ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ‘‘ಮುಳಿಯ ಚಿನ್ನೋತ್ಸವ’ಕ್ಕೆ ಚಾಲನೆ | ನ.5 ರ ತನಕ ನಡೆಯಲಿದೆ ಚಿನ್ನೋತ್ಸವ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ನಲ್ಲಿ ಆಭರಣಗಳ ಮಾರಾಟ ಹಬ್ಬ ‘ಮುಳಿಯ ಚಿನ್ನೋತ್ಸವ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ಒಂದು ತಿಂಗಳ ಕಾಲ ನಡೆಯುವ ಮುಳಿಯ ಚಿನ್ನೋತ್ಸವಕ್ಕೆ ಶಿಕ್ಷಕಿ ಉಮಾ ವಿ.ಎಸ್. ಕೆದಿಲಾಯ ಚಾಲನೆ ನೀಡಿ ಮಾತನಾಡಿ, ಕಳೆದ 30 ವರ್ಷಗಳಿಗೂ ಮಿಕ್ಕಿ ಸಮಯಗಳಿಂದ ಮುಳಿಯ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಸಂಸ್ಥೆಯಲ್ಲಿ ಇರುವ ಚಿನ್ನಾಭರಣಗಳ ಸಂಗ್ರಹ ಹಾಗೂ ಉತ್ತಮ ಸೇವೆ ಸಂಸ್ಥೆಯನ್ನು ಎತ್ತರಕ್ಕೆ ಏರುವಂತೆ ಮಾಡಿದೆ. ವ್ಯವಹಾರದ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿಯ ಹೊಂದಾಣಿಗೆ ಚೆನ್ನಾಗಿದೆ ಎಂದು […]

ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ‘‘ಮುಳಿಯ ಚಿನ್ನೋತ್ಸವ’ಕ್ಕೆ ಚಾಲನೆ | ನ.5 ರ ತನಕ ನಡೆಯಲಿದೆ ಚಿನ್ನೋತ್ಸವ Read More »

ನ.2 : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣಾ ಸಮಾರಂಭ | 75 ಸಾವಿರ ಮಂದಿಗೆ ಈ ಬಾರಿ ವಸ್ತ್ರ ವಿತರಣೆ, 45 ಸಾವಿರ ಮಂದಿಗೆ ಊಟದ ವ್ಯವಸ್ಥೆ

ಪುತ್ತೂರು : ಪ್ರತೀ ವರ್ಷ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ದೀಪಾವಳಿ ಸಂದರ್ಭದಲ್ಲಿ ನಡೆಯುವ ವಸ್ತ್ರವಿತರಣಾ ಸಮಾರಂಭ ‘ಅಶೋಕ ಜನಮನ- 2024’ ನ.2 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಶುಕ್ರವಾರ ಟ್ರಸ್ಟ್‍ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷ, ಜಾತಿ, ಮತ ಬಿಟ್ಟು ಎಲ್ಲರನ್ನು ಸೇರಿಸಿಕೊಂಡು ಮಾಡುವ ಕಾರ್ಯಕ್ರಮ. ಸುಮಾರು

ನ.2 : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣಾ ಸಮಾರಂಭ | 75 ಸಾವಿರ ಮಂದಿಗೆ ಈ ಬಾರಿ ವಸ್ತ್ರ ವಿತರಣೆ, 45 ಸಾವಿರ ಮಂದಿಗೆ ಊಟದ ವ್ಯವಸ್ಥೆ Read More »

ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅರುಣ್ ಪುತ್ತಿಲ ಮನೆಗೆ ಭೇಟಿ

ಪುತ್ತೂರು: ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ,  ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮನೆಗೆ ಭೇಟಿ ನೀಡಿದರು. ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಯುಕ್ತ ಜಿಲ್ಲೆಗೆ ಭೇಟಿ ನೀಡಿದ ಯುವ ಮೋರ್ಚಾ ಅಧ್ಯಕ್ಷರನ್ನು ನರಿಮೊಗರು ಬಳಿ ಇರುವ ಅರುಣ್ ಪುತ್ತಿಲ ರವರ ಮನೆ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,  ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪುತ್ತೂರು ಮಂಡಲ

ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅರುಣ್ ಪುತ್ತಿಲ ಮನೆಗೆ ಭೇಟಿ Read More »

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಸಿಯಾ ಭಾವಿನ್ ಸವಜಾನಿಗೆ ಚಿನ್ನದ ಪದಕ

ಪುತ್ತೂರು: ಪುತ್ತೂರು : ವಿದ್ಯಾಭಾರತಿ ಅಖಿಲ ಭಾರತೀ ಶಿಕ್ಷಣ ಸಂಸ್ಥೆ  ಮಧ್ಯಪ್ರದೇಶದ ಮಂದಸೌ‌ರ್ ಜಿಲ್ಲೆಯ ನಗರ ಪಾಲಿಕೆ ಪರಿಷದ್ ಪಂಡಿತ್ ದೀನ್ ದಯಾಳ್ ತರಂತಾಲ್ ನಲ್ಲಿ ಆಯೋಜಿಸಿದ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ಸಿಯಾ ಭಾವಿನ್ ಸವಜಾನಿ ಚಿನ್ನದ ಪದಕ ಪಡೆದು ರಾಜಕೋಟ್ ನಲ್ಲಿ ಇಂದು ನಡೆಯುವ ಎಸ್ ಜಿ ಐ ಎಫ್ ಮೀಟ್ ಗೆ ಆಯ್ಕೆಯಾಗಿದ್ದಾರೆ. 200 ಮೀಟರ್ ಫ್ರೀ ಸ್ಟೈಲ್ ಮತ್ತು 4×100

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಸಿಯಾ ಭಾವಿನ್ ಸವಜಾನಿಗೆ ಚಿನ್ನದ ಪದಕ Read More »

ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಜೋಡಿಯನ್ನು ಬೆದರಿಸಿದ ಪಾತಕಿಗಳು ಪುಣೆ: ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಆರೋಪಿಗಳು ತಮ್ಮನ್ನು ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಯುವ ಜೋಡಿಯನ್ನು ಬೆದರಿಸಿ ಯುವಕನನ್ನು ಥಳಿಸಿ ಯುವತಿಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಘಟನೆಗೆ ಸಂಬಂಧಿಸಿ ರಾಜೇಖಾನ್‌ ಕರೀಂ ಪಠಾಣ್‌ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಸಂತ್ರಸ್ತ ಯುವತಿ ಆಕೆಯ ಸ್ನೇಹಿತನೊಂದಿಗೆ ಪುಣೆಯ ಬೋಪ್‌ದೇವ್ ಘಾಟ್ ಪ್ರದೇಶಕ್ಕೆ

ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ Read More »

ತಿರುಪತಿ ಲಡ್ಡು ವಿವಾದ : ಹೊಸ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ಸಿಬಿಐ, ಪೊಲೀಸ್‌, ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ ಹೊಸದಿಲ್ಲಿ : ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಮತ್ತು ಮೀನಿನ ಕೊಬ್ಬಿನಂಶ ಸೇರಿಸಿರುವ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿ ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸೂಚಿಸಿದೆ.ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ತಿರುಪತಿ ಲಡ್ಡು ವಿವಾದ : ಹೊಸ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ Read More »

ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ : 10 ಮಂದಿ ಸಾವು

ಲಖನೌ: : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಕಾರ್ಮಿಕರನ್ನು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತಪಟ್ಟವರೆಲ್ಲರೂ ವಾರಾಣಸಿ ನಿವಾಸಿಗಳು ಎಂದು ತಿಳಿದುಬಂದಿದೆ.ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಮಿರ್ಜಾಪುರದ ಕಚವಾನ್ ಪ್ರದೇಶದ ಕಟ್ಕಾ ಗ್ರಾಮದ

ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ : 10 ಮಂದಿ ಸಾವು Read More »

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು

ನಕಲಿ ಸರ್ಟಿಫಿಕೆಟ್‌ ಮೂಲಕ ಲಾಯರ್‌ ಡಿಗ್ರಿ ಪಡೆದಿರುವುದು ಬಯಲು ಬೆಂಗಳೂರು : ಪ್ರಸ್ತುತ ಬಿಗ್‌ಬಾಸ್‌ ಸ್ಪರ್ಧಿಯಾಗಿರುವ ವಕೀಲ ಕೆ.ಎನ್‌.ಜಗದೀಶ್‌ ನಕಲಿ ಪ್ರಮಾಣಪತ್ರದ ಮೂಲಕ ಲಾಯರ್‌ ಡಿಗ್ರಿ ಪಡೆದುಕೊಂಡಿರುವ ವಂಚನೆ ಬೆಳಕಿಗೆ ಬಂದ ಬಳಿಕ ಬಾರ್‌ ಕೌನ್ಸಿಲ್‌ ಅವರನ್ನು ಅಮಾನ್ಯಗೊಳಿಸಿದೆ. ಇನ್ನು ಮುಂದೆ ಜಗದೀಶ್‌ ಕರಿಕೋಟು ಹಾಕಿಕೊಂಡು ಕೋರ್ಟ್‌ನಲ್ಲಿ ವಾದ ಮಾಡುವಂತಿಲ್ಲ.ವಕೀಲಿಕೆಯಿಂದ ಹೆಚ್ಚಾಗಿ ತನ್ನ ಅತಿರೇಕದ ವರ್ತನೆ ಮತ್ತು ವಿವಾದಗಳಿಂದಲೇ ಪ್ರಸಿದ್ಧಿಗೆ ಬಂದಿದ್ದ ಜಗದೀಶ್‌ ಅವರನ್ನು ಇದೇ ಮಾನದಂಡದ ಮೇಲೆ ಈ ಸಲ ಬಿಗ್‌ಬಾಸ್‌ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು Read More »

ಹಸನ್‌ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್‌?

ನಿನ್ನೆ ಮಧ್ಯರಾತ್ರಿ ಮತ್ತೆ ಹಿಜ್ಬುಲ್ಲ ಬಂಕರ್‌ ಮೇಲೆ ಬಾಂಬ್‌ ಮಳೆಗರೆದ ಇಸ್ರೇಲ್‌ ಟೆಲ್‌ ಅವೀವ್‌ : ಇಸ್ರೇಲ್‌ ಗುರುವಾರ ಮಧ್ಯರಾತ್ರಿ ಮತ್ತೊಮ್ಮೆ ಲೆಬನಾನ್‌ನ ಬೇರೂತ್‌ ನಗರದ ಮೇಲೆ ಬಾಂಬ್‌ಗಳ ಸುರಿಮಳೆಗೈದಿದೆ. ಈ ಸಲ ಇಸ್ರೇಲ್‌ ಗುರಿ ಹಿಜ್ಬುಲ್ಲ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥ ಹಾಶೆಮ್‌ ಸಫಿಯುದ್ದೀನ್‌ ಆಗಿದ್ದ. ಹಿಜ್ಬುಲ್ಲ ಮುಖ್ಯಸ್ಥ ಹಸನ್‌ ನಸ್ರಲ್ಲನನ್ನು ಇಸ್ರೇಲ್‌ ಸೆ.27ರಂದು ಬಾಂಬ್‌ ದಾಳಿ ಮಾಡಿ ಕೊಂದು ಹಾಕಿದೆ. ಇದರ ಬೆನ್ನಿಗೆ ಅವನ ಸಮಕಾಲೀನ ಹಾಶೆಮ್‌ ಸಫಿಯುದ್ದೀನ್‌ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ.ಆದರೆ ಹಾಶೆಮ್‌ ಸಫಿಯುದ್ದೀನ್‌

ಹಸನ್‌ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್‌? Read More »

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 4 ಕೆ.ಜಿ. ಗಾಂಜಾವನ್ನು ಆರೋಪಿಸಿಯಿಂದ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಗೋಳಿಯಂಗಡಿ ಹೌಸ್ ನಿವಾಸಿ ಅಬುತಾಹಿರ್ ಯಾನೇ ಅನ್ನಮ್ (25) ಬಂಧಿತ ಆರೋಪಿ, ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅತನನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ Read More »

error: Content is protected !!
Scroll to Top