“ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ  ಅಚಲ್ ಬಿಳಿನೆಲೆ ಆಯ್ಕೆ.

ಸುಳ್ಯದ ಅಚಲ್ ಬಿಳಿನೆಲೆ ಬಿಹಾರದ “ಸ್ವಾಮಿ ತೇಜೋಮಯಾನಂದ ಸ್ಕೂಲ್ ಆಫ್ ಯೋಗ ಟ್ರೇಡಿಷನ್” ನಲ್ಲಿ ನಡೆಯಲಿರುವ ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು  ಹಿಂದಿನ ಕಾಲದ ಗುರುಕುಲ ಶಿಕ್ಷಣ  ಸಂಪ್ರದಾಯದ ಅನುಭವ ಪಡೆಯುವ  ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು  ಶ್ರೇಷ್ಟ ಗುರುಗಳ ಜೀವನ ವಿಧಾನಕ್ಕೆ ಒಡ್ಡಿಕೊಳ್ಳುವ ಪ್ರಯತ್ನವಾಗಿರುವ ಈ ಯೋಜನೆಯು ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ತಮ್ಮ ಕಲಾ ಕ್ಷೇತ್ರದ  ಗುರುವಿನೊಂದಿಗಿದ್ದು ಅಭ್ಯಾಸ ಮಾಡುವ  ವಿಭಿನ್ನ  ಅವಕಾಶವನ್ನು ಒದಗಿಸುತ್ತದೆ. ಸುಮಾರು […]

“ಸ್ಪಿಕ್ ಮೆಕೆ ಗುರುಕುಲ್ ಅನುಭವ್ ಸ್ಕಾಲರ್ ಶಿಪ್ 2025”ಕ್ಕೆ  ಅಚಲ್ ಬಿಳಿನೆಲೆ ಆಯ್ಕೆ. Read More »

ಉಪ್ಪಿನಂಗಡಿ ಕಾಳಿಕಾಂಬಾ ಸಂಘದಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ

ಸಸಿಹಿತ್ತಿಲು ದೊಡ್ಡಮನೆ ಶ್ರೀಧರ ಅಮೀನ್ ಗೃಹಪ್ರವೇಶದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ನಿತೇಶ್ ಕುಮಾರ್. ವೈ, ಸಂತೋಷ್ ಕುಮಾರ್ ಹರಿಹರ, ಹಿಮ್ಮೇಳದಲ್ಲಿ ದೇವಿಪ್ರಸಾದ್ ಕಟೀಲು, ಎಸ್‌ ಎನ್ ಭಟ್ ಬಾಯಾರು, ರಘುಪತಿ ಭಟ್ ಸಸಿಹಿತ್ತಿಲು, ಅರ್ಥದಾರಿಗಳಾಗಿ  ಗುಡ್ಡಪ್ಪ ಬಲ್ಯ, ಗೀತಾ ಕರಾಯ (ವಿಕ್ರಮಾದಿತ್ಯ,) ದಿವಾಕರ ಆಚಾರ್ಯ ಗೇರುಕಟ್ಟೆ (ವಿಭಾಕರ), ಹರೀಶ ಆಚಾರ್ಯ ಬಾರ್ಯ(ಆಸ್ಥಾನ ವಿದ್ವಾಂಸ), ಆಶಾಲತಾ

ಉಪ್ಪಿನಂಗಡಿ ಕಾಳಿಕಾಂಬಾ ಸಂಘದಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ Read More »

ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳು ಬ್ಯಾನ್‌

ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಚಾನೆಲ್‌ಗಳಿಗೆ ನಿಷೇಧ ನವದೆಹಲಿ: ಪಹಲ್ಗಾಮ್‌ ದಾಳಿಯ ನಂತರ ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಕಟಿಸುತ್ತಿದ್ದ ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲದ ಶಿಫಾರಸ್ಸಿನ ಆಧಾರದಲ್ಲಿ 16 ಯೂಟ್ಯೂಬ್‌ ಚಾನೆಲ್‌ಗಳನ್ನು ಯೂಟ್ಯೂಬ್‌ ಭಾರತದಲ್ಲಿ ಬ್ಲಾಕ್‌ ಮಾಡಿದೆ. ಬ್ಲಾಕ್‌ ಆದ ಚಾನೆಲ್‌ಗಳ ಪಟ್ಟಿಯಲ್ಲಿ ಡಾನ್ ನ್ಯೂಸ್, ಸಾಮ್ನಾ ಟಿವಿ, ಜಿಯೊ ನ್ಯೂಸ್, ಪಾಕ್‌ ಮಾಜಿ ಕ್ರಿಕೆಟ್‌ ಆಟಗಾರ ಶೋಯೆಬ್‌ ಅಕ್ತರ್‌ ಅವರ ಚಾನೆಲ್‌ ಇದೆ. ಉಗ್ರರ ದಾಳಿಯ

ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳು ಬ್ಯಾನ್‌ Read More »

ಕಾರು- ಮಿನಿ ಲಾರಿ ಡಿಕ್ಕಿ | ಓರ್ವ ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ನೆಲ್ಯಾಡಿ: ಕಾರು ಮತ್ತು ಮಿನಿ ಲಾರಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಿನ್ನೆ ನಡೆದಿದೆ. ನಿನ್ನೆ ಸಂಜೆ ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಜೈಪುರ ಮೂಲದ ಅಬ್ದುಲ್ ಶುಕ್ರು ಚೌಧರಿ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಹುಂಡೈ ಕಂಪನಿಯ ಕಾರು, ಬೆಂಗಳೂರು ಕಡೆಯಿಂದ ಬರುವ ಮಿನಿ ಲಾರಿ ಎನ್ನಲಾಗಿದೆ. ಕಾರಿನಲ್ಲಿ ಮೃತಪಟ್ಟ ಅಬ್ದುಲ್ ಅವರ ಪತ್ನಿ ಲತಿಕಾ, ಮಗಳು ಅನ್ವೇಷ, ಅಳಿಯ

ಕಾರು- ಮಿನಿ ಲಾರಿ ಡಿಕ್ಕಿ | ಓರ್ವ ಮೃತ್ಯು, ನಾಲ್ವರಿಗೆ ಗಂಭೀರ ಗಾಯ Read More »

ಡೆಲ್ಲಿ ವಿರುದ್ದ ಭರ್ಜರಿ ಗೆಲುವು ಕಂಡ ಆರ್‌ಸಿಬಿ

ಬೆಂಗಳೂರು : ಆಕರ್ಷಕ ಪಂದ್ಯವಾದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವಿನ ಕದನವು ನಿನ್ನೆ (ಏ.27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ರಜತ್ ಪಡೆ ಡೆಲ್ಲಿ ತಂಡವನ್ನು ಮಣಿಸುವ ಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಯಶಸ್ಸನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 162 ರನ್ ಪಡೆದಿತ್ತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) ಕೇವಲ 4 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳು ಬಾಕಿ ಇರುವಂತೆಯೇ

ಡೆಲ್ಲಿ ವಿರುದ್ದ ಭರ್ಜರಿ ಗೆಲುವು ಕಂಡ ಆರ್‌ಸಿಬಿ Read More »

ಯುದ್ಧಕ್ಕೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು

ಎರಡು ದಿನದಲ್ಲಿ 5 ಸಾವಿರಕ್ಕೂ ಅಧಿಕ ಸೈನಿಕರ ರಾಜೀನಾಮೆ ಇಸ್ಲಾಮಾಬಾದ್‌: ಪಹಲ್ಗಾಮ್‌ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು ಎಂಬ ಪರಿಸ್ಥಿತಿ ಇರುವಾಗಲೇ ಪಾಕಿಸ್ಥಾನ ವಿಚಿತ್ರ ಸಮಸ್ಯೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದೆ. ಯುದ್ಧ ಭೀತಿಯಿಂದ ಪಾಕಿಸ್ಥಾನದ ಸೈನಿಕರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಶುರು ಮಾಡಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬರೀ ಸೈನಿಕರು ಮಾತ್ರವಲ್ಲ, ಕ್ಯಾಪ್ಟನ್‌, ಕಮಾಂಡರ್‌ಗಳು ಸೇರಿ ಸೇನೆಯ ಉನ್ನತ ಅಧಿಕಾರಿಗಳೂ ಇದ್ದಾರೆ ಎಂದು ಕೆಲವು ಮಾಧ್ಯಮಗಳು

ಯುದ್ಧಕ್ಕೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು Read More »

ವ್ಯಕ್ತಿಯೋರ್ವನ ಕುತ್ತಿಗೆಗೆ ಚೂರಿಯಿಂದ ಇರಿತ | ಗಂಭೀರ ಗಾಯ

ಬೆಳ್ತಂಗಡಿ: ವ್ಯಕ್ತಿಯೊಬ್ಬನ ಕುತ್ತಿಗೆಗೆ ಹಾಗೂ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಡೆನ್ನಿಸ್ ಪಿಂಟೋ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಕೊಲೆಗೈದವ ಸ್ಥಳೀಯ ನಿವಾಸಿ ಶೀನ ಎಂಬವರು ಆರೋಪಿಯಾಗಿದ್ದಾನೆ. ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಎ.26 ರಂದು ರಾತ್ರಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿ ಶೀನ ಎಂಬಾತ ಹಾಗೂ ಡೆನ್ನಿಸ್ ಪಿಂಟೋ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀನ

ವ್ಯಕ್ತಿಯೋರ್ವನ ಕುತ್ತಿಗೆಗೆ ಚೂರಿಯಿಂದ ಇರಿತ | ಗಂಭೀರ ಗಾಯ Read More »

ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ವ್ಯಾನ್‌ : 12 ಮಂದಿ ಸ್ಥಳದಲ್ಲೇ ಸಾವು

ಭೋಪಾಲ : ಮಧ್ಯಪ್ರದೇಶದ ಮಂಡಸೋರ್ ಜಿಲ್ಲೆಯಲ್ಲಿ ಭಾನುವಾರ ವ್ಯಾನ್‌ ಬಾವಿಗೆ ಬಿದ್ದು ಅದರಲ್ಲಿದ್ದ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಚರಿಯಾ ಗ್ರಾಮದಲ್ಲಿ ವೇಗವಾಗಿ ಬಂದ ವ್ಯಾನ್‌ ನಿಯಂತ್ರಣ ತಪ್ಪಿ ಆಳವಾದ ಬಾವಿಗೆ ಬಿದ್ದಿದೆ. ರಕ್ಷಿಸಲು ಬಾವಿಗೆ ಹಾರಿದ ಯುವಕನೂ ಸಾವಿಗೀಡಾಗಿದ್ದಾನೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ಉನ್ಹೆಲ್ ಮತ್ತು ರತ್ಲಂ ಜಿಲ್ಲೆಗಳ ಜನರು ವ್ಯಾನಿನಲ್ಲಿ ಪ್ರಯಾಣಿಸುತ್ತಿದ್ದರು. ನೀಮುಚ್ ಜಿಲ್ಲೆಯ ದೇವಸ್ಥಾನಕ್ಕೆ ಭೇಟಿ

ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ವ್ಯಾನ್‌ : 12 ಮಂದಿ ಸ್ಥಳದಲ್ಲೇ ಸಾವು Read More »

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಜನಿವಾರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮನವಿಗೆ ಸ್ಪಂದಿಸಿ ಕ್ಷಿಪ್ರ ನಿರ್ಧಾರ ಕೈಗೊಂಡ ಸಚಿವರು ಮಂಗಳೂರು : ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಕ್ಷಿಣ ಕನ್ನಡ ಬಿಜೆಪಿ

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಜನಿವಾರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ Read More »

ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯಲ್ಲಿ ಕುಳಿತು ಸುಗಮ ಸಂಚಾರ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆ | ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಎ.26 ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ ಮತ್ತು ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿ ಸಹಿತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪದ ಮೇರೆಗೆ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಕೆ ಪುತ್ತೂರಾಯ ಅವರ

ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯಲ್ಲಿ ಕುಳಿತು ಸುಗಮ ಸಂಚಾರ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆ | ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top