ಆರೋಗ್ಯಕರ ತಂಪು ಪಾನೀಯಗಳು

ಎಂಥಾ ಸೆಕೆ, ಬೆವರು, ದುರ್ಬಲವೆನಿಸುತ್ತಿರುವ ದೇಹ, ಕೆಲಸ ಮಾಡಲು ನಿರುತ್ಸಾಹ. ಈ ಸುಡು ಬಿಸಿಲಿಗೆ ಇಡೀ ದಿನ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಕುಡಿಯುವ ಬಯಕೆ. ಆದರೆ ಇದೆಲ್ಲ ನಮ್ಮ ದೇಹಕ್ಕೆ ಹಿತವಲ್ಲ. ಅಪರುಪಕ್ಕೊಮ್ಮೆ ಕುಡಿದರೆ ತೊಂದರೆ ಆಗದು. ಆದರೆ ದಿನನಿತ್ಯ ಕುಡಿದರೆ ಆರೋಗ್ಯ ಹದಗೆಡುವುದು ಖಂಡಿತ. ಹಾಗಾದರೆ ಬೇರೆ ಉಪಾಯವೇನು. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ ಪಾನೀಯ ಮನೆಯಲ್ಲಿ ಮಾಡುವುದು ಹಿತಕರ. ಇದನ್ನು ಕುಡಿದರೆ ದೇಹವನ್ನು ತಂಪು ಮಾಡುವ ಜೊತೆಗೆ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಇಂತಹ […]

ಆರೋಗ್ಯಕರ ತಂಪು ಪಾನೀಯಗಳು Read More »

ಸ್ಫೂರ್ತಿ ನೀಡುವ ಮೂರು ಘಟನೆಗಳು

ಅವರ ಸಾಧನೆ ಎಲ್ಲರಿಗೂ ಪ್ರೇರಣೆ (ಭಾಗ 7)ಮೊದಲಾಗಿ ಎಸೆಸೆಲ್ಸಿ ಪರೀಕ್ಷೆಗೆ ಆಲ್ ದ ಬೆಸ್ಟ್. ಇಡೀ ವರ್ಷ ಒಂದು ಪರೀಕ್ಷೆಗಾಗಿ ಕಷ್ಟಪಟ್ಟು ಓದಿರುವ ನಿಮಗೆ ಅಭಿನಂದನೆಗಳು. ಹಾಗೆಯೇ ನಿಮ್ಮನ್ನು ಪರೀಕ್ಷೆಗಾಗಿ ಪ್ರಿಪೇರ್ ಮಾಡಿದ ನಿಮ್ಮ ಅಧ್ಯಾಪಕರಿಗೂ ಅಭಿನಂದನೆಗಳು.ಇವತ್ತು ನಾನು ನಿಮಗೆ ಪರೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಇಡೀ ವರ್ಷ ನಿಮಗೆ ಅದನ್ನು ಹಲವು ಬಾರಿ ಹೇಳಿ ಆಗಿದೆ. ಇವತ್ತು ನಾನು ನಿಮಗೆ ತುಂಬಾ ಸ್ಫೂರ್ತಿ ತುಂಬುವ ಮೂರು ವ್ಯಕ್ತಿತ್ವಗಳು ಮತ್ತು ಅದಕ್ಕೆ ಪೂರಕವಾದ ಮೂರು ಘಟನೆಗಳನ್ನು ವಿವರಿಸಬೇಕು.

ಸ್ಫೂರ್ತಿ ನೀಡುವ ಮೂರು ಘಟನೆಗಳು Read More »

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

ಪುತ್ತೂರು: ಶೃಂಗೇರಿಯಲ್ಲಿ ನಿರ್ಮಾಣವಾದ 3 ಅಡಿ ಎತ್ತರ, 100 ಕೆ.ಜಿ ತೂಕದ ಪಂಚಲೋಹದ ಶಾರದಾ ಮಾತೆಯ ವಿಗ್ರಹವನ್ನು ಪಾಕ್ ಗಡಿ ಬಳಿಯ ತೀತ್ವಾಲ್ ಬಳಿ ಇತ್ತೀಚೆಗೆ ಯಶಸ್ವಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ತನ್ಮೂಲಕ ಒಂದನೇ ಶತಮಾನದಿಂದಲೂ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ತದನಂತರ ದುಷ್ಟ ಅರಸರು ಹಾಗೂ ಪಾಕ್  ದಾಳಿಯಿಂದ ಶಿಥಿಲವಾಗಿದ್ದ ಈ ಶಾರದಾದೇವಿಯ ಆರಾಧನಾ ಸ್ಥಳ ಮತ್ತೆ ಪುನರುಜ್ಜೀವಗೊಂಡಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ಅಂಬಿಕಾ ಮಹಾವಿದ್ಯಾಲಯದಲ್ಲಿ ಕಾಶ್ಮೀರದ ಶಾರದಾ

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.  ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಗೂ ರಂಗಭೂಮಿಯ ಮಹತ್ವವನ್ನು ತಿಳಿಸಿ ತಮ್ಮ ಜೀವನದಲ್ಲಿ ಅವು ಬೀರಿದ ಪ್ರಭಾವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾ ವಂ| ಡಾ ಆಂಟನಿ ಪ್ರಕಾಶ್‌ ಮೊಂತೆರೋ ಅಧ್ಯಕ್ಷತೆ ವಹಿಸಿ ನಾಟಕ ಹಾಗೂ ರಂಗಭೂಮಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ Read More »

ಇಂದು (ಮಾ.31) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.31 ಶುಕ್ರವಾರ ಜಾತ್ರೋತ್ಸವದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಉತ್ಸವದ ಅಂಗವಾಗಿ ಬೆಳಿಗ್ಗೆ 8 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿ ಅನ್ನಸಂತರ್ಪಣೆ ಜರಗಲಿದೆ. ಸಂಜೆ 5 ಗಂಟೆಗೆ ಭಂಡಾರ ತೆಗೆದು ವಾರಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವ ಜರಗಲಿದೆ

ಇಂದು (ಮಾ.31) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ Read More »

ಜಿಲ್ಲಾ ಕೇಂದ್ರದ ಕನಸಿಗೆ ಶಿಖರಪ್ರಾಯ ಜಿಎಲ್ ಒನ್ ಶಾಪಿಂಗ್ ಮಾಲ್ | ಏಪ್ರಿಲ್ 2ರಂದು ಲೋಕಾರ್ಪಣೆ

ಪುತ್ತೂರು: ಜಿಎಲ್ ಆಚಾರ್ಯ ಸ್ವರ್ಣೋದ್ಯಮದಲ್ಲಿ ದೊಡ್ಡ ಹೆಸರು. ಇದರೊಂದಿಗೆ ಜಿಎಲ್ ಟ್ರೇಡ್ ಸೆಂಟರ್, ಜಿಎಲ್ ರೋಟರಿ ಸಭಾಭವನ, ಹೋಟೆಲ್ ರಾಮ ಹೀಗೆ ವೈವಿಧ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜಿಎಲ್ ಸಮೂಹ ಸಂಸ್ಥೆಗೆ ಹೊಸ ಸೇರ್ಪಡೆ ಜಿಎಲ್ ಒನ್ ಶಾಪಿಂಗ್ ಮಾಲ್. ಪುತ್ತೂರಿನ ಪ್ರಪ್ರಥಮ ಸರ್ವಸುಸಜ್ಜಿತ ಶಾಪಿಂಗ್ ಮಾಲ್ ಜಿಎಲ್ ಒನ್ ಏಪ್ರಿಲ್ 2ರಂದು ಸಂಜೆ 5.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಮಾಲ್ ಹೊಸ ದಿಶೆಯನ್ನು ತೋರಿಸಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಜಿಲ್ಲಾ ಕೇಂದ್ರದ ಕನಸಿಗೆ ಶಿಖರಪ್ರಾಯ ಜಿಎಲ್ ಒನ್ ಶಾಪಿಂಗ್ ಮಾಲ್ | ಏಪ್ರಿಲ್ 2ರಂದು ಲೋಕಾರ್ಪಣೆ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ | ಎಡನೀರು ಶ್ರೀಗಳ ದಿವ್ಯಹಸ್ತದಿಂದ ಪುಷ್ಪರಥ ಸಮರ್ಪಣೆ

ಪುತ್ತೂರು : ನರಿಮೊಗರು ಗ್ರಾಮದ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕ್ಷೇತ್ರದ ತಂತ್ರಿಗಳಾದ ವೇ.ಮೂ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿ ಹಾಗೂ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 5 ರಿಂದ 108 ಕಾಯಿ ಮಹಾಗಣಪತಿ ಹೋಮ, 6.32 ರಿಂದ 7.10 ರ ವರೆಗಿನ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 10.30 ಕ್ಕೆ ದಾನಿಗಳಿಂದ ನೀಡಲಾದ

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ | ಎಡನೀರು ಶ್ರೀಗಳ ದಿವ್ಯಹಸ್ತದಿಂದ ಪುಷ್ಪರಥ ಸಮರ್ಪಣೆ Read More »

ಬ್ರಹ್ಮರಥದ ಎದುರಿನ ಗದ್ದೆಗೆ ಇಂಟರ್ ಲಾಕ್ | ದಾನಿಗಳ ನೆರವಿನಿಂದ ಶ್ರೀ ಮಹಾಲಿಂಗೇಶ್ವರ ದೇವಳ ಮುಂಭಾಗ ಪಾರ್ಕಿಂಗ್ ವ್ಯವಸ್ಥೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಒಂದೊಂದೇ ಸಾಕಾರಗೊಳ್ಳುತ್ತಿದ್ದು, ಇದೀಗ ದೇವಸ್ಥಾನದ ಬಲಭಾಗದಲ್ಲಿರುವ ರಥಮಂದಿರದ ಬಳಿ ಇಂಟರ್ ಲಾಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದಾನಿಗಳ ಅಭಿಷ್ಟೇಯಂತೆ ಅವರ ಸಹಕಾರದೊಂದಿಗೆ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯನ್ನು ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿದೆ. ಇಂಟರ್ ಲಾಕ್ ಅಳವಡಿಕೆಗೆ ದಾನಿಗಳಾದ ಸುಜಿತ್ ರೈ ಮೈಸೂರು 1 ಲಕ್ಷ ರೂ. ಹಾಗೂ ಸತೀಶ್ ರೈ 50 ಸಾವಿರ ರೂ.ವನ್ನು ಈಗಾಗಲೇ ಆಡಳಿತ ಮಂಡಳಿಗೆ ದೇಣಿಗೆಯಾಗಿ ನೀಡಿದ್ದಾರೆ. ರಥಬೀದಿಯ ಒಂದು

ಬ್ರಹ್ಮರಥದ ಎದುರಿನ ಗದ್ದೆಗೆ ಇಂಟರ್ ಲಾಕ್ | ದಾನಿಗಳ ನೆರವಿನಿಂದ ಶ್ರೀ ಮಹಾಲಿಂಗೇಶ್ವರ ದೇವಳ ಮುಂಭಾಗ ಪಾರ್ಕಿಂಗ್ ವ್ಯವಸ್ಥೆ Read More »

ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ

ರಾಜ್ಯಾದ್ಯಂತ ಮಾ. 31ರಿಂದ ಏ. 15 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 8,42,811 ಎಂದು ವರದಿಗಳು ತಿಳಿಸಿವೆ.ಎಸ್ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯದಲ್ಲಿ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ಇರುತ್ತದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್​​, ಇಯರ್‌ಫೋನ್ ಅಂತಹ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ತರುವಂತಿಲ್ಲ. ಮಾ. 31ರಿಂದ ಏ. 15 ರವರೆಗೆ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ

ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ Read More »

ಅನ್ಯಾಡಿ :  “ನಂದಗೋಕುಲ” ಗೃಹಪ್ರವೇಶದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಶ್ರೀ ಹರೀಶ್  ಉಪಸ್ಥಿತಿ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿದ “ನಂದಗೋಕುಲ”ದ ಗೃಹಪ್ರವೇಶೋತ್ಸವ ಮಾ.30 ಗುರುವಾರ ನಡೆಯಿತು. ಗೃಹಪ್ರವೇಶಕ್ಕೆ ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮನೆಯ ಯಜಮಾನ ಹರೀಶ್, ಕುಸುಮ, ಮಕ್ಕಳಾದ ಚಿತ್ರೇಶ್, ವೈಷ್ಣವಿ, ಊರವರು ಆಗಮಿಸಿ ಧರ್ಮದರ್ಶಿಗಳನ್ನು ಗೌರವಿಸಿದರು.

ಅನ್ಯಾಡಿ :  “ನಂದಗೋಕುಲ” ಗೃಹಪ್ರವೇಶದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಶ್ರೀ ಹರೀಶ್  ಉಪಸ್ಥಿತಿ Read More »

error: Content is protected !!
Scroll to Top