ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ

ಪುತ್ತೂರು: ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ವಿಶ್ವ ಹಿಂದೂ ಪರಿಷದ್ ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರಂಭಗೊಂಡ […]

ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ Read More »

ಮುಡಾ ಹಗರಣ : ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ಗೆ ಮನವಿ

ಮೈಸೂರು : ಮುಡಾ ಹಗರಣದಿಂದ ನುಣುಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹೊಸ ಪಟ್ಟುಗಳನ್ನು ಹಾಕಿದರೂ ಹಗರಣದ ಸುಳಿ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಬಲವಾಗಿ ಸುತ್ತಿಕೊಳ್ಳುತ್ತಿದೆ. ಹಗರಣಕ್ಕೆ ಸಂಬಂಧಿಸಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ಮುಡಾ‌ ಹಗರಣದ ದೂರುದಾರರಲ್ಲಿ ಒಬ್ಬರಾಗಿರುವ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಇವರು ಸಿಎಂ ವಿರುದ್ಧ.ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713

ಮುಡಾ ಹಗರಣ : ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ಗೆ ಮನವಿ Read More »

ಆ.23, 24, 25 : ಚಿನ್ನಾಭರಣಗಳ ಮಳಿಗೆ ‘ಜೋಯಾಲುಕ್ಕಾಸ್’ ನಿಂದ ವಿಶಿಷ್ಟ ಆಭರಣಗಳ ಪ್ರದರ್ಶನ

ಪುತ್ತೂರು: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜೋಯಾಲುಕ್ಕಾಸ್ ವತಿಯಿಂದ ವಿಶಿಷ್ಟ ಆಭರಣ ಪ್ರದರ್ಶನ ಆ.23, 24 ಹಾಗೂ 25 ರಂದು ಅರುಣ ಕಲಾ ಮಂದಿರದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಆಭರಣ ಪ್ರದರ್ಶನದಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಖರೀದಿ ಮೇಲೆ ಉಚಿತ ಚಿನ್ನದ ನಾಣ್ಯ ನೀಡಲಾಗುವುದು. ವಿಶೇಷ ಕೊಡುಗೆಯಾಗಿ ಹಳೆಯ ಚಿನ್ನ ವಿನಿಮಯ ವ್ಯವಸ್ಥೆ ಇದೆ. ಅತ್ಯುನ್ನತ ಸೌಲಭ್ಯ ಮತ್ತು ಆಭರಣ ಪ್ರದರ್ಶನದಲ್ಲಿನ ಉತ್ಕೃಷ್ಟ ಸೇವೆಗಳು ನಿಮ್ಮ ಆಭರಣಗಳ ಖರೀದಿಯನ್ನು ಸಂತಸದಾಯಕ ಮತ್ತು ಸ್ಮರಣೀಯ ಅನುಭವವನ್ನಾಗಿ ಮಾಡುವುದಲ್ಲದೆ, ಗ್ರಾಹಕರ

ಆ.23, 24, 25 : ಚಿನ್ನಾಭರಣಗಳ ಮಳಿಗೆ ‘ಜೋಯಾಲುಕ್ಕಾಸ್’ ನಿಂದ ವಿಶಿಷ್ಟ ಆಭರಣಗಳ ಪ್ರದರ್ಶನ Read More »

ವಿಮಾನಕ್ಕೆ ಬಾಂಬ್‌ ಬೆದರಿಕೆ : ತಿರುವನಂತಪುರ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ

ತಿರುವನಂತಪುರ : ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್​ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂನಲ್ಲಿ ವಿಮಾನವನ್ನು ಕೆಳಗಿಳಿಸಲಾಯಿತು.ಬಾಂಬ್ ಬೆದರಿಕೆ ಬಂದ ನಂತರ ತಿರುವನಣತಪುರ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿಮಾನವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ವಿಮಾನವು ಬೆಳಗ್ಗೆ 8 ಗಂಟೆಗೆ ವಿಮಾನ ನಿಲ್ದಾಣದಲ್ಲಿ ಇಳಿಯಿತು.ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಸ್ಥಳಾಂತರಿಸಲಾಗಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದರು. ಏರ್​ ಇಂಡಿಯಾ ವಿಮಾನ 657 ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ವಿಮಾನವು

ವಿಮಾನಕ್ಕೆ ಬಾಂಬ್‌ ಬೆದರಿಕೆ : ತಿರುವನಂತಪುರ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ Read More »

ಮೋದಿ ಪೋಲೆಂಡ್‌ ಪ್ರವಾಸ : ಮಹಾರಾಜ ಜಾಮ್ ಸಾಹೇಬ್‌ ಸ್ಮಾರಕಕ್ಕೆ ನಮನ

ವಾರ್ಸಾ: ಪೋಲೆಂಡ್‌ ಮತ್ತು ಉಕ್ರೇನ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಾಮ್ ಸಾಹಿಬ್ ಸ್ಮಾರಕಕ್ಕೆ ತೆರಳಿ ನಮಿಸಿ ಗೌರವ ಸಲ್ಲಿಸಿದ್ದಾರೆ. ಭಾರತದ ಮಹಾರಾಜ ಜಾಮ್ ಸಾಹೇಬ್‌ ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಸಾವಿರಾರು ಯಹೂದಿ ಮಕ್ಕಳ ಜೀವ ಉಳಿಸಿದ್ದರು.ಗುಜರಾತಿನ ನವನಗರದ ಮಹಾರಾಜ ಜಾಮ್ ಸಾಹೇಬ್ ಯುದ್ಧದ ಸಂದರ್ಭದಲ್ಲಿ ಪೋಲೆಂಡ್​ನಿಂದ ಭಾರತಕ್ಕೆ ಅನೇಕ ಮಕ್ಕಳನ್ನು ಕರೆತಂದು ಯಹೂದಿಗಳ ಜೀವವನ್ನು ಉಳಿಸಿದ್ದರು ಮಾತ್ರವಲ್ಲದೆ ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬುಧವಾರ ಪೋಲೆಂಡ್ ತಲುಪಿದ್ದಾರೆ.

ಮೋದಿ ಪೋಲೆಂಡ್‌ ಪ್ರವಾಸ : ಮಹಾರಾಜ ಜಾಮ್ ಸಾಹೇಬ್‌ ಸ್ಮಾರಕಕ್ಕೆ ನಮನ Read More »

ಬಸ್-ಲಾರಿ ಡಿಕ್ಕಿ

ಪುತ್ತೂರು : ಸರಕಾರಿ ಬಸ್ ಹಾಗೂ ಲಾರಿ ಡಿಕ್ಕಿ ಹೊಡೆದುಕೊಂಡ ಘಟನೆ ಕಬಕ ಸಮೀಪ ನಡೆದಿದೆ. ಮಂಗಳೂರಿನಿಂದ ಪುತ್ತೂರು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂಬದಿಯಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ವಾಹನಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬಸ್-ಲಾರಿ ಡಿಕ್ಕಿ Read More »

ಭೋವಿ ನಿಗಮ ಹಗರಣ : ಮಾಜಿ ಎಂಡಿಯ ಸಹೋದರಿ ಸೆರೆ

ಮುಯ್ಯಿ ತೀರಿಸಲು ಬಿಜೆಪಿ ಕಾಲದ ಹಗರಣ ಕೆದಕುತ್ತಿರುವ ಕಾಂಗ್ರೆಸ್‌ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಅವ್ಯವಹಾರದ ಆರೋಪ ಹೊರಿಸಿರುವ ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ ಹಳೆ ಹಗರಣಗಳನ್ನು ಕೆದಕುತ್ತಿದೆ. ಭೋವಿ ನಿಗಮದಲ್ಲಿ ಬಿಜೆಪಿ ಆಳ್ವಿಕೆ ಕಾಲದಲ್ಲಿ ಸಂಭವಿಸಿದೆ ಎನ್ನಲಾಗಿರುವ ಹಗರಣವೊಂದಕ್ಕೆ ಸಂಬಂಧಿಸಿ ಅಂದಿನ ನಿಗಮದ ಎಂಡಿಯ ಸಹೋದರಿಯನ್ನು ಸಿಐಡಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.ಹಗರಣದಲ್ಲಿ ತನ್ನ ಸೋದರಿಯ ಬಹುಕೋಟಿ ಅವ್ಯವಹಾರದಲ್ಲಿ 2 ಕೋಟಿ ರು. ಹಣ ಸ್ವೀಕರಿಸಿದ ಆರೋಪ ಹೊತ್ತು

ಭೋವಿ ನಿಗಮ ಹಗರಣ : ಮಾಜಿ ಎಂಡಿಯ ಸಹೋದರಿ ಸೆರೆ Read More »

ಐವನ್ ಡಿ’ಸೋಜಾ ಮನೆಗೆ ದುಷ್ಕರ್ಮಿಗಳಿಂದ ಕಲ್ಲೆಸೆತ !

ಮಂಗಳೂರು:  ಎಂಎಲ್ ಸಿ ಐವನ್ ಡಿಸೋಜಾ ಅವರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಎಂಎಲ್ ಸಿ ಐವನ್ ಡಿಸೋಜಾ ಅವರ ಮನೆ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐವನ್ ಡಿಸೋಜಾ ಅವರು ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಗೆಹ್ಲೋಟ್ ಅವರಂತಹ ಕುತಂತ್ರಿ

ಐವನ್ ಡಿ’ಸೋಜಾ ಮನೆಗೆ ದುಷ್ಕರ್ಮಿಗಳಿಂದ ಕಲ್ಲೆಸೆತ ! Read More »

ರಿಯಾಕ್ಟರ್‌ ಸ್ಫೋಟ : ಸಾವಿನ ಸಂಖ್ಯೆ 17ಕ್ಕೇರಿಕೆ

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ಬುಧವಾರ ಸಂಭವಿಸಿದ ರಿಯಾಕ್ಟರ್‌ ಸ್ಫೋಟ ದುರಂತದಲ್ಲಿ ಮಡಿದವರ ಸಂಖ್ಯೆ 17ಕ್ಕೇರಿದೆ. ಕನಿಷ್ಠ 30 ಕಾರ್ಮಿಕರು ಗಾಯಗೊಂಡಿದ್ದಾರೆ.ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂ ಎಸ್‌ಇಜೆಡ್‌ನಲ್ಲಿರುವ ಎಸ್ಸೆಂಟಿಯಾ ಅಡ್ವಾನ್ಸ್‌ಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡಿದೆ.ಸ್ಫೋಟದ ಪರಿಣಾಮ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಟ್ಟ ಹೊಗೆಯಿಂದಾಗಿ ಉಸಿರುಕಟ್ಟಿ ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ.ಈ ಕಾರ್ಖಾನೆಯಲ್ಲಿ ಎರಡು

ರಿಯಾಕ್ಟರ್‌ ಸ್ಫೋಟ : ಸಾವಿನ ಸಂಖ್ಯೆ 17ಕ್ಕೇರಿಕೆ Read More »

ಬೈಕ್‌ ತಾಗಿತು ಎಂದು ಚೇಸ್‌ ಮಾಡಿ ಯುವಕನ ಕೊಲೆ

ಬೆಂಗಳೂರು : ಕಾರಿಗೆ ಬೈಕ್‌ ಉಜ್ಜಿಕೊಂಡು ಹೋಯಿತು ಎಂಬ ಸಿಟ್ಟಿನಲ್ಲಿ ಬೈಕ್‌ ಚಾಲಕನನ್ನು ಚೇಸ್‌ ಮಾಡಿಕೊಂಡು ಹೋಗಿ ಅಪಘಾತವೆಸಗಿ ಸಾಯಿಸಿದ ಆಘಾತಕಾರಿ ಘಟನೆ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಂಭವಿಸಿದೆ.ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಡೆಲಿವರಿ ಬಾಯ್ ಮಹೇಶ್ ಎಂಬಾತ ಮೃತಪಟ್ಟ ಯುವಕ. ಮಹೇಶ್ ಬುಧವಾರ ರಾತ್ರಿ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್‌ ಮಾಡಿದರೂ ಸೈಡ್‌ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್‌ ಸ್ವಲ್ಪ ಟಚ್‌ ಆಗಿದೆ.

ಬೈಕ್‌ ತಾಗಿತು ಎಂದು ಚೇಸ್‌ ಮಾಡಿ ಯುವಕನ ಕೊಲೆ Read More »

error: Content is protected !!
Scroll to Top