ಕರಾವಳಿಯ ಜನಪದ ಕ್ರೀಡೆ ಕಂಬಳದ ವೇಳಾ ಪಟ್ಟಿ ಬಿಡುಗಡೆ | ಫೆ.2 ಪುತ್ತೂರು ಕೋಟಿ-ಚೆನ್ನಯ, ಮಾ.22 ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ

ಮಂಗಳೂರು: ಜನಪದ ಕ್ರೀಡೆ ಕಂಬಳದ 2024-25ನೇ ಸಾಲಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ತುಳುನಾಡಿನಲ್ಲಿ ಕಂಬಳ ನಡೆಯುವುದರ ಜೊತೆಗೆ ಮಲೆನಾಡು ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಮತ್ತು ರಾಜ್ಯ ರಾಜಧಾನಿಯಲ್ಲಿ ಎರಡನೇ ಬಾರಿಗೆ ಕಂಬಳ ನಡೆಯಲಿದೆ. ಪುತ್ತೂರಿನ ಐತಿಹಾಸಿಕ ಕೋಟಿ-ಚೆನ್ನಯ ಜೋಡುಕರೆ ಕಂಬಳ ಫೆ.1, 2025 ಮತ್ತು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಮಾ.22, 2025ರಂದು ನಡೆಯಲಿದೆ. ಮೂಡಬಿದಿರೆ ಸ್ವರ್ಣಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ವಿಶೇಷ ಮಹಾಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪುರವರು […]

ಕರಾವಳಿಯ ಜನಪದ ಕ್ರೀಡೆ ಕಂಬಳದ ವೇಳಾ ಪಟ್ಟಿ ಬಿಡುಗಡೆ | ಫೆ.2 ಪುತ್ತೂರು ಕೋಟಿ-ಚೆನ್ನಯ, ಮಾ.22 ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ Read More »

ಅಕ್ಷಯ ಕಾಲೇಜಿನ ಇಂಟಿರೀಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಹೋಂ ಮಾಡೆಲ್ ಸ್ಪರ್ಧೆ

ಪುತ್ತೂರು :  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ಪ್ರಥಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ” ಹೋಂ ಮಾಡೆಲ್ ಮಾಸ್ಟರ್ಸ್”    ಎಂಬ   ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.    ‘ಎಲೈಟ್  ಇಂಟಿರಿಯರ್  ಡಿಸೈನ್ ‘ ಸಂಘ     ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ  ಕಾರ್ಯಕ್ರಮ  ಆಯೋಜಿಸಲಾಗಿತ್ತು.     ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ಯಾದ ಶ್ರೀ  ಅರ್ಪಿತ್ ಟಿ  ಎ ಉದ್ಘಾಟಿಸಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವುದೇ ರೀತಿಯ

ಅಕ್ಷಯ ಕಾಲೇಜಿನ ಇಂಟಿರೀಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಹೋಂ ಮಾಡೆಲ್ ಸ್ಪರ್ಧೆ Read More »

ಸಕಲೇಶಪುರ- ಬಾಳ್ಳುಪೇಟೆ ಸಂಪರ್ಕ‌ ರೈಲ್ವೆ ಹಳಿ ಮೇಲೆ‌ ಮಣ್ಣು ಕುಸಿತ l ರೈಲ್ವೆ ಸಂಚಾರ ಬಂದ್

ಹಾಸನ  : ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದು ಹಾಸನ- ಮಂಗಳೂರು ನಡುವಿನ ಹಳಿಯ ಮೇಲೆ ಭೂಕುಸಿತವಾದ ಕಾರಣದಿಂದ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಪುತ್ತೂರು- ಬೆಂಗಳೂರು ಸಹಿತ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆಯಾದರೂ, ಹಳಿಯ ಮೇಲೆ ಬೃಹತ್ ಪ್ರಮಾಣದ ಮಣ್ಣಿನ ರಾಶಿ ಬಿದ್ದುದರಿಂದ ತೆರವು ಕಾರ್ಯಾಚರಣೆ ಕಾಮಗಾರಿ ಸಂಪೂರ್ಣವಾಗಿಲ್ಲ.ಈ ಕಾರಣದಿಂದ 10 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು-ಕಾರವಾರ ಎಕ್ಸ್ ಪ್ರೆಸ್ (16595), ಕಾರವಾರ- ಕೆಎಸ್‌ಆರ್ ಬೆಂಗಳೂರು ಪಂಚಗಂಗಾ

ಸಕಲೇಶಪುರ- ಬಾಳ್ಳುಪೇಟೆ ಸಂಪರ್ಕ‌ ರೈಲ್ವೆ ಹಳಿ ಮೇಲೆ‌ ಮಣ್ಣು ಕುಸಿತ l ರೈಲ್ವೆ ಸಂಚಾರ ಬಂದ್ Read More »

ಮಾರಕಾಸ್ತ್ರಗಳಿಂದ ಯುವಕನ  ಕೊಲೆ

ಮಂಗಳೂರು : ತೊಕ್ಕೊಟ್ಟು ಕಲ್ಲಾಪು ಬಳಿ  ದುಷ್ಕರ್ಮಿಗಳ ತಂಡವೊಂದು ಯುವಕನೊರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ಕಡಪ್ಪರ ಸಮೀರ್ ಹತ್ಯೆಗೀಡಾದ ಯುವಕ ಎಂದು ತಿಳಿದು ಬಂದಿದೆ. ಈತ ಟಾರ್ಗೆಟ್ ಇಲಿಯಾಸ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಭಾನುವಾರ ತಡರಾತ್ರಿ ಸಮೀರ್ ತನ್ನ ತಾಯಿಯೊಂದಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಫಾಸ್ಟ್ ಫೂಡ್ ಅಂಗಡಿಗೆ ಕಾರಿನಲ್ಲಿ ಊಟಕ್ಕೆ ಬಂದಿದ್ದ ಎನ್ನಲಾಗಿದ್ದು, ಈ ವೇಳೆ ದುಷ್ಕರ್ಮಿಗಳು ಹೊಂಚುಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ

ಮಾರಕಾಸ್ತ್ರಗಳಿಂದ ಯುವಕನ  ಕೊಲೆ Read More »

ಅಕ್ಷಯ ಕಾಲೇಜಿನಲ್ಲಿ ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ವಿದ್ಯಾರ್ಥಿಗಳಿಗೆ ಐಒಟಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಂಬಂಧಿತ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಅಕ್ಷಯ ಕಾಲೇಜಿನ ಬಿ.ಸಿ.ಎ. ವಿಭಾಗ, ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಪ್ರಥಮ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವು ನಡೆಯಿತು. ವ್ಯಾಪಕವಾದ ಡೇಟಾ ಯುಗದಲ್ಲಿ, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಜ್ಞಾನ ಅತ್ಯಮೂಲ್ಯವಾದ ಮತ್ತು ಅನಿವಾರ್ಯವಾದ ಒಂದು ಅಂಶವಾಗಿದೆ. ಈಗಿನ ಪೈಪೋಟಿಯ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅದನ್ನು ಅನುಸರಿಸುವ ಜ್ಞಾನ ಅತ್ಯವಶ್ಯವಾಗಿದೆ. ಐಒಟಿ ಮತ್ತು ಡಿಜಿಟಲ್

ಅಕ್ಷಯ ಕಾಲೇಜಿನಲ್ಲಿ ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ Read More »

ಪೂಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73 ಕಾಮಗಾರಿಗೆ ಮರು ಚಾಲನೆ

ಬೆಳ್ತಂಗಡಿ : ಅರ್ಧದಲ್ಲೇ ನಿಂತಿದ್ದ ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73ರ ಕಾಮಗಾರಿ ಗುತ್ತಿಗೆಯನ್ನು ಬೇರೆಯವರಿಗೆ ನೀಡುವ ಮೂಲಕ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು. ಮೊದಲು ಗುತ್ತಿಗೆದಾರ ಡಿ.ಪಿ. ಜೈನ್‍ ಅವರಿಗೆ ನೀಡಲಾಗಿತ್ತು. ನಷ್ಟವಾಗಿದೆ ಎಂದು ಹೇಳಿ ಅರ್ಧದಲ್ಲೇ ಕಾಮಗಾರಿಯಿಂದ ಹಿಂದೆ ಸರಿದ ಕಾರಣ ಬಳಿಕ ಕಾಮಗಾರಿಯನ್ನು ಮುಗೆರೋಡಿ ಕಂಪೆನಿಗೆ ಹೊಣೆಯನ್ನು ನೀಡಲಾಗಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾಶಿಬೆಟ್ಟು ಬಳಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಅನುಭವ ಇಲ್ಲದ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗ ಅನುಭವಿ ಗುತ್ತಿಗೆದಾರರ

ಪೂಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73 ಕಾಮಗಾರಿಗೆ ಮರು ಚಾಲನೆ Read More »

ಪುತ್ತೂರು ಗೇರು ಸಂಶೋಧನಾ ಕೇಂದ್ರದಲ್ಲಿ ರೈತ ವಿಜ್ಞಾನಿ ಸಂವಾದ ಕಾರ್ಯಕ್ರಮ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರು ೧೦೯ ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಇಂದು ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತುನಲ್ಲಿ ಬಿಡುಗಡೆ ಮಾಡಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಗೇರು ನಿರ್ದೇಶನಾಲಯದಲ್ಲಿ ವಿಜ್ಞಾನಿ ರೈತ ಸಂವಾದವನ್ನು ಭಾನುವಾರ ಏರ್ಪಡಿಸಲಾಗಿತ್ತು. ನವದೆಹಲಿಯಲ್ಲಿ ಎರಡು ಗೇರಿನ ಹೈಬ್ರಿಡ್ ಪ್ರಭೇದಗಳು- ನೇತ್ರ ಜಂಬೋ-೧ ಮತ್ತು ನೇತ್ರ ಗಂಗಾವನ್ನು ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿದೆ. ಸಂಶೋಧನಾ ಕೇಂದ್ರದ ನಿರ್ದೇಶಕ ಡಾ ಜೆ.ದಿನಕರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಸಂಸ್ಥೆಗೆ ಹೆಮ್ಮೆಯ

ಪುತ್ತೂರು ಗೇರು ಸಂಶೋಧನಾ ಕೇಂದ್ರದಲ್ಲಿ ರೈತ ವಿಜ್ಞಾನಿ ಸಂವಾದ ಕಾರ್ಯಕ್ರಮ Read More »

ಬಿಲ್ಲವ ಮಹಿಳಾ ಸಂಘದಿಂದ ‘ಆಟಿದ ನೆಂಪುದ ಕೂಟ’

ಪುತ್ತೂರು: ತುಳು ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿ ನಶಿಸಿದರೆ ಕೃಷಿ ಇಲ್ಲ, ಕೃಷಿ ನಶಿಸಿದರೆ ಸಂಸ್ಕೃತಿ ಇಲ್ಲ. ಈ ನಿಟ್ಟಿನಲ್ಲಿ ಎರಡನ್ನೂ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ ಹೇಳಿದರು. ಅವರು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಮಂದಿರದಲ್ಲಿ ಮಹಿಳಾ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವರ ಸಂಘದ ಸಹಕಾರದೊಂದಿಗೆ ನಡೆದ ‘ಆಟಿದ ನೆಂಪುದ ಕೂಟ’

ಬಿಲ್ಲವ ಮಹಿಳಾ ಸಂಘದಿಂದ ‘ಆಟಿದ ನೆಂಪುದ ಕೂಟ’ Read More »

ಇಂದು ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರೆ

ಪ್ಯಾರಿಸ್ : ಜು.26ರಿಂದ ಆರಂಭಗೊಂಡಿದ್ದ ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಇಂದು ತೆರೆ ಕಾಣಲಿದೆ. 17 ದಿನಗಳ ಕಾಲ ನಡೆದ ಒಲಿಂಪಿಕ್ಸ್ ನಲ್ಲಿ ಎಲ್ಲಾ ದೇಶಗಳ ಆಯ್ದ ಸುಮಾರು 100 ಕ್ರೀಡಾಪಟುಗಳು ಭಾಗವಹಿಸಿದ್ದು, ಭಾರತ ಈವರೆಗೆ 6 ಪದಕಗಳನ್ನು ಮಾತ್ರ ಗೆದ್ದುಕೊಂಡಿದೆ. ಈ ಅರು ಪದಕಗಳಲ್ಲಿ ಮೂರು ಮೆಡಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬಂದಿರುವುದು ವಿಶೇಷ. ಜೊತೆಗೆ ಜಾವೆಲಿನ್ ಥೋನಲ್ಲಿ ಬೆಳ್ಳಿ, ಹಾಕಿಯಲ್ಲಿ ಕಂಚು, ಕುಸ್ತಿ ಫ್ರೀಸ್ಟೈಲ್‌ನಲ್ಲಿ ಕಂಚು ಗೆದ್ದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಎಲ್ಲ ದೇಶಗಳ ಆಯ್ದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಇಂದು ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರೆ Read More »

ಕರಾಟೆಯಲ್ಲಿ ಪ್ರಾಪ್ತಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಬೆಂಗಳೂರಿನಲ್ಲಿ‌ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ ಸ್ಥಾನಗಳಿಸಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಆಶಾ ಮತ್ತು ಗಿರೀಶ್ ಶೆಟ್ಟಿ ದಂಪತಿ ಪುತ್ರಿಯಾಗಿರುವ ಅವರಿಗೆ ಸೆನ್ಸಾಯಿ ಮಾಧವ ಅಳಿಕೆ ಇವರ ಮಾರ್ಗದರ್ಶನ ನೀಡಿದ್ದಾರೆ. ಸುರೇಶ್, ದಿಲೀಪ್, ರೋಹಿತ್ ಎಸ್‍.ಎನ್‍., ನಿಖಿಲ್ ಕೆ.ಟಿ., ನಿವೇದಿತಾ, ರೋಶಿನಿ ತರಬೇತಿ ನೀಡಿದ್ದಾರೆ.

ಕರಾಟೆಯಲ್ಲಿ ಪ್ರಾಪ್ತಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

error: Content is protected !!
Scroll to Top