ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು

ಉಳ್ಳಾಲ: ವಿದ್ಯಾರ್ಥಿನಿಯೋರ್ವಳು ವಸತಿ ಕಟ್ಟಡದ 12ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಕುತ್ತಾರುನಲ್ಲಿ ನಡೆದಿದೆ. ಹಿಬಾ ಐಮನ್ (15) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ರಾಜ್ ಅಹಮ್ಮದ್ ಮತ್ತು ಖಮ್ರಾಜ್ ಬಾನು ಅವರ ಹಿರಿಯ ಪುತ್ರಿಯಾಗಿರುವ ಹಿಬಾ ಐಮನ್  18 ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದರು. ನಿನ್ನೆ ರಾತ್ರಿ ದಂಪತಿ ರಾತ್ರಿ ಪಾಳಿ ಕರ್ತವ್ಯಕ್ಕೆ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ […]

ಬಹುಮಹಡಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು Read More »

ಬೆಂದು ಹೋದ ಜೀವಗಳು – ಕರಟಿ ಹೋದ ಕನಸುಗಳು…

ವಿಮಾನ ದುರಂತದ ಮನಕಲಕುವ ಕಥೆಗಳು ಅಹದಾಬಾದ್‌: ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಕರಟಿ ಹೋದ ಕನಸುಗಳೆಷ್ಟೋ, ಬೆಂದು ಹೋದ ಬದುಕುಗಳೆಷ್ಟೋ? ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದವರು ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಗುರುತು ಕೂಡ ಸಿಗದಷ್ಟು ಭೀಕರವಾಗಿ ಸಾಯಬಹುದು ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ. ಮನೆ ಕಟ್ಟಲು ತೊಡಗಿದ್ದ ನರ್ಸ್‌, ಸುಖಸಾಗರದಲ್ಲಿ ತೇಲಾಡುತ್ತಿದ್ದ ಸುಂದರ ಕುಟುಂಬ, ಹೆಂಡತಿಯನ್ನು ಕರೆತರಲು ಹೋಗುತ್ತಿದ್ದ ಮಾಜಿ ಮುಖ್ಯಮಂತ್ರಿ… ಹೀಗೆ ಒಂದೊಂದೇ ದುರಂತ ಕಥೆಗಳು ಹೊರಬರುತ್ತಿವೆ. ವಿಮಾನದಲ್ಲಿದ್ದ

ಬೆಂದು ಹೋದ ಜೀವಗಳು – ಕರಟಿ ಹೋದ ಕನಸುಗಳು… Read More »

ಅಶ್ರಫ್‌, ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಗಳ ಎನ್‌ಐಎ ತನಿಖೆ?

ಎನ್‌ಐಎಗೊಪ್ಪಿಸುವ ಕುರಿತು ಸ್ಪೀಕರ್‌ ಯು.ಟಿ.ಖಾದರ್‌ ಮಾತುಕತೆ ಮಂಗಳೂರು : ಮಂಗಳೂರು ಸಮೀಪ ಕುಡುಪುವಿನಲ್ಲಿ ನಡೆದ ಕೇರಳ ವಯನಾಡು ಮೂಲದ ಅಶ್ರಫ್ ಗುಂಪು ಹತ್ಯೆ ಹಾಗೂ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್‌ ಹತ್ಯೆ ಪ್ರಕರಣಗಳ ತನಿಖೆಯನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯನ್ನು ಎನ್‌ಐಎ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಸಿದ ಬಳಿಕ ಅಶ್ರಫ್‌ ಮತ್ತು ಅಬ್ದುಲ್‌ ರಹಿಮಾನ್‌ ತನಿಖೆಯನ್ನೂ ಎನ್‌ಐಎ ಮಾಡಲಿ ಎಂಬ ಒತ್ತಾಯ ಕೇಳಿ ಬಂದಿತ್ತು.

ಅಶ್ರಫ್‌, ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಗಳ ಎನ್‌ಐಎ ತನಿಖೆ? Read More »

ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಅಪಾಯದಿಂದ ಪಾರು

ಹೊಸಂಗಡಿ: ರಾಜ್ಯ ಹೆದ್ದಾರಿ 70ರ ಕುಲೆಗಟ್ಟು ಎಂಬಲ್ಲಿ ಕಾರೊಂದು ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳಗಿನ ಜಾವ 3 ಗಂಟೆಗೆ ನಿದ್ರೆಯ ಮಂಪರಿನಲ್ಲಿ ಕಾರು ಡಿಕ್ಕಿ ಹೊಡೆದಿದ್ದು, ಯಾವುದೇ ಗಂಭೀರ ಗಾಯ ಉಂಟಾಗಿಲ್ಲ ಎನ್ನಲಾಗಿದೆ. ಕಂಬ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿದ್ದು, ಸ್ಥಳೀಯರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿದ್ಯುತ್‍ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಅಪಾಯದಿಂದ ಪಾರು Read More »

ಕುತ್ತಾರ್‌ : 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಬಟ್ಟೆ ಒಣಗಲು ಹಾಕುವಾಗ ಆಯತಪ್ಪಿ ಬಿದ್ದ ವೈದ್ಯ ದಂಪತಿಯ ಪುತ್ರಿ ಮಂಗಳೂರು: ಬಾಲಕಿ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತೊಕ್ಕೊಟ್ಟು ಸಮೀಪ ಕುತ್ತಾರ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಯೆನೆಪೋಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಮುಮ್ತಾಜ್‌ ಅಹ್ಮದ್‌ ಮತ್ತು ಡಾ.ಕಮ್ರಾಜ್‌ ದಂಪತಿಯ ಪುತ್ರಿ 15ರ ಹರೆಯದ ಹಿಬಾ ಐಮನ್‌ ಸಾವಿಗೀಡಾಗಿರುವ ಬಾಲಕಿ ಕುತ್ತಾರ್‌ನಲ್ಲಿರುವ ಸಿಲಿಕೋನಿಯಾ ಎಂಬ ಬಹುಮಹಡಿ ವಸತಿ ಸಂಕೀರ್ಣದ ಫ್ಲ್ಯಾಟ್‌ನಲ್ಲಿ ಈ ವೈದ್ಯ ದಂಪತಿ ವಾಸವಾಗಿದ್ದರು. ಇದೇ ಕಟ್ಟಡದಿಂದದ ಬಾಲಕಿ ಬಿದ್ದಿದ್ದಾಳೆ. 18 ಮಹಡಿಗಳ ಬೃಹತ್‌

ಕುತ್ತಾರ್‌ : 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು Read More »

ಅಹಮದಾಬಾದ್‌ ವಿಮಾನ ದುರಂತ : ಆಸ್ಪತ್ರೆಗೆ ಆಗಮಿಸಿದ ಮೋದಿ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ಗೆ ಬಂದಿಳಿದಿದ್ದು, ಇಲ್ಲಿನ ಸಿವಿಲ್ ಆಸ್ಪತ್ರೆಗೆ ಆಗಮಿಸಿ ಅಹಮದಾಬಾದ್ ವಿಮಾನ ಪತನ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಗುರುವಾರ ಮಧ್ಯಾಹ್ನ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಜನ ಮೃತಪಟ್ಟಿದ್ದಾರೆ. ಮೆಡಿಕಲ್ ಕಾಲೇಜು ಹಾಸ್ಟೆಲ್​ ಮೇಲೆಯೇ ವಿಮಾನ ಪತನವಾಗಿದ್ದರಿಂದ ಅಲ್ಲಿದ್ದವರೂ ಅನೇಕರು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಅಧಿಕೃತ ಘೋಷಣೆ ಡಿಎನ್​ಎ ಪರೀಕ್ಷೆಯ ನಂತರ ಪ್ರಕಟವಾಗಲಿದೆ.

ಅಹಮದಾಬಾದ್‌ ವಿಮಾನ ದುರಂತ : ಆಸ್ಪತ್ರೆಗೆ ಆಗಮಿಸಿದ ಮೋದಿ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ವಿಜ್ಞಾನ’ವೃತಿಕಾ’ಸಂಘದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 2025-26 ನೇ ಸಾಲಿನ ವಿಶ್ವ ಪರಿಸರ ದಿನದಧ್ಯೇಯ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಪರಿಸರಕ್ಕೆ ಸಂಬಂಧಿಸಿ ಮಕ್ಕಳ ಮೂಲಕ ಪೋಷಕರಿಗೆ ಪ್ಲಾಸ್ಟಿಕ್ ಬದಲಿ-ಏನು? ಯಾಕೆ?- ಹೇಗೆ? ಎಂಬ ಆಶಯದ ಪತ್ರಕವನ್ನು ನೀಡಲಾಯಿತು. ಮಕ್ಕಳು ತಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಬಳಸಿ ಪರಿಸರ ಸ್ನೇಹಿ ಕೈಚೀಲ ತಯಾರಿಸಿದರು. ಪರಿಸರ ಸಂರಕ್ಷಣಾ ಘೋಷ ವಾಕ್ಯಗಳೊಂದಿಗೆ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಪ್ರೌಢ ವಿಭಾಗದ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ Read More »

ಅಹಮದಾಬಾದ್‌ ವಿಮಾನ ದುರಂತ : ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ಏರ್‌ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ಸಾವನ್ನಪ್ಪಿರುವ ಅಹಮದಾಬಾದ್‌ನ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಲಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಜೊತೆ ನಿನ್ನೆಯಿಂದೀಚೆಗೆ ನಿರಂತರ ಸಂಪರ್ಕದಲ್ಲಿರುವ ಮೋದಿ ಇಂದು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ವಿಮಾನ ಪತನಗೊಂಡ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದು, ಅಧಿಕಾರಿಗಳಿಂದ ದುರಂತದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಬದುಕುಳಿದ ಏಕೈಕ ಪ್ರಯಾಣಿಕನ ಆರೋಗ್ಯ ವಿಚಾರಿಸಲಿದ್ದಾರೆ. ನಿನ್ನೆಯೂ ಅವಘಡದ ಕುರಿತು ಕೇಂದ್ರ

ಅಹಮದಾಬಾದ್‌ ವಿಮಾನ ದುರಂತ : ಇಂದು ಪ್ರಧಾನಿ ಮೋದಿ ಭೇಟಿ Read More »

ಇರಾನ್‌ ಮೇಲೆ ಇಸ್ರೇಲ್‌ ಹಠಾತ್‌ ದಾಳಿ : ಅಣ್ವಸ್ತ್ರ ನೆಲೆಗಳೇ ಗುರಿ

ಇರಾನ್ ಸೇನಾಧಿಕಾರಿಗಳು, ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿರುವ ಶಂಕೆ ಜೆರುಸಲೇಂ : ಇರಾನ್‌ನ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಶುಕ್ರವಾರ ಬೆಳಗಿನ ಜಾವ ಹಠಾತ್ ದಾಳಿ ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಈ ದಾಳಿಯಲ್ಲಿ ಇರಾನ್ ಸೇನೆಯ ಪ್ರಮುಖ ಅಧಿಕಾರಿಗಳು, ಪರಮಾಣು ವಿಜ್ಞಾನಿಗಳು ಸೇರಿದಂತೆ ಅನೇಕ ಪ್ರಮುಖರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇರಾನ್‌ಗೆ ಭಾರಿ ಹಾನಿಯಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇರಾನ್ ಪರಮಾಣು ನೆಲೆಗಳನ್ನು ಗುರಿಯಾಗಿಸಿ ನಮ್ಮ ಸೇನೆ

ಇರಾನ್‌ ಮೇಲೆ ಇಸ್ರೇಲ್‌ ಹಠಾತ್‌ ದಾಳಿ : ಅಣ್ವಸ್ತ್ರ ನೆಲೆಗಳೇ ಗುರಿ Read More »

ಅಹಮದಾಬಾದ್‌ವಿಮಾನ ದುರಂತ ಸಾವಿನ ಸಂಖ್ಯೆ 265ಕ್ಕೇರಿಕೆ

ಡ್ರೀಮ್‌ಲೈನರ್‌ನಲ್ಲಿ ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಸುಟ್ಟು ಕರಕಲಾಯಿತು 1.25 ಲಕ್ಷ ಲೀಟರ್‌ನಷ್ಟು ಪೆಟ್ರೋಲ್‌ ಸ್ಫೋಟಿಸಿ ಭೀಕರ ಅವಘಡ ನವದೆಹಲಿ: ಡ್ರೀಮ್‌ಲೈನರ್‌ ವಿಮಾನದಲ್ಲಿ ಬದುಕಿನ ನಾನಾ ಕನಸುಗಳನ್ನು ಹೊತ್ತು ಪ್ರಯಾಣಿಸುತ್ತಿದ್ದವರ ಕನಸುಗಳೆಲ್ಲ ಆಕಾಶದಲ್ಲೇ ಹೊತ್ತಿ ಉರಿದು ಕರಟಿ ಹೋಗಿವೆ. ದೇಶ ಕಂಡ ಮಹಾ ವಿಮಾನ ದುರಂತವೊಂದು 265 ಮಂದಿಯ ಪ್ರಾಣ ಕಸಿದುಕೊಂಡಿದೆ. ಅಹಮದಾಬಾದ್‌ನಲ್ಲಿ ಗುರುವಾರ ಮಧ್ಯಾಹ್ನ ಏರ್‌ ಇಂಡಿಯಾ ವಿಮಾನ ಪತನಗೊಂಡು ಸಂಭವಿಸಿದ ಮಹಾದುರಂತದಲ್ಲಿ ಒಟ್ಟು 265 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 242 ಮಂದಿಯ ಪೈಕಿ ಓರ್ವ ಮಾತ್ರ

ಅಹಮದಾಬಾದ್‌ವಿಮಾನ ದುರಂತ ಸಾವಿನ ಸಂಖ್ಯೆ 265ಕ್ಕೇರಿಕೆ Read More »

error: Content is protected !!
Scroll to Top