ದಕ್ಷಿಣ ಕನ್ನಡ ಜಿಲ್ಲೆಯ ಜನರ ಮರಣಶಾಸನ ಬರೆಯುತ್ತಿದೆ ಕಾಂಗ್ರೆಸ್ ಸರ್ಕಾರ | ಕೆಂಪು ಕಲ್ಲು ನಿಷೇಧದಿಂದ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಲಾರಿ ಮಾಲಕ ಭಾನುಪ್ರಕಾಶ್ ಭೇಟಿಯಾದ ಅರುಣ್ ಪುತ್ತಿಲ
ಸುಳ್ಯ: ಸುಳ್ಯದ ಎಲಿಮಲೆಯ ಲಾರಿ ಮಾಲಕ ಭಾನುಪ್ರಕಾಶ್ ಸರಕಾರದ ನಿಯಮದಿಂದ ಕೆಂಪು ಕಲ್ಲು ನಿಷೇಧದಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ, ಫೈನಾನ್ಸ್ ಸಂಸ್ಥೆಯವರಿಂದ ಕಿರುಕುಳವಾಯಿತು ಎಂಬ ಆರೋಪದ ಮೇಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಇಂದು ಅರುಣ್ ಪುತ್ತಿಲ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಭಾನುಪ್ರಕಾಶ್ ರನ್ನು ಭೇಟಿಯಾದ ಪುತ್ತಿಲ ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೇಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ ಮರಣಶಾಸನ ಬರೆಯುತ್ತಿದೆ […]










