ಭೀಕರ ಭೂಕುಸಿತ : 8 ಸಾವು

50ಕ್ಕೂ ಅಧಿಕ ಮಂದಿ ಅವಶೇಷದಡಿ ಕೌಲಾಲಂಪುರ್‌: ಮಲೇಷ್ಯಾದಲ್ಲಿ ಭೀಕರ ಭೂಕುಸಿತ ಸಂಭವಿಸಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.ಸಾವಿನ ಸಂಖ್ಯೆ ಏರಬಹುದು ಎನ್ನಲಾಗಿದೆ.ಭೂಕುಸಿತದಿಂದ ಹಲವು ಮಂದಿ ಗಾಯಗೊಂಡಿದ್ದಾರೆ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ.ಇದುವರೆಗೆ 31 ಮಂದಿಯನ್ನು ರಕ್ಷಿಸಲಾಗಿದೆ. ಕ್ಯಾಂಪ್‌ಸೈಟ್‌ನಿಂದ ಸುಮಾರು 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಸುಮಾರು […]

ಭೀಕರ ಭೂಕುಸಿತ : 8 ಸಾವು Read More »

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ

ಇನ್ನು ಕೆಲವೇ ದಿನಗಳಲ್ಲಿ ನಾವು 2023ನ್ನು ಸ್ವಾಗತಿಸಲಿದ್ದೇವೆ. ಮೊನ್ನೆ ತಾನೇ 2022 ವರ್ಷ ಶುರುವಾದದ್ದು ಎಂದು ಅನ್ನಿಸುತ್ತಿಸರಬೇಕು. ಹೌದು ಒಂದು ವರ್ಷ ಬಹುಬೇಗನೆ ಕಳೆದು ಹೋಗುತ್ತದೆ. ಆದ್ದರಿಂದ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ ನಮ್ಮ ತಪ್ಪುಗಳನ್ನು ತಿದ್ದುತ್ತ ಒಳ್ಳೆಯ ರೀತಿಯಲ್ಲಿ ಕಾಲವನ್ನು ಉಪಯೋಗಿಸೋಣ. ವರ್ಷ ಕಳೆದಂತೆ ನಮ್ಮ ಆಯಸ್ಸು ಹೆಚ್ಚುತ್ತದೆ. ವಯಸ್ಸಾದಂತೆ ನಮ್ಮ ಆರೋಗ್ಯವು ಕ್ಷೀಣಿಸುತ್ತದೆ. ನಮ್ಮ ಆಯುಸ್ಸನ್ನು ವೃದ್ಧಿಸುವ ಉಪಾಯವನ್ನು ಆಯುರ್ವೇದದಲ್ಲಿ ರಸಾಯನವೆಂದು ಕರೆಯುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.ರಸಾಯನ ಶಾಸ್ತ್ರ

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ Read More »

310 ಪ್ರಾಂಶುಪಾಲರ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಾಂಶುಪಾಲರು ಗ್ರೇಡ್-1 (ಯು. ಜಿ) 310 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಹಾಕಲು 15-1-2023 ಕೊನೆಯ ದಿನಾಂಕ. ಆಸಕ್ತರು 16-12-2022ರಿಂದ ಅರ್ಜಿ ಸಲ್ಲಿಸಬಹುದು.ಪ್ರಾಧಿಕಾರದ https://cetonline.karnataka.gov.in/kea/ ಲಿಂಕ್ ಉಪಯೋಗಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸುವವರು 55 ವರ್ಷಗಳ ವಯೋಮಿತಿ ಮೀರಿರಬಾರದು.ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ

310 ಪ್ರಾಂಶುಪಾಲರ ನೇಮಕಾತಿಗೆ ಅರ್ಜಿ ಆಹ್ವಾನ Read More »

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ 1760 ಹುದ್ದೆಗಳು

ಹೊಸದಿಲ್ಲಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಟೆಕ್ನಿಷಿಯನ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಸೇರಿ 1760 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಕಾರ್ಪೊರೇಟ್ ವೆಬ್‌ಸೈಟ್ ಮೂಲಕ ಡಿಸೆಂಬರ್ 14, 2022 ರಿಂದ ಜನವರಿ 3, 2023ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಯು 12ನೇ ತರಗತಿ, ಐಟಿಐ, ಡಿಪ್ಲೋಮಾ, ಪದವಿ (ಸಂಬಂಧಿತ ವಿಭಾಗ) ಹೊಂದಿರಬೇಕು.ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 24 ವರ್ಷ. ವಯಸ್ಸಿನ ಸಡಿಲಿಕೆಯು ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ 1760 ಹುದ್ದೆಗಳು Read More »

ಚುನಾವಣೆ ವಿಳಂಬ : ಸರಕಾರಕ್ಕೆ 5 ಲ.ರೂ. ದಂಡ

ಜಿಪಂ, ತಾಪಂ ಚುನಾವಣೆ ವಿಳಂಬಿಸಿದ್ದಕ್ಕೆ ತರಾಟೆ ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕದ ಪಂಚಾಯತ್ ರಾಜ್ ಡಿಲಿಮಿಟೇಷನ್ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.ಮೀಸಲಾತಿ ಹಾಗೂ ಡೀಲಿಮಿಟೇಷನ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಫೆ.1, 2023ರ ವೇಳೆಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಗಡು ವಿಧಿಸಿದೆ. ನ್ಯಾ. ಪ್ರಸನ್ನ ಬಿ. ವರಾಳೆ, ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ

ಚುನಾವಣೆ ವಿಳಂಬ : ಸರಕಾರಕ್ಕೆ 5 ಲ.ರೂ. ದಂಡ Read More »

ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡಿದರೆ 5 ಲ.ರೂ.

ಬಹುಮಾನ ಮೊತ್ತವನ್ನು 20 ಸಾವಿರದಿಂದ 5 ಲಕ್ಷಕ್ಕೇರಿಸಿದ ಸರಕಾರ ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡುವವರಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು 20 ಸಾವಿರದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.ರಾಷ್ಟ್ರೀಯ ಭದ್ರತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ, ಮಾದಕ ವಸ್ತು ಹಾಗೂ ಆಯುಧ ಕಳ್ಳಸಾಗಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಘೋಷಿತ ಅಪರಾಧಿಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರಿಗೆ ನೆರವಾಗುವವರಿಗೆ 20

ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡಿದರೆ 5 ಲ.ರೂ. Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್‌ ಪಾರ್ಕ್‌ : ಬಿಜೆಪಿ ತಿರುಗೇಟು

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಬಿಜೆಪಿ ಸಂಚು ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕೆಂಡಾಮಂಡಲ ಬೆಂಗಳೂರು: ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಬಿಜೆಪಿ ಕಿಡಿಕಿಡಿಯಾಗಿದೆ. ಚುನಾವಣೆ ಹೊಸ್ತಿಲಲ್ಲಿ ಉಗ್ರಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿವಕುಅಮರ್‌ ನಡೆ ಒಂದೆಡೆ ಕಾಂಗ್ರೆಸ್‌ಗೂ ಮುಜುಗರವುಂಟು ಮಾಡಿದೆ.ಮತದಾರರ ಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯದ ಬಿಜೆಪಿ ಸರ್ಕಾರ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್‌ ಪಾರ್ಕ್‌ : ಬಿಜೆಪಿ ತಿರುಗೇಟು Read More »

ಒಂದೇ ದಿನ 21 ಕಡೆ ಶಿಲಾನ್ಯಾಸ: ಶಾಸಕ ಸಂಜೀವ ಮಠಂದೂರು ಅವರಿಂದ ಮತ್ತೊಂದು ದಾಖಲೆ

ಪುತ್ತೂರು: ಬುಧವಾರ ಒಂದೇ ದಿನ ಪುತ್ತೂರು ವಿಧಾನಸಭಾ ಕ್ಷೇತ್ರದ 21 ಕಡೆಗಳಲ್ಲಿ ಶಿಲಾನ್ಯಾಸ ನೆರವೇರಿಸಿರುವ ಶಾಸಕ ಸಂಜೀವ ಮಠಂದೂರು ಅವರು, ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧೆಡೆಗಳಿಗೆ ತೆರಳಿರುವ ಶಾಸಕರು, ರಸ್ತೆ ಅಭಿವೃದ್ಧಿ, ಅಂಗನವಾಡಿ ಕಟ್ಟಡ ನಿರ್ಮಾಣ, ಕಾಂಕ್ರಿಟೀಕರಣ, ಕುಡಿಯುವ ನೀರಿನ ಯೋಜನೆ, ವಿದ್ಯುತ್ ಯೋಜನೆಗಳು, ಶಾಲೆಗೆ ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕರಾವಳಿ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಯೇ ದೊಡ್ಡ ತಲೆನೋವು. ಅಭಿವೃದ್ಧಿಗೊಂಡಷ್ಟು ಇನ್ನಷ್ಟು ರಸ್ತೆಗಳ ಸಮಸ್ಯೆ ಕಣ್ಣಮುಂದೆ ಧುತ್ತೆಂದು

ಒಂದೇ ದಿನ 21 ಕಡೆ ಶಿಲಾನ್ಯಾಸ: ಶಾಸಕ ಸಂಜೀವ ಮಠಂದೂರು ಅವರಿಂದ ಮತ್ತೊಂದು ದಾಖಲೆ Read More »

ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಹಿಂದು ಜನಜಾಗೃತಿ ಸಮಿತಿ ಆಗ್ರಹ | ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ

ಪುತ್ತೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ವಿಶೇಷ ’ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ಸ್ಥಾಪಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಡಿ. 15ರಂದು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಹಿಂದು ಜನಜಾಗೃತಿ ಸಮಿತಿ ಹಮ್ಮಿಕೊಂಡ ಪ್ರತಿಭಟನೆ ವೇಳೆ, ಈ ಆಗ್ರಹ ಕೇಳಿಬಂದಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಜೈನ್, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾಧ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು

ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಹಿಂದು ಜನಜಾಗೃತಿ ಸಮಿತಿ ಆಗ್ರಹ | ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ Read More »

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಅಕ್ಷಯ ಎಜುಕೇಷನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಸಂಪ್ಯ ಅಕ್ಷಯ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಡಿ. 11ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಬೆಳ್ಳಾರೆ ಸ.ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಕಾಲೇಜಿನಿಂದ ತೇರ್ಗಡೆ ಹೊಂದಿ ಹೊರಹೋಗುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕೆಲಸ ಪಡೆದುಕೊಂಡಿರುವುದು ಸಂತಸದ ವಿಷಯ. ಇದು ವೃತ್ತಿಪರ ಪದವಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ Read More »

error: Content is protected !!
Scroll to Top