ರಾಜಕೀಯದಲ್ಲಿ ನಿವೃತ್ತಿಯ ಅಂಚಿಗೆ ಬಂದವರಿಂದ ಯುವಕ್ರಾಂತಿ ಸಮಾವೇಶ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ

ಮಂಗಳೂರು : ರಾಜಕಾರಣದಲ್ಲಿ ನಿವೃತ್ತಿ ಅಂಚಿಗೆ ಬಂದು ನಿಂತಿರುವ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂಥ ನಾಯಕರು ಯುವಕ್ರಾಂತಿ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ.ರಾಹುಲ್‌ ಹೋದಲೆಲ್ಲ ಕಾಂಗ್ರೆಸ್‌ ನೆಲಕಚ್ಚಿದೆ. ಹೀಗಾಗಿ ಅವರು ಕರ್ನಾಟಕಕ್ಕೆ ಬಂದಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ರಾಜ್ಯದಿಂದ ಕಾಂಗ್ರೆಸ್‌ನ್ನು ಕಿತ್ತೆಸೆಯುವ ಬಿಜೆಪಿಯ ವಾಗ್ದಾನವನ್ನು ನನಸು ಮಾಡುವಲ್ಲಿ ರಾಹುಲ್‌ ಗಾಂಧಿ ಸಾಥ್‌ ನೀಡಲಿದ್ದಾರೆ ಎಂದು ಕಟೀಲ್‌ ಕಾಲೆಳೆದಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ […]

ರಾಜಕೀಯದಲ್ಲಿ ನಿವೃತ್ತಿಯ ಅಂಚಿಗೆ ಬಂದವರಿಂದ ಯುವಕ್ರಾಂತಿ ಸಮಾವೇಶ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ Read More »

ಶಕುಂತಳಾ ಶೆಟ್ಟಿಯನ್ನು ಅಭ್ಯರ್ಥಿಯೆಂದು ಘೋಷಿಸಲು ಮಹಿಳಾ ಕಾಂಗ್ರೆಸ್ ಆಗ್ರಹ

ಪುತ್ತೂರು: ದಣಿವರಿಯದ ನಾಯಕಿ ಶಕುಂತಳಾ ಶೆಟ್ಟಿ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸುವಂತೆ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಮಾತನಾಡಿ, ಎರಡು ಬಾರಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡವರು. ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡು, ಅದನ್ನು ಬಗೆಹರಿಸಿದವರು. ಆದ್ದರಿಂದ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕು ಎಂದು ಮನವಿ ಮಾಡಿಕೊಂಡರು.

ಶಕುಂತಳಾ ಶೆಟ್ಟಿಯನ್ನು ಅಭ್ಯರ್ಥಿಯೆಂದು ಘೋಷಿಸಲು ಮಹಿಳಾ ಕಾಂಗ್ರೆಸ್ ಆಗ್ರಹ Read More »

ಬಹುಕೋಟಿ ವಂಚಕ ಮೆಹುಲ್‌ ಚೋಕ್ಸಿ ರೆಡ್‌ ಅಲರ್ಟ್‌ ಪಟ್ಟಿಯಿಂದ ಗಡಿಪಾರು

ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11,356 ಕೋ.ರೂ. ವಂಚಿಸಿದ ಮೆಹುಲ್ ಚೋಕ್ಸಿಯನ್ನು ಇಂಟರ್‌ಪೋಲ್ ತನ್ನ ರೆಡ್ ಅಲರ್ಟ್‌ ಪಟ್ಟಿಯಿಂದ ತೆಗೆದುಹಾಕಿದೆ.ಡಿಸೆಂಬರ್ 2018ರಲ್ಲಿ ಚೋಕ್ಸಿಯನ್ನು ರೆಡ್ ಅಲರ್ಟ್‌ ಪಟ್ಟಿಗೆ ಸೇರಿಸಲಾಗಿತ್ತು. ಭಾರತದ ಅಧಿಕಾರಿಗಳು ಇಂಟರ್‌ಪೋಲ್‌ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ ಇಂಟರ್‌ಪೋಲ್‌ ಅಧಿಕಾರಿಗಳು ಅವರ ವಿರೋಧವನ್ನು ಪರಿಗಣಿಸಿಲ್ಲ. ಈ ಮೂಲಕ ಚೋಕ್ಸಿ ಗಡಿಪಾರಿಗೆ ಕಾಯುತ್ತಿದ್ದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹಿನ್ನಡೆಯಾಗಿದೆ. ಆದರೆ ಆಂಟಿಗುವಾದಿಂದ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಇಂಟರ್‌ಪೋಲ್‌ ಕ್ರಮ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುಕೋಟಿ ವಂಚಕ ಮೆಹುಲ್‌ ಚೋಕ್ಸಿ ರೆಡ್‌ ಅಲರ್ಟ್‌ ಪಟ್ಟಿಯಿಂದ ಗಡಿಪಾರು Read More »

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌…

ಇವುಗಳಲ್ಲಿ ಕೆಲವನ್ನಾದರೂ ಮಾಡಿ ನಿಮ್ಮ ಹ್ಯಾಪಿನೆಸ್ ಹೆಚ್ಚು ಮಾಡಿಕೊಳ್ಳಿ 1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು. 2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾರಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು. 3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು. 4) ಹಸಿರು ಪರಿಸರದ ನಡುವೆ

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌… Read More »

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್

ಪುತ್ತೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ  ಹಿಂದಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪುತ್ತೂರಿನ ಡಿಂಪಲ್ ಮಿಶೆಲ್ ತಾವ್ರೋ 8.45 ಸಿಜಿಪಿಎ ಪಡೆದು ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದಿನೇಶ್ ಪಾವ್ಲ್‍ ತಾವ್ರೋ ಹಾಗೂ ಮೋಂತಿಮೇರಿ ಮಸ್ಕರೇನಸ್ ದಂಪತಿ ಪುತ್ರಿ.

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ Read More »

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ

ಪುತ್ತೂರು :  ಕಾವು ನವೋದಯ ಒಕ್ಕೂಟದ ಸದಸ್ಯರಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿಯಾಗಿ ಶ್ರಮದಾನ ನಡೆಯಿತು. ದೇವಸ್ಥಾನದ ಹೊರಾಂಗಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಮಾಜಿ ಉಪಾಧ್ಯಕ್ಷೆ ನಿರ್ಮಲಾ ರೈ  ಉಸ್ತುವಾರಿಯಲ್ಲಿ ನಡೆದ ಕರಸೇವೆಯಲ್ಲಿ ಎಲ್ಲಾ ಗುಂಪಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ Read More »

ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ | ಬಾಲವನದಲ್ಲಿ ಗ್ರಂಥಾಲಯ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ. ಆದ್ದರಿಂದ ಯುವಕರು ದಿನದ ಕನಿಷ್ಠ 1 ಗಂಟೆಯನ್ನಾದರೂ ಗ್ರಂಥಾಲಯಕ್ಕೆ ನಮ್ಮ ಸಮಯವನ್ನು ಮೀಸಲಿಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಸೋಮವಾರ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸುಸಂಸ್ಕೃತವಾಗಿದೆ ಅಂದರೆ ಅದಕ್ಕೆ ಸಾಹಿತ್ಯವೇ ಪ್ರಮುಖ ಕಾರಣ. ಸುಸಂಸ್ಕೃತತೆಯ ಜೊತೆಗೆ, ದೇಶ ದೊಡ್ಡ ಮಟ್ಟಿನ ಬೆಳವಣಿಗೆಗಳನ್ನು ಕಂಡಿವೆ. ಇದು ಗ್ರಂಥಾಲಯ, ಸಾಹಿತ್ಯದಿಂದ ಸಾಧ್ಯವಾಯಿತು. ಆದ್ದರಿಂದ ಪುತ್ತೂರಿನ ಜನರು ಬಾಲವನದ ಗ್ರಂಥಾಲಯಕ್ಕೆ ಬಂದು,

ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ | ಬಾಲವನದಲ್ಲಿ ಗ್ರಂಥಾಲಯ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ದೆಹಲಿ ಸರ್ಕಾರದಿಂದ ದೇಶದಲ್ಲಿಯೇ ಶಿಕ್ಷಣಕ್ಕಾಗಿ ಅತಿ ಹೆಚ್ಚು ಹಣ ಹಂಚಿಕೆ

ದೆಹಲಿ: 2022-23ನೇ ಸಾಲಿನ ದೆಹಲಿಯ ಆರ್ಥಿಕ ಸಮೀಕ್ಷೆಯ ಪ್ರಕಾರ, ದೆಹಲಿ ಸರ್ಕಾರವು ಬಜೆಟ್ ನ ಶೇ. 20.5 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದು, ಇದು ದೇಶದ ಇತರ ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚು ಎಂದು ಹೇಳಿದೆ.ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾದ ಸಮೀಕ್ಷಾ ವರದಿಯಲ್ಲಿ, ದೆಹಲಿ ಕೌಶಲ್ಯ ಮತ್ತು ವಾಣಿಜ್ಯೋದ್ಯಮ ವಿಶ್ವವಿದ್ಯಾನಿಯವು ತನ್ನ ಪ್ರವೇಶ ಸಾಮರ್ಥ್ಯವನ್ನು ಹೆಚ್ಚಿಸಿದೆ. 2021-22 ರ ಶೈಕ್ಷಣಿಕ ಅವಧಿಯಲ್ಲಿ ಸರ್ಕಾರಿ ಶಾಲೆಗಳ 12ನೇ ತರಗತಿಯ ಉತ್ತೀರ್ಣ ಫಲಿತಾಂಶ ಶೇ. 98 ರಷ್ಟು ಮತ್ತು 10

ದೆಹಲಿ ಸರ್ಕಾರದಿಂದ ದೇಶದಲ್ಲಿಯೇ ಶಿಕ್ಷಣಕ್ಕಾಗಿ ಅತಿ ಹೆಚ್ಚು ಹಣ ಹಂಚಿಕೆ Read More »

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ

ಪುತ್ತೂರು : ಹರಿಯಾಣದಲ್ಲಿ ನಡೆಯುವ 69ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ  ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ತಾಲೂಕಿನ ಬಲ್ನಾಡಿನ ವಿನುಶ್ರೀ ಆಯ್ಕೆಯಾಗಿದ್ದಾರೆ. ಬಲ್ನಾಡು ಗ್ರಾಮದ ಕೆಲ್ಲಾಡಿ ದಿ. ವೀರಪ್ಪ ಗೌಡ ಮತ್ತು ಸುಶೀಲ ದಂಪತಿಯ ತೃತೀಯ ಪುತ್ರಿಯಾದ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ. ಪ್ರಸ್ತುತ ಮೂಡಬಿದಿರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಪಿ ಬಿಎಡ್ ವಿದ್ಯಾರ್ಥಿನಿಯಾಗಿದ್ದಾರೆ.

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ Read More »

ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು : ಪಂಚೋಡಿ ಗಾಳಿಮುಖ ರಸ್ತೆಗೆ  ಶೀಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿಧಾನ ಸಭಾ ಕ್ಷೆತ್ರದಲ್ಲಿ ರಸ್ತೆಗೆ ಆದ್ಯತೆ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಿದೆ. ಮುಂದಿನ 25 ವರ್ಷ ಬಾಳ್ವಿಕೆ  ಬರುವ ಹಾಗೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಬಾರ್ಡ್ ಯೋಜನೆಯಡಿ 3.88 ಕೋಟಿ ಅನುದಾನ ಪೂರ್ತಿ ಒಂದೇ ರಸ್ತೆ ಗೆ ಇಡುವ ಕೆಲಸ ಆಗಿದೆ ಎಂದರು. ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಚಾಯತ್

ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು Read More »

error: Content is protected !!
Scroll to Top