ಡಯಾಲಿಸಿಸ್ ಯಂತ್ರ ಖರೀದಿಗೆ ದಾನಿಗಳ ನೆರವು | ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ತೀರ್ಮಾನ

ಪುತ್ತೂರು: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ಅವಿಭಜಿತ ತಾಲೂಕುಗಳ ಏಕೈಕ ಡಯಾಲಿಸಿಸ್ ಕೇಂದ್ರಕ್ಕೆ ಇನ್ನೂ 6 ಡಯಾಲಿಸಿಸ್ ಮೆಷಿನ್‌ಗಳ ಅಗತ್ಯವಿದ್ದು, ದಾನಿಗಳಿಂದ ಸಂಗ್ರಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಹಾಗೂ ಕಡಬ ತಾಲೂಕಿಗೆ ಏಕೈಕ ಡಯಾಲಿಸಿಸ್ ಕೇಂದ್ರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದೆ. ಇದು ಸಾಕಾಗುತ್ತಿಲ್ಲ. ಆದ್ದರಿಂದ ಮಂಗಳೂರು ಸೇರಿದಂತೆ ಇತರ […]

ಡಯಾಲಿಸಿಸ್ ಯಂತ್ರ ಖರೀದಿಗೆ ದಾನಿಗಳ ನೆರವು | ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ತೀರ್ಮಾನ Read More »

ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜಿನ ವಾರ್ಷಿಕೋತ್ಸವ

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹರಿಣಾಕ್ಷ ಕೆ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸದಸ್ಯ ಹಾಗೂ ಉದ್ಯಮಿ ವಿ.ಕೆ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಕಲಿಕೆಯೊಂದಿಗೆ ಒಳ್ಳೆಯ ಗುಣಗಳನ್ನು ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ವಿಷ್ಣು ಭಟ್ ಮಾತನಾಡಿ, ಸಾಂಪ್ರದಾಯಿಕ ಆಚರಣೆಗಳ, ನೈತಿಕ ನೈರ್ಮಲ್ಯಗಳನ್ನು ವಿದ್ಯಾರ್ಥಿಗಳೆಲ್ಲರೂ ಅಳವಡಿಸಿಕೊಂಡು ಭವ್ಯ ಭಾರತವನ್ನು ಕಟ್ಟಬೇಕೆಂದು ಕರೆ

ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜಿನ ವಾರ್ಷಿಕೋತ್ಸವ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.ಉಪ್ಪಿನAಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿ ಮಾತನಾಡಿ, ಒಂದು ಹಣತೆಯಿಂದ ಸಾವಿರಾರು ಹಣತೆಗಳನ್ನು ಹಚ್ಚಬಹುದು. ಹಾಗೆಯೇ ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿದಲ್ಲಿ ಮಾತ್ರ ಅದು ವೃದ್ಧಿಯಾಗುತ್ತದೆ. ಜ್ಞಾನವನ್ನು ತಲೆಯಲ್ಲಿಟ್ಟು ಮೆರೆಯದೆ ಹೃದಯದಲ್ಲಿಟ್ಟು ವಿನಮ್ರವಾಗಿ ನಡೆದುಕೊಂಡರೆ ಜೀವನ ಸಾರ್ಥಕವಾಗುವುದು. ನಾಯಕರು ಅನುಯಾಯಿಗಳನ್ನು ಸೃಷ್ಠಿಸುವ ಬದಲು ನಾಯಕರನ್ನು ಸೃಷ್ಠಿಸಬೇಕು. ವ್ಯಕ್ತಿಗಳನ್ನು ಹಾಗೂ ವ್ಯಕ್ತಿತ್ವಗಳನ್ನು ಉಳಿಸಿ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

ಗ್ರಾಮೀಣ ರೈತ ಮಹಿಳೆಯರಿಗೆ ಉಚಿತ ನಾಟಿಕೋಳಿ ಮರಿ ವಿತರಣೆ

ಪುತ್ತೂರು: ಗ್ರಾಮೀಣ ಭಾಗದ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ನೂರಿನ್ನೂರು ಕೋಳಿಮರಿಗಳನ್ನು ಸಾಕಿಕೊಂಡು, ಜೀವನವನ್ನು ಸುಗಮವಾಗಿ ಸಾಗಿಸಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಗ್ರಾಮೀಣ ಭಾಗದ ಅರ್ಹ ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದರು.ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟನಲ್ಲಿ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಇದು ಕೂಡ ಒಂದು. ಐವತ್ತು ಸಾವಿರ ಕೋಳಿಮರಿಗಳನ್ನು

ಗ್ರಾಮೀಣ ರೈತ ಮಹಿಳೆಯರಿಗೆ ಉಚಿತ ನಾಟಿಕೋಳಿ ಮರಿ ವಿತರಣೆ Read More »

ಪುತ್ತೂರು: ವಕೀಲರ ಸಂಘದಿಂದ ಪ್ರತಿಭಟನೆ

ಪುತ್ತೂರು: ಪುತ್ತೂರು ವಕೀಲರ ಸಂಘದಿಂದ ಬುಧವಾರ ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು. ಮಂಗಳೂರಿನ ಯುವ ವಕೀಲ ಕುಲ್‌ದೀಪ್ ಶೆಟ್ಟಿ ಅವರ ಮೇಲಿನ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಮಾತನಾಡಿ, ಕುಲದೀಪ್ ಶೆಟ್ಟಿ ಅವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ವಕೀಲ ಕುಲದೀಪ್‌ಗೆ ಹಲ್ಲೆ ನಡೆಸಿದ್ದು ಅಲ್ಲದೇ,

ಪುತ್ತೂರು: ವಕೀಲರ ಸಂಘದಿಂದ ಪ್ರತಿಭಟನೆ Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ `ಅನ್ವೇಷಣಾ-೨೦೨೨’ ಸಮಾರೋಪ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ನೇತೃತ್ವದ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯವು ಪಿ.ಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್‌ಕಾಲೇಜು ಸಾಂಸ್ಕೃತಿಕ ಹಾಗೂ ಸೃಜನಶೀಲ ಸ್ಪರ್ಧೆ `ಅನ್ವೇಷಣಾ-೨೦೨೨’ರಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ನಿಂತಿಕಲ್ಲು ಕೆ.ಎಸ್. ಗೌಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಭಾರತ ದೇಶ

ಅಂಬಿಕಾ ಮಹಾವಿದ್ಯಾಲಯದಲ್ಲಿ `ಅನ್ವೇಷಣಾ-೨೦೨೨’ ಸಮಾರೋಪ Read More »

ಅಮೆಝಾನ್‌ನಿಂದ ೨೦,೦೦೦ ಉದ್ಯೋಗಿಗಳ ವಜಾ?

ಹೊಸದಿಲ್ಲಿ: ಕೊರೋನಾ ಬಳಿಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕುತ್ತಿರುವುದು ತಿಳಿದಿರುವ ಸಂಗತಿ. ಇದೇ ಸಾಲಿಗೆ ಇದೀಗ ಅಮೆಝಾನ್ ಕೂಡ ಸೇರುತ್ತಿದೆ. ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ೨೦ ಸಾವಿರ ಉದ್ಯೋಗಿಗಳನ್ನು ಅಮೆಝಾನ್ ವಜಾಗೊಳಿಸುವ ಸಾಧ್ಯತೆಯ ಬಗ್ಗೆ ಕಂಪ್ಯೂಟರ್ ವರ್ಲ್ಡ್ ವರದಿ ಮಾಡಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದರಿAದ ವೆಚ್ಚ ಕಡಿತದ ಭಾಗವಾಗಿ ಅಮೆಝಾನ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ೧.೬ ದಶಲಕ್ಷ ಉದ್ಯೋಗಿಗಳ ಹೊಂದಿರುವ ದೈತ್ಯ ತಂತ್ರಜ್ಞಾನ ಕಂಪನಿ ಅಮೆಝಾನ್,

ಅಮೆಝಾನ್‌ನಿಂದ ೨೦,೦೦೦ ಉದ್ಯೋಗಿಗಳ ವಜಾ? Read More »

ಯುಎಇ ದೇಶದ ಪಾಸ್‌ಪೋರ್ಟ್ ಅತ್ಯುತ್ತಮ: ವರದಿ

ದುಬೈ: ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುಎಇಯದ್ದು ಎಂದು ವರದಿಯೊಂದು ತಿಳಿಸಿದೆ.ಆರ್ಟನ್ ಕ್ಯಾಪಿಟಲ್ ಸಂಸ್ಥೆ ಪ್ರಕಟಿಸಿದ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಗಿವೆ. ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ಟಾಪ್ ೧೦ ದೇಶಗಳ ಪಟ್ಟಿಯಲ್ಲಿ ಯುರೋಪಿಯನ್ ದೇಶಗಳ ಪಾರಮ್ಯದ ನಡುವೆ ಯುಎಇ ಅಗ್ರ ಸ್ಥಾನ ಗಳಿಸಿದೆ.ಯುಎಇ ಪಾಸ್‌ಪೋರ್ಟ್ ಹೊಂದಿದವರು ಯಾವುದೇ ಸಮಸ್ಯೆಯಿಲ್ಲದೆ ೧೮೦ ದೇಶಗಳನ್ನು ಪ್ರವೇಶಿಸಬಹುದಾಗಿದೆ. ಜರ್ಮನಿ ಮತ್ತು ಸ್ವೀಡನ್ ದೇಶಗಳ ಪಾಸ್‌ಪೋರ್ಟ್ಗಳನ್ನು ಬಳಸಿ ಪ್ರಯಾಣಿಸಬಹುದಾದ

ಯುಎಇ ದೇಶದ ಪಾಸ್‌ಪೋರ್ಟ್ ಅತ್ಯುತ್ತಮ: ವರದಿ Read More »

ಸರ್ವೋಚ್ಚ ನ್ಯಾಯಾಲಯದ ಮೊಬೈಲ್ ಆ್ಯಪ್ ೨.೦ ಆವೃತ್ತಿಗೆ ಚಾಲನೆ

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ತನ್ನ ಮೊಬೈಲ್ ಆ್ಯಪ್‌ನ ಆ್ಯಂಡ್ರಾಯ್ಡ್ ಆವೃತ್ತಿ ೨.೦ಕ್ಕೆ ಬುಧವಾರ ಚಾಲನೆ ನೀಡಿದ್ದು, ವಿವಿಧ ಸಚಿವಾಲಯಗಳ ಕಾನೂನು ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ನೈಜ ಸಮಯದಲ್ಲಿ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬಹುದು. ದಿನದ ಕಲಾಪಗಳ ಆರಂಭಕ್ಕೆ ಮುನ್ನ ಇದನ್ನು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಆ್ಯಪ್‌ನ ಆ್ಯಂಡ್ರಾಯ್ಡಾ ಆವೃತ್ತಿ ೨.೦ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಐಒಎಸ್ ಆವೃತ್ತಿಯು ಇನ್ನೊಂದು ವಾರದಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳ

ಸರ್ವೋಚ್ಚ ನ್ಯಾಯಾಲಯದ ಮೊಬೈಲ್ ಆ್ಯಪ್ ೨.೦ ಆವೃತ್ತಿಗೆ ಚಾಲನೆ Read More »

ಡಿ. ೧೭ರಿಂದ ಜ. ೧೪ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ ೧೭ರಂದು ಧನು ಪೂಜೆ ಆರಂಭಗೊಳ್ಳಲಿದೆ. ಒಂದು ಪರ್ಯಂತ ಕಾಲ ಉಷಃ ಕಾಲದಲ್ಲಿ ನಡೆಯುವ ಧನು ಪೂಜೆಯು ಜ. ೧೪ರವರೆಗೆ ನಡೆಯಲಿದೆ. ಊರ – ಪರವೂರ ಭಕ್ತರನ್ನು ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಯಾವುದೇ ವಿಶೇಷ ಉತ್ಸವವೆಂದರೆ ಭಕ್ತರ ದಂಡೇ ಹರಿದು ಬರುತ್ತದೆ. ಧನು ಮಾಸದ ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ, ಭಕ್ತಸಮೂಹ ದೇವಸ್ಥಾನಕ್ಕೆ ಧಾವಿಸಿ ಬರುತ್ತಾರೆ. ಹಾಗಾಗಿ, ಧನು ಪೂಜೆಯಲ್ಲಿ ಭಕ್ತರಿಗೆ ಪಾಲ್ಗೊಳ್ಳುವ ಸಡಗರವಾದರೆ, ಶ್ರೀ

ಡಿ. ೧೭ರಿಂದ ಜ. ೧೪ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ Read More »

error: Content is protected !!
Scroll to Top