ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಮೇ-ಜೂನ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು https://karresults.nic.in/ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಪೂರಕ ಪರೀಕ್ಷೆಯ ಫಲಿತಾಂಶದಲ್ಲಿಯೂ ಬಾಲಕಿಯರು ಮುಂದಿದ್ದಾರೆ. ಒಟ್ಟು 62,111 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,ಇವರಲ್ಲಿ 21,577 ವಿದ್ಯಾರ್ಥಿನಿಯರು (ಶೇ.34.74) ಉತ್ತೀರ್ಣರಾಗಿದ್ದಾರೆ. 95,645 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 28, 901 ಬಾಲಕರು (ಶೇ.30.22) ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಶೇ.32.69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಗ್ರಾಮಾಂತರ ಭಾಗದ […]

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರದಾದಾನ

ಪೆರ್ನೆ: ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಕೆದಿಲ  ಪೂರ್ಲಡ್ಕದಲ್ಲಿ ಶ್ರಮದಾನ ನಡೆಯಿತು. ಈ ಪ್ರದೇಶದಲ್ಲಿ ರಸ್ತೆ ಮುಳ್ಳಿನ ಪೊದೆಗಳಿಂದ ಕೂಡಿದ್ದು, ಅದನ್ನು ಶ್ರಮದಾನದ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಶ್ರಮದಾನದಲ್ಲಿ ಘಟಕದ ಜಗದೀಶ, ಶೀನಪ್ಪ ಗಿರೀಶ, ವೆಂಕಪ್ಪ, ಕುಶಾಲಪ್ಪ, ಮತ್ತು ಪಂಚಾಯಿತಿ ಸದಸ್ಯರಾದ ಶ್ಯಾಮ್ ಪ್ರಸಾದ್ ಮತ್ತು ಸ್ಥಳೀಯರಾದ ಧನಂಜಯ ಮಿತ್ತಿಲ ಮತ್ತಿತರರು ಪಾಲ್ಗೊಂಡಿದ್ದರು.

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರದಾದಾನ Read More »

ಸವಣೂರು ಗ್ರಾ.ಪಂ.ನಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗೃತ ಸಭೆ

ಸವಣೂರು: ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಅವಘಡಗಳಿಗೆ ಸೂಕ್ತ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಸವಣೂರು ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜೂ.20ರಂದು ನಡೆಯಿತು.  ಮಳೆಯ ಸಂದರ್ಭದಲ್ಲಿ ಅಪಾಯ ಉಂಟಾಗುವ ಸಾಧ್ಯತೆಯಿರುವ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮಕೈಗೊಳ್ಳುವಂತೆಯೂ ಚರ್ಚಿಸಲಾಯಿತು.  ಆರೇಲ್ತಡಿ ಶಾಲೆಗೆ ಮಕ್ಕಳು 2 ಕಡೆ ಕಾಲು ಸಂಕ ದಾಟಿ ಬರಬೇಕಾದ ಪರಿಸ್ಥಿತಿ ಇದೆ.ನೆರೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೇಲ್ತಡಿ ಶಾಲಾ ಶಿಕ್ಷಕ ಜಗನ್ನಾಥ ರೈ

ಸವಣೂರು ಗ್ರಾ.ಪಂ.ನಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗೃತ ಸಭೆ Read More »

ನಾಳೆ (ಜೂ.21) : ಸ್ವಾಮಿ ಕಲಾ ಮಂದಿರದಲ್ಲಿ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ

ಪುತ್ತೂರು: ಇತ್ತೀಚೆಗೆ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯವು ಜೂ.21 ರಂದು ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ ಮಧ್ಯಾಹ್ನ ಜರಗಲಿದೆ. ಪುತ್ತೂರು: ಸಾಮೆತ್ತಡ್ಕ ನಿವಾಸಿಯಾಗಿದ್ದು, ಹಲವಾರು ವರ್ಷಗಳಿಂದ ಅರುಣಾ ಚಿತ್ರಮಂದಿರದ ಬಳಿ ಸ್ವಾಗತ್ ಸ್ವೀಟ್ಸ್ ಅಂಗಡಿಯನ್ನು ಹೊಂದಿದ್ದ ಜಯರಾಮ ಶೆಟ್ಟಿ ಅವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಅವರು ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ಕೆ ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಮೃತರ ಪತ್ನಿ

ನಾಳೆ (ಜೂ.21) : ಸ್ವಾಮಿ ಕಲಾ ಮಂದಿರದಲ್ಲಿ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ Read More »

ಕೂದಲಿನ ಅಂದ ಹೆಚ್ಚಿಸಲು ಉಪ್ಪಿನಂಗಡಿ ನ್ಯೂ ಸ್ಟಾರ್ ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಗೆ ಭೇಟಿ ನೀಡಿ.

ಉಪ್ಪಿನಂಗಡಿ: ಬ್ಯೂಟಿಪಾರ್ಲರ್, ಸಲೂನ್ ಎಂದಾಕ್ಷಣ ಪುರುಷರು, ಮಹಿಳೆಯರು ಹುಬ್ಬೇರಿಸುವುದು ಸಾಮಾನ್ಯ. ತಮ್ಮ ಕೂದಲಿನ ಅಂದವನ್ನು ತಮಗೆ ಬೇಕಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳುವಲ್ಲಿ ಪುರುಷರು, ಮಹಿಳೆಯರು ಹಾತೊರೆಯುತ್ತಿರುತ್ತಾರೆ. ಇದೀಗ ತಮ್ಮ ಕೂದಲಿನ ಅಂದವನ್ನು ತಮಗೆ ಇಷ್ಟದಂತೆ ಮಾಡಿಕೊಳ್ಳಲು ಉಪ್ಪಿನಂಗಡಿಯ ನ್ಯೂ ಸ್ಟಾರ್ ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಗೆ ಭೇಟಿ ನೀಡಿ. ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿ ಇರುವ ಹಸನ್ ಟವರ್ ನ ಒಂದನೇ ಮಹಡಿಯಲ್ಲಿ ಈ ಸಲೂನ್ ಕಾರ್ಯಾಚರಿಸುತ್ತಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರಿಗೂ ಸೇವೆಗಳು

ಕೂದಲಿನ ಅಂದ ಹೆಚ್ಚಿಸಲು ಉಪ್ಪಿನಂಗಡಿ ನ್ಯೂ ಸ್ಟಾರ್ ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಗೆ ಭೇಟಿ ನೀಡಿ. Read More »

ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರಗಳ ಸಭೆ

ವಿಟ್ಲ : ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ  3 ಶಕ್ತಿ ಕೇಂದ್ರಗಳ ಸಭೆಯನ್ನು ಪುತ್ತೂರು ಗ್ರಾಮಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆ, ಜಿಪಂ, ತಾಪಂ, ಗ್ರಾಪಂ ಚುನಾವಣೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗುಳಿ ಮನೆ ನಿತೀಶ್ ಶಾಂತಿವನ ಮಂಡಲದ ಉಪಾಧ್ಯಕ್ಷರಾದ ಅರುಣ್ ವಿಟ್ಲ ಹರಿಪ್ರಸಾದ್ ಯಾದವ್ ದಯಾನಂದ ಶೆಟ್ಟಿ

ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರಗಳ ಸಭೆ Read More »

ಕೆಸಿಸಿಐ ಕರೆಯಂತೆ ಜೂ.22 ರ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಇಲ್ಲ : ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೇಳಿಕೆ

ಪುತ್ತೂರು: ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಜೂ.22 ರಂದು ಕರೆ ನೀಡಿದ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತಿಳಿಸಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಜಾನ್ ಕುಟಿನ್ಹ ಮಾತನಾಡಿ, ವಿದ್ಯುತ್ ದರ ಏರಿಕೆಯಾಗಿರುವುದಕ್ಕೆ ನಮ್ಮ ವಿರೋಧವಿದೆ. ಒಂದೆಡೆ ಉಚಿತ ಇನ್ನೊಂದೆಡೆ ದರ ಏರಿಕೆ ಮಾಡಿರುವುದು ಸರಿಯಲ್ಲ. ಆದರೆ ಬಂದ್ ಮಾಡುವುದರಿಂದ ಕೈಗಾರಿಕೋದ್ಯಮಿಗಳಿಗೆ ಹಾಗೂ ವರ್ತಕರಿಗೇ ನಷ್ಟ. ಈ ನಿಟ್ಟಿನಲ್ಲಿ

ಕೆಸಿಸಿಐ ಕರೆಯಂತೆ ಜೂ.22 ರ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಇಲ್ಲ : ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೇಳಿಕೆ Read More »

ಮಹಾಲಿಂಗೇಶ್ವರ ಭಟ್ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗನ ಸನ್ನಿಧಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕೋಟೆ ಮಹಾಲಿಂಗೇಶ್ವರ ಭಟ್ (58) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಬೆಳ್ಳಾರೆ ಕೋಟೆ ಮನೆತನದವರಾದ ಮಹಾಲಿಂಗೇಶ್ವರ ಭಟ್ ಅವರು ಪುತ್ತೂರು ಕೊಡಿಪ್ಪಾಡಿ ಸಮೀಪದ ಬಿರಾವು ಎಂಬಲ್ಲಿ ವಾಸ್ತವ್ಯ ಹೂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ಭಟ್ ನಿಧನ Read More »

ಕಲ್ಲರ್ಪೆಯಲ್ಲಿ ಕಾರು-ದ್ವಿಚಕ್ರ ವಾಹನ ಡಿಕ್ಕಿ | ದ್ವಿಚಕ್ರ ಸವಾರ ಮೃತ್ಯು

ಪುತ್ತೂರು: ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ನೈತಾಡಿ ನಿವಾಸಿ ಇಸ್ಮಾಯಿಲ್ ಮೃತಪಟ್ಟವರು. ತಮ್ಮ ಜಮೀನಿಗೆ ಹೋಗುವ ಸಂದರ್ಭ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಇಸ್ಮಾಯಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಲೆ ಮೃತಪಟ್ಟಿದ್ದಾರೆ. ಅಪಘಾತ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಮಡಿಕೇರಿ ನೋಂದಾಯಿತ ಕಾರಿನ ಕುರಿತು ಮಾಹಿತಿ ಲಭ್ಯವಾಗಿಲ್ಲ. ಮೃತ ಇಸ್ಮಾಯಿಲ್ ಪತ್ನಿ, ಮೂರು ಹೆಣ್ಣು ಹಾಗೂ ಒಂದು ಗಂಡು

ಕಲ್ಲರ್ಪೆಯಲ್ಲಿ ಕಾರು-ದ್ವಿಚಕ್ರ ವಾಹನ ಡಿಕ್ಕಿ | ದ್ವಿಚಕ್ರ ಸವಾರ ಮೃತ್ಯು Read More »

ಕೌಡಿಚ್ಚಾರು ನಿವಾಸಿ ಕವಿತಾ ನಿಧನ

ಪುತ್ತೂರು: ಕೌಡಿಚ್ಚಾರು ನಿವಾಸಿ ಕವಿತಾ (30) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೂಲತಃ ಕೆದಂಬಾಡಿಯವರಾದ ಅವರು ವಿವಾಹದ ಬಳಿಕ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ವಾಸವಿದ್ದರು.

ಕೌಡಿಚ್ಚಾರು ನಿವಾಸಿ ಕವಿತಾ ನಿಧನ Read More »

error: Content is protected !!
Scroll to Top