ಕುಂಡಡ್ಕ : ಮೂರನೇ ವರ್ಷದ ರಕ್ಷಾಬಂಧನ ಆಚರಣೆ | ರಾಷ್ಟ್ರೀಯತೆಯ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು : ರಜನೀಶ್ ಪಿ

ಮುಕ್ಕೂರು : ದೇಶ, ಧರ್ಮ, ರಾಷ್ಟ್ರೀಯತೆಯ ವಿಚಾರದಲ್ಲಿ ಪಕ್ಷ, ಜಾತಿ ಮೀರಿ ನಾವೆಲ್ಲರೂ ಒಂದಾಗಬೇಕು. ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರಗಳಿಗೆ ಅವಕಾಶ ಕಲ್ಪಿಸದೆ, ನಾವು ಜಾಗೃತ ಸಮಾಜದ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರದ ರಕ್ಷಕರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಜನೀಶ್ ಪಿ ಹೇಳಿದರು. ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಕುಂಡಡ್ಕ ಕಮಲ ಅವರ ನಿವಾಸದಲ್ಲಿ ನಡೆದ ಮೂರನೇ ವರ್ಷದ ರಕ್ಷಾಬಂಧನ ಆಚರಣೆಯಲ್ಲಿ ರಕ್ಷಾ […]

ಕುಂಡಡ್ಕ : ಮೂರನೇ ವರ್ಷದ ರಕ್ಷಾಬಂಧನ ಆಚರಣೆ | ರಾಷ್ಟ್ರೀಯತೆಯ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು : ರಜನೀಶ್ ಪಿ Read More »

ಕಾರ್ಮಿಕರಿಗೆ ಕಾರು ಡಿಕ್ಕಿ : ಒರ್ವ ಮೃತ್ಯು, ಮೂವರು ಗಂಭೀರ ಗಾಯ

ಸುಳ್ಯ : ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಕಾರಣ ಒಬ್ಬ ಮೃತಪಟ್ಟು 3 ಮಂದಿ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಒಬ್ಬರು ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಡ್ಕಾರಿನ ಹೊಟೇಲ್ ಒಂದರ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಒಬ್ಬರು ಮೃತಪಟ್ಟು 3

ಕಾರ್ಮಿಕರಿಗೆ ಕಾರು ಡಿಕ್ಕಿ : ಒರ್ವ ಮೃತ್ಯು, ಮೂವರು ಗಂಭೀರ ಗಾಯ Read More »

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. ಪ್ರಥಮ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ  ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಶ್ರೀಮಾ ಕೆ.ಎಚ್‍. 14 ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಹಾಗೂ ಸುಜಿತಾ ದಂಪತಿ ಪುತ್ರಿ. ಪ್ರಗತಿ ಶಾಲಾ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. ಪ್ರಥಮ Read More »

ಪ್ರಜ್ಞಾ ಆಶ್ರಮದಲ್ಲಿ ರಕ್ಷಾ ಬಂಧನ ಆಚರಿಸಿದ ಪುತ್ತಿಲ ಪರಿವಾರ

ಪುತ್ತೂರು: ಪುತ್ತೂರಿನ  ವಿಕಲಚೇತನಾ ವೃತ್ತಿ ಮತ್ತು ಪುನರ್ವಸತಿ ಕೇಂದ್ರ ಪ್ರಜ್ಞಾ ಆಶ್ರಮದಲ್ಲಿ ಪುತ್ತಿಲ ಪರಿವಾರದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಆ.30ರಂದು  ಜರಗಿತು. ಆಶ್ರಮದಲ್ಲಿ ರಕ್ಷಾ ಬಂಧನ ಆಚರಿಸಿ, ಸಿಹಿತಿಂಡಿ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ,  ಪ್ರದಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸಹಿತ ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು

ಪ್ರಜ್ಞಾ ಆಶ್ರಮದಲ್ಲಿ ರಕ್ಷಾ ಬಂಧನ ಆಚರಿಸಿದ ಪುತ್ತಿಲ ಪರಿವಾರ Read More »

ಪಾಪೆಮಜಲು ಹಿ ಪ್ರಾ ಶಾಲೆ ವಿವೇಕ ತರಗತಿ ಉದ್ಘಾಟನೆ, ಅಭಿನಂದನೆ | ಸರಕಾರಿ ಶಾಲೆಗಳಲ್ಲಿ ಕೊರತೆಗಳನ್ನು ನೀಗಿಸುವ ಕೆಲಸವನ್ನು ಸರಕಾರ ಮಾಡಲಿದೆ: ಅಶೋಕ್ ರೈ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆ ಇದೆ ಎಂದು ಕೆಲವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಮಾತ್ರ ದೊರೆಯಲು ಸಾಧ್ಯ, ಸರಕಾರಿ ಶಾಲೆಗಳಲ್ಲಿನ ಕೊರತೆಗಳನ್ನು ನೀಗಿಸುವ ಕೆಲಸವನ್ನು ಸರಕಾರ ಹಂತ ಹಂತವಾಗಿ ಮಾಡಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಪಾಪೆಮಜಲು ಸರಕಾರಿ ಹಿ ಪ್ರಾ ಶಾಲೆಯಲ್ಲಿ ನಡೆದ ವಿವೇಕ ಕೊಠಡಿ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ

ಪಾಪೆಮಜಲು ಹಿ ಪ್ರಾ ಶಾಲೆ ವಿವೇಕ ತರಗತಿ ಉದ್ಘಾಟನೆ, ಅಭಿನಂದನೆ | ಸರಕಾರಿ ಶಾಲೆಗಳಲ್ಲಿ ಕೊರತೆಗಳನ್ನು ನೀಗಿಸುವ ಕೆಲಸವನ್ನು ಸರಕಾರ ಮಾಡಲಿದೆ: ಅಶೋಕ್ ರೈ Read More »

ಚೆಸ್ ಪಂದ್ಯಾಟವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಕಾರಿಯಾಗಿದೆ- ಶೇಷಪ್ಪ ಗೌಡ | ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ

ಪುತ್ತೂರು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಚೆಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ನೇತಾಜಿ ಸಭಾ ಭವನದಲ್ಲಿ ನಡೆಯಿತು. ವಿಟ್ಲ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶೇಷಪ್ಪ ಗೌಡ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕ್ರೀಡೆಗಳು

ಚೆಸ್ ಪಂದ್ಯಾಟವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಕಾರಿಯಾಗಿದೆ- ಶೇಷಪ್ಪ ಗೌಡ | ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ Read More »

ಮಹಿಳಾ ಅರಣ್ಯಾಧಿಕಾರಿ ಆತ್ಮಹತ್ಯೆ

ಮಡಿಕೇರಿ : ಮಡಿಕೇರಿಯ ಯುವ ಮಹಿಳಾ ಅರಣ್ಯ ಅಧಿಕಾರಿಯೊಬ್ಬರು ವಸತಿಗೃಹವೊಂದರಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಡ್ಯ ಮೂಲದ ರಶ್ಮಿ (27) ಈ ಕೃತ್ಯ ಎಸಗಿ ಮೃತಪಟ್ಟವರು. ರಶ್ಮಿ ಅವರು ಅರಣ್ಯ ಇಲಾಖೆಯಲ್ಲಿ ಡಿಎಫ್‍ಆರ್ ಒ ಆಗಿ ಕೊಡಗಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಮಡಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಿಳಾ ಅರಣ್ಯಾಧಿಕಾರಿ ಆತ್ಮಹತ್ಯೆ Read More »

ಪುತ್ತೂರಿನ ಮಾಜಿ ಶಾಸಕರು ನೂತನ ಶಾಸಕರ ಬಗ್ಗೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಖಂಡನೀಯ : ಎಚ್‍.ಮಹಮ್ಮದಾಲಿ

ಪುತ್ತೂರು: ನೂತನ ಶಾಸಕರ ಕಚೇರಿಗೆ ಬರೋಬ್ಬರಿ 31 ಲಕ್ಷ ರೂ. ನಗರಸಭೆಯ ತೆರಿಗೆ ಹಣವನ್ನು ಬಳಕೆ ಮಾಡಿರುವ ಕುರಿತು ಶಾಸಕರ ಬಗ್ಗೆ ಆರೋಪ ಹೊರಿಸುತ್ತಿರುವ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಮಾಡಿದ ದುರುಪಯೋಗವನ್ನು ಮೊದಲು ತಿಳಿಯಲಿ. ಅದನ್ನು ಬಿಟ್ಟು ನೂತನ ಶಾಸಕ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಪುತ್ತೂರು ಬ್ಲಾಕ್‍ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್‍ ಮಹಮ್ಮದಾಲಿ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕರಿಗೆ

ಪುತ್ತೂರಿನ ಮಾಜಿ ಶಾಸಕರು ನೂತನ ಶಾಸಕರ ಬಗ್ಗೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಖಂಡನೀಯ : ಎಚ್‍.ಮಹಮ್ಮದಾಲಿ Read More »

ಖಾಸಗಿ ಬಸ್ ನಿರ್ವಾಹಕ ಬಸ್ಸಿನಿಂದ ಬಿದ್ದು ಮೃತ್ಯು

ಮಂಗಳೂರು: ಖಾಸಗಿ ಬಸ್ಸಿನ ಫುಟ್ ಬೋರ್ಡ್‍ ನಲ್ಲಿ ನಿಂತಿದ್ದ ಬಸ್ ನಿರ್ವಾಹಕರೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ನಂತೂರು ವೃತ್ತದ ಬಳಿ ನಡೆದಿದೆ. ಮೃತಪಟ್ಟ ನಿರ್ವಾಹಕರನ್ನು ಹೀರಯ್ಯ (23) ಎಂದು ಗುರುತಿಸಲಾಗಿದೆ. ಕಾಟಿಪಳ್ಳದಿಂದ ನಂತೂರು ವೃತ್ತವಾಗಿ ಮಂಗಳಾದೇವಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಫುಟ್ ಬೋರ್ಡ್‍ ನಲ್ಲಿ ನಿಂತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಾಗ ಸಂಚಾರಿ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಖಾಸಗಿ ಬಸ್ ನಿರ್ವಾಹಕ ಬಸ್ಸಿನಿಂದ ಬಿದ್ದು ಮೃತ್ಯು Read More »

ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ನಗರದ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ 2ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಮೊದಲಿಗೆ ಮಹಾಲಿಂಗೇಶ್ವರ ದೇವರಿಗೆ ಎಂಸಿಬಿ ಆರ್ಟ್ಸ್‌ ಆಂಡ್ ಸ್ಪೋರ್ಟ್ಸ್ ಕ್ಲಬ್ ಬಪ್ಪಳಿಗೆ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಆಮಂತ್ರಣ ಪತ್ರಿಕೆಯನ್ನ ಬಿಡುಗಡೆಗೊಳಿಸಿದರು. ಹಾಗೆಯೇ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಆಶೀರ್ವಾದವನ್ನ ಪಡೆದ

ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top