ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಅಂಗರಕ್ಷಕನ ನೇಮಕ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಕರೆ ಬರುವ ಸಾಧ್ಯತೆ ಯ ಹಿನ್ನಲೆಯಲ್ಲಿ ಅಂಗರಕ್ಷಕನನ್ನು ನಿಯೋಜಿಸಲಾಗಿದೆ. ರಾಜ್ಯ ಅಂಗರಕ್ಷಕ ಭದ್ರತಾ ಪುನರ್ ವಿಮರ್ಶನ ಸಮಿತಿ ಸೂಚನೆ ಮೇರೆಗೆ ತಕ್ಷಣ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ದ.ಕ.ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಓರ್ವ ಅಂಗರಕ್ಷಕನನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಅಂಗರಕ್ಷಕನ ನೇಮಕ Read More »

ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್ ನಿಧನ

ಪುತ್ತೂರು : ಪುರುಷರ ಕಟ್ಟೆ ಮನೆ ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್  ನಿನ್ನೆ ಮುಂಜಾನೆ ನಿಧನರಾಗಿದ್ದಾರೆ.  ಕೃಷ್ಣಪ್ಪ ನಾಯ್ಕ್   ಅವರು ಸುಮಾರು 34 ವರ್ಷಗಳ ಕಾಲ  ರೈಲ್ವೇ ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಇಬ್ಬರು ಗಂಡು ಮಕ್ಕಳನ್ನು  ಅಗಲಿದ್ದಾರೆ.

ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್ ನಿಧನ Read More »

ಪೊಲೀಸರಿಂದ ಹಲ್ಲೆ : ಆಸ್ಪತ್ರೆಗೆ ದಾಖಲಾದ ಯುವಕ

ಈಶ್ವಮಂಗಲ  : ಪಂಚೋಡಿಯಲ್ಲಿ ಜು.28ರಂದು ರಾತ್ರಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈಶ್ವರಮಂಗಲ ಪಂಚೋಡಿ ನಿವಾಸಿ, ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು. ಜು.28 ರಂದು ರಾತ್ರಿ ಭ್ರಮೀಷ್ ಮನೆಯಲ್ಲಿ ಮಲಗಿದ್ದು, ಈ ವೇಳೆ ಬಾಗಿಲು ಬಡಿದ ಶಬ್ದ ಆಯಿತು. ಬಾಗಿಲು ತೆರೆದಾಗ ಲೈಟ್ ಹಾಕಿ ಮನೆಯಲ್ಲಿ ಯಾರು ಇಲ್ಲವಾ ಎಂದು ಕೇಳಿದರು. ಯಾರು ಇಲ್ಲ ಎಂದು ಹೇಳಿದಾಗ ನನ್ನ

ಪೊಲೀಸರಿಂದ ಹಲ್ಲೆ : ಆಸ್ಪತ್ರೆಗೆ ದಾಖಲಾದ ಯುವಕ Read More »

ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ.ನಾರಾಯಣರಿಗೆ ಸೇವಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಕಂಪೆನಿ ಬನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಎ.ವಿ. ನಾರಾಯಣ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜು.26 ರಂದು ಮಂಗಳೂರಿನ ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ಕಂಪೆನಿ ಮ್ಯಾನೇಜರ್ ಪೂಜಿತ್, ಜಗದೀಶ್‍ ಬೆಳ್ಳಾರೆ, ತಾರನಾಥ ಪುತ್ತೂರು ಉಪಸ್ಥಿತರಿದ್ದರು.

ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ.ನಾರಾಯಣರಿಗೆ ಸೇವಾರತ್ನ ಪ್ರಶಸ್ತಿ Read More »

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ 14ನೇ ವರುಷದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ,ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ,  ಪುತ್ತೂರು ಮೊಸರು

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬಿಬಿಎಂಪಿ ಲಾರಿಯಡಿ ಸಿಲುಕಿ ಬೈಕ್ ಸವಾರರಿಬ್ಬರು ಮೃತ್ಯು  

ಬೆಂಗಳೂರು: ಬಿಬಿಎಂಪಿ ಲಾರಿಯಡಿಗೆ ಸಿಲುಕಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕೆ.ಆರ್‍.ಸರ್ಕಲ್ ಬಳಿ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಯುವತಿ ಶಿಲ್ಪಾ ಹಾಗೂ ಪ್ರಶಾಂತ್ ಮೃತಪಟ್ಟವರು. ನಿನ್ನೆ ರಾತ್ರಿ ಪ್ರಶಾಂತ್ (25) ಮತ್ತು ಶಿಲ್ಪ (25) ಬೈಕ್​ನಲ್ಲಿ ಚಲಿಸುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ

ಬಿಬಿಎಂಪಿ ಲಾರಿಯಡಿ ಸಿಲುಕಿ ಬೈಕ್ ಸವಾರರಿಬ್ಬರು ಮೃತ್ಯು   Read More »

ಕಳಾರದ ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ : ಕಳಾರ ನಿವಾಸಿ ಹಳೆ ಮನೆಯೊಂದರಲ್ಲಿ ಮುಸ್ತಫಾ (33 ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಮುಸ್ತಫಾರನ್ನು ಹುಡುಕಾಡಿದಾಗ ಹಳೆ ಮನೆಯೊಂದರಲ್ಲಿ ಮೊಬೈಲ್ ರಿಂಗ್ ಆಗುತ್ತಿದ್ದು, ಬಳಿಕ ಸ್ಥಳೀಯರು ಗಾಜು ಒಡೆದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಕಳಾರದ ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸವಣೂರು : ಸವಣೂರಿನ ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್‌ನ ಬೆಳ್ಳಿಹಬ್ಬ ಸಂಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಕ್ಕಳು ಮತ್ತು ಸಾರ್ವಜನಿಕರು ನಮ್ಮ ಸೇನೆಯ ಬಗ್ಗೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ತಿಳಿದುಕೊಂಡು ಅದಕ್ಕೆ ಬೇಕಾದ ಮಾದರಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ನಿವೃತ್ತ ಸೇನಾಧಿಕಾರಿ

ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ Read More »

ಗೀಸರ್ ನಿಂದ ವಿಷಾನಿಲ ಸೋರಿಕೆ : ಯುವಕ ಮೃತ್ಯು

ಮೂಡಬಿದಿರೆ : ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕನೋರ್ವ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ. ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ರವಿವಾರ ರಾತ್ರಿ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ ನಲ್ಲಿ

ಗೀಸರ್ ನಿಂದ ವಿಷಾನಿಲ ಸೋರಿಕೆ : ಯುವಕ ಮೃತ್ಯು Read More »

ಇಂದಿನಿಂದ (ಜು.29) ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ಜಿ.ಎಲ್.ಆಚಾರ್ಯ’ ಜ್ಯುವೆಲ್ಲರ್ಸ್ ನಲ್ಲಿ ಆಷಾಢ ಸೇಲ್ | ಚಿನ್ನ, ಬೆಳ್ಳಿಯ ಆಭರಣ ಖರೀದಿಗೆ ಆಕರ್ಷಕ ಕೊಡುಗೆ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ನಲ್ಲಿ ಜು 29 ರಿಂದ ಆಟಿ ಸೇಲ್ ಪ್ರಯುಕ್ತ ತಮ್ಮ ನೆಚ್ಚಿನ ಗ್ರಾಹಕರಿಗೆ ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ. 200ರ ವರೆಗೆ ಕಡಿತ ಹಾಗೂ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ರೂ. 5000 ವರೆಗೆ ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿಗೆ 2000ರೂ ರಿಯಾಯಿತಿ

ಇಂದಿನಿಂದ (ಜು.29) ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ಜಿ.ಎಲ್.ಆಚಾರ್ಯ’ ಜ್ಯುವೆಲ್ಲರ್ಸ್ ನಲ್ಲಿ ಆಷಾಢ ಸೇಲ್ | ಚಿನ್ನ, ಬೆಳ್ಳಿಯ ಆಭರಣ ಖರೀದಿಗೆ ಆಕರ್ಷಕ ಕೊಡುಗೆ Read More »

error: Content is protected !!
Scroll to Top