ಗುಳಿಗ ದೈವವನ್ನು ನಾನು ಟೀಕಿಸಿಲ್ಲ – ಆರಗ ಜ್ಞಾನೇಂದ್ರ ಸ್ಪಷ್ಟನೆ

ಶಿವಮೊಗ್ಗ : ಕರಾವಳಿಯ ಆರಾಧ್ಯ ದೈವ ಗುಳಿಗದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಪಮಾನ ಮಾಡಿದ್ದಾರೆಂಬ ವಿಚಾರದ ಬಗ್ಗೆ ಭಾರೀ ಟೀಕೆ ಎದುರಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿಯಿದೆ. ನಿನ್ನೆ ಕೂಡ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಈ ದೈವದ ಬಗ್ಗೆ ನಂಬಿಕೆಯಿಲ್ಲ, ವಿಶ್ವಾಸ ಇಲ್ಲ, ಮೂಢನಂಬಿಕೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ […]

ಗುಳಿಗ ದೈವವನ್ನು ನಾನು ಟೀಕಿಸಿಲ್ಲ – ಆರಗ ಜ್ಞಾನೇಂದ್ರ ಸ್ಪಷ್ಟನೆ Read More »

ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ: ರಾಹುಲ್ ಗಾಂಧಿ

ದೆಹಲಿ: ವಿದೇಶದಿಂದ ವಾಪಸ್ಸಾದ ಬಳಿಕ ಗುರುವಾರ ಸಂಸತ್ ಭವನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಂಡನ್ ಪ್ರವಾಸದ ವೇಳೆ ಭಾರತ ಅಥವಾ ಸಂಸತ್ತಿನ ವಿರುದ್ಧವಾಗಿ ನಾನು ಏನನ್ನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.ಅವರು ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ, ನಂತರ ನನ್ನ ಅನಿಸಿಕೆಗಳನ್ನು ನಾನು ಹೇಳುತ್ತೇನೆ. ಸಂಸತ್ತಿನ ಒಳಗೆ ಮಾತನಾಡುವುದು ಬಿಜೆಪಿಗೆ ಇಷ್ಟವಾಗುವುದಿಲ್ಲ. ಅವಕಾಶ ನೀಡದಿದ್ದರೆ ಸಂಸತ್ತಿನ ಹೊರಗೆ ಮಾತನಾಡುವುದಾಗಿ’ ಅವರು ಸಂಸತ್ತಿನಿಂದ ಹೊರಡುವಾಗ ಸುದ್ದಿಗಾರರಿಗೆ

ಸಭಾಪತಿ ಅವಕಾಶ ನೀಡಿದರೆ ಸಂಸತ್ತಿನಲ್ಲಿ ಮಾತನಾಡುತ್ತೇನೆ: ರಾಹುಲ್ ಗಾಂಧಿ Read More »

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ

ಪುತ್ತೂರು: ನಗರಸಭೆ ಸದಸ್ಯ ಶಿವರಾಮ ಸಫಲ್ಯ ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವರಾಮ ಸಪಲ್ಯರು ಒಂದನೇ ವಾರ್ಡ್ ನ ಸದಸ್ಯರಾಗಿದ್ದಾರೆ. ನಗರದ ಹೊರವಲಯದ ಸಾಲ್ಮರ ಸಮೀಪದ ಉರಮಾಲ್ ನಲ್ಲಿ ವಾಸವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಗುರುವಾರ ಪತ್ನಿ ಹೊರಗೆ ಹೋಗಿದ್ದು, ಪತಿಗೆ ಫೋನ್ ಕರೆ ಮಾಡಿದರೂ ತೆಗೆಯದ ಹಿನ್ನಲೆಯಲ್ಲಿ ಪಕ್ಕದ ಮನೆಯವರಲ್ಲಿ ಮನೆಕಡೆ ಹೋಗುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಮನೆಯತ್ತ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ Read More »

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ

ಪೈಲಟ್‌ಗಳಿಗಾಗಿ ಶೋಧ ಕಾರ್ಯ ಅರುಣಾಚಲ ಪ್ರದೇಶ : ಭಾರತೀಯ ಸೇನಾ ಚೀತಾ ಹೆಲಿಕಾಪ್ಟರ್ ಮಾ. 16ರ ಬೆಳಿಗ್ಗೆ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದು ಪೈಲಟ್‌ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 09:15ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ಎಟಿಸಿಯ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಸದ್ಯ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 2022ರಲ್ಲಿ ತವಾಂಗ್‌ನಲ್ಲಿ ಹೆಲಿಕಾಪ್ಟರ್ ಒಂದು

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ Read More »

ಅಮೇರಿಕಾ ವಾಯುಪಡೆಯ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ರವಿ ಚೌಧರಿ ನೇಮಕ

ವಾಷಿಂಗ್ ಟನ್: ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ. ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆ ಪೆಂಟಗನ್ ನಲ್ಲಿ ಪ್ರಮುಖ ನಾಯಕತ್ವದ ಹುದ್ದೆಯಾಗಿದೆ. ಈ ವಿಭಾಗದ ಅಧಿಕಾರಿಗಳ ನೇಮಕಕ್ಕೆ ಸೆನೆಟ್ ನಲ್ಲಿ ಮತದಾನ ನಡೆದಿದ್ದು, 65 ಮಂದಿ ವಿರುದ್ಧ29 ಮಂದಿ ಮತ ಚಲಾವಣೆ ಮಾಡಿದ್ದಾರೆ. ರವಿ ಚೌಧರಿ ಈ ಹಿಂದೆ ಅಮೇರಿಕಾದ ಸಾರಿಗೆ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಅಲ್ಲಿ ಸುಧಾರಿತ ಕಾರ್ಯಕ್ರಮಗಳು

ಅಮೇರಿಕಾ ವಾಯುಪಡೆಯ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ರವಿ ಚೌಧರಿ ನೇಮಕ Read More »

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ

ಪುತ್ತೂರು: ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಮಾಂಬಾಡಿ ರಾಮಕೃಷ್ಣ ಭಟ್ (95) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಪ್ರಸಿದ್ಧ ಜ್ಯೋತಿಷಿ ಮಾಂಬಾಡಿ ಈಶ್ವರ ಭಟ್ಟರ ಪುತ್ರರಾಗಿದ್ದ ಅವರು ತಮ್ಮ ಚಿಕ್ಕಪ್ಪ ಮಾಂಬಾಡಿ ನಾರಾಯಣ ಭಟ್ಟರಿಂದ ಮದ್ದಳೆ ಕಲಿತು ಹವ್ಯಾಸಿ ಕಲಾವಿದರಾಗಿದ್ದರು. ಕೂಡ್ಲು ಮೇಳದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದು, ಪಡುಮಲೆ ಕೋಟಿ-ಚೆನ್ನಯ ಯುವಕ ಮಂಡಲ ಹಾಗೂ ಬೆನಕ ಯಕ್ಷ ಕಲಾ ವೇದಿಕೆ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ನಾಲ್ವರು ಪುತ್ರರು, ನಾಲ್ಕು ಮಂದಿ ಪುತ್ತಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ Read More »

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್

ಮಂಗಳೂರು : ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತುಳುವರ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣದ ತುಣುಕನ್ನು ವೈರಲ್‌ಮಾಡಲಾಗಿದೆ. ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದರು. ಈ ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್‌ ಅಂಟಿಸಲಾಗಿತ್ತು. ಈ ಬಗ್ಗೆ

ಗುಳಿಗ ದೈವಕ್ಕೆ ಅವಮಾನ ಗೃಹ ಸಚಿವರ ಹೇಳಿಕೆ ವೈರಲ್ Read More »

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ

ಬೆಂಗಳೂರು : ಈ ಬೇಸಿಗೆಯಲ್ಲಿ ಜನರಿಗೆ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಚಿಂತೆ ಇಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್‌ ಕಡಿತವಾಗದಂತೆ ನೋಡಿಕೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ.ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಈ ಬೇಸಿಗೆಯಲ್ಲಿ ಜನರಿಗೆ ಲೋಡ್‌ಶೆಡ್ಡಿಂಗ್‌ ರಗಳೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ. ಇದೀಗ ಬೇಸಿಗೆ ಆರಂಭವಾಗಿದ್ದು, ವಿದ್ಯುತ್‌ ಬಳಕೆಯೂ ಹೆಚ್ಚಾಗಿದೆ. ಈಗಾಗಲೇ ಪರೀಕ್ಷೆಗಳು ಆರಂಭವಾಗಿವೆ. ಹಾಗೆಯೇ ರೈತರಿಗೂ

ಈ ಬೇಸಿಗೆಯಲ್ಲಿ ಇಲ್ಲ ಲೋಡ್‌ಶೆಡ್ಡಿಂಗ್‌ ರಗಳೆ: ನಿರಂತರ ವಿದ್ಯುತ್‌ ಪೂರೈಸಲು ಎಸ್ಕಾಂಗಳ ನಿರ್ಧಾರ Read More »

ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟ- ಅಲ್ಟಿಮೇಟ್ ಸ್ಫೋಟ್ಸ್‌ ಕ್ಲಬ್‌ಗೆ ಪ್ರಥಮ ಪ್ರಶಸ್ತಿ

ಪುತ್ತೂರು : ದಕ್ಷಿಣಕನ್ನಡಜಿಲ್ಲಾ ಖೊ-ಖೊ ಅಸೋಸಿಯೇನ್ ವತಿಯಿಂದ ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್‌ಕ್ಲಬ್ ಮತ್ತು ವಿವೇಕಾನಂದಕಾಲೇಜು ಸ್ವಾಯತ್ತ ಪುತ್ತೂರು, ದೈಹಿಕ ಶಿಕ್ಷಣ ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಲೀಗ್ ಮಾದರಿಯ ಖೋ-ಖೋ ಚಾಂಪಿಯನ್ ಶಿಪ್ ಸೀಸನ್ -1 2023 ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 12  ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನುಅಲ್ಟಿಮೇಟ್ ಸ್ಪೋರ್ಟ್ಸ್‌ಕ್ಲಬ್ ಪುತ್ತೂರುತಂಡ, ದ್ವಿತೀಯ

ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟ- ಅಲ್ಟಿಮೇಟ್ ಸ್ಫೋಟ್ಸ್‌ ಕ್ಲಬ್‌ಗೆ ಪ್ರಥಮ ಪ್ರಶಸ್ತಿ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ಮುನ್ಸೂಚನೆಯಂತೆ ಬ್ರಹ್ಮರಥ ಮಂದಿರದಿಂದ ರಥಬೀದಿಗೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10 ರಿಂದ ನಡೆಯುವ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸುವ ಮುಹೂರ್ತ ಗುರುವಾರ ನಡೆಯಿತು. ಈ ಮೂಲಕ ಪುತ್ತೂರು ಜಾತ್ರೋತ್ಸವಕ್ಕೆ ಮುನ್ಸೂಚನೆ ನೀಡಲಾಯಿತು. ಪ್ರತೀ ವರ್ಷದಂತೆ ಬಿಲ್ವಪತ್ರೆ ಭೂಸ್ಪರ್ಶ ಮಾಡುವ ಮೂಲಕ ಸೂಚಿಸುವಂತೆ ಈ ಬಾರಿಯೂ ಬಿಲ್ವಪತ್ರೆ ಭೂಸ್ಪರ್ಶ ಮಾಡಿದೆ. ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ. ವಸಂತ ಕೆದಿಲಾಯರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ

ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ಮುನ್ಸೂಚನೆಯಂತೆ ಬ್ರಹ್ಮರಥ ಮಂದಿರದಿಂದ ರಥಬೀದಿಗೆ Read More »

error: Content is protected !!
Scroll to Top