ಡಿ.ವಿ. ಸದಾನಂದ ಗೌಡರ ಹುಟ್ಟುಹಬ್ಬ ಆಚರಣೆ

ಅಭಿಮಾನಿ ಬಳಗ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗಿ ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಅವರ ಹುಟ್ಟುಹಬ್ಬವನ್ನು ಶನಿವಾರ ಬೆಂಗಳೂರಿನ ಸದಾಶಿವನಗರದ ಅವರ ನಿವಾಸದಲ್ಲಿ ಆಚರಿಸಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಬೃಹತ್ ಕೇಕನ್ನು ಕತ್ತರಿಸಿ ಸಂಭ್ರಮವನ್ನು ಆಚರಿಸಲಾಯಿತು. ಡಿ.ವಿ. ಸದಾನಂದ ಗೌಡ ಅವರ ಅಭಿಮಾನಿಗಳ ಬಳಗ ಏರ್ಪಡಿಸಿದ್ದ ಹುಟ್ಟುಹಬ್ಬ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

ಡಿ.ವಿ. ಸದಾನಂದ ಗೌಡರ ಹುಟ್ಟುಹಬ್ಬ ಆಚರಣೆ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ದೀಪ ಪ್ರದಾನಮ್” ಕಾರ್ಯಕ್ರಮ

ಪುತ್ತೂರು: ಆಂಗ್ಲ ಭಾಷಾ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯನ್ನು, ಧರ್ಮವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.  ಈ ಕಾರ್ಯ ಯಶಸ್ವಿಯಾಗಿ ನೆರವೇರಿದಾಗ ಭಾರತ ವಿಶ್ವಗುರುವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ “ದೀಪ ಪ್ರದಾನಮ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಸ್ಕೃತಿಯ ಆಚರಣೆಗಳಿಗೆ ಅದರದ್ದೇ ಆದ ವೈಶಿಷ್ಟ್ಯತೆ, ವೈಜ್ಞಾನಿಕ ಹಿನ್ನೆಲೆ ಇದೆ. ಸಂಸ್ಕಾರದ ಅಳವಡಿಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ದೀಪ ಪ್ರದಾನಮ್” ಕಾರ್ಯಕ್ರಮ Read More »

ಮಹಾದಾನ್ ಅಭಿಯಾನದ ಅಂಗವಾಗಿ ನಾಳೆ ರಕ್ತದಾನ

ಪುತ್ತೂರು: ರೊಟರ್ಯಾಕ್ಟ್ ಜಿಲ್ಲಾ ಘಟಕದ ಕಾರ್ಯಕ್ರಮವಾದ ಮಹಾದಾನ್ ಅಭಿಯಾನದ ಅಂಗವಾಗಿ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಾರ್ಚ್ 19ರಂದು ಪುತ್ತೂರು ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ರಕ್ತದಾನ ಆರಂಭಗೊಳ್ಳಲಿದ್ದು, ಮಧ್ಯಾಹ್ನದವರೆಗೆ ನಡೆಯಲಿದೆ ಎಂದು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೋಟರ್ಯಾಕ್ಟ್ ಜಿಲ್ಲಾ ಘಟಕದಿಂದ ಪ್ರತಿವರ್ಷ ರಕ್ತದಾನದ ಶಿಬಿರ ಆಯೋಜಿಸುತ್ತಿದ್ದು, ಒಂದು ವಾರಗಳ ಕಾರ್ಯಕ್ರಮ ಇದಾಗಿದೆ. ರೋಟರ್ಯಾಕ್ಟಿನ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಈ ಅಭಿಯಾನ

ಮಹಾದಾನ್ ಅಭಿಯಾನದ ಅಂಗವಾಗಿ ನಾಳೆ ರಕ್ತದಾನ Read More »

ಮಾರ್ಚ್ 25: ಬೆಂಗಳೂರಿನಲ್ಲಿ ಪುತ್ತೂರಿಗರ ಸ್ನೇಹಮಿಲನ | ಸಂಜೀವ ಮಠಂದೂರು ಅಭಿಮಾನಿ ಬಳಗದಿಂದ ಆಯೋಜನೆ

ಪುತ್ತೂರು: ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರಿಗರ ‘ಸ್ನೇಹಮಿಲನ’ ಕಾರ್ಯಕ್ರಮ ಮಾರ್ಚ್ 25ರಂದು ಸಂಜೆ 7ಕ್ಕೆ ಬೆಂಗಳೂರು ವಿಜಯನಗರದ ಬಂಟರ ಭವನದಲ್ಲಿ ನಡೆಯಲಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ವಿದ್ಯೆ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ನೆಲೆಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಜನರಿಗಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೀವ ಮಠಂದೂರು ಅಭಿಮಾನಿ ಬಳಗದ ವತಿಯಿಂದ ‘ಬನ್ನಿ, ರಾಜಧಾನಿಯಲ್ಲಿ ನಾವೆಲ್ಲರೂ ಸೇರಿ ಒಗ್ಗಟ್ಟಾಗೋಣ’ ಎನ್ನುವ ಧ್ಯೇಯ ವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಾರ್ಚ್ 25: ಬೆಂಗಳೂರಿನಲ್ಲಿ ಪುತ್ತೂರಿಗರ ಸ್ನೇಹಮಿಲನ | ಸಂಜೀವ ಮಠಂದೂರು ಅಭಿಮಾನಿ ಬಳಗದಿಂದ ಆಯೋಜನೆ Read More »

ಅಝಾನ್, ಅಲ್ಲಾಹು ಕುರಿತು ಅವಹೇಳನ: ಎಸ್.ಡಿ.ಪಿ.ಐ. ಪ್ರತಿಭಟನೆ

ಪುತ್ತೂರು: ಅಝಾನ್ ಹಾಗೂ ಅಲ್ಲಾಹುವಿನ ಕುರಿತು ಅವಹೇಳನವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ಶುಕ್ರವಾರ ಸಂಜೆ ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು. ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಮಾತನಾಡಿ, ಎಸ್‌ಡಿಪಿಐ ಪಕ್ಷದವರಿಗೆ ಹಿಂದೂ, ಮುಸ್ಲಿಂ, ಬೌದ್ಧ, ಕ್ರಿಶ್ಚಿಯನ್ ಎಲ್ಲರೂ ಒಂದೇ. ನಮಗೇ ಬೇಕಾದ್ದು ಮನುಷ್ಯ ಜಾತಿ ಹೊರತು ಧರ್ಮ ಅಲ್ಲ. ಈ ನಿಟ್ಟಿನಲ್ಲಿ ಬಿಜೆಪಿಯವರು ದ್ವೇಷವನ್ನು ಬಿಟ್ಟುಬಿಡಿ ಎಂದು ಹೇಳಿದ ಅವರು,

ಅಝಾನ್, ಅಲ್ಲಾಹು ಕುರಿತು ಅವಹೇಳನ: ಎಸ್.ಡಿ.ಪಿ.ಐ. ಪ್ರತಿಭಟನೆ Read More »

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ ಭಾಷಣ ಮೊಟಕು

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಾರ್ಷಿಕ ಸಭೆಯಲ್ಲಿ ಇತ್ತೀಚೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ವಿಶ್ವಸಂಸ್ಥೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ರಿಷಬ್ ಪರಿಸರ ಸಂರಕ್ಷಣೆ ವಿಷಯದಲ್ಲಿ ಭಾಷಣ ಮಾಡಲು ತಯಾರಿ ನಡೆಸಿಕೊಂಡು ಹೋಗಿದ್ದರು. ಅಲ್ಲಿ ಕನ್ನಡದಲ್ಲಿ ರಿಷಬ್ ಶೆಟ್ಟಿ ಭಾಷಣ ಆರಂಭಿಸಿದ್ದರು. ತಾಂತ್ರಿಕ ಸಮಸ್ಯೆಯಿಂದಾಗಿ ಇಂಗ್ಲಿಷ್ ಅಥವಾ ಬೇರೆ ಭಾಷೆಗಳಿಗೆ ಅನುವಾದ ಪ್ರಸಾರ ಆಗದ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ ಭಾಷಣ ಮೊಟಕು Read More »

ಬನ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು : ಬನ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತರಬಾರದು ಎಂಬ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತೀ ಶಾಲೆಗಳಿಗೆ ಒದಗಿಸಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ನಾವೇ ಕಡಿಮೆಯಿಲ್ಲ ಎಂಬ ದೃಷ್ಟಿಯಿಂದ ಸ್ಮಾರ್ಟ್ ಕ್ಲಾಸ್ ಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಮುಚ್ಚಬಾರದು ಎಂಬ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು

ಬನ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಬೆಳಗಾವಿ: ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ, ಶೀಘ್ರದಲ್ಲೇ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಇಲ್ಲಿನ ಶಿವಾಜಿ ಗಾರ್ಡನ್‌ನಲ್ಲಿ ‘ಶಿವಚರಿತ್ರೆ’ ಶೀರ್ಷಿಕೆಯ ವಸ್ತುಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಮದರಸಾ ಶಿಕ್ಷಣಕ್ಕೆ ಬ್ರೇಕ್‌ ಹಾಕಲು ಅಸ್ಸಾಂ ಸರ್ಕಾರ ಮುಂದಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರವು ಈಗಾಗಲೇ ಅಸ್ಸಾಂನಲ್ಲಿ 600 ಮದರಸಾಗಳನ್ನು ಮುಚ್ಚಿದೆ. ಶೀಘ್ರದಲ್ಲೇ ಉಳಿದ ಮದರಸಾಗಳನ್ನೂ ಮುಚ್ಚುವ

ನವ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ Read More »

ಕರ್ನಾಟಕದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ

ದೆಹಲಿ: ದೇಶದಲ್ಲಿ ಜವಳಿ ಉದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧೆಡೆ 7 ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್​ಗಳನ್ನು ಸ್ಥಾಪಿಸುತ್ತಿದೆ. ಇದರ ಒಂದು ಪಾರ್ಕ್ ಕರ್ನಾಟಕಕ್ಕೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17ರಂದು ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿವೆ. ಪಿಎಂ ಮಿತ್ರಾ ಮೆಗಾ ಟೆಕ್ಸ್​ಟೈಲ್ ಪಾರ್ಕ್​ಗಳು ಜವಳಿ ವಲಯಕ್ಕೆ

ಕರ್ನಾಟಕದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ Read More »

ಪೆರಿಗೇರಿ ಮೂಕಾಂಬಿ ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ | ಶಾಸಕ ಮಠಂದೂರು ಭಾಗಿ

ಪುತ್ತೂರು : ಬಡಗನ್ನೂರು ಗ್ರಾಮದ ಪೆರಿಗೇರಿ ನೂಚಿಲೋಡು ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು  ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಭೂತಾರಾಧನೆ ಕುರಿತು ಬಯಲು ಸೀಮೆಯ ಜನ ಕೂಡ ತಿಳಿದುಕೊಳ್ಳುವ ಸಂಗತಿ ಕಾಂತರ ಸಿನಿಮಾದ ಮೂಲಕ ಆಗಿದೆ. ನಂಬಿಕೆ ಆಧಾರದಲ್ಲಿ ನಮ್ಮ ಜೀವನ ಪದ್ಧತಿ ಇದೆ ನಮ್ಮಲ್ಲಿ ಪ್ರೀತಿ ವಿಶ್ವಾಸ, ಸಹ ಬಾಳ್ವೆಯ ಜೀವನ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಿ ಬಂದಿದೆ. ದೈವಸ್ಥಾನಗಳ

ಪೆರಿಗೇರಿ ಮೂಕಾಂಬಿ ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ | ಶಾಸಕ ಮಠಂದೂರು ಭಾಗಿ Read More »

error: Content is protected !!
Scroll to Top