ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಸಂಪನ್ನ, ನೇಮೋತ್ಸವ

ಪುತ್ತೂರು: ಕುಂಬ್ಲಾಡಿ  ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ಜ. 7ರಂದು ಸಂಪನ್ನಗೊಂಡಿತು. ಡಿ 31ರಿಂದ ಮೊದಲ್ಗೊಂಡು ಜ7ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಿತು. ಜ. 7ರಂದು ಬೆಳಿಗ್ಗೆ […]

ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಸಂಪನ್ನ, ನೇಮೋತ್ಸವ Read More »

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್

ಸ್ವಾಭಿಮಾನದ ಪರಾಕಾಷ್ಠೆ ಅವರ ಬದುಕು ಹಿಂದಿ ಸಿನೆಮಾದಲ್ಲಿ 1950-70ರ ದಶಕದಲ್ಲಿ ಅತ್ಯಂತ ಮಾಧುರ್ಯಪೂರ್ಣ ಹಾಡುಗಳನ್ನು ಪರಿಚಯಿಸಿದ ಕೀರ್ತಿ ಒ. ಪಿ.ನಯ್ಯರ್ ಅವರಿಗೆ ಸಲ್ಲುತ್ತದೆ.ನಯಾದೌರ್, ಸಿ ಐ. ಡಿ., ಹೌರಾ ಬ್ರಿಜ್, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಕಾಶ್ಮೀರ್ ಕೀ ಕಲಿ, ಮೇರೆ ಸನಮ್, ಸಾವನ್ ಕೀ ಘಟ, ಯೇ ರಾತ್ ಫಿರ್ ನಾ ಆಯೇಗಿ, ಪ್ರಾಣ್ ಜಾಯೆ ಪರ್ ವಚನ ನಾ ಜಾಯೇ ಮೊದಲಾದ ಆಲ್ ಟೈಮ್ ಮೆಲೊಡಿ ಸಿನೆಮಾಗಳಿಗೆ ಸಂಗೀತ ಕೊಟ್ಟು ಮಾಧುರ್ಯದ ಪರಾಕಾಷ್ಠೆಯನ್ನು

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್ Read More »

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ

ಕಾಂಗ್ರೆಸ್‌ನಿಂದ ತೀವ್ರ ವಿರೋಧ ಬೆಂಗಳೂರು: ಟಿಪ್ಪು ನಿಜ ಕನಸುಗಳು ವಿವಾದಾತ್ಮಕ ನಾಟಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವಾಗಲೇ ಬಿಜೆಪಿ ಇದೇ ಮಾದರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಣಿಯಲು ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಸಿದ್ಧಪಡಿಸಿದೆ. ಇಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು ಇದನ್ನು ಕಾಂಗ್ರೆಸ್‌ ತೀವ್ರರವಾಗಿ ವಿರೋಧಿಸಿ ತಡೆಯುವಂತೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶವಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ಅದನ್ನು ಕೂಡಲೇ ರದ್ದು ಮಾಡಬೇಕು. ಕಾನೂನು ಸುವ್ಯವಸ್ಥೆ

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ Read More »

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ

ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಸ್ವಾನ್ ಎಂಬಲ್ಲಿ ಚಳಿ ತಡೆಯಲು ಹಾಕಿಕೊಂಡ ಹೀಟರ್ ಒಂದಿಡೀ ಕುಟುಂಬವನ್ನು ಬಲಿತೆಗೆದುಕೊಂಡಿದೆ. ಹೀಟರ್‌ನ ವಿಷಕಾರಿ ಅನಿಲ ಸೇವಿಸಿ ಮದ್ರಸಾ ಶಿಕ್ಷಕ ಆಸಿಫ್ (32) , ಅವರ ಪತ್ನಿ ಶಗುಫ್ತಾ (30) ಮತ್ತು ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತಪಟ್ಟಿದ್ದಾರೆ.ಶನಿವಾರ ರಾತ್ರಿ ಆಸಿಫ್ ಕುಟುಂಬ ತೀವ್ರ ಚಳಿಯನ್ನು ತಡೆಯಲು ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿತ್ತು.

ಚಳಿ ತಡೆಯಲು ಹಾಕಿದ ಹೀಟರ್‌ಗೆ ಕುಟುಂಬವೇ ಬಲಿ Read More »

ಕಗ್ಗದ ಸಂದೇಶ – ನೋವು ಸಂಕಷ್ಟಗಳಲ್ಲಿ ಸುಖ ಕಾಣುವ ಬದುಕು…

ಅಸಮದಲಿ ಸಮತೆಯನು ವಿಷಮದಲಿಮೆತ್ರಿಯನು|ಅಸಮಂಜಸದಿ ಸಮನ್ವಯ ಸೂತ್ರನಯವ||ವೆಸನಮಯ ಸಂಸಾರದಲಿ ನಿನೋದವ ಕಾಣ್ಬರಸಿಕತೆಯೇ ಯೋಗವೆಲೊ- ಮಂಕುತಿಮ್ಮ||ಅಸಮಾನತೆ ಎನ್ನುವುದು ಈ ಸೃಷ್ಟಿಯ ಸಹಜ ಗುಣ. ಇದರಲ್ಲಿ ಸಮಾನತೆಯನ್ನು ಕಾಣುವುದು, ವಿಷಮ ಅಂದರೆ ಗಂಭೀರವಾದ ಪರಿಸ್ಥಿತಿಯಲ್ಲಿಯೂ ಸ್ನೇಹ ಅಂದರೆ ಹೊಂದಾಣಿಕೆಯ ಭಾವವನ್ನು ಹೊಂದುವುದು, ಅಸಮಂಜಸ ಅಂದರೆ ಹೊಂದಾಣಿಕೆ ಇಲ್ಲದ ಕಡೆ ಸಮನ್ವಯದ ಸೂತ್ರವನ್ನು ಅನ್ವಯಿಸುವುದು, ನೋವು ಸಂಕಷ್ಟಗಳೇ ತುಂಬಿರುವ ಬದುಕಿನಲ್ಲಿ ಸಂತೋಷವನ್ನು ಕಾಣುವಂತಹ ರಸಿಕತೆಯೇ ಜೀವನದ ನಿಜವಾದ ಯೋಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.ವಿವಿಧತೆ ಎನ್ನುವುದು ಸೃಷ್ಟಿಯ ಸಹಜ ಗುಣ. ವೈವಿಧ್ಯಮಯವಾದ

ಕಗ್ಗದ ಸಂದೇಶ – ನೋವು ಸಂಕಷ್ಟಗಳಲ್ಲಿ ಸುಖ ಕಾಣುವ ಬದುಕು… Read More »

ಬ್ರಹ್ಮೋಪದೇಶದಿಂದ ಸಂಸ್ಕಾರ ನೀಡುವ ಕಾರ್ಯ | ಬೊಳುವಾರು ವಿಶ್ವಕರ್ಮ ಸಭಾಂಗಣದಲ್ಲಿ ನಡೆದ ಉಚಿತ ಸಾಮೂಹಿಕ ಬ್ರಹ್ಮೋಪದೇಶದಲ್ಲಿ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ

ಪುತ್ತೂರು: ಬ್ರಹ್ಮ ಎಂದರೆ ನಿರಾಕಾರ. ವಟುಗಳಿಗೆ ಬ್ರಹ್ಮೋಪದೇಶ ನೀಡುವ ಮೂಲಕ ನಿರಾಕಾರ ತತ್ವವನ್ನು ಬೋಧಿಸಲಾಗಿದೆ. ಬ್ರಹ್ಮೋಪದೇಶ ಸಂಸ್ಕಾರ ಪಡೆದ ವಟುಗಳು ಮುಂದೆ ಸಂಸ್ಕಾರವಂತರಾಗಿ ಸಮಾಜದಲ್ಲಿ ಬೆಳಗುವಂತಾಗಲಿ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು. ಬೊಳುವಾರು ವಿಶ್ವಕರ್ಮ ಯುವ ಸಮಾಜ, ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಮಹಿಳಾ ಮಂಡಳಿ ಆಶ್ರಯದಲ್ಲಿ ರವಿವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ 8ನೇ ಬಾರಿಯ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬ್ರಹ್ಮೋಪದೇಶದಿಂದ ಸಂಸ್ಕಾರ ನೀಡುವ ಕಾರ್ಯ | ಬೊಳುವಾರು ವಿಶ್ವಕರ್ಮ ಸಭಾಂಗಣದಲ್ಲಿ ನಡೆದ ಉಚಿತ ಸಾಮೂಹಿಕ ಬ್ರಹ್ಮೋಪದೇಶದಲ್ಲಿ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ Read More »

ಶಿರಾಡಿ ರಾಜನ್ ದೈವದ ನೇಮೋತ್ಸವ | ಅನ್ಯಾಡಿಯಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಮಾ. 9ರಂದು ನಡೆಯಲಿರುವ ಕುದ್ಮಾರು ಅನ್ಯಾಡಿ ಶ್ರೀ ಶಿರಡಿ ರಾಜನ್ ದೈವದ ನೇಮೋತ್ಸವ ಹಿನ್ನೆಲೆಯಲ್ಲಿ ಜ. 8ರಂದು ಪೂರ್ವಭಾವಿ ಸಭೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೆಡೆಂಜಿ ಗುತ್ತಿನ ಪ್ರವೀಣ್ ಕುಮಾರ್ ಕೆಡೆಂಜಿ, ಆಡಳಿತ ಸಮಿತಿ ಉಪಾಧ್ಯಕ್ಷರಾದ ರೋಹಿತಕ್ಷ ಕೆಡೆಂಜಿಕಟ್ಟ, ಚೇನಪ್ಪ ಗೌಡ ನೂಜಿ, ದೇವಪ್ಪ ಗೌಡ ನಡುಮನೆ, ಕಾರ್ಯದರ್ಶಿ ನಾಗೇಶ್ ಕೆ. ಕೆಡೆಂಜಿ, ಕೋಶಾಧಿಕಾರಿ ಉಮೇಶ್, ಯೋಗೀಶ್ ಕೆಡೆಂಜಿ, ಉಮೇಶ್ ಕೆರೆನಾರು, ಊರಿನ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿರಾಡಿ ರಾಜನ್ ದೈವದ ನೇಮೋತ್ಸವ | ಅನ್ಯಾಡಿಯಲ್ಲಿ ಪೂರ್ವಭಾವಿ ಸಭೆ Read More »

ಆರೋಗ್ಯ ಉಚಿತ ತಪಾಸಣೆ, ಕಣ್ಣಿನ ಉಚಿತ ಪರೀಕ್ಷೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂಜೂರುಪಂಜ, ಜನಜಾಗೃತಿ ವೇದಿಕೆ ಬಲ್ನಾಡು ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು, ಪುತ್ತೂರು ರೋಟರ್ಯಾಕ್ಟ್ ಕ್ಲಬ್‍, ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣಾ ಕಾರ್ಯಕ್ರಮ ಹಾಗೂ ಕಣ್ಣಿನ ಉಚಿತ ಪರೀಕ್ಷೆ ಜ. 8ರಂದು ಕುಂಜೂರುಪಂಜ ಮಂಜುನಾಥ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀ ಕ್ಷೇತ್ರ

ಆರೋಗ್ಯ ಉಚಿತ ತಪಾಸಣೆ, ಕಣ್ಣಿನ ಉಚಿತ ಪರೀಕ್ಷೆ Read More »

ದೊಡ್ಡವರ ಸಣ್ಣತನಗಳು

ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆ ಹೇಗಿರಬೇಕು? ಈ ವ್ಯಕ್ತಿಯ ಹೆಸರು ಶಂಕರ ಮಿಶ್ರಾ. ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ವೇಲ್ಸ್ ಫಾರ್ಗೋ ಇದರ ಉಪಾಧ್ಯಕ್ಷ ಈತ. ತುಂಬಾ ಓದಿದವನು. ಬಹಳ ದೊಡ್ಡ ಸಂಬಳ ಇತ್ತು. ಸಾಮಾಜಿಕ ಸ್ಥಾನಮಾನ, ಗೌರವ, ಆಸ್ತಿ, ಅಂತಸ್ತು ಎಲ್ಲವೂ ಇತ್ತು.ಅಂತಹವನು ಮೊನ್ನೆ ಮೊನ್ನೆ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದ ಏರರ ಇಂಡಿಯಾ ವಿಮಾನದಲ್ಲಿ 70 ವರ್ಷದ ಮುದುಕಿಯ ಮೈ ಮೇಲೆ ಮೂತ್ರ ಮಾಡಿದ್ದಾನೆ. ಪರಿಣಾಮವಾಗಿ ಅರೆಸ್ಟ್ ಆಗಿ ಸೆರೆಮನೆ ಸೇರಿದ್ದಾನೆ. ಉದ್ಯೋಗ

ದೊಡ್ಡವರ ಸಣ್ಣತನಗಳು Read More »

ಸೂರ್ಯಕುಮಾರ್‌ ಆಟಕ್ಕೆ ರಾಹುಲ್‌ ತುಳುವಿನಲ್ಲಿ ಮೆಚ್ಚುಗೆ

ಭಾರಿ ಎಡ್ಡೆ ಗೊಬ್ಬಿಯ ಇನ್‌ಸ್ಟಾಗ್ರಾಂ ಪೋಸ್ಟ್‌ ಭಾರಿ ವೈರಲ್‌ ಹೊಸದಿಲ್ಲಿ : ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರತವನ್ನು ಗೆಲುವಿನ ದಡ ಸೆರಿಸಿದ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಕಣ್ಮಣಿಯಾಗಿದ್ದಾರೆ. ಇದು ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಸಿದ 3ನೇ ಶತಕ. ಈ ಮೂಲಕ 360 ಡಿಗ್ರಿ ಆಟದಲ್ಲಿ ತಾನು ಎ. ಬಿ. ಡಿವಿಲಿಯರ್ಸ್‌ ಉತ್ತರಾದಿಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಈ ಅಬ್ಬರದ ಇನ್ನಿಂಗ್ಸ್‌ಗೆ ಟೀಮ್ ಇಂಡಿಯಾದ ಮತ್ತೋರ್ವ

ಸೂರ್ಯಕುಮಾರ್‌ ಆಟಕ್ಕೆ ರಾಹುಲ್‌ ತುಳುವಿನಲ್ಲಿ ಮೆಚ್ಚುಗೆ Read More »

error: Content is protected !!
Scroll to Top