ಅ.23 : ವಿಶ್ವ ಹಿಂದೂ ಪರಿಷದ್ ಪುತ್ತೂರು ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ

ಪುತ್ತೂರು: ವಿಶ್ವ ಹಿಂದೂ ಪರಿಷದ್ ನೂತನ ಕಾರ್ಯಾಲಯ ನಿರ್ಮಾಣವಾಗಲಿದ್ದು, ಇದರ ಅಂಗವಾಗಿ ಭೂಮಿ ಪೂಜೆ ಅ.23 ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದಿವ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್‍ ಜೀ ಪಾಲ್ಗೊಳ್ಳುವರು. ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಗೌರವ ಉಪಸ್ಥಿತರಿರುವರು ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಕಟ್ಟಡ […]

ಅ.23 : ವಿಶ್ವ ಹಿಂದೂ ಪರಿಷದ್ ಪುತ್ತೂರು ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ Read More »

ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಸಿಗಲಿದೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ

ಜನಾಕ್ರೋಶಕ್ಕೆ ಮಣಿದು ನಿಯಮ ಸಡಿಲಿಸಿದ ಕೇರಳ ಸರಕಾರ ತಿರುವನಂತಪುರ: ಈ ಸಲ ಶಬರಿಮಲೆಯಲ್ಲಿ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ದೇವರ ದರ್ಶನ ಅವಕಾಶ ಎಂಬ ನಿಯಮಕ್ಕೆ ವ್ಯಕ್ತವಾದ ಭಾರಿ ಆಕ್ರೋಶಕ್ಕೆ ಮಣಿದಿರುವ ಕೇರಳ ಸರಕಾರ ಈಗ ಆನ್‌ಲೈನ್‌ ನೋಂದಣಿ ಇಲ್ಲದೇ ಇದ್ದರೂ ಸ್ಪಾಟ್‌ ನೋಂದಣಿ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ಇದರಿಂದ ದರ್ಶನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ಭಕ್ತರು ನಿರಾಳವಾಗಿದ್ದಾರೆ.ನೋಂದಣಿ ಇಲ್ಲದೇ ಏಕಾಏಕಿ ಬರುವ ಭಕ್ತರನ್ನು ನಿಯಂತ್ರಿಸಿ ನೂಕುನುಗ್ಗಲು ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರ ಶಬರಿಮಲೆ

ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಸಿಗಲಿದೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ Read More »

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಾಟ | ಬಜರಂಗದಳ ಕಾರ್ಯಕರ್ತರಿಂದ ಕಾರ್ಯಾಚರಣೆ

ಪುತ್ತೂರು : ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಬೈಪಾಸ್ ರಸ್ತೆಯಲ್ಲಿ ಪತ್ತೆಹಚ್ಚಿದ ಘಟನೆ ಇಂದು ನಡೆದಿದೆ. ಪುತ್ತೂರು ಬೈಪಾಸ್ ರಸ್ತೆಯಲ್ಲಿ ತೆರಳುತ್ತಿದ್ದ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಗೋ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಾಟ | ಬಜರಂಗದಳ ಕಾರ್ಯಕರ್ತರಿಂದ ಕಾರ್ಯಾಚರಣೆ Read More »

ಮಳೆ ನೀರನ್ನು ವಾಪಸ್‌ ಆಕಾಶಕ್ಕೆ ಕಳಿಸಕ್ಕೆ ಆಗುತ್ತಾ?

ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಪರಮೇಶ್ವರ್‌ ಉಡಾಫೆ ಹೇಳಿಕೆ ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತವಾಗಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ಕೆಲ ದಿನಗಳಿಂದ ಭೀಕರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆ, ಅಂಗಡಿ, ಮಾಲ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಓಡಾಡದ ಪರಿಸ್ಥಿತಿ ಉಂಟಾಗಿದೆ. ಜನರು ಸಮರ್ಪಕ ವ್ಯವಸ್ಥೆ ಮಾಡದ ಸರಕಾರ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವ

ಮಳೆ ನೀರನ್ನು ವಾಪಸ್‌ ಆಕಾಶಕ್ಕೆ ಕಳಿಸಕ್ಕೆ ಆಗುತ್ತಾ? Read More »

ದೀಪಾವಳಿ ಸಂದರ್ಭ ಪಟಾಕಿ ಮಾರಾಟ ಮಳಿಗೆ ತೆರೆಯಲು ರಾಜ್ಯ ಅಗ್ನಿಶಾಮಕ ದಳ ಇಲಾಖೆಯಿಂದ ಸುತ್ತೋಲೆ | ಕಟ್ಟುನಿಟ್ಟಿನ ಕ್ರಮ

ಪುತ್ತೂರು: ಅ.31ರಿಂದ ನ.2ರ ತನಕ ನಡೆಯುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟದಲ್ಲಿ ರಾಜ್ಯ ಅಗ್ನಿಶಾಮಕದಳ ಸುತ್ತೋಲೆ ಹೊರಡಿಸಿದೆ. ಯಾವುದೇ ಅನಾಹುತ ಸಂಭವಿಸುವ ನಿಟ್ಟಿನಲ್ಲಿ ಈ ಸೊತ್ತೋಲೆ ಹೊರಡಿಸಿದ್ದು, ಪುತ್ತೂರು ಹಾಗೂ ಕಡಬದಲ್ಲಿ ಜನ ಸಂಚಾರ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಪಟಾಕಿ ಮಾರಾಟ ಮಳಿಗೆಯನ್ನು ಹಾಕಲು ಸೂಚನೆ ನೀಡಿದೆ. ಪುತ್ತೂರು ಮತ್ತು ಕಡಬದಲ್ಲಿ 69 ಪಟಾಕಿ ಮಳಿಗೆಗಳಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಪಟಾತಕಿ ಮಾರಾಟ ಮಳಿಗೆ ಹಾಕಲು ಅನುಮತಿಗಾಗಿ ಹಲವು ಅರ್ಜಿಗಳು ಅಗ್ನಿಶಾಮಕ

ದೀಪಾವಳಿ ಸಂದರ್ಭ ಪಟಾಕಿ ಮಾರಾಟ ಮಳಿಗೆ ತೆರೆಯಲು ರಾಜ್ಯ ಅಗ್ನಿಶಾಮಕ ದಳ ಇಲಾಖೆಯಿಂದ ಸುತ್ತೋಲೆ | ಕಟ್ಟುನಿಟ್ಟಿನ ಕ್ರಮ Read More »

ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. 20ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದ ಮುನಿರತ್ನ ಬುಧವಾರ ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ಮನೆ ಕಡೆ ತೆರಳಿದರು.ಜೈಲಿನಿಂದ ಮುನಿರತ್ನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ನಿವಾಸದೆದುರು ಬೆಂಬಲಿಗರು ಸಂಭ್ರಮಿಸಿದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುನಿರತ್ನಗೆ ಮಂಗಳವಾರ ಜಾಮೀನು ನೀಡಿ 1 ಲಕ್ಷ ರೂ. ಪರ್ಸನಲ್ ಬಾಂಡ್ ಮತ್ತು ಇಬ್ಬರ

ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ Read More »

ಮಸೀದಿಯೊಳಗೆ ಜೈ ಶ್ರೀರಾಮ್‌ ಕೂಗುವುದು ಧಾರ್ಮಿಕ ಅಪಚಾರವಲ್ಲ : ಹೈಕೋರ್ಟ್‌ ತೀರ್ಪು

ಕಡಬದ ಇಬ್ಬರು ಯುವಕರ ಮೇಲಿನ ಪ್ರಕರಣ ವಜಾಗೊಳಿಸಿದ ನ್ಯಾಯಾಲಯ ಬೆಂಗಳೂರು : ಮಸೀದಿಯೊಳಗೆ ಜೈ ಶ್ರೀ ರಾಮ್ ಎಂದು ಕೂಗುವುದರಿಂದ ಯಾರದ್ದೇ ಧಾರ್ಮಿಕ ಭಾವನೆಗೆ ಅಪಚಾರವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿ ಕಡಬದ ಬಿಳಿನೆಲೆಯ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಕೇಸನ್ನು ವಜಾಗೊಳಿಸಿದೆ. ಕಳೆದ ತಿಂಗಳು ಈ ತೀರ್ಪು ನೀಡಲಾಗಿದ್ದು, ಕೋರ್ಟಿನ ವೆಬ್‌ಸೈಟಿನಲ್ಲಿ ಮಂಗಳವಾರ ಅಪ್‌ಲೋಡ್‌ ಮಾಡಲಾಗಿದೆ.ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ತೀರ್ಪು ನೀಡಿ ಕಡಬ ಬಿಳಿನೆಲೆ ನಿವಾಸಿಗಳಾದ ಕೀರ್ತನ್ ಕುಮಾರ್ ಮತ್ತು ಸಚಿನ್

ಮಸೀದಿಯೊಳಗೆ ಜೈ ಶ್ರೀರಾಮ್‌ ಕೂಗುವುದು ಧಾರ್ಮಿಕ ಅಪಚಾರವಲ್ಲ : ಹೈಕೋರ್ಟ್‌ ತೀರ್ಪು Read More »

ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ: ಮೋಹನ್ ಕುಮಾರ್. ಕೆ. | ಉಚಿತ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ 

ಬೆಳ್ತಂಗಡಿ: ಕನ್ಯಾಡಿ ಯಕ್ಷ ಭಾರತಿಯ ದಶಮಾನೋತ್ಸವ ಪ್ರಯುಕ್ತ ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.  ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮತ್ತು ಲಕ್ಷ್ಮಿ ಗ್ರೂಪ್ಸ್  ಮಾಲಕ ಮೋಹನ್ ಕುಮಾರ್ ಕೆ. ಶಿಬಿರ

ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ: ಮೋಹನ್ ಕುಮಾರ್. ಕೆ. | ಉಚಿತ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ  Read More »

ಉಪಚುನಾವಣೆ : ಪ್ರತಿಷ್ಠೆಯೇ ಪಣ

ಗೆದ್ದು ಬೀಗುವ ತವಕದಲ್ಲಿ ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌ ಬೆಂಗಳೂರು: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆ ಜೊತೆಗೆ ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೂ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡುವುದರೊಂದಿಗೆ ರಾಜ್ಯದಲ್ಲೂ ಚುನಾವಣಾ ಕಾವು ಶುರುವಾಗಿದೆ.ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ಈ ಮೂರು ಕ್ಷೇತ್ರಗಳು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಕ್ಷೇತ್ರಗಳು. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ವಿವಿಧ ಹಗರಣಗಳ ಕುರಿತಂತೆ ತೀವ್ರ

ಉಪಚುನಾವಣೆ : ಪ್ರತಿಷ್ಠೆಯೇ ಪಣ Read More »

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಓರ್ವ ಮೃತ್ಯು

ಸುಳ್ಯ : ದ್ವಿಚಕ್ರ ವಾಹನ ಅಪಘಾತದ ಸಂಭವಿಸಿದ ಪರಿಣಾಮ ಒಬ್ಬರು ಮೃತಪಟ್ಟ ಘಟನೆ ಸುಳ್ಯದ ಪೈಚಾರು ಸೋಣಂಗೇರಿ ಎಂಬಲ್ಲಿಯ ಆರ್ತಾಜೆಯಲ್ಲಿ ನಡೆದಿದೆ. ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಭೋಜಪ್ಪ  (50) ಮೃತಪಟ್ಟವರು. ಸುಳ್ಯ ಕಡೆಯಿಂದ ಸೋಣಂಗೇರಿ ಕಡೆಗೆ ಸಂಚರಿಸುತ್ತಿದ್ದ ಬುಲೆಟ್ ಹಾಗೂ ಐವರ್ನಾಡಿನಿಂದ ಸುಳ್ಯ ಕಡೆಗೆ ಸಾಗುತ್ತಿದ್ದ ಭೋಜಪ್ಪ ಅವರ ಹೋಂಡ ಬೈಕ್ ನಡುವೆ ಡಿಕ್ಕಿಯಾಗಿದೆ. ಬುಲೆಟ್‌ನಲ್ಲಿದ್ದ ನೆಲ್ಲೂರು ಕೆಮ್ರಾಜಿಯ ಮಂದ್ರಪ್ಪಾಡಿ ಅರುಣ್ ಹಾಗೂ ವಸಂತ ಅವರು

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಓರ್ವ ಮೃತ್ಯು Read More »

error: Content is protected !!
Scroll to Top