ಪ್ರಪಾತಕ್ಕೆ ವಾಲಿದ ಮಿನಿ ಬಸ್ : ಪ್ರಯಾಣಿಕರು ಅಪಾಯದಿಂದ ಪಾರು

ಪುತ್ತೂರು : ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ವಾಲಿದ ಘಟನೆ ಬೊಳುವಾರಿನ ಪೈಪಾಸ್ ರಸ್ತೆಯಲ್ಲಿ ಇಂದು ನಡೆದಿದೆ. ಮಂಗಳೂರು ಕಡೆ ಚಲಿಸುತ್ತಿದ್ದ ಮಿನಿ ಬಸ್ ಬೈಪಾಸ್ ಮಾರ್ಗವಾಗಿ ಮಂಗಳೂರು ಕಡೆ ಹೋಗುತ್ತಿತ್ತು. ಬೈಪಾಸ್ ರಸ್ತೆಯ ಬೊಳುವಾರು ಮಂಜಲ್ಪಡು ಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ವಾಲಿದ್ದು, ರಸ್ತೆ ಬದಿಯಲ್ಲಿದ್ದ ತಡೆ ಬೇಲಿಗೆ ಡಿಕ್ಕಿಯಾಗಿ ನಿಂತಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಪ್ರಪಾತಕ್ಕೆ ವಾಲಿದ ಮಿನಿ ಬಸ್ : ಪ್ರಯಾಣಿಕರು ಅಪಾಯದಿಂದ ಪಾರು Read More »

ಮಾ ದುರ್ಗಾ ದುರ್ಗತಿ ಪರಿಹಾರಿಣಿ

ನವರಾತ್ರಿ – ಒಂದು ಹಬ್ಬ, ನೂರಾರು ಆಯಾಮ ಒಂದು ಹಬ್ಬದ ಹಿಂದೆ ನೂರಾರು ಪುರಾಣದ ಕಥೆಗಳು, ನೂರಾರು ಇತಿಹಾಸದ ಘಟನೆಗಳು ಬೆಸೆದುಕೊಂಡ ಒಂದು ಹಬ್ಬ ಇದ್ದರೆ ಅದು ನವರಾತ್ರಿ. ನವರಾತ್ರಿ ಕೇವಲ ಒಂದು ಹಬ್ಬ ಅಲ್ಲ, ಅದೊಂದು ಅದ್ಭುತವಾದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಸಮಾರಾಧನೆ, ಸ್ತ್ರೀ ಶಕ್ತಿಯ ಆರಾಧನೆ, ಒಂದು ಕೌಟುಂಬಿಕ ನಿವೇದನೆ ಮತ್ತು ನಮ್ಮೊಳಗಿನ ಶಕ್ತಿಯ ಆವಾಹನೆ. ಇಷ್ಟೆಲ್ಲವನ್ನೂ ಒಳಗೊಂಡ ಈ ಹಬ್ಬವು ಕರ್ನಾಟಕದ ನಾಡಹಬ್ಬ ಆದದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ದುರ್ಗಾಷ್ಟಮಿ – ದುರ್ಗತಿ

ಮಾ ದುರ್ಗಾ ದುರ್ಗತಿ ಪರಿಹಾರಿಣಿ Read More »

ಉದ್ಯಮ ಕ್ಷೇತ್ರದ ದಂತಕಥೆ ರತನ್‌ ಟಾಟಾ ವಿಧಿವಶ

ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ ಮುಂಬಯಿ : ದೇಶದ ಅಗ್ರಗಣ್ಯ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ನಾವಲ್ ಹರ್ಮುಸ್ ಜಿ ಟಾಟಾ ಮತ್ತು ಸೂನಿ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರ 2008ರಲ್ಲಿ ದೇಶದ ಎರಡನೇ

ಉದ್ಯಮ ಕ್ಷೇತ್ರದ ದಂತಕಥೆ ರತನ್‌ ಟಾಟಾ ವಿಧಿವಶ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ದಿನಾಚರಣೆ

ಪುತ್ತೂರು: ಐಇಇಇ ಸಂಸ್ಥೆಯು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು, ಪದವಿಪೂರ್ವ, ಪದವಿ ಮತ್ತು ಮುಂದುವರಿದ ವೃತ್ತಿಪರ ಶಿಕ್ಷಣಕ್ಕಾಗಿ ಪೂರಕ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಐಇಇಇ ವಿದ್ಯಾರ್ಥಿ ವಿಭಾಗ, ಐಇಇಇ ಮಂಗಳೂರು ಉಪ ವಿಭಾಗ ಹಾಗೂ ವುಮನ್ ಇನ್ ಇಂಜಿನಿಯರಿಂಗ್ ಇದರ ಸಂಯುಕ್ತ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ದಿನಾಚರಣೆ Read More »

ಉಗ್ರರು ಅಪಹರಿಸಿದ್ದ ಯೋಧನ ಮೃತದೇಹ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ಉಗ್ರರು ಅಪಹರಿಸಿದ್ದ ಯೋಧನ ಮೃತದೇಹವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ. ಟೆರಿಟೋರಿಯಲ್ ಆರ್ಮಿಯ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಅನಂತನಾಗ್‌ನ ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ ಎಂದು ಸೇನೆ ತಿಳಿಸಿದೆ. ದಕ್ಷಿಣ ಕಾಶ್ಮೀರದ ಕೋಕರ್‌ನಾಗ್ ಅರಣ್ಯದಲ್ಲಿ ರಾತ್ರೋರಾತ್ರಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಇಬ್ಬರು ಯೋಧರನ್ನು ಉಗ್ರರು ಅಪಹರಿಸಿದ್ದರು. ಅವರಲ್ಲಿ ಓರ್ವ ಎರಡು ಗುಂಡೇಟು ತಿಂದರೂ ಉಗ್ರರ ಕೈಯಿಂದ ತಪ್ಪಿಸಿಕೊಂಡು ಬಂದಿದ್ದರು.

ಉಗ್ರರು ಅಪಹರಿಸಿದ್ದ ಯೋಧನ ಮೃತದೇಹ ಪತ್ತೆ Read More »

ಮತ್ತೆ 14 ಪಾಕಿಸ್ಥಾನೀಯರ ಬಂಧನ

ಪಾಕಿಗಳನ್ನು ಕರೆತಂದು ನೆಲೆಗೊಳಿಸುವ ಜಾಲ ಸಕ್ರಿಯ ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನದ 14 ಮಂದಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಸೆರೆಯಾದ ಪಾಕಿಗಳ ಸಂಖ್ಯೆ 22ಕ್ಕೇರಿದೆ. ಪ್ರಕರಣದ ಕಿಂಗ್‌ಪಿನ್ ಪರ್ವೇಜ್ ಬಂಧನವಾದ ಬೆನ್ನಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 22 ಮಂದಿ ಪಾಕ್‌ ಪ್ರಜೆಗಳನ್ನು ಬಂಧಿಸಿದ್ದು ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಪಾಕ್ ಪ್ರಜೆಗಳ ಬಂಧನಕ್ಕೆ ಚೆನ್ನೈ, ದಿಲ್ಲಿ, ಹೈದರಾಬಾದ್‌ಗೆ ಪೊಲೀಸರ ತಂಡ ತೆರಳಿತ್ತು. ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ 22 ಮಂದಿ

ಮತ್ತೆ 14 ಪಾಕಿಸ್ಥಾನೀಯರ ಬಂಧನ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನ

ಪುತ್ತೂರು: ಇಲ್ಲಿಯ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನ ಯಶಸ್ವಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಸುಮಾರು ೩೦ ವರ್ಷಗಳಿಂದ ಕಂಪ್ಯೂಟೇಶನಲ್ ಪರಿಣತಿ ಹೊಂದಿರುವ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಕ್ಷೇತ್ರದ ದಿಗ್ಗಜ ಸಂಸ್ಥೆ ಕೆಡೆನ್ಸ್ ಸಿಸ್ಟಮ್ಸ್ ಕಾಲೇಜಿಗೆ ಭೇಟಿ ನೀಡಿತು. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ೧೨ ಇಂಜಿನಿಯರಿಂಗ್ ಕಾಲೇಜುಗಳ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ೬೨೩ ಅರ್ಹ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ವಾರ್ಷಿಕ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನ Read More »

“ಯಕ್ಷವಾಹಿನಿ” ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ | ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್‍ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷ ಕಲಾಕೇಂದ್ರ” ಮತ್ತು ದೇಶಭಕ್ತ ಎನ್ಎಸ್ ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕೆದಂಬಾಡಿ ಸನ್ಯಾಸಿಗುಡ್ಡೆಯ ಸದ್ಗುರು ಗೋಪಾಲ ನಾಯರ್ಸ್‍ಸಭಾಭವನದಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು. ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್‍ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆಯಂತೆ ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ, ದತ್ತುಗ್ರಾಮ ಕೆದಂಬಾಡಿಯಲ್ಲಿ ವೈಭವದಿಂದ ಜರಗಿತು. ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರಸಂಗವನ್ನುಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ

“ಯಕ್ಷವಾಹಿನಿ” ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ | ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್‍ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆ Read More »

ಪುತ್ತಿಲ ಶ್ರೀರಾಮ ಗೆಳೆಯರ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಪುತ್ತಿಲ ಕ್ರೀಡಾಂಗಣದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅವಿನಾಶ್ ಕೇದಗೆದಡಿ, ಉಪಾಧ್ಯಕ್ಷರಾಗಿ ಪ್ರತೀಕ್ ಪುತ್ತಿಲ, ರಾಧಾಕೃಷ್ಣ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಶಿವಪ್ಪ ನಾಯ್ಕ ಬಿ.ಕೆ., ಪುರಂದರ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ಅಮೃತ್ ರಾಜ್ ಕಲ್ಲಮ, ಪ್ರಧಾನ ಕಾರ್ಯದರ್ಶಿ ವಿನಯ್ ಪುತ್ತಿಲ, ಕೋಶಾಧಿಕಾರಿ ಹರೀಶ ಬಿ.ಕೆ., ಸಂಚಾಲಕ ಧನಂಜಯ ಕಲ್ಲಮ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕೇದಗೆದಡಿ ಆಯ್ಕೆಯಾದರು. ಜೊತೆಕಾರ್ಯದರ್ಶಿಯಾಗಿ ಜಗದೀಶ ಕಲ್ಲಮ,

ಪುತ್ತಿಲ ಶ್ರೀರಾಮ ಗೆಳೆಯರ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ Read More »

ಅತ್ಯಾಚಾರ ಆರೋಪ : ಕಾಂಗ್ರೆಸ್‌ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲು

ಧರ್ಮಸ್ಥಳದಲ್ಲೂ ಬಿಡಲಿಲ್ಲ ಎಂದು ದೂರಿನಲ್ಲಿ ತಿಳಿಸಿದ ಮಹಿಳೆ ಬೆಂಗಳೂರು: ತನ್ನ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಒಂದನೇ ಆರೋಪಿ ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಎರಡನೇ ಆರೋಪಿ ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. 2022ರಲ್ಲಿ ಶಾಸಕರನ್ನು ಭೇಟಿ

ಅತ್ಯಾಚಾರ ಆರೋಪ : ಕಾಂಗ್ರೆಸ್‌ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲು Read More »

error: Content is protected !!
Scroll to Top