ಇಬ್ಬರು ಉಗ್ರರು ಬಲಿ; ಮೂವರು ಯೋಧರು ಹುತಾತ್ಮ

ಕಥುವಾದಲ್ಲಿ ಐದು ದಿನಗಳಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಗುಂಡಿನ ಕಾಳಗದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಹಾಗೂ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಥುವಾದಲ್ಲಿ ಉಗ್ರ ಬೇಟೆ ನಡೆಯುತ್ತಿದ್ದು, ನಿನ್ನೆ ರಾತ್ರಿ ತೀವ್ರ ಕಾಳಗ ನಡೆದಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.ಕಥುವಾ ಜಿಲ್ಲೆಯ ಜುಥಾನ ಸಮೀಪ ದಟ್ಟಾರಣ್ಯದಲ್ಲಿ ಐವರು ಉಗ್ರರು ಅವಿತಿರುವ ಕುರಿತು ಮಾಹಿತಿ ಸಿಕ್ಕಿದ ಬಳಿಕ ಇಲ್ಲಿ ಕಾರ್ಯಾಚರಣೆ […]

ಇಬ್ಬರು ಉಗ್ರರು ಬಲಿ; ಮೂವರು ಯೋಧರು ಹುತಾತ್ಮ Read More »

ಮಹಿಳೆ ಮೇಲೆ ತಲ್ವಾರಿನಿಂದ ಹಲ್ಲೆಗೆ ಯತ್ನ

ಪುತ್ತೂರು: ಮಹಿಳೆ ಮೇಲೆ ತಲ್ವಾರ್ ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಸಂಪ್ಯದ ಮೂಲೆ ಎಂಬಲ್ಲಿ ಇಂದು ನಡೆದಿದೆ. ಹಸೈನಾರ್ ಎಂಬಾತ ಸಂಪ್ಯದಮೂಲೆ ನಿವಾಸಿ ರೇಖನಾಥ್‍ ರೈ ಅವರ ಸಹೋದರಿ ಪುಷ್ಪಾವತಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹಿಳೆ ಮೇಲೆ ತಲ್ವಾರಿನಿಂದ ಹಲ್ಲೆಗೆ ಯತ್ನ Read More »

ರಂಜಾನ್‍ ಹಬ್ಬ | ನಗರ ಠಾಣೆಯಲ್ಲಿ ಶಾಂತಿ ಸಭೆ

ಪುತ್ತೂರು: ಸೌಹಾರ್ದತೆ, ಸಮನ್ವಯತೆಯಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಬೇಕು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ವಿನಂತಿಸಿದ್ದಾರೆ.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆಸಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಮಾ. 31 ರಂದು ರಂಜಾನ್ ಹಬ್ಬ ನಡೆಯಲಿದ್ದು, ಯಾವುದೇ ಮೆರವಣಿಗೆಗಳು ಇರುವುದಿಲ್ಲ. ಮಸೀದಿಯಲ್ಲಿ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ವಾಟ್ಸಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಯಾವುದೇ ಘಟನೆಗಳಿಗೆ

ರಂಜಾನ್‍ ಹಬ್ಬ | ನಗರ ಠಾಣೆಯಲ್ಲಿ ಶಾಂತಿ ಸಭೆ Read More »

6ನೇ ವಾರಕ್ಕೆ ಜಿಗಿದ ‘ಭಾವ ತೀರ ಯಾನ’ ಸಿನಿಮಾ | ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಾಪಕ ಬೆಂಬಲ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ 6ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6 ನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಈ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೌಂಟರ್‌’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

6ನೇ ವಾರಕ್ಕೆ ಜಿಗಿದ ‘ಭಾವ ತೀರ ಯಾನ’ ಸಿನಿಮಾ | ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಾಪಕ ಬೆಂಬಲ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ

ಪುತ್ತೂರು: ಕೃಷ್ಣ ನಗರದ ಅಲಂಬುಡದಲ್ಲಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ ಮತ್ತು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥದಾರಿಯೂ ಆಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಅಧಿಕಾರ ಸ್ವೀಕರಿಸಿದರು. 35 ವರ್ಷಗಳ ಬೋಧನ ಅನುಭವ ಇರುವ ಇವರು ಈ ಶಾಲೆಯ ಆರಂಭದಿಂದಲೇ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷ  ವೆಂಕಟ್ರಮಣ ಗೌಡ ಕಳುವಾಜೆಯವರು ದಾಖಲೆಗಳ ಕಡತಗಳನ್ನು ನೀಡಿ ಶ್ರೀಯುತರನ್ನು ಆಡಳಿತಾಧಿಕಾರಿಯೆಂದು ಘೋಷಿಸಿ ಶುಭ ಹಾರೈಸಿದರು. ನಿರ್ದೇಶಕರಾದ ಗೌರಿ ಬನ್ನೂರು, ಗಂಗಾಧರ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ Read More »

ವಿದ್ಯುತ್‍ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು

ಸವಣೂರು: ವ್ಯಕ್ತಿಯೊಬ್ಬರು ವಿದ್ಯುತ್‍ ಕಳ್ಳತನ ಮಾಡಿರುವುದನ್ನು ಮೆಸ್ಕಾಂ ಜಾಗೃತ ದಳದ ಸಿಬ್ಬಂದಿಗಳು ಕಡಬ ತಾಲೂಕು ಸವಣೂರು ಗ್ರಾಮದ ಕಣಿಮಜಲು ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಅಬ್ದುಲ್ ಆಸೀಫ್ ರೆಂಜಾಲಾಡಿ ಎಂಬವರ ತೋಟದಲ್ಲಿ ವಿದ್ಯುತ್ ಕಳ್ಳತನ ಮಾಡಿರುವುದರ ಕುರಿತು ಖಚಿತ ಮಾಹಿತಿ ಮೇರೆಗೆ ಮಂಗಳೂರು ಮೆಸ್ಕಾಂ ಜಾಗೃತದಳ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ನೀಡಿದ ಗುತ್ತಿಗೆದಾರ ಬೈಟ್ ಪವರ್ ಪ್ಲಸ್ ತಾಜುದ್ದೀನ್ ಕೂರತ್ ಹಾಗೂ ಅಬ್ದುಲ್ ಆಸೀಫ್ ರೆಂಜಲಾಡಿಯವರ ಮೇಲೆ ಪ್ರಕರಣ ದಾಖಲಾಗಿದೆ.

ವಿದ್ಯುತ್‍ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು Read More »

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನಸಹಾಯ ಹಸ್ತಾಂತರ

ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಪುತ್ತೂರು ಶಾಖೆಯ ಸಕ್ರೀಯ  ಸದಸ್ಯರಾದ ಸದಾನಂದ ಕೆ. ಪುತ್ತೂರು ಅವರ  ಹೃದಯ ಚಿಕಿತ್ಸೆಗೆ  ಧನಸಹಾಯ ನೀಡಲಾಯಿತು. 50,000 ರೂ. ವನ್ನು  ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಗುರುವಾರ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ.ಎ., ಶಾಖಾ ಪ್ರಬಂಧಕ ಅಮರೇಶ್ ಪಿ, ಸಿಬ್ಬಂದಿಗಳು ಹಾಗೂ ಸದಸ್ಯರಾದ ಜಯಗೋವಿಂದ ಶರ್ಮ, ನರೇಂದ್ರ ಪಡಿವಾಳ್ ಉಪಸ್ಥಿತರಿದ್ದರು.

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನಸಹಾಯ ಹಸ್ತಾಂತರ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

ಪುತ್ತೂರು: ಬೆಂಕಿ ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಆದರೆ ಅದನ್ನು ಬಳಸುವಲ್ಲಿ ವ್ಯತ್ಯಯ ಉಂಟಾದರೆ ಅದರಿಂದ ಸಾವು ನೋವುಗಳು, ಕಷ್ಟ ನಷ್ಟಗಳು ಉಂಟಾಗಬಹುದು. ಹಾಗಾಗಿ ಇದರ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯ ಜತೆಗೆ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆಯೂ ನಾವು ಜಾಗೃತರಾಗಿರಬೇಕು ಎಂದು  ಪುತ್ತೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎಂಬಿಎ ಮತ್ತು ಎನ್‌ಎಸ್‌ಎಸ್ ವಿಭಾಗದ ವತಿಯಿಂದ ಏರ್ಪಡಿಸಲಾದ ಅಗ್ನಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ Read More »

ಲೈಂಗಿಕ ಕಿರುಕುಳ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಬಾಲಕಿಯೋರ್ವಳಿಗೆ ದೊಡ್ಡಮ್ಮನ ಮಗನೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೊಗ್ರು ಎಂಬಲ್ಲಿ ನಡೆದಿದೆ. ಸುಲ್ಕೇರಿಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳವಾದ ಬಗ್ಗೆ ಶಿಕ್ಷಕಿಯೊಬ್ಬರಿಗೆ ಮಾಹಿತಿ ಸಿಕ್ಕಿದ್ದು, ಅವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ದೊಡ್ಡಮ್ಮನ ಮಗನು ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ತೂರಿನ ಅಜ್ಜನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಬಳಿಕ ಬಾಲಕಿಗೆ ತಾಯಿಗೆ ತಿಳಿಸಲಾಗಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಲೈಂಗಿಕ ಕಿರುಕುಳ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು Read More »

ಬಾಲಕಿಗೆ ಲೈಂಗಿಕ ಕಿರುಕುಳ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಬಾಲಕಿಯೋರ್ವಳಿಗೆ ದೊಡ್ಡಮ್ಮನ ಮಗನೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೊಗ್ರು ಎಂಬಲ್ಲಿ ನಡೆದಿದೆ. ಸುಲ್ಕೇರಿಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳವಾದ ಬಗ್ಗೆ ಶಿಕ್ಷಕಿಯೊಬ್ಬರಿಗೆ ಮಾಹಿತಿ ಸಿಕ್ಕಿದ್ದು, ಅವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ದೊಡ್ಡಮ್ಮನ ಮಗನು ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ತೂರಿನ ಅಜ್ಜನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಬಳಿಕ ಬಾಲಕಿಗೆ ತಾಯಿಗೆ ತಿಳಿಸಲಾಗಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಾಲಕಿಗೆ ಲೈಂಗಿಕ ಕಿರುಕುಳ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು Read More »

error: Content is protected !!
Scroll to Top