ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದಿಂದ ಶ್ರಮದಾನ | ಸೋರುತ್ತಿರುವ ಮನೆಗೆ ಟರ್ಪಾಲ್ ಕೊಡುಗೆ

ಪುತ್ತೂರು: ಮೊಟ್ಟೆತ್ತಡ್ಕ ಆಶ್ರಯ ಕಾಲೋನಿಯ ನಿವಾಸಿ ನಾಗವೇಣಿಯವರ ಹಂಚಿನ ಮನೆಯು ಸೋರುತ್ತಿದ್ದು, ಈ ಹಿನ್ನಲೆಯಲ್ಲಿ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದವರು ಮನೆಗೆ ಟಾರ್ಪಲ್ ಒದಗಿಸಿ ಕಟ್ಟಿಕೊಡುವ ವ್ಯವಸ್ಥೆ ಮಾಡಿದರು. ಜತೆಗೆ ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದ ಮಾರ್ಗದಲ್ಲಿ ಮಣ್ಣಿನ ರಾಶಿ ತುಂಬಿದ್ದು ಮಾತ್ರವಲ್ಲ ರಸ್ತೆ ಮಧ್ಯೆಯೇ ನೀರು ತುಂಬಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಡಚಣೆ ಉಂಟಾಗಿತ್ತು. ಯುವಕ ಮಂಡಲದ ಯುವಕರು ಸೇರಿಕೊಂಡು ರಸ್ತೆಯಲ್ಲಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. […]

ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವಕ ಮಂಡಲದಿಂದ ಶ್ರಮದಾನ | ಸೋರುತ್ತಿರುವ ಮನೆಗೆ ಟರ್ಪಾಲ್ ಕೊಡುಗೆ Read More »

ಟ್ಯಾಂಕರ್-ತ್ರಿವೀಲರ್ ಸ್ಕೂಟರ್ ಅಪಘಾತ : ವಿಕಲಚೇತನ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ಟ್ಯಾಂಕರ್ ಮತ್ತು ತ್ರಿವೀಲರ್ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ವಿಕಲ ಚೇತನ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನೆಹರುನಗರ ಮಂಜಲಪಡ್ಡು ಬಳಿಯ ಪೆಟ್ರೋಲ್ ಪಂಪ್ ಮುಂಭಾಗ ನಿನ್ನೆ ರಾತ್ರಿ ಸಂಭವಿಸಿದೆ. ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50) ಮೃತಪಟ್ಟವರು. ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವು ಗಾಯಗೊಂಡ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಟ್ಯಾಂಕರ್-ತ್ರಿವೀಲರ್ ಸ್ಕೂಟರ್ ಅಪಘಾತ : ವಿಕಲಚೇತನ ಶಿವರಾಮ ನಾಯ್ಕ ಮೃತ್ಯು Read More »

ಕೇಂದ್ರ ಬಜೆಟ್ ಮಂಡನೆ | ನರೇಂದ್ರ ಮೋದಿಯವರ ವಿಕಸಿತ ಭಾರತ ಕುರಿತು ಅವರಿಗಿರುವ ಬದ್ಧತೆ ಮತ್ತಷ್ಟು ಹೆಚ್ಚಿಸಿದೆ : ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕುರಿತು ಅವರಿಗಿರುವ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಮೋದಿ 3.0 ನ ಸಂಕಲ್ಪ ಪತ್ರದಲ್ಲಿ ಮಾಡಲಾದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆಯಾಗಿದೆ ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನ ಒಂಬತ್ತು ಆದ್ಯತೆಗಳು ನಾನು ಹಾಕಿಕೊಂಡಿರುವ ಕಾರ್ಯಸೂಚಿ ‘ನವಯುಗ-ನವಪಥ’ಕ್ಕೆ ಪೂರಕವಾಗಲಿದೆ. ನಮ್ಮ9 ಆದ್ಯತೆಗಳ ಗುರಿಯನ್ನು ಸಮರ್ಥವಾಗಿ

ಕೇಂದ್ರ ಬಜೆಟ್ ಮಂಡನೆ | ನರೇಂದ್ರ ಮೋದಿಯವರ ವಿಕಸಿತ ಭಾರತ ಕುರಿತು ಅವರಿಗಿರುವ ಬದ್ಧತೆ ಮತ್ತಷ್ಟು ಹೆಚ್ಚಿಸಿದೆ : ಕ್ಯಾ.ಬ್ರಿಜೇಶ್ ಚೌಟ Read More »

ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ : ನಳಿನ್ ಕುಮಾರ್ ಕಟೀಲ್‍

ಮಂಗಳೂರು: ರೈತರು, ಮಹಿಳೆಯರು, ಉದ್ದಿಮೆದಾರರ ಸಹಿತ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಇಂದು ಮಂಡನೆಯಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭದ್ರ ತಳಪಾಯ ಹಾಕಿದೆ. ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ., ಶಿಕ್ಷಣ,ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ 1.48 ಲಕ್ಷ ಕೋಟಿ ರೂ., ಮಹಿಳೆಯರ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂ.,

ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ : ನಳಿನ್ ಕುಮಾರ್ ಕಟೀಲ್‍ Read More »

ಶಾಸಕ ಹರೀಶ್ ಪೂಂಜಾರನ್ನು ಗೂಂಡಾ ಎಂದ ಶಾಸಕ ರಾಜೇಗೌಡ | ಗದ್ದಲಕ್ಕೆ ಕಾರಣವಾದ ಈ ವರ್ತನೆ

ಬೆಂಗಳೂರು: ವಿಧಾನಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಗೂಂಡಾ ಎಂದು ಕರೆದಿರುವ ಶಾಸಕ ರಾಜೇಗೌಡ ಅವರ ಈ ವರ್ತನೆ ವಿಧಾಸನಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ವಿಧಾನಸಭೆಯ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಿರುವ ಕುರಿತಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸ್ಪೀಕ‌ರ್ ಯು.ಟಿ ಖಾದರ್ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಂವಿಧಾನ ಪರ ಯಾರು ವಿರುದ್ಧ ಯಾರು ಎಂಬ ಬಗ್ಗೆ ಎರಡು ಕಡೆಯವರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದರು. ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸದಸ್ಯರಾದ

ಶಾಸಕ ಹರೀಶ್ ಪೂಂಜಾರನ್ನು ಗೂಂಡಾ ಎಂದ ಶಾಸಕ ರಾಜೇಗೌಡ | ಗದ್ದಲಕ್ಕೆ ಕಾರಣವಾದ ಈ ವರ್ತನೆ Read More »

ಮಂಗಳೂರಿನ ಅಡಿಕೆ ವ್ಯಾಪಾರಿಗಳಿಗೆ ಎರಡು ಕೋಟಿ ಅಧಿಕ ವಂಚನೆ | ಪಾನ್ ಗುಟ್ಕಾ ಕಂಪನಿ ಮಾಲಕರ ಸೋಗಿನಲ್ಲಿ ವಂಚನೆ

ಮಂಗಳೂರು : ಉತ್ತರ ಭಾರತದ ವ್ಯಾಪಾರಿಗಳಿಂದ ರಿಟೈಲ್ ಅಡಿಕೆ ವ್ಯಾಪಾರಿಗಳಿಗೆ ವಂಚಿಸುವ ಜಾಲವೊಂದು ದಕ್ಷಿಣ ಕನ್ನಡ ದಲ್ಲಿ ಸಕ್ರಿಯವಾಗಿದ್ದು, 2 ಕೋ.ರೂ.ಗೂ ಅಧಿಕ ಹಣ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ನಲ್ಲಿ ತಮ್ಮ ಒಡೆತನದ ಪಾನ್ ಗುಟ್ಕಾ ತಯಾರಕ ಕಂಪೆನಿ ಇದೆಯೆಂದು ನಂಬಿಸಿ ಈ ವಂಚಕರು ಜಿಲ್ಲೆಯ ಹಲವಾರು ಚಿಲ್ಲರೆ ಅಡಿಕೆ ವ್ಯಾಪಾರಿಗಳಿಂದ ಲೋಡ್ ಗಟ್ಟಲೇ ಅಡಿಕೆ ಖರೀದಿಸಿದ್ದರು. ಆರಂಭದಲ್ಲಿ ಇವರು ಮಾಡಿದ ಹಲವು ಖರೀದಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸಿದರು. ಇದರಿಂದ ವ್ಯಾಪಾರಿಗಳಿಗೆ

ಮಂಗಳೂರಿನ ಅಡಿಕೆ ವ್ಯಾಪಾರಿಗಳಿಗೆ ಎರಡು ಕೋಟಿ ಅಧಿಕ ವಂಚನೆ | ಪಾನ್ ಗುಟ್ಕಾ ಕಂಪನಿ ಮಾಲಕರ ಸೋಗಿನಲ್ಲಿ ವಂಚನೆ Read More »

ಕೇಂದ್ರ ಬಜೆಟ್ ಮಂಡನೆ | ಆದಾಯಕ್ಕೆ ತೆರಿಗೆ ಸ್ಲ್ಯಾಬ್ ಗಳಲ್ಲಿ ಪರಿಷ್ಕರಣೆ

ದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2024 – 25ರಲ್ಲಿ ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ ಮಾಡಿದರಲ್ಲದೆ, ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಪರಿಷ್ಕರಣೆಯನ್ನು ಪ್ರಕಟಿಸಿದರು ಸ್ಟಾಂಡರ್ಡ್ ಡಿಡಕ್ಷನ್ 50,000 ರಿಂದ 75,000 ರೂಪಾಯಿಗೆ ಏರಿಕೆ ಪಿಂಚಣಿದಾರರಿಗೆ ಫ್ಯಾಮಿಲಿ ಪೆನ್ಶನ್ ಮಿತಿ 15,000 ರಿಂದ 25,000 ರೂಪಾಯಿಗೆ ಏರಿಕೆ ಹಳೆಯ ಟ್ಯಾಕ್ಸ್‌ ವಿವರ ಎರಡೂವರೆ ಲಕ್ಷ ರೂವರೆಗಿನ ಆದಾಯ : ತೆರಿಗೆ

ಕೇಂದ್ರ ಬಜೆಟ್ ಮಂಡನೆ | ಆದಾಯಕ್ಕೆ ತೆರಿಗೆ ಸ್ಲ್ಯಾಬ್ ಗಳಲ್ಲಿ ಪರಿಷ್ಕರಣೆ Read More »

ಆ.10: ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ಬಂಟೆರೆ ಸೇರಿಗೆ” ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು:ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಆ. 10 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿರುವ “ಆಟಿಡೊಂಜಿ ಬಂಟೆರೆ ಸೇರಿಗೆ” ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಪ್ರಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ,

ಆ.10: ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ಬಂಟೆರೆ ಸೇರಿಗೆ” ಆಮಂತ್ರಣ ಪತ್ರ ಬಿಡುಗಡೆ Read More »

ಆ.16 ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವರಮಹಾಲಕ್ಷ್ಮೀ ವೃತಪೂಜೆ |ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ ಇದರ ವತಿಯಿಂದ ಆ.16ರಂದು ಪುತ್ತೂರಿನ ಸುಭದ್ರ ಕಲಾಮಂದಿರದಲ್ಲಿ ವರಮಹಾಲಕ್ಷ್ಮೀ ವೃತಪೂಜೆ ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ  ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಚೇರಿಯಲ್ಲಿ ಜು.23ರಂದು ನಡೆಯಿತು. ಆ.16ರಂದು ಬೆಳಿಗ್ಗೆಯಿಂದ ವರಮಹಾಲಕ್ಷ್ಮೀ ಪೂಜೆ ನಡೆದು ಧಾರ್ಮಿಕ ಸಭಾಕಾರ್ಯಕ್ರಮ  ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.  ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ

ಆ.16 ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವರಮಹಾಲಕ್ಷ್ಮೀ ವೃತಪೂಜೆ |ಆಮಂತ್ರಣ ಪತ್ರ ಬಿಡುಗಡೆ Read More »

ಮಣ್ಣಿನಡಿ ಮಹಿಳೆಯ ಶವ ಪತ್ತೆ

ಉತ್ತರ ಕನ್ನಡ : ಅಂಕೋಲದ ಶಿರೂರಿನಲ್ಲಿ ಹೆದ್ದಾರಿಗೆ ಗುಡ್ಡ ಕುಸಿದು ದುರಂತ ಸಂಭವಿಸಿ ಒಂದು ವಾರ ಕಳೆದಿದ್ದು ಸತತ ಕಾರ್ಯಾಚರಣೆ ವೇಳೆ ಮತ್ತೊಂದು ಶವ ಸಿಕ್ಕಿದೆ. ನಿರಂತರ ಮಳೆಯಿಂದ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣುಗಳ ನಡುವೆಯೂ ರಕ್ಷಣಾ ತಂಡ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಮಹಿಳೆಯ ಶವ ಮಣ್ಣಿನಡಿ ಸಿಕ್ಕಿದೆ. ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರಿದಿದೆ.

ಮಣ್ಣಿನಡಿ ಮಹಿಳೆಯ ಶವ ಪತ್ತೆ Read More »

error: Content is protected !!
Scroll to Top