ಚಂದ್ರಯಾನ-3 ಯಶಸ್ವಿ ಹಿನ್ನೆಲೆ : ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಭ್ರಮಾಚರಣೆ

ಪುತ್ತೂರು: ಶಶಾಂಕನ ದಕ್ಷಿಣ ಧ್ರುವಕ್ಕೆ ಪ್ರವೇಶ ಮಾಡಿದ ಮೊದಲ ರಾಷ್ಟ್ರ ಭಾರತ. ಚಂದ್ರಯಾನ 3 ಗೆ ಸಿಕ್ಕ ಯಶಸ್ಸು  ಭರತಖಂಡದಲ್ಲಿ ಸಂಭ್ರಮ ಮೂಡಿಸಿದೆ.ಈ ಯಶಸ್ಸಿನಿಂದಾಗಿ ಅಭಿವೃದ್ಧಿ ಹೊಂದಿದ ನವಭಾರತದ ಉದಯವಾಗಿದೆ.  ವೈಜ್ಞಾನಿಕ ವಿಕ್ರಮವೊಂದರ ಹೊತ್ತಿನಲ್ಲಿ ಈ ಹಿಂದೆಂದೂ ಕಂಡುಬರದ ಏಕತೆ, ಐಕ್ಯತೆ, ಉತ್ಸಾಹ ಭಾರತೀಯರಲ್ಲಿ ಪ್ರಕಟವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು. ನರೇಂದ್ರ ಪ.ಪೂ. ಕಾಲೇಜಿನಲ್ಲಿ ಚಂದ್ರಯಾನ-3 ರ ಯಶಸ್ವಿಯ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ಇಸ್ರೋದ ಈ ಯಶಸ್ಸು ಬರೀ ಅದರ […]

ಚಂದ್ರಯಾನ-3 ಯಶಸ್ವಿ ಹಿನ್ನೆಲೆ : ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಭ್ರಮಾಚರಣೆ Read More »

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಆರೋಪಿ ಪದ್ಮರಾಜ್ ಬಂಧನ

ಪುತ್ತೂರು: ಇಲ್ಲಿನ ಪೊಲೀಸ್ ಠಾಣಾ ಬಳಿ ಚೂರಿ ಇರಿತಕ್ಕೊಳಗಾಗದ  ಯುವತಿ ಇದೀಗ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆಇದೀಗ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಯುವಕನ್ನು ಯುವಕನನ್ನು ಬಂಟ್ವಾಳ ಮೂಲಕ ಪದ್ಮರಾಜ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಯುವತಿಯನ್ನು ಅಳಿಕೆ ಮೂಲದ ಗೌರಿ (20 ವ.) ಎಂದು ಗುರುತಿಸಲಾಗಿದೆ. ಯುವತಿ ಗಂಭೀರ ಗಾಯಗೊಂಡಿದ್ದು, ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದೀಗ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು | ಆರೋಪಿ ಪದ್ಮರಾಜ್ ಬಂಧನ Read More »

ಚೂರಿ ಇರಿತಕ್ಕೊಳಗಾದ ಯುವತಿ ಮಂಗಳೂರು ಆಸ್ಪತ್ರೆಗೆ ರವಾನೆ

ಪುತ್ತೂರು: ಯುವಕನಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಇದೀಗ ಮಂಗಳೂರಿಗೆ ರವಾನಿಸಲಾಗಿದೆ. ನಗರದ ಮಹಿಳಾ ಪೊಲೀಸ್ ಠಾಣಾ ಬಳಿ ಬೈಕ್‍ ನಲ್ಲಿ ಬಂದ ಯುವಕ ವಿಟ್ಲ ಮೂಲಕ ಗೌರಿ (20) ಎಂಬ ಯುವತಿಗೆ ಚೂರಿ ಇರಿದು ಪರಾರಿಯಾಗಿದ್ದ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲೆ ಮಾಡಲಾಯಿತು. ಯುವತಿ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಚೂರಿ ಇರಿತಕ್ಕೊಳಗಾದ ಯುವತಿ ಮಂಗಳೂರು ಆಸ್ಪತ್ರೆಗೆ ರವಾನೆ Read More »

ಯುವತಿಗೆ ಮಾರಣಾಂತಿಕ ಹಲ್ಲೆ | ಕೊಲೆಗೆ ಯತ್ನ

ಪುತ್ತೂರು: ಯುವತಿಯೋರ್ವಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಪೊಲೀಸ್ ಠಾಣೆ ಬಳಿ ನಡೆದಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮಹಿಳಾ ಠಾಣೆ ಬಳಿ ಯುವಕನೋರ್ವ ಯುವತಿಯ ಕುತ್ತಿಗೆಗೆ ಚಾಕು ಇರಿದು ಕೊಲೆಗೆ ಯತ್ನಿಸಲಾಗಿದೆ. ಗಂಭೀರ ಗಾಯಗೊಂಡ ಯುವತಿಯನ್ನು ವಿಟ್ಲ ಮೂಲದ ಗೌರಿ (20) ಎಂದು ತಿಳಿದು ಬಂದಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ  ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಯುವತಿಗೆ ಮಾರಣಾಂತಿಕ ಹಲ್ಲೆ | ಕೊಲೆಗೆ ಯತ್ನ Read More »

ನಾಟಿ ವೈದ್ಯರಿಗೆ ಸನ್ಮಾನ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಕ್ರಮ

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗ್ರಾಮ ವಿಕಾಸ ಸಂಘ, ವಿವೇಕ ಸಂಜೀವಿನಿ ಹಾಗೂ ಬನ್ನೂರು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಾಟಿ ವೈದ್ಯರಿಗೆ ಸನ್ಮಾನ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಕ್ರಮ ಬನ್ನೂರು ಗ್ರಾಮದ ಕಂಜೂರುನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಲಿಯುಗ ಸೇವ ಸಮಿತಿ ಸಂಚಾಲಕ ಸಂಪತ್ ಕುಮಾರ್ ಜೈನ್ ಮಾತನಾಡಿ, ಜೀವನಕ್ಕೆ ನೀರು ಅತ್ಯಗತ್ಯ ಸತತ ಬರಗಾಲದ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ನೀರಿನ ಸಂರಕ್ಷಣೆ, ಜಲ

ನಾಟಿ ವೈದ್ಯರಿಗೆ ಸನ್ಮಾನ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಕ್ರಮ Read More »

ಪ್ರತಿಷ್ಠಿತ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಅದೃಷ್ಟವಂತರಿಗೆ ಜ್ಯುಪಿಟರ್ ಗೆಲ್ಲುವ ಅವಕಾಶ

ಪುತ್ತೂರು: ಕಳೆದ 21 ವರ್ಷಗಳಿಂದ ವರ್ಷಗಳಿಂದ ನಗರದ ಪುರಭವನದ ಬಳಿ ಪುತ್ತೂರು ಸೆಂಟರ್ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಮಳಿಗೆ “ಶೆಟ್ ಇಲೆಕ್ಟ್ರಾನಿಕ್ಸ್”ನಲ್ಲಿ ತಮಗಿಷ್ಟ ಬಂದ ಐಟಂಗಳನ್ನು ಖರೀದಿಸುವ ಮೂಲಕ ಜ್ಯುಪಿಟರ್ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಮುಂದಿನ ಮೂರು ದಿನಗಳ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಪ್ರತೀ 2000 ಖರೀದಿಗೆ ಒಂದು ಕೂಪನ್ ಪಡೆದು ಅದೃಷ್ಟವಂತರು ಜ್ಯುಪಿಟರ್ ಗೆಲ್ಲಬಹುದು. ಖರೀದಿಗೆ ಶೇ.40 ರಷ್ಟು ರಿಯಾಯಿತಿ ವ್ಯವಸ್ಥೆ ಮಾಡಲಾಗಿದ್ದು, ಝೀರೋ ಶೇಕಡ ಬಡ್ಡಿ ದರದಲ್ಲಿ ಸುಲಭ ಕಂತುಗಳನ್ನು

ಪ್ರತಿಷ್ಠಿತ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಅದೃಷ್ಟವಂತರಿಗೆ ಜ್ಯುಪಿಟರ್ ಗೆಲ್ಲುವ ಅವಕಾಶ Read More »

ಆ.28 : ಸೌಜನ್ಯ ಕೊಲೆಯ ನಿಜವಾದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು, ನಿರಪರಾಧಿ ಸಂತೋಷ್ ರಾವ್‍ ಗೆ ಪರಿಹಾರಕ್ಕಾಗಿ ಆಗ್ರಹಿಸಿ ಬೃಹತ್ ಜನಜಾಗೃತಿ ಸಭೆ | ಪುತ್ತೂರು ಅಭಿನವ ಭಾರತ ಮಿತ್ರ ಮಂಡಳಿ, ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ನೇತೃತ್ವ

ಪುತ್ತೂರು: ಕಳೆದ 11 ವರ್ಷಗಳ ಹಿಂದೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಮರುತನಿಖೆಗಾಗಿ ಆಗ್ರಹಿಸಿ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪುತ್ತೂರು ಅಭಿನವ  ಭಾರತ ಮಿತ್ರಮಂಡಳಿ ಹಾಗೂ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಜಂಟಿ ಆಶ್ರಯದಲ್ಲಿ ಬೃಹತ್ ಜನಜಾಗೃತಿ ಸಭೆ ಆ.28 ಸೋಮವಾರ ಸಂಜೆ 3 ಗಂಟೆಗೆ ಪುತ್ತೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಅಭಿನವ ಭಾರತ ಮಿತ್ರಮಂಡಳಿ ಪ್ರವರ್ತಕ ದಿನೇಶ್ ಕುಮಾರ್ ಜೈನ್

ಆ.28 : ಸೌಜನ್ಯ ಕೊಲೆಯ ನಿಜವಾದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು, ನಿರಪರಾಧಿ ಸಂತೋಷ್ ರಾವ್‍ ಗೆ ಪರಿಹಾರಕ್ಕಾಗಿ ಆಗ್ರಹಿಸಿ ಬೃಹತ್ ಜನಜಾಗೃತಿ ಸಭೆ | ಪುತ್ತೂರು ಅಭಿನವ ಭಾರತ ಮಿತ್ರ ಮಂಡಳಿ, ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ನೇತೃತ್ವ Read More »

ಕಲ್ಪಣೆ ಸರಕಾರಿ ಪ್ರೌಢ  ಶಾಲೆಯಲ್ಲಿ ಸವಣೂರು ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟ

ಪುತ್ತೂರು: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಧೈಹಿಕ ಚಟುವಟಿಕೆ ದೇಹದ ಬೆಳವಣಿಗೆ ಜತೆಗೆ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಲು ಅತೀ ಅಗತ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸರ್ವೆ ಕಲ್ಪಣೆ ಪ್ರೌಢ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸರಕಾರಿ ಶಾಲೆಗಳ ಕಡೆಗಣನೆ ಸಲ್ಲದು. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯುವಂತಾಗಲಿದೆ. ಖಾಸಗಿ ಶಾಲೆಯನ್ನು ತೊರೆದು

ಕಲ್ಪಣೆ ಸರಕಾರಿ ಪ್ರೌಢ  ಶಾಲೆಯಲ್ಲಿ ಸವಣೂರು ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟ Read More »

ಆ.26 : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ  “ಗ್ರಾಮ ಸಾಹಿತ್ಯ ಸಂಭ್ರಮ-2023” ಸರಣಿ ಕಾರ್ಯಕ್ರಮ-8

ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ-2023 ಸರಣಿ ಕಾರ್ಯಕ್ರಮ-8 ಆ.26 ಶನಿವಾರ ಬೆಳಿಗ್ಗೆ 10 ಗಂಟೆಗೆ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್, ಪಿಡಿಒ ರೋಹಿತ್, ಶಾಂತಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪ್ರಕಾಶ್ ಗೌಡ, ಕೋಡಿಂಬಾಡಿ ಕ್ಲಸ್ಟರ್

ಆ.26 : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ  “ಗ್ರಾಮ ಸಾಹಿತ್ಯ ಸಂಭ್ರಮ-2023” ಸರಣಿ ಕಾರ್ಯಕ್ರಮ-8 Read More »

ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ತಂಡದ “ಅಪ್ಪೆ” ತುಳು ಹಾಸ್ಯಮಯ ನಾಟಕಕ್ಕೆ ಮುಹೂರ್ತ

ಪುತ್ತೂರು: ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ತಂಡದಿಂದ  ”ಅಪ್ಪೆ”’ಎಂಬ ತುಳು ಹಾಸ್ಯಮಯ  ನಾಟಕದ ಮಹೂರ್ತ ಮುಕ್ವೆ ಮಜಲ್ಮಾರು ಶ್ರೀ ಉಮಾಮಹೇಶ್ವರ  ದೇವಸ್ಥಾನದಲ್ಲಿ ನಡೆಯಿತು ರೋಹಿತ್ ಕೋಟ್ಯಾನ್ ಶಿಬರ ನಿರ್ಮಾಣದ ಗಣೇಶ್ ಪೂಜಾರಿ ಆಲಂಗ ಸಾರಥ್ಯದ ತುಳುಶ್ರೀ.ರಮಾ ಬಿ ಸಿ ರೋಡು ಸಲಹೆ ಸಹಕಾರದೊಂದಿಗೆ ಕುಸಾಲ್ದ ಮುತ್ತು ಅರುಣ್ ಚಂದ್ರ ಬಿ ಸಿ ರೋಡು ರಚನೆ ಮತ್ತು ನಿರ್ದೇಶನದ  ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಅಭಿನಯಿಸುವ ಈ ವರ್ಷದ ಕಲಾಕಾಣಿಕೆ “”ಅಪ್ಪೆ”” ನಾಟಕದ  ಮುಹೂರ್ತ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು ಈ

ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ತಂಡದ “ಅಪ್ಪೆ” ತುಳು ಹಾಸ್ಯಮಯ ನಾಟಕಕ್ಕೆ ಮುಹೂರ್ತ Read More »

error: Content is protected !!
Scroll to Top