ಸುಳ್ಯ : ಕಾಡುಹಂದಿ ಅಡ್ಡಬಂದು ಕಾರು ಪಲ್ಟಿ
ಸುಳ್ಯ : ಹಂದಿ ಅಡ್ಡ ಬಂದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಸುಳ್ಯ ಸಮೀಪದ ಕೋಲ್ಚಾರಿನ ಕಣಕ್ಕೂರು ಎಂಬಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಗಾಯಗೊಂಡಿದ್ದಾರೆ. ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಸಂಚರಿಸುತ್ತಿದ್ದ ಕಾರಿನ ಎದುರು ದಿಢೀರ್ ಎಂದು ಕಾಡುಹಂದಿ ರಸ್ತೆಗೆ ಜಿಗಿದು ಅಡ್ಡ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮೋರಿಯ ಕೆಳಗೆ ಉರುಳಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.
ಸುಳ್ಯ : ಕಾಡುಹಂದಿ ಅಡ್ಡಬಂದು ಕಾರು ಪಲ್ಟಿ Read More »










