ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆ : ಗೃಹ ಸಚಿವರ ಹೇಳಿಕೆ

ಕೋಮುಗಲಭೆಯಾಗಿಲ್ಲ ಜನರು ಕಲ್ಲು ತೂರಿಕೊಂಡಿದ್ದಾರೆ ಎಂದು ತೇಲಿಸಿಬಿಟ್ಟ ಪರಮೇಶ್ವರ್‌ ಬೆಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ರಾತ್ರಿ ಗಣೇಶ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರಿದ ಬಳಿಕ ಸ್ಫೋಟಗೊಂಡ ಗಲಭೆಯನ್ನು ಗೃಹ ಸಚಿವ ಜಿ.ಪರಮೇಶ್ವರ್‌ ಕೋಮುಗಲಭೆಯಲ್ಲ ಸಣ್ಣ ಘಟನೆ ಎಂದು ಬಣ್ಣಿಸಿ ಮತ್ತೆ ಬೇಜವಾಬ್ದಾರಿ ಮೆರೆದಿದ್ದಾರೆ.ಕೋಮು ಗಲಭೆಯಾಗಿಲ್ಲ, ಆಕಸ್ಮಿಕ ಘಟನೆ ನಡೆದಿದೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ […]

ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆ : ಗೃಹ ಸಚಿವರ ಹೇಳಿಕೆ Read More »

ಸ್ಕೂಟರ್ ಅಪಘಾತ | ಆಸ್ಪತ್ರೆಗೆ ದಾಖಲಾಗಿದ್ದ ಕೀರ್ತನ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ವೀರಾಂಜನೇಯ ಘಟಕ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡ (22) ಮೃತಪಟ್ಟವರು. ಸೆ.10 ರಂದು ಮಧ್ಯರಾತ್ರಿ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಕೀರ್ತನ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ

ಸ್ಕೂಟರ್ ಅಪಘಾತ | ಆಸ್ಪತ್ರೆಗೆ ದಾಖಲಾಗಿದ್ದ ಕೀರ್ತನ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಸಹೋದರಿಯ ಮದುವೆ ಖರ್ಚಿಗಾಗಿ ಗಾಂಜಾ ಮಾರಾಟಕ್ಕಿಳಿದ ವ್ಯಕ್ತಿ ಈಗ ಪೊಲೀಸರ ಅತಿಥಿ

ಬೆಂಗಳೂರು: ಸಹೋದರಿಯ ಮದುವೆ ಮಾಡುವ ಸಲುವಾಗಿ ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಮೂಲದ ಬದ್ರುದ್ದೀನ್ ಬಂಧಿತ ಆರೋಪಿ ಬಂಧಿತನಿಂದ 1 ಲಕ್ಷ ರೂ. ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪರಿಚಿತನೊಬ್ಬನ ಸಲಹೆಯಂತೆ ಒಡಿಶಾಕ್ಕೆ ತೆರಳಿ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೊಟೇಲ್‌ನಲ್ಲಿನ ಸಂಬಳದಿಂದ ಕುಟುಂಬ ನಿರ್ವಹಣೆ

ಸಹೋದರಿಯ ಮದುವೆ ಖರ್ಚಿಗಾಗಿ ಗಾಂಜಾ ಮಾರಾಟಕ್ಕಿಳಿದ ವ್ಯಕ್ತಿ ಈಗ ಪೊಲೀಸರ ಅತಿಥಿ Read More »

70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್‌ನಲ್ಲಿ 5 ಲ. ರೂ. ಆರೋಗ್ಯ ವಿಮೆ

6 ಕೋಟಿ ಹಿರಿಯರಿಗೆ ಕೇಂದ್ರದ ಕೊಡುಗೆ ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಯೋಜನೆಯ ಕುರಿತಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. 70 ವರ್ಷ ಮೇಲ್ಪಟ್ಟ ಎಲ್ಲ ವೃದ್ಧರು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯನ್ನು ಪಡೆಯಲಿದ್ದು, ಇದು ಹಿರಿಯರಿಗೆ ಕೇಂದ್ರ ನೀಡಿದ ಬಹಳ ದೊಡ್ಡ ಕೊಡುಗೆಯಾಗಿದ್ದು, ಬಿಜೆಪಿ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದೆ. ಮೊದಲು ಈ ಯೋಜನೆ ಎಲ್ಲ ವರ್ಗದ ಹಿರಿಯರನ್ನು ಒಳಗೊಂಡಿರಲಿಲ್ಲ. ಈಗ 70 ವರ್ಷ

70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್‌ನಲ್ಲಿ 5 ಲ. ರೂ. ಆರೋಗ್ಯ ವಿಮೆ Read More »

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗೆಗಳಿಗೆ ಚಾಲನೆ, ಎರಡನೇ  ಘಟಕದ ಉದ್ಘಾಟನೆ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗೆಗಳಿಗೆ ಚಾಲನೆ ಮತ್ತು ಎರಡನೇ  ಘಟಕದ  ಉದ್ಘಾಟನಾ  ಕಾರ್ಯಕ್ರಮ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಯಿತು . ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ  ಶೇಷಪ್ಪ ಕೆ  ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಧಿಕೃತವಾಗಿ 2 ನೇ  ಘಟಕಕ್ಕೆ ಚಾಲನೆ ನೀಡಿ, ರಾಷ್ಟ್ರೀಯ ಸೇವಾ ಯೋಜನೆಯು  ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹುದೊಡ್ಡ ಕಾರ್ಯಕರ್ತರನ್ನು ಹೊಂದಿರುವ

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗೆಗಳಿಗೆ ಚಾಲನೆ, ಎರಡನೇ  ಘಟಕದ ಉದ್ಘಾಟನೆ Read More »

ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ : ಅಂಬಿಕಾ ವಿದ್ಯಾಲಯದ ದೃಶಾನ ಪ್ರಥಮ

ಪುತ್ತೂರು: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿನಿ ದೃಶಾನ ಸುರೇಶ ಸರಳಿಕಾನ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್‌ ನ 14 ವಯೋಮಿತಿ ಒಳಗಿನ (ಬಾಲವರ್ಗ) ಸ್ಪರ್ಧೆಯಲ್ಲಿ ಭಾಗವಹಿಸಿ 100 ಮೀ., ಹಾಗೂ 200 ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ದೃಶಾನ ಬೆಟ್ಟಂಪಾಡಿಯ ಸುರೇಶ ಗೌಡ ಸರಳಿಕಾನ ಮತ್ತು ವಿದ್ಯಾಶ್ರೀ ದಂಪತಿ ಪುತ್ರಿ. ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು

ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ : ಅಂಬಿಕಾ ವಿದ್ಯಾಲಯದ ದೃಶಾನ ಪ್ರಥಮ Read More »

ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಮಹಾಸಭೆ | 32.40 ಕೋಟಿ ವ್ಯವಹಾರ, 10.02 ಲಕ್ಷ ಲಾಭ, ಶೇ.12 ಡಿವಿಡೆಂಡ್ ಘೋಷಣೆ

ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘ 2023-24ನೇ ಸಾಲಿನಲ್ಲಿ 32.40 ಕೋಟಿ ವ್ಯವಹಾರ ನಡೆಸಿ 10.02 ಲಕ್ಷ ರೂ. ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು. ಸಂಘದ ಪ್ರಧಾನ ಕಚೇರಿಯ ‘ಮಾಧುರಿ ಸೌಧ’ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಘೋಷಣೆ ಮಾಡಿದರು. ವರದಿ ವರ್ಷ ಸಂಘದಲ್ಲಿ 3,030 ಸದಸ್ಯರಿಂದ 13.77 ಲಕ್ಷ ರೂ. ಪಾಲು ಬಂಡವಾಳ, 64.22

ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಮಹಾಸಭೆ | 32.40 ಕೋಟಿ ವ್ಯವಹಾರ, 10.02 ಲಕ್ಷ ಲಾಭ, ಶೇ.12 ಡಿವಿಡೆಂಡ್ ಘೋಷಣೆ Read More »

ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಫಲ ಕೋಮುಗಲಭೆ : ಎಚ್‌ಡಿಕೆ

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಸಂಭವಿಸಿದ ಕೋಮು ಗಲಭೆಯನ್ನು ಖಂಡಿಸಿರುವ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ ಎಂದು ಎಚ್​ಡಿಕೆ ಹೇಳಿದ್ದಾರೆ.ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿ ದಾಂಧಲೆ ಎಬ್ಬಿಸಿರುವುದನ್ನು

ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಫಲ ಕೋಮುಗಲಭೆ : ಎಚ್‌ಡಿಕೆ Read More »

ಮಂಡ್ಯ : ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೋಮು ಹಿಂಸಾಚಾರ

ಅಂಗಡಿ ವಾಹನಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಕಲ್ಲುತೂರಾಟವಾಗಿ ಬಳಿಕ ಕೋಮು ಗಲಭೆ ಸಂಭವಿಸಿ ಪರಿಸ್ಥಿತಿ ಬಿಗಡಾಯಿಸಿದ್ದು, ಇಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಿಡಿಗೇಡಿಗಳು ಮೆರವಣಿಗೆಯ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ನಡುರಸ್ತೆಯಲ್ಲೇ ತಲ್ವಾರ್, ಲಾಂಗು, ರಾಡ್‌ಗಳನ್ನು ಜಳಪಿಸಿದ್ದಾರೆ. ಪೆಟ್ರೋಲ್ ಬಾಂಬ್ ದಾಳಿಗೆ ಅಂಗಡಿಗಳು ಹೊತ್ತಿ ಉರಿದಿವೆ. ಪೊಲೀಸ್ ಠಾಣೆ ಮುಂದೆಯೇ ಹಿಂದೂ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ

ಮಂಡ್ಯ : ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೋಮು ಹಿಂಸಾಚಾರ Read More »

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು

ಒಳ್ಳೆಯ ಮಗಳು ಒಳ್ಳೆಯ ಸೊಸೆ ಕೂಡ ಆಗಬಹುದು ಅಲ್ವಾ? ಮಾನವೀಯ ಸಂಬಂಧಗಳಲ್ಲಿ ನನಗೆ ಅತಿ ಹೆಚ್ಚು ಸಂಕೀರ್ಣ ಅನ್ನಿಸುವುದು ಅತ್ತೆ ಮತ್ತು ಸೊಸೆಯರ ಸಂಬಂಧ. ಮೊನ್ನೆ ಮೊನ್ನೆಯವರೆಗೂ ಒಳ್ಳೆಯ ತಾಯಿ ಆಗಿದ್ದಾಕೆ ಮಗ ಮದುವೆಯಾಗಿ ಸೊಸೆಯನ್ನು ಮನೆ ತುಂಬಿಸಿಕೊಂಡ ನಂತರ ಒಳ್ಳೆಯ ಅತ್ತೆ ಆಗಬಹುದು ಅಲ್ವಾ? ಯಾವುದೋ ಮನೆಯಲ್ಲಿ ಒಳ್ಳೆಯ ಮಗಳು ಆಗಿದ್ದ ಹುಡುಗಿಯು ಗಂಡನ ಮನೆಗೆ ಬಂದಾಗ ಒಳ್ಳೆಯ ಸೊಸೆ ಕೂಡ ಆಗಲು ಏನು ತೊಂದರೆ? ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ತುಂಬಾ ಸುಧಾರಣೆ ಆಗಿವೆ.

ಒಳ್ಳೆಯ ತಾಯಿ ಒಳ್ಳೆಯ ಅತ್ತೆ ಕೂಡ ಆಗಬಹುದು Read More »

error: Content is protected !!
Scroll to Top