ಪುತ್ತೂರಿನಲ್ಲಿ  ಒಳಿತು ಮಾಡು ಮನುಷ್ಯ ತಂಡದ 20ನೇ ಕಾರ್ಯಕ್ರಮ

ಚಿಕಿತ್ಸಾ ವೆಚ್ಚ, ಆಶಕ್ತರಿಗೆ ಆಹಾರ ಕಿಟ್ ವಿತರಣೆ ಪುತ್ತೂರು : ಇಲ್ಲಿಯ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಪುತ್ತೂರು ಜೆಸಿಐ ಹಾಗೂ ಪುತ್ತೂರು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಊರ ಪರವೂರ ದಾನಿಗಳ ಸಹಕಾರದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ  ಹಾಗೂ  ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 20ನೇ  “ಒಳಿತು ಮಾಡು ಮನುಷ್ಯ ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. […]

ಪುತ್ತೂರಿನಲ್ಲಿ  ಒಳಿತು ಮಾಡು ಮನುಷ್ಯ ತಂಡದ 20ನೇ ಕಾರ್ಯಕ್ರಮ Read More »

ಕುಂಬ್ರ ಕೆಪಿಎಸ್ ಶಾಲೆಯಲ್ಲಿ ಕಲಿಕಾ ಹಬ್ಬ, ಸ್ಮಾರ್ಟ್‍‍ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ

ಪುತ್ತೂರು : ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕಲಿಕಾ ಹಬ್ಬ ಹಾಗೂ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಬುಧವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಸ್ಟಾರ್ಟ್ ಕ್ಲಾಸ್ ಉದ್ಘಾಟಿಸಿ, ಮಕ್ಕಳು ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ವಿಚಾರ ತಿಳಿದು ಕೊಳ್ಳಲು  ಕಲಿಕಾ ಹಬ್ಬ ಪೂಕರವಾಗಿದ್ದು, ಪ್ರಕೃತಿ ಮಡಿಲಲ್ಲಿ ಶಿಕ್ಷಕರ ಜೊತೆಗೂಡಿ ವಿದ್ಯಾರ್ಥಿಗಳಿಗೆ ಕಲಿಕೆ ಹಬ್ಬವಾಗಿ ಪರಿಣಮಿಸಿದೆ. ಇಂತಹಾ ಕಾರ್ಯಕ್ರಮ ಮಕ್ಕಳಲ್ಲಿ ಉತ್ಸಾಹ ಮೂಡಿಸುವ ಜತೆಗೆ ಶೈಕ್ಷಣಿಕವಾಗಿ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು. ತಾಪಂ ಸ್ಥಾಯಿ ಸಮಿತಿ

ಕುಂಬ್ರ ಕೆಪಿಎಸ್ ಶಾಲೆಯಲ್ಲಿ ಕಲಿಕಾ ಹಬ್ಬ, ಸ್ಮಾರ್ಟ್‍‍ ಕ್ಲಾಸ್, ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಶ್ರೀ ಕ್ಷೇತ್ರ ದೈಪಿಲ ಗೊನೆ ಮುಹೂರ್ತ

ಕಾಣಿಯೂರು : ಶ್ರೀ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ಜಾತ್ರೋತ್ಸವದ  ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಅರುವಗುತ್ತು ಯಜಮಾನ  ಪ್ರದೀಪ್ ಆರ್.ಗೌಡ ಮತ್ತು ವಚನಾ ಪ್ರದೀಪ್ ಆರ್ ಗೌಡ, ಚಂದ್ರಕಲಾ ಜಯರಾಮ ಗೌಡ ಅರುವಗುತ್ತು ಅವರ ಉಪಸ್ಥಿತಿಯಲ್ಲಿ ಅರುವಗುತ್ತಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಅಂಬುಲದಲ್ಲಿ ಗೊನೆಮುಹೂರ್ತ ನಡೆಯಿತು. ಪ್ರಧಾನ ಪರಿಚಾರಕ ಧರ್ಮಪಾಲ ಅಂಬುಲ ಗೊನೆ ಮುಹೂರ್ತ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೂಡುಕಟ್ಟಿನ ನಾಲ್ಕುಮನೆ, 13 ವರ್ಗ, ಕೊಪ್ಪ ಮೂವತ್ತು ಮನೆ ಯಜಮಾನರು,.ಯು.ಪಿ.ರಾಮಕೃಷ್ಣ,

ಶ್ರೀ ಕ್ಷೇತ್ರ ದೈಪಿಲ ಗೊನೆ ಮುಹೂರ್ತ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ

ಪುತ್ತೂರು :ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ಹಾಗೂ ತಾಲೂಕು ಮಡಿವಾಳರ ಸಂಘದ ಜಂಟಿ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸಂಸ್ಮರಣಾ ಜ್ಯೋತಿ ಪ್ರಜ್ವಲಿಸಿ ಮಾತನಾಡಿ, ಸಮಾಜದಲ್ಲಿ‌ನ ಅಸಮಾನತೆ ವಿರುದ್ದ ಹೋರಾಡುವ ಮೂಲಕ‌ ಶರಣರು ಸಮಾನತೆ ತಂದುಕೊಡುವಲ್ಲಿ ಬಹಳಷ್ಟು ಪ್ರಯತ್ನಿದ್ದಾರೆ‌. ಈ ನಿಟ್ಟಿನಲ್ಲಿ ಶ್ರೀ ಮಾಚಿದೇವ ಮಡಿವಾಳರ ಆದರ್ಶ ಒಂದಾಗಿದ್ದು, ಅವರ ಜಯಂತಿಯನ್ನು ಆಚರಿಸುವ ಮೂಲಕ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ Read More »

ಫೆ.1 ರಿಂದ 3 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಟೆ

ಕಡಬ : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಫೆ.1 ರಿಂದ 3 ರ ತನಕ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಫೆ.2 ಗುರುವಾರ ಬೆಳಿಗ್ಗೆ 7 ರಿಂದ ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಸಂಹಾರ ತತ್ತ್ವಹೋಮ, ತತ್ತ್ವಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಧ್ಯಾನ ಸಂಕೋಚಕ್ರಿಯೆ, ಜೀವಕಲಶ ಪೂಜೆ, ಜೀವೋದ್ವಾಸನ, ಶಯ್ಯಾ ಪೂಜೆ, ಪ್ರಸಾದ ವಿತರಣೆ, ಸಂಜೆ 5.00 ರಿಂದ ಧ್ಯಾನಾಧಿವಾಸ ಕ್ರಿಯೆ, ಅಧಿವಾಸ ಹೋಮ ನಡೆಯಲಿದೆ. ಫೆ.3 ಶುಕ್ರವಾರ ಬೆಳಿಗ್ಗೆ

ಫೆ.1 ರಿಂದ 3 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಟೆ Read More »

ಫೆ.5 : ತುಳಸೀವನ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ

ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಬಂಟ್ವಾಳ : ಬಂಟ್ವಾಳ ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ 20 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಫೆ.5 ಆದಿತ್ಯವಾರ ನಡೆಯಲಿದೆ. ಬೆಳಗ್ಗೆ 10  ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ

ಫೆ.5 : ತುಳಸೀವನ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ Read More »

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ

ಉತ್ಸವಗಳನ್ನು ನಡೆಸಲು ದುಡ್ಡಿದೆ, ಮಕ್ಕಳಿಗೆ ಸಮವಸ್ತ್ರ ಕೊಡಲು ಬರಗಾಲವೇ ಎಂದು ಪ್ರಶ್ನೆ ಬೆಂಗಳೂರು: ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ತೀಕ್ಷ್ಣವಾಗಿ ತರಾಟೆಗೆಗ ತೆಗೆದುಕೊಂಡಿದೆ. ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ,

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ Read More »

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ

ಪಿ. ಬಿ. ಶ್ರೀನಿವಾಸ್ ಬದುಕಿದ್ದೇ ಹಾಗೆ! ಪ್ರತಿವಾದಿ ಭಯಂಕರ ಶ್ರೀನಿವಾಸ್ ಎಂದರೆ ಯಾರಿಗಾದರೂ ಅವರ್ಯಾರು ಎಂದು ಗೊತ್ತಾಗದೆ ಹೋಗಬಹುದು. ಆದರೆ ಪಿ.ಬಿ. ಶ್ರೀನಿವಾಸ್ ಅಂದರೆ ಥಟ್ಟನೆ ಮಾಧುರ್ಯದ ಅಲೆಯೊಂದು ನಮ್ಮನ್ನು ಆವರಿಸಿಬಿಡುತ್ತದೆ. ಅವರು ಹಾಡಿದ ಹಾಡುಗಳು ಎಷ್ಟು ಶ್ರೀಮಂತವೋ ಅವರು ಬದುಕಿದ ರೀತಿಯು ಇನ್ನೂ ಹೆಚ್ಚು ಶ್ರೀಮಂತ ಆಗಿತ್ತು. ಇಂದವರ ಬದುಕಿನ ಕೆಲವು ನಿದರ್ಶನಗಳನ್ನು ತಮ್ಮ ಮುಂದೆ ಇಡಲು ಹೆಮ್ಮೆಪಡುತ್ತೇನೆ. ಹುಟ್ಟಿದ್ದು ಆಂಧ್ರದಲ್ಲಿ, ಅಧಿಕ ಹಾಡು ಹಾಡಿದ್ದು ಕನ್ನಡದಲ್ಲಿ ಪಿಬಿ ಹುಟ್ಟಿದ್ದು ಆಂಧ್ರದಲ್ಲಿ. ಮಾತೃಭಾಷೆ ತೆಲುಗು. ಆದರೆ

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ Read More »

ಅತ್ಯಾಚಾರ ಪ್ರಕರಣ : ಸ್ವಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಆಶ್ರಮದಲ್ಲಿ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಗಾಂಧಿನಗರ : ಶಿಷ್ಯೆಯ ಅತ್ಯಾಚಾರ ಎಸಗಿದ ಕುರಿತು 2013ರಲ್ಲಿ ದಾಖಲಾದ ಪ್ರಕರಣದಲ್ಲಿ ಅಪರಾಧಿಯಾಗಿರುವ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುಗೆ (77) ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಕ್ಷನ್ 376 ಮತ್ತು 377 ಅಡಿಯಲ್ಲಿ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗಾಂಧಿನಗರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಡಿ.ಕೆ. ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ 50,000 ರೂ. ಪರಿಹಾರ ನೀಡುವಂತೆಯೂ ಅಪರಾಧಿಗೆ ಕೋರ್ಟ್​

ಅತ್ಯಾಚಾರ ಪ್ರಕರಣ : ಸ್ವಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ Read More »

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ : 14 ಸಾವು

ಮೃತರಲ್ಲಿ 10 ಮಹಿಳೆಯರು 3 ಮಕ್ಕಳು ರಾಂಚಿ: ಜಾರ್ಖಂಡ್‌ನ ಧನ್‌ಬಾದ್ ನಗರದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ಬೆಂಕಿಹತ್ತಿಕೊಂಡು ಕನಿಷ್ಠ 14 ಮಂದಿ ಬೆಂಕಿಗೆ ಸಾವಿಗೀಡಾಗಿದ್ದಾರೆ.ಆಶೀರ್ವಾದ್ ಟವರ್ ಜೋರಫಟಕ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.ಧನ್‌ಬಾದ್‌ನ ಜೋರಾಫಾಟಕ್‌ ಎಂಬಲ್ಲಿರುವ ಆಶೀರ್ವಾದ್‌ ಟವರ್ಸ್‌ ಎಂಬ ಬಹುಮಹಡಿ ವಸತಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ನಿನ್ನೆ ರಾತ್ರಿ ಬೆಂಕಿದುರಂತ ಸಂಭವಿಸಿ 14 ಮಂದಿ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ : 14 ಸಾವು Read More »

error: Content is protected !!
Scroll to Top