ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ
ಪುತ್ತೂರು: ಬೋಳೂವಾರಿನ ಪ್ರಗತಿ ಆಸ್ಪತ್ರೆಯ ಎದುರುಗಡೆ ಆಟೋರಿಕ್ಷಾ ಪಲ್ಟಿಯಾಗಿ ಮಹಿಳೆಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಗತಿ ಆಸ್ಪತ್ರೆ, ಎದುರುಗಡೆ ಪುತ್ತೂರಿಂದ ಬೊಳುವಾರು ಕಡೆ ಆಟೋರಿಕ್ಷಾ ಬರುತ್ತಿರುವಾಗ, ಎದುರುಗಡೆಯಿಂದ ಬರುವ ರಿಕ್ಷಾವೊಂದು ಸಡನ್ ಆಗಿ ತಿರುಗಿಸಿದಾಗ, ಪೇಟೆ ಕಡೆಯಿಂದ ಬರುವ ರಿಕ್ಷಾ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿ ಯಾದ ಘಟನೆ ನಡೆದಿದೆ. ಪಲ್ಟಿಯಾದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆತೂರಿನ ಮಹಿಳೆ ಎಂದು ತಿಳಿದು ಬಂದಿದೆ, ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. […]
ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ Read More »