ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಇನ್ನೊಂದು ಕಾರು | ಕಾರುಗಳು ಜಖಂ
ಪುತ್ತೂರು: ಕಾರುಗಳೆರಡು ಡಿಕ್ಕಿ ಹೊಡೆದುಕೊಂಡ ಘಟನೆ ಬೈಪಾಸ್ ರಸ್ತೆಯ ಗೌಡ ಸಮುದಾಯ ಭವನದ ಬಳಿ ಇಂದು ಸಂಜೆ ನಡೆದಿದೆ. ರಸ್ತೆಯಲ್ಲಿ ಹಾವೊಂದು ಅಡ್ಡ ಬಂದ ಪರಿಣಾಮ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಕಾರಿಗೆ ಹಾನಿಯಾಗಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಇನ್ನೊಂದು ಕಾರು | ಕಾರುಗಳು ಜಖಂ Read More »