ಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ

ನಿತ್ಯ 80 ಸಾವಿರ ಭಕ್ತರಿಗೆ ಮಾತ್ರ ದರ್ಶನ ಅವಕಾಶ ತಿರುವನಂತಪುರ: ಶಬರಿಮಲೆ ಯಾತ್ರೆಗೈಯ್ಯುವವರು ಈ ಬಾರಿ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ಳುವುದು ಕಡ್ಡಾಯ. ಮಂಡಲ-ಮಕರವಿಳಕ್ಕು ಯಾತ್ರೆಗೆ ಪೂರ್ವಭಾವಿಯಾಗಿ ನಿನ್ನೆ ನಡೆದ ಸಭೆಯಲ್ಲಿ ಕೇರಳ ಸರಕಾರ ಈ ಸಲ ಯಾತ್ರಾರ್ಥಿಗಳಿಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ.ಪ್ರತಿದಿನ 80,000 ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ. ಭಕ್ತರು ಶಬರಿ­­­­ಮಲೆ ದೇಗುಲದ ವೆಬ್‌ಸೈಟ್‌ನಲ್ಲಿ ವರ್ಚುವಲ್‌ ಬುಕ್ಕಿಂಗ್‌ ಮಾಡಬೇಕಾಗುತ್ತದೆ. ಈ ವೇಳೆ ಯಾತ್ರಾರ್ಥಿಗಳು ಸಾಗುವ ಮಾರ್ಗವನ್ನೂ ಆಯ್ದುಕೊಳ್ಳುವ ಅವಕಾಶ ಕೂಡ ಇದೆ. […]

ಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ Read More »

ಮುಡಾ ಹಗರಣ : ಸಚಿವ ಬೈರತಿ ಸುರೇಶ್‌, ಎಸ್‌ಪಿ ಸಜಿತ್‌ ವಿರುದ್ಧ ದೂರು

ಮೈಸೂರಿನಿಂದ ಮುಡಾ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ಹೊತ್ತೊಯ್ದಿದ್ದ ಸಚಿವ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಡತ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಮತ್ತು ಹಿಂದಿನ ಲೋಕಾಯುಕ್ತ ಎಸ್​​ಪಿ ಸಜಿತ್ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್​​ ಮೋಹನ್​​ ಅವರಿಗೆ ಲಿಖಿತ ದೂರಿನಲ್ಲಿ ಒತ್ತಾಯಿಸಿದ್ದಾರೆ.ಲೋಕಾಯುಕ್ತ ನೀಡಿದ್ದ ಸರ್ಚ್​ ವಾರಂಟ್​ ಆಧರಿಸಿ ಜು.26ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು.

ಮುಡಾ ಹಗರಣ : ಸಚಿವ ಬೈರತಿ ಸುರೇಶ್‌, ಎಸ್‌ಪಿ ಸಜಿತ್‌ ವಿರುದ್ಧ ದೂರು Read More »

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ

ಜೈಲಿನ ಅನ್ನದಲ್ಲಿ ಹುದುಗಿದ್ದ ಮಾಂಸದಲ್ಲಿದ್ದ ಎಲುಬಿನ ತುಂಡುಗಳೆ ಅವರ ಲೇಖನಿಯಾಗಿತ್ತು ಅಕಿನ್ ವಾಂಡೆ ಒಲುವಿಲೇ ಸೊಯೀಂಕ ಯಾರು ಎಂದು ಗೂಗಲ್ ಸರ್ಚ್ ಮಾಡಿ. ನಿಮಗೆ ಥಟ್ಟನೆ ದೊರೆಯುವ ಉತ್ತರ ನೊಬೆಲ್ ಬಹುಮಾನ ಪಡೆದ ಮೊಟ್ಟಮೊದಲನೇ ಕಪ್ಪು ವರ್ಣದ ಸಾಹಿತಿ ಎಂದು. ಆತನ ಬದುಕು ಆತನ ಬರವಣಿಗೆಯಷ್ಟೇಪ್ರಖರವಾಗಿದೆ ಮತ್ತು ಹೋರಾಟಗಳಿಂದ ಕೂಡಿದೆ. ಆತ ನೈಜೀರಿಯ ಸೆರೆಮನೆಯಲ್ಲಿ ಉಸಿರುಗಟ್ಟುತ್ತಿದ್ದ ಕಪ್ಪು ಚರ್ಮದವರು ಹೋರಾಟ ಮಾಡುವುದು, ಹೋರಾಟಕ್ಕೆ ಪ್ರಚೋದನೆ ಕೊಡುವುದು ಇದನ್ನು ಯಾವುದೇ ಸರ್ವಾಧಿಕಾರಿ ಆಫ್ರಿಕನ್ ಸರಕಾರ ಸಹಿಸಿಕೊಂಡ ಉದಾಹರಣೆ ಇದೆಯಾ?

ನೈಜೀರಿಯಾ ದೇಶದ ದಮನಿತ ಲೇಖಕ ಸೋಯಿಂಕ Read More »

ವಿಧಾನ ಪರಿಷತ್ ಉಪಚುನಾವಣೆ | ಜನಪ್ರತಿನಿಧಿಗಳ ಸಭೆ

ಮಂಗಳೂರು: ವಿಧಾನ ಪರಿಷತ್‌ ಸ್ಥಾನದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆ ಇಂದು ನಡೆಯಿತು. ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಿಶೋರ್ ಕುಮಾರ್ ಅವರಿಂದ ಪಕ್ಷ ಚಟುವಟಿಕೆಯಲ್ಲಿ ಪ್ರೇರಣೆ ಪಡೆದವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆಯಿದೆ. ವಿವಿಧ ಚುನಾವಣೆಗಳಲ್ಲಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಂಘಟನಾ ಚಟುವಟಿಕೆಯ ಅನುಭವವಿರುವ ಕಿಶೋರ್ ಕುಮಾರ್ ಅವರನ್ನು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯು ಪಕ್ಷ

ವಿಧಾನ ಪರಿಷತ್ ಉಪಚುನಾವಣೆ | ಜನಪ್ರತಿನಿಧಿಗಳ ಸಭೆ Read More »

ಶಾಂತಿಗೋಡು ವಿಷ್ಣು ಭಜನಾ ಮಂದಿರದಲ್ಲಿ 5ನೇ ವರ್ಷದ ಆಯುಧ ಪೂಜೆ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣು ಭಜನಾ ಮಂದಿರದ ಆಶ್ರಯದಲ್ಲಿ ಶಾಂತಿಗೋಡು ವಿಕ್ರಂ ಯುವಕ ಮಂಡಲ ಸಹಯೋಗದೊಂದಿಗೆ 5ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮ ಆದಿತ್ಯವಾರ ಶಾಂತಿಗೋಡುವಿಷ್ಣು ಭಜನಾ ಮಂದಿರದಲ್ಲಿ ನಡೆಯಿತು. ಅರ್ಚಕ ಮನೋಜ್ ಶಗ್ರಿತಾಯ ಸಮಿ ವೃಕ್ಷಕ್ಕೆ ಪೂಜೆ ನೆರವೇರಿಸಿ ಬಳಿಕ ವಾಹನ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ 40 ಕ್ಕು ಮಿಕ್ಕಿ ವಾಹನ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಹಿರಿಯರದ ಹೋನಪ್ಪ ಗೌಡ ಕೈಂದಾಡಿ, ಬಾಬು ಗೌಡ ಕೈಂದಾಡಿ, ಸೀತಾರಾಮ ಗೌಡ ಓಲಾಡಿ, ಯುವಕ ಮಂಡಲ ಅಧ್ಯಕ್ಷ

ಶಾಂತಿಗೋಡು ವಿಷ್ಣು ಭಜನಾ ಮಂದಿರದಲ್ಲಿ 5ನೇ ವರ್ಷದ ಆಯುಧ ಪೂಜೆ Read More »

ಮನಸೂರೆಗೊಂಡ ಮಂಗಳೂರು ದಸರಾ ಮ್ಯಾರಾಥಾನ್- 2024 | ಜೂಯಿಸ್ ಫಿಟ್ನೆಸ್ ಕ್ಲಬ್ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆಯೋಜನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2024ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್-2024 ಸ್ಪರ್ಧೆ ಭಾನುವಾರ ಬೆಳಿಗ್ಗೆ ನಡೆಯಿತು. ‘ವನ್ ಸಿಟಿ ವನ್ ಸ್ಪಿರಿಟ್’ ಧ್ಯೇಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ವ್ಯಸನಮುಕ್ತವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಚಿಣ್ಣರಿಂದ ವೃದ್ಧರವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ವಿಶೇಷ ಮೆರಗು ನೀಡಿದರು. ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು. ಧಾರ್ಮಿಕ ಕ್ಷೇತ್ರದಿಂದ ಇಂತಹ

ಮನಸೂರೆಗೊಂಡ ಮಂಗಳೂರು ದಸರಾ ಮ್ಯಾರಾಥಾನ್- 2024 | ಜೂಯಿಸ್ ಫಿಟ್ನೆಸ್ ಕ್ಲಬ್ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆಯೋಜನೆ Read More »

ಖಾಸಗಿ ಬಸ್‌ಗೆ ಇಸ್ರೇಲ್‌ ಹೆಸರಿಟ್ಟದ್ದಕ್ಕೆ ಭಾರಿ ವಿರೋಧ

ಜೆರಸಲೇಂ ಎಂದು ಹೆಸರು ಬದಲಾಯಿಸಿದ ಮಾಲೀಕ ಮಂಗಳೂರು : ಮೂಡುಬಿದಿರೆ-ಮೂಲ್ಕಿ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗೆ ಇಸ್ರೇಲ್‌ ಎಂದು ಹೆಸರಿಟ್ಟದ್ದು ಭಾರಿ ವಿವಾದಕ್ಕೊಳಗಾದ ಬಳಿಕ ಮಾಲೀಕರು ಬಸ್‌ನ ಹೆಸರನ್ನೇ ಬದಲಾಯಿಸಿದ್ದಾರೆ. ಮೂಲತಃ ಕಟೀಲಿನವರಾದ ಲೆಸ್ಬರ್‌ ಕಟೀಲು ಎಂಬವರು ಕಳೆದ ಸುಮಾರು 12 ವರ್ಷಗಳಿಂದ ಇಸ್ರೇಲ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಅಲ್ಲಿ ದುಡಿದ ಹಣದಿಂದ ಬಸ್‌ ಖರೀದಿಸಿ ಮೂಡುಬಿದಿರೆ-ಮೂಲ್ಕಿ ರೂಟ್‌ನಲ್ಲಿ ಸರ್ವಿಸ್‌ ನಡೆಸುತ್ತಿದ್ದು. ಲೆಸ್ಬರ್‌ ಅವರ ಸಂಬಂಧಿಕರು ಈ ಬಸ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.ತನಗೆ ಅನ್ನ ನೀಡುತ್ತಿರುವ ಇಸ್ರೇಲ್‌ ಮೇಲಿನ ಅಭಿಮಾನದಿಂದ

ಖಾಸಗಿ ಬಸ್‌ಗೆ ಇಸ್ರೇಲ್‌ ಹೆಸರಿಟ್ಟದ್ದಕ್ಕೆ ಭಾರಿ ವಿರೋಧ Read More »

ಪಿಲಿಗೊಬ್ಬು ಕೇವಲ ಸ್ಪರ್ಧೆ ಅಲ್ಲ. ಅದು ಜನರಲ್ಲಿ ಭಾವನೆ, ನಂಬಿಕೆಯನ್ನು ಜೋಡಿಸಿದೆ : ನಳಿನ್ ಕುಮಾರ್ ಕಟೀಲ್‍ |ವಿಜಯ ಸಾಮ್ರಾಟ್ ವತಿಯಿಂದ ‘ಪಿಲಿಗೊಬ್ಬು ಸೀಸನ್-2’ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯುವ ಪುತ್ತೂರುದ ಪಿಲಿಗೊಬ್ಬು-ಸೀಸನ್ 2 ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವೈಭವದ ಚಾಲನೆ ನೀಡಲಾಯಿತು. ಪಿಲಿಗೊಬ್ಬು ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಏಕೈಕ ಜಿಲ್ಲೆ ಇದ್ದರೆ ಅದು ತುಳುನಾಡು. ತುಳುನಾಡಿನ ಜನ ಕಲೆ, ಕ್ರೀಡೆ, ಕೃಷಿ, ಯಕ್ಷಗಾನದಲ್ಲಿ ದೇವರನ್ನು ಕಂಡವರು.

ಪಿಲಿಗೊಬ್ಬು ಕೇವಲ ಸ್ಪರ್ಧೆ ಅಲ್ಲ. ಅದು ಜನರಲ್ಲಿ ಭಾವನೆ, ನಂಬಿಕೆಯನ್ನು ಜೋಡಿಸಿದೆ : ನಳಿನ್ ಕುಮಾರ್ ಕಟೀಲ್‍ |ವಿಜಯ ಸಾಮ್ರಾಟ್ ವತಿಯಿಂದ ‘ಪಿಲಿಗೊಬ್ಬು ಸೀಸನ್-2’ ಕಾರ್ಯಕ್ರಮಕ್ಕೆ ಚಾಲನೆ Read More »

ಇಂದು (ಅ.6) : ಪುಣಚ ದೇವಿನಗರದಲ್ಲಿ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ | ಪುಣಚ ದೇವಿನಗರ ಶ್ರೀ ಮಹಮ್ಮಾಯೀ ಜೈ ಭಾರತಿ ಮರಾಟಿ ಸಂಘದ ನೇತೃತ್ವ

ಪುತ್ತೂರು: ಕುಸಾಲ್ದ ಗುರಿಕಾರೆ ದಿನೇಶ್‍ ಕೋಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ಇಂದು ರಾತ್ರಿ 8 ಗಂಟೆಗೆ ಪುಣಚ ದೇವಿನಗರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಬಂಟ್ವಾಳ ತಾಲೂಕಿನ ಪುಣಚ ದೇವಿನಗರ ಶ್ರೀ ಮಹಮ್ಮಾಯೀ ಜೈ ಭಾರತಿ ಮರಾಟಿ ಸಂಘದ ವತಿಯಿಂದ ನವರಾತ್ರಿ ಪ್ರಯುಕ್ತ ಭಜನೋತ್ಸವದ ಅಂಗವಾಗಿ  ಕಾರ್ಯಕ್ರಮ ನಡೆಯಲಿದೆ. ಯಕ್ಷ ತೆಲಿಕೆ ಕಾರ್ಯಕ್ರಮದಲ್ಲಿ ಭಾಗವತರಾಗಿ ಗಿರೀಶ್‍ ರೈ ಕಕ್ಕೆಪದವು, ಮದ್ದಳೆ ನೆಕ್ಕರೆಮೂಲೆ ಗಣೇಶ್‍ ಭಟ್‍, ಚೆಂಡೆ, ರೋಹಿತ್ ಉಚ್ಚಿಲ,

ಇಂದು (ಅ.6) : ಪುಣಚ ದೇವಿನಗರದಲ್ಲಿ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ | ಪುಣಚ ದೇವಿನಗರ ಶ್ರೀ ಮಹಮ್ಮಾಯೀ ಜೈ ಭಾರತಿ ಮರಾಟಿ ಸಂಘದ ನೇತೃತ್ವ Read More »

ಮಾಜಿ ಶಾಸಕ ಮೊಯಿದೀನ್ ಬಾವಾ ಸಹೋದರ ಮಮ್ತಾಜ್ ಆಲಿ ಕಾರು ಅಪಘಾತ ಸ್ಥಿತಿಯಲ್ಲಿ ಪತ್ತೆ | ತನಿಖೆ ಕೈಗೆತ್ತಿಕೊಂಡ ಪೊಲೀಸರು

ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ರಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಇಂದು ಮುಂಜಾನೆ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ತನಿಖೆ ಕೈಗೊಂಡಿದ್ದಾರೆ. ಮಮ್ರಾಜ್ ಅಲ್ಲಿ ಅವರು ತನ್ನ ಮಗಳಿಗೆ ನಾಟ್ರಸ್ ಮೂಲಕ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂಬ ಸಂದೇಶ

ಮಾಜಿ ಶಾಸಕ ಮೊಯಿದೀನ್ ಬಾವಾ ಸಹೋದರ ಮಮ್ತಾಜ್ ಆಲಿ ಕಾರು ಅಪಘಾತ ಸ್ಥಿತಿಯಲ್ಲಿ ಪತ್ತೆ | ತನಿಖೆ ಕೈಗೆತ್ತಿಕೊಂಡ ಪೊಲೀಸರು Read More »

error: Content is protected !!
Scroll to Top