ ಮಂಗಳೂರು : ಸುಳ್ಯ ಸಮೀಪ ಸೋಣಂಗೇರಿ ಸಮೀಪ ಕೆಲದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರು ಚಿಕಿತ್ಸೆ ಫಲನೀಡದೆ ಮೃತಪಟ್ಟಿದ್ದಾರೆ. ಕಲ್ಲುಗುಂಡಿಯ ಡಾ.ಶಮಂತ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಜುಲೈ 4ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲು ತೀವ್ರವಾಗಿ ಜಖಂಗೊಂಡಿದ್ದ […]

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು Read More »

ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ | ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಉಸಿರುಗಟ್ಟಿ ನಿಧನ

ಪುತ್ತೂರು: ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರುಗಟ್ಟಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಡೆದಿದೆ.   ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ (80) ಮೃತಪಟ್ಟವರು. ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರ ಮನೆಯಲ್ಲಿ ಜು.4 ರಂದು ಕೊಠಡಿಯಲ್ಲಿನ ಹವಾನಿಯಂತ್ರಣ ಉಪಕರಣದಲ್ಲಿ ದೋಷ ಕಂಡು ಹೊಗೆ ಕಾಣಿಸಿಕೊಂಡಿತ್ತು. ಘಟನೆಗೆ ಸಂಬಂಧಿಸಿ ಮನೆಯ ಕಪಾಟು, ಮಂಚ ಹಾನಿಯಾಗಿದೆ. ಅಗ್ನಿಶಾಮಕದಳದವರು

ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ | ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಉಸಿರುಗಟ್ಟಿ ನಿಧನ Read More »

ವಿದ್ಯುತ್‌ ಅವಘಡಕ್ಕೆ ವ್ಯಕ್ತಿ ಸಾವು

 ಬೆಳ್ತಂಗಡಿ : ವಿದ್ಯುತ್‌ ತಂತಿ ಸ್ಪರ್ಶಿಸಿ  ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವೇಣೂರು ಸಮೀಪ ನಡೆದಿದೆ.      ವೇಣೂರು ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ನಿವಾಸಿ ವೀರಪ್ಪ (74) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.    ವಿದ್ಯುತ್‌ ಪರಿವರ್ತಕದ ಬಳಿ ತೋಟದಲ್ಲಿ ಎಲ್.ಟಿ ಲೈನ್‌ ಮೇಲೆ ತೆಂಗಿನ ಗರಿ ಬಿದ್ದು, ತಂತಿಯು ತುಂಡಾಗಿ ನೀರಿನ ಹಳ್ಳಕ್ಕೆ ಬಿದ್ದು ತಂತಿಯಲ್ಲಿ ವಿದ್ಯುತ್‌ ಸರಬರಾಜಾಗುವ ಪ್ಯೂಸ಼್ ಹೋಗಿರುವುದು ಕಂಡುಬಂದಿದೆ.  ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದ ವೀರಪ್ಪ  ಹಳ್ಳದ ನೀರಿನಲ್ಲಿ ತೇಲಿ ಹೋಗುತ್ತಿದ್ದ ತೆಂಗಿನಕಾಯಿ, ಅಡಕೆಯನ್ನು ಹೆಕ್ಕಲು

ವಿದ್ಯುತ್‌ ಅವಘಡಕ್ಕೆ ವ್ಯಕ್ತಿ ಸಾವು Read More »

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು

ಸುಟ್ಟು ಭಸ್ಮವಾದ ಕಾರು, ಚಾಲಕ ಅಪಾಯದಿಂದ ಪಾರು ಮಂಗಳೂರು: ನಾಯಿಯೊಂದು ಅಡ್ಡ ಬಂದ ಪರಿಣಾಮ ಕಾರೊಂದು ‌ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ಘಟನೆ ನಿನ್ನೆ ರಾತ್ರಿ ಗಂಜಿಮಠದಲ್ಲಿ ನಡೆದಿದೆ. ಕಾರು ಮೊಗರುಕಟ್ಟೆಯಿಂದ ಗಂಜಿಮಠದ ಕಡೆಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ‌. ಈ ಸಂದರ್ಭದಲ್ಲಿ ಕಾರಿನ ಎಸಿ ಸ್ಪೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕಾರು ಸುಟ್ಟು ಭಸ್ಮವಾಗಿದೆ. ಕಾರು

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು Read More »

ವಿಕ್ಟೋರಿಯ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ : ರೋಗಿಗಳು ಪ್ರಾಣಾಪಾಯದಿಂದ ಪಾರು

ಡ್ಯೂಟಿ ಡಾಕ್ಟರ್‌ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ರೋಗಿಗಳು ಮತ್ತು ಸಿಬ್ಬಂದಿ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ರೋಗಿಗಳನ್ನು ಬೇರೆ ಬ್ಲಾಕ್‌ಗೆ ಶಿಫ್ಟ್ ಮಾಡಲಾಗಿದೆ. ಮುಂಜಾನೆ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ರಿಜಿಸ್ಟ್ರರ್ ಬುಕ್, ಬೆಡ್ ಎಲ್ಲ ಸುಟ್ಟುಹೋಗಿದೆ. ಫ್ರಿಡ್ಜ್‌ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್

ವಿಕ್ಟೋರಿಯ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ : ರೋಗಿಗಳು ಪ್ರಾಣಾಪಾಯದಿಂದ ಪಾರು Read More »

ಲಾರಿ-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು

ಬಂಟ್ವಾಳ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ಇಂದು ನಡೆದಿದೆ. ಶಂಭೂರು ಕೊಪ್ಪಳ ನಿವಾಸಿ ಚಿದಾನಂದ( 50) ಮೃತಪಟ್ಟ ದ್ವಿಚಕ್ರ ಸವಾರ. ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿದಾನಂದ ಅವರು

ಲಾರಿ-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು Read More »

ಕಲ್ಲುಗುಂಡಿಯಲ್ಲಿ ಕೆಎಸ್‍ ಆರ್ ಟಿಸಿ ಬಸ್‍ ಅಪಘಾತ : ಪ್ರಯಾಣಿಕರು ಅಪಾಯದಿಂದ ಪಾರು

ಸುಳ್ಯ: ಕೆಎಸ್‍ ಆರ್‍ ಟಿಸಿ ಬಸ್‍ ಅಪಘಾತಕ್ಕೀಡಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಸಮೀಪ ಕಡವಾಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್‍ ಚಾಲಕನ ನಿಯಂತ್ರಣ ತಪ್ಪಿದ ಬಸ್‍ ರಸ್ತೆ ಬದಿಯ ಚರಂಡಿಗೆ ಇಳಿದು ಬರೆಗೆ ವಾಲಿ ನಿಂತಿದೆ. ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲುಗುಂಡಿಯಲ್ಲಿ ಕೆಎಸ್‍ ಆರ್ ಟಿಸಿ ಬಸ್‍ ಅಪಘಾತ : ಪ್ರಯಾಣಿಕರು ಅಪಾಯದಿಂದ ಪಾರು Read More »

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಕಾರಿಗೆ ಕ್ಯಾಂಟರ್‌ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ದುರಂತ ಬೆಂಗಳೂರು: ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್​ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕ್ಯಾಂಟರ್ ಲಾರಿ​ ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪತಿ, ಪತ್ನಿ, ಮಗ, ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಬೇಗೌಡ (48), ಶೋಭಾ (42), ದುಂಬಿಶ್ರೀ (16) ಮತ್ತು ಭಾನು ಕಿರಣ್ ಗೌಡ (14) ಮೃತ ದುರ್ದೈವಿಗಳು. ಇವರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್​​ನವರು

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು Read More »

ಬೈಕ್‍ – ಆಟೋ ರಿಕ್ಷಾ ಅಪಘಾತ : ಏಳು ಮಂದಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ ಹಾಗೂ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಗು ಸಹಿತ ಏಳು ಮಂದಿ ಗಾಯಗೊಂಡ ಘಟನೆ ಉರ್ಲಾಂಡಿ ಬೈಪಾಸ್ ರಸ್ತೆ ಬಳಿ ಭಾನುವಾರ ಸಂಜೆ ನಡೆದಿದೆ. ರಿಕ್ಷಾದಲ್ಲಿದ್ದ ಉರೂಸ್ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ಸಾಲೆತ್ತೂರು ಮೂಲದ ಮೊಮ್ಮದ್ ತಮೀಮ್ (6), ಹಮೀದ್ (40), ಇಸ್ಮಾಯಿಲ್‌ (45), ಇಬ್ರಾಹಿಂ (65), ಸಮೀರ್ (34), ಸುಲೈಮಾನ್ (6) ಹಾಗೂ ಬೈಕ್ ಸವಾರ ಕೀರ್ತನ್ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸಮೀಪದ

ಬೈಕ್‍ – ಆಟೋ ರಿಕ್ಷಾ ಅಪಘಾತ : ಏಳು ಮಂದಿಗೆ ಗಾಯ Read More »

ಜೀಪು – ಲಾರಿ ಡಿಕ್ಕಿ : ಗಾಯಗೊಂಡ ಜೀಪು ಚಾಲಕ ಆಸ್ಪತ್ರೆಗೆ ದಾಖಲು

ಪುತ್ತೂರು: ಜೀಪು ಹಾಗೂ ಲಾರಿ ಡಿಕ್ಕಿ ಹೊಡೆದುಕೊಂಡು ಜೀಪು ಚಾಲಕ ಗಾಯಗೊಂಡ ಘಟನೆ ಇಂದು ಮುಕ್ರಂಪಾಡಿ ಬಳಿ ನಡೆದಿದೆ. ಘಟನೆ ಪರಿಣಾಮ ಜೀಪ್ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕ ದೇವಸ್ಯ ನಿವಾಸಿ ಮನೋಜ್‍ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ದಾರಿಯಲ್ಲಿ ತೆರಳುತ್ತಿದ್ದ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು

ಜೀಪು – ಲಾರಿ ಡಿಕ್ಕಿ : ಗಾಯಗೊಂಡ ಜೀಪು ಚಾಲಕ ಆಸ್ಪತ್ರೆಗೆ ದಾಖಲು Read More »

error: Content is protected !!
Scroll to Top