ಮಹಿಳೆಗೆ ಕಿರುಕುಳ : ಆರೋಪಿ ಬಂಧನ

ಬಂಟ್ವಾಳ: ಪತಿಯ ಜತೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಆರೋಪಿಯೋರ್ವ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ದೈಹಿಕ ಕಿರುಕುಳ ನೀಡಿದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ನಡೆದಿದೆ. ಅಬೂಬಕ್ಕರ್ ಎಂಬಾತ ಮಹಿಳೆಗೆ ಕಿರುಕುಳ ನೀಡಿದ ಆರೋಪಿ. ಉಜಿರೆಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಮಹಿಳೆಯ ಜತೆ ಆತ ಅಸಭ್ಯವಾಗಿ ವರ್ತಿಸಿದಲ್ಲದೇ ದೈಹಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಹಿಳೆಗೆ ಕಿರುಕುಳ : ಆರೋಪಿ ಬಂಧನ Read More »

ಪಾರ್ಟಿ ಮಾಡಲು ಅನುಮತಿ ಪಡೆಯಬೇಕೆಂದು ಗೊತ್ತಿರಲಿಲ್ಲ : ಮಂಗ್ಲಿ ಗೋಳಾಟ

ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ, ಮಾದಕ ವಸ್ತು ಬಳಸಿದ ಪ್ರಕರಣ ಹೈದರಾಬಾದ್‌: ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ ಮತ್ತು ಡ್ರಗ್ಸ್‌ ಪೂರೈಸಿರುವ ಆರೋಪಕ್ಕೆ ಒಳಗಾಗಿರುವ ತೆಲುಗಿನ ಪ್ರಸಿದ್ಧ ಗಾಯಕಿ ಮಂಗ್ಲಿ ಯಾನೆ ಸತ್ಯವತಿ ರಾಠೋಡ್‌, ಪಾರ್ಟಿಯಲ್ಲಿ ಮದ್ಯ ಸೇವಿಸಲು ಪೊಲೀಸರ ಅನುಮತಿ ಪಡೆಯಬೇಕೆಂದು ತನಗೆ ಗೊತ್ತಿರಲಿಲ್ಲ, ಇದು ಅರಿವಿಲ್ಲದೆ ಆಗಿರುವ ತಪ್ಪು ಎಂದು ಹೇಳಿಕೊಂಡಿದ್ದಾರೆ. ಪ್ರಸಿದ್ಧ ಜಾನಪದ ಗಾಯಕಿಯಾಗಿರುವ ಮಂಗ್ಲಿ ತೆಲುಗು ಮತ್ತು ಕನ್ನಡದ ಅನೇಕ ಸಿನಿಮಾಗಳಿಗೂ ಹಾಡಿದ್ದಾರೆ. ವಿಶಿಷ್ಟವಾದ ಧ್ವನಿ ಮತ್ತು ಜಾನಪದ ಶೈಲಿಯ ನೃತ್ಯಗಳಿಂದ ಅವರು ಸೋಷಿಯಲ್‌

ಪಾರ್ಟಿ ಮಾಡಲು ಅನುಮತಿ ಪಡೆಯಬೇಕೆಂದು ಗೊತ್ತಿರಲಿಲ್ಲ : ಮಂಗ್ಲಿ ಗೋಳಾಟ Read More »

ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಲೋಕಾರ್ಪಣೆ

ಪುತ್ತೂರು: ಸುಳ್ಯದ ನೀರಬಿದಿರೆಯಲ್ಲಿ  ಹರೀಶ್ ರೈ ಉಬರಡ್ಕರ ಮಾಲಕತ್ವದ ಮೆ. ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಸಾರ್ವಜನಿಕ ಸೇವೆಗಾಗಿ ತೆರೆದುಕೊಂಡಿತು. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್’ನ ಸದಸ್ಯರೂ ಆಗಿರುವ ಹರೀಶರ ಕನಸಿನ ಯೋಜನೆಯಾದ ಈ ಮರದ ಕಾರ್ಖಾನೆಯು ಜೂನ್ 12ರಂದು ಬೆಳಿಗ್ಗೆ ಗಣಪತಿ ಹವನದೊಂದಿಗೆ ಪ್ರಾರಂಭವಾಗಿ ಧಾರ್ಮಿಕ ವಿಧಿಗಳೊಂದಿಗೆ ಮುಂದುವರೆದು ಶ್ರೀ ದೇವರ ಪೀಠ ಸ್ಥಾಪನೆ, ಯಂತ್ರ ಪ್ರತಿಷ್ಠಾಪನೆ ಸಹಿತವಾಗಿ ಸಂಪನ್ನಗೊಂಡಿತು. ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು, ಪ್ರೇರಣಾ ಪ್ರಾಪರ್ಟೀಸ್, ಪ್ರೇರಣಾ ಡೆವಲಪರ್ಸ್

ಶ್ರೀ ಲಕ್ಷ್ಮೀ ವೆಂಕಟೇಶ ಸಾ ಮಿಲ್ ಲೋಕಾರ್ಪಣೆ Read More »

ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಜುಲೈ 1ರಿಂದಲೇ ಜಾರಿಗೆ ಬರಲಿದೆ ಹೊಸ ನಿಯಮ ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯ ತತ್ಕಾಲ್​ ಟಿಕೆಟ್​ ಬುಕಿಂಗ್ ನಿಯಮಯದಲ್ಲಿ ಬದಲಾವಣೆ ಮಾಡಿದೆ. ತತ್ಕಾಲ್​ ಟಿಕೆಟ್​ ಬುಕ್ಕಿಂಗ್​ ಮಾಡಬೇಕೆಂದರೆ IRCTC ಅಧಿಕೃತ ವೆಬ್​ಸೈಟ್​ ಅಥವಾ ಆ್ಯಪ್‌ಗೆ ಆಧಾರ್​ ಲಿಂಕ್​ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್​ ಹೊಂದಿರುವ ಬಳಕೆದಾರರು ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್‌ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ

ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ Read More »

ಕೋಮು ನಿಗ್ರಹ ಪಡೆ ನಾಳೆ ಉದ್ಘಾಟನೆ

ಸುಧೀರ್‌ ಕುಮಾರ್‌ ರೆಡ್ಡಿ ಮುಖ್ಯಸ್ಥ; ಮಂಗಳೂರಲ್ಲಿ ಕೇಂದ್ರ ಕಚೇರಿ ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪದೇಪದೆ ಸಂಭವಿಸುತ್ತಿರುವ ಕೋಮು ಗಲಭೆಗಳನ್ನು ನಿಗ್ರಹಿಸುವ ಸಲುವಾಗಿ ಸರ್ಕಾರ ರಚಿಸಿರುವ ವಿಶೇಷ ಕೋಮು ನಿಗ್ರಹ ಪಡೆಯ ಉದ್ಘಾಟನೆ ನಾಳೆ ನೆರವೇರಲಿದೆ. ಗೃಹ ಸಚಿವ ಜಿ.ಪರಮೇಶ್ವರ್‌ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಲಿದ್ದಾರೆ. ಕೋಮುಗಲಭೆ ಪ್ರಚೋದಿಸುವ ಸರಣಿ ಹತ್ಯೆಗಳ ತಡೆಗೆ ರಾಜ್ಯ ಸರ್ಕಾರ ಈ ವಿಶೇಷ ಪಡೆಯನ್ನು ರಚಿಸಿದೆ. ವಿಶೇಷ ಕಾರ್ಯಪಡೆ ಘಟಕಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ

ಕೋಮು ನಿಗ್ರಹ ಪಡೆ ನಾಳೆ ಉದ್ಘಾಟನೆ Read More »

ದ.ಕ. ಜಿ;ಲ್ಲೆಯಲ್ಲಿ ಆರೆಂಜ್‍ ಅಲರ್ಟ್ ಘೋಷಣೆ | ಇಂದು ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು: ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಖಾಸಗಿ, ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜೂನ್ 12ರಂದು ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣೆಯನ್ನು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದ.ಕ. ಜಿ;ಲ್ಲೆಯಲ್ಲಿ ಆರೆಂಜ್‍ ಅಲರ್ಟ್ ಘೋಷಣೆ | ಇಂದು ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ Read More »

ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ  ಪತ್ತೆ

ಸುಳ್ಯ: ಸುಳ್ಯ ತಾಲೂಕಿನ ಬೊಮ್ಮಾರಿನ ಬಾವಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ನಡೆದಿದೆ. ಮರ್ಕಂಜದ ಬೊಮ್ಮಾರು ನಿವಾಸಿ ಶೀನ ಪೂಜಾರಿ (65) ಅವರ ಶವ ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಕೆಲವು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ಅವರು ಕಳೆದ ಏಳೆಂಟು ದಿನಗಳಿಂದ ಕಾಣಿಸುತ್ತಿರಲಿಲ್ಲ. ಸೋಮವಾರ ಪರಿಸರದಲ್ಲಿ ಕೊಳೆತ ವಾಸನೆ ಬರುತ್ತಿದ್ದುದರಿಂದ ಹುಡುಕಾಡಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಶೀನ ಅವರು ಕೆಲವು ವರ್ಷಗಳ ಹಿಂದೆ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸಿ ಬಂದಿದ್ದರು. ಪತ್ನಿಯನ್ನು

ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ  ಪತ್ತೆ Read More »

ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ : ಮಾಜಿ ಶಾಸಕ ಮೊಯ್ದೀನ್‍ ಬಾವಾ ಸಹಿತ ಸಹಚರರ ವಿರುದ್ಧ ಪ್ರಕರಣ ದಾಖಲು

ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಮಾಜಿ ಶಾಸಕ ಮೊಯ್ದೀನ್‍ ಬಾವಾ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ. ಜೂಊ.9  ರಂದು ರಾತ್ರಿ ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ರವರು ಮತ್ತು ಅವರ ಇಬ್ಬರು ಸಹಚರರೊಂದಿಗೆ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯದ ಕುರಿತು ಎನ್.ಎಂ.ಪಿ.ಎ ಕಛೇರಿಯ ಡೆಪ್ಯೂಟಿ ಚೇರ್ಪಸ್ರನ್ ರವರ ಕಛೇರಿಗೆ ನುಗ್ಗಿ 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೇ, ಅವರನ್ನು ತಡೆದು ನಿಲ್ಲಿಸಿದ

ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ : ಮಾಜಿ ಶಾಸಕ ಮೊಯ್ದೀನ್‍ ಬಾವಾ ಸಹಿತ ಸಹಚರರ ವಿರುದ್ಧ ಪ್ರಕರಣ ದಾಖಲು Read More »

ಜಲರಾಶಿಯ ನಡುವೆ ಧಗಧಗಿಸುತ್ತಿದೆ ಸಿಂಗಾಪುರದ ಹಡಗು : ಬೆಂಕಿ ನಂದಿಸಲು ಹರಸಾಹಸ

ರಾಸಾಯನಿಕ, ತೈಲ ತುಂಬಿರುವ ಕಂಟೈನರ್‌ಗಳು ಸ್ಫೋಟಿಸುವ ಆತಂಕ ಮಂಗಳೂರು: ಕೇರಳದ ಕರಾವಳಿ ಸಮೀಪ ಸಿಂಗಾಪುರ ಮೂಲದ ಕಂಟೈನರ್‌ ಸಾಗಿಸುತ್ತಿದ್ದ ಬೃಹತ್‌ ಹಡಗಿಗೆ ಭೀಕರ ಸ್ಫೋಟದ ಬಳಿಕ ಹತ್ತಿಕೊಂಡ ಬೆಂಕಿಯನ್ನು ನಂದಿಸಲು 48 ತಾಸುಗಳ ಸತತ ಕಾರ್ಯಾಚರಣೆಯ ಬಳಿಕವೂ ಸಾಧ್ಯವಾಗಿಲ್ಲ. ಹಡಗಿನಲ್ಲಿ ರಾಸಾಯನಿಕವೂ ಸೇರಿದಂತೆ ಅಪಾಯಕಾರಿ ತೈಲ ಮತ್ತು ಅನಿಲ ಇರುವ ಕಂಟೈನರ್‌ಗಳು ಕೂಡ ಇವೆ. ಹೀಗಾಗಿ ಈ ಹಡಗು ಕರಾವಳಿ ಭಾಗದಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಕೆಲದಿನಗಳ ಹಿಂದೆಯಷ್ಟೇ ಕೇರಳ ಕರಾವಳಿಯಾಚೆ ಕಂಟೈನರ್‌ ಹಡಗೊಂದು ಮುಳುಗಿ ಅನೇಕ

ಜಲರಾಶಿಯ ನಡುವೆ ಧಗಧಗಿಸುತ್ತಿದೆ ಸಿಂಗಾಪುರದ ಹಡಗು : ಬೆಂಕಿ ನಂದಿಸಲು ಹರಸಾಹಸ Read More »

ಎಂಟು ಕಡೆ ಇ.ಡಿ. ದಾಳಿ: ಸಂಸದ, ಮೂವರು ಶಾಸಕರ ಮನೆ ಪರಿಶೋಧನೆ

ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆ ಗೆಲ್ಲಲು ಬಳಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿ ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ಸಂಭವಿಸಿರುವ ಬಹುಕೋಟಿ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆ ಬಳ್ಳಾರಿಯ ಕಾಂಗ್ರೆಸ್‌ ಸಂಸದ ಇ.ತುಕರಾಂ ಮತ್ತು ಬಳ್ಳಾರಿ ಭಾಗದ ಮೂವರು ಶಾಸಕರು ಸೇರಿದಂತೆ ಒಟ್ಟು ಕಡೆ ದಾಳಿ ನಡೆಸಿದೆ. ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ನಿಗಮದ 21 ಕೋಟಿ ರೂ. ಬಳಸಿದ ಆರೋಪದಲ್ಲಿ ಈ ದಾಳಿಯಾಗಿದ್ದು, ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮುಡಾ

ಎಂಟು ಕಡೆ ಇ.ಡಿ. ದಾಳಿ: ಸಂಸದ, ಮೂವರು ಶಾಸಕರ ಮನೆ ಪರಿಶೋಧನೆ Read More »

error: Content is protected !!
Scroll to Top