ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಕೃಷಿ ಅಧ್ಯಯನ ಪ್ರವಾಸ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಕೃಷಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಪ್ರವಾಸದಲ್ಲಿ ಸ್ವಸಹಾಯ ಸಂಘದ ಸದಸ್ಯರು ನಡೆಸುತ್ತಿರುವ ಸ್ವ-ಉದ್ಯೋಗ ಘಟಕಗಳಿಗೆ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಮಲ್ಲಿಗೆ ಕೃಷಿ, ಹಾಳೆ ತಟ್ಟೆ ಘಟಕ, ಹೈನುಗಾರಿಕೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಯಿತು. ಪ್ರವಾಸದಲ್ಲಿ ಕೃಷಿ ಯೋಜನಾಧಿಕಾರಿಗಳು, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಕೃಷಿ ಅಧ್ಯಯನ ಪ್ರವಾಸ Read More »

ಅಂಬಿಕಾ ವಿದ್ಯಾಲಯದ ನಿಯತಿ ಭಟ್ ಗೆ ಬಹುಮಾನ

ಪುತ್ತೂರು: ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ವಿದ್ಯಾರ್ಥಿನಿ ನಿಯತಿ ಭಟ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಘಟಕದ ವತಿಯಿಂದ ಆಯೋಜಿಸಲಾದ ತಾಲೂಕು ದಸರಾ ಕ್ರೀಡಾಕೂಟದಲ್ಲಿ ಆರ್ಟಿಫಿಶಿಯಲ್ ಹಾಗೂ ಟ್ರೆಡಿಷನಲ್ ಯೋಗ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮುಕ್ರಂಪಾಡಿಯ ಗೋಕುಲ ಲೇಔಟಿನ ಪ್ರವೀಣ ಡಿ ಹಾಗೂ ಚಿತ್ಕಲಗೌರಿ ಕೆ ಅವರ ಪುತ್ರಿಯಾಗಿರುವ ನಿಯತಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೆ.23ರಂದು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಸ್ಪರ್ಧೆ ಆಯೋಜನೆಗೊಂಡಿತ್ತು.

ಅಂಬಿಕಾ ವಿದ್ಯಾಲಯದ ನಿಯತಿ ಭಟ್ ಗೆ ಬಹುಮಾನ Read More »

ಮಹಿಳಾ ಕ್ರಿಕೆಟ್ ಏಕದಿನ ಪಂದ್ಯಾಟ: ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಪುತ್ತೂರು ಮೂಲದ ಶ್ರೀನಿತಿ ಪಿ.ರೈ

ಪುತ್ತೂರು: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆಯಲಿರುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಫಿ 2023-24 ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಪುತ್ತೂರು ಮೂಲದ ಶ್ರೀನಿತಿ ಪಿ. ರೈ ಆಯ್ಕೆಯಾಗಿದ್ದಾರೆ. ಅ.8 ರಿಂದ 16 ರ ತನಕ ಪಂದ್ಯಾಟ ನಡೆಯಲಿದೆ. ಶ್ರೀನಿತಿ ಪಿ. ರೈ ಬೆಂಗಳೂರಿನ ಅಕ್ಷಯ ನಗರದಲ್ಲಿರುವ ಸೈಂಟ್ ಆನ್ಸ್ ಐಸಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ತೂರಿನ ಸಾಲ್ಮರ ಕೆರೆಮೂಲೆ ನಿವಾಸಿ, ಪ್ರಸ್ತುತ ಕೊಡಗು ಜಿಲ್ಲೆಯ ಮಡಿಕೇರಿ

ಮಹಿಳಾ ಕ್ರಿಕೆಟ್ ಏಕದಿನ ಪಂದ್ಯಾಟ: ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಪುತ್ತೂರು ಮೂಲದ ಶ್ರೀನಿತಿ ಪಿ.ರೈ Read More »

ನಾಳೆ (ಸೆ.28): ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಶುಭಾರಂಭ

ಪುತ್ತೂರು: ಭಾರತ ಸರಕಾರದ ಮಾನ್ಯತೆ ಪಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಸೆ. 28ರಂದು ಸುಳ್ಯ ರಥಬೀದಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ. ವಿದ್ಯಾಮಾತಾ ಇದರ ಮಾತೃ ಸಂಸ್ಥೆ ವಿದ್ಯಾಮಾತಾ ಫೌಂಡೇಶನ್ ಈಗಾಗಲೇ 3 ರಾಜ್ಯಮಟ್ಟದ ಉದ್ಯೋಗ ಮೇಳ, ಸುಮಾರು 500ಕ್ಕೂ ಹೆಚ್ಚು ನೇರ ಉದ್ಯೋಗ ಸಂದರ್ಶನಗಳ ಮೂಲಕ 5000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವಲ್ಲಿ ಸಫಲತೆ ಕಂಡಿದೆ. ಕರಾವಳಿಯಲ್ಲಿ ಸ್ಪರ್ಧಾತ್ಮಕ

ನಾಳೆ (ಸೆ.28): ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಶುಭಾರಂಭ Read More »

ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ | ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯಾಧಿಕಾರಿ | ಫಾಗಿಂಗ್ ಯಂತ್ರ ಖರೀದಿಸಲು ಗ್ರಾ.ಪಂ.ಗಳಿಗೆ ಸೂಚನೆ

ಪುತ್ತೂರು: ತಾ.ಪಂ. ಸಾಮಾನ್ಯ ಸಭೆ ಬುಧವಾರ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ನಡೆಯಿತು. ಆಡಳಿತಾಧಿಕಾರಿ ಸಂಧ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾಲೂಕಿನಲ್ಲಿ ಡೆಂಗ್ಯೂ ಜ್ವರ ಸಂಖ್ಯೆ ಹೆಚ್ಚಾಗಿರುವ ಕುರಿತು ಮಾಹಿತಿ ನೀಡಿ, ಪ್ರತಿ ಗ್ರಾ.ಪಂ.ಗಳಲ್ಲಿ ಫಾಗಿಂಗ್ ಯಂತ್ರ ಇರಬೇಕು ಅನ್ನುವ ಬಗ್ಗೆ ಹಿಂದೆ ತಿಳಿಸಲಾಗಿತ್ತಾದರೂ ಕೆಲ ಪಂಚಾಯಿತಿಗಳಲ್ಲಿ ಇಲ್ಲ. ಇದರಿಂದ ಕಾರ್ಯಾಚರಣೆಗೆ ಸಮಸ್ಯೆ ಉಂಟಾಗಿದೆ ಎಂದರು. ಇಓ ನವೀನ್ ಭಂಡಾರಿ ಮಾತನಾಡಿ, ಫಾಗಿಂಗ್ ಯಂತ್ರ ಖರೀದಿಸುವಂತೆ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿತ್ತು. ಕೆಲ ಪಂಚಾಯಿತಿಯವರು

ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ | ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯಾಧಿಕಾರಿ | ಫಾಗಿಂಗ್ ಯಂತ್ರ ಖರೀದಿಸಲು ಗ್ರಾ.ಪಂ.ಗಳಿಗೆ ಸೂಚನೆ Read More »

ದಸರಾ ಕ್ರೀಡಾಕೂಟ: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನ  ಪಡೆದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ 4*100 ಮೀಟರ್ ರಿಲೇಯಲ್ಲಿ ಗುಣಶ್ರೀ, ಪ್ರತೀಕ್ಷಾ, ತ್ರಿಶಾ, ಕೀರ್ತಿ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಕೀರ್ತಿ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗ ಅಭಿನಂದಿಸಿದೆ.

ದಸರಾ ಕ್ರೀಡಾಕೂಟ: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ರಿಕ್ಷಾ ಚಾಲಕರ ಕಾರ್ಯಾಚರಣೆಯಿಂದ ಪತ್ತೆಯಾಯ್ತು ಹಿಟ್ ಆ್ಯಂಡ್ ರನ್’ಗೈದ ಬೊಲೇರೊ!! | ಬೊಲೇರೊದಲ್ಲಿದ್ದ ಅಧಿಕಾರಿಗಳ್ಯಾರು?

ಸವಣೂರು: ಸರ್ವೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ರೈಲ್ವೇ ಅಧಿಕಾರಿಗಳಿದ್ದ ಬೊಲೆರೋ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಸೆ.27ರಂದು ನಡೆದಿದೆ. ಅಪಘಾತದಿಂದ ದ್ವಿಚಕ್ರ ವಾಹನ ಜಖಂಗೊಂಡಿದ್ದು, ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ರಿಕ್ಷಾ ಚಾಲಕ ಅವಿನಾಶ್ ಎಂಬವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪರಾರಿಯಾದ ಬೊಲೆರೋ ವಾಹನವನ್ನು ಪತ್ತೆ ಮಾಡುವ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಕಾರ್ಯಾಚರಣೆ ನಡೆಸಿ ಸರ್ವೆ ಗೌರಿ ಹೊಳೆಯ ಪಕ್ಕದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೋಗುವ ಕಾಲುದಾರಿಯಲ್ಲಿ ಮರಗಳ ನಡುವೆ ವಾಹನವನ್ನು ಪತ್ತೆ

ರಿಕ್ಷಾ ಚಾಲಕರ ಕಾರ್ಯಾಚರಣೆಯಿಂದ ಪತ್ತೆಯಾಯ್ತು ಹಿಟ್ ಆ್ಯಂಡ್ ರನ್’ಗೈದ ಬೊಲೇರೊ!! | ಬೊಲೇರೊದಲ್ಲಿದ್ದ ಅಧಿಕಾರಿಗಳ್ಯಾರು? Read More »

ಶುಕ್ರ ಗ್ರಹಕ್ಕೆ ಇಸ್ರೋ ಕಣ್ಣು!! | ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡ ಎಸ್. ಸೋಮನಾಥ್

ನವದೆಹಲಿ: ಇಸ್ರೋ ಗಮನ ಈಗ ಶುಕ್ರನ ಮೇಲಿದೆ. ಈ ಕುರಿತು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್‌. ಸೋಮನಾಥ್‌, “ಇಸ್ರೋ ಹಲವು ಮಿಷನ್‌ಗಳನ್ನು ಕೈಗೊಳ್ಳುತ್ತಿದೆ. ಈಗ ಸೌರವ್ಯೂಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹ ಎಂದೇ ಖ್ಯಾತಿಯಾದ ಶುಕ್ರ ಗ್ರಹದ ಅಧ್ಯಯನಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಶುಕ್ರಯಾನದ ಪೇಲೋಡ್‌ಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶುಕ್ರ ಗ್ರಹ ನೆರವಾಗಿದೆ. ಹಾಗಾಗಿ ಶುಕ್ರಯಾನವು ತುಂಬ ಆಸಕ್ತಿದಾಯಕ

ಶುಕ್ರ ಗ್ರಹಕ್ಕೆ ಇಸ್ರೋ ಕಣ್ಣು!! | ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡ ಎಸ್. ಸೋಮನಾಥ್ Read More »

ಹುದ್ದೆ ತೋರಿಸಿದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ಪ್ರಕರಣಕ್ಕೆ ಕೋರ್ಟ್ ಟ್ವಿಸ್ಟ್…

ಬೆಂಗಳೂರು: ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ಇದು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ರೂಪಾ ಮೌದ್ಗಿಲ್ ಅವರು ಫೇಸ್‌ಬುಕ್, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಹಾಗಾಗಿ, ಅವರಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ನಗರದ

ಹುದ್ದೆ ತೋರಿಸಿದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ಪ್ರಕರಣಕ್ಕೆ ಕೋರ್ಟ್ ಟ್ವಿಸ್ಟ್… Read More »

‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’: ಮತ್ತೊಮ್ಮೆ ಬಯಲು ಮಾಡಿದ ಎನ್.ಐ.ಎ. | ಖಲಿಸ್ತಾನಿ- ಪಾಕ್ ನಂಟಿನ ಮಾಹಿತಿಯೂ ಬಹಿರಂಗ!!

ಹೊಸದಿಲ್ಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ‘ರಾಜತಾಂತ್ರಿಕ ಸಮರ’ ಮುಂದುವರಿದಿರುವ ಹೊತ್ತಿನಲ್ಲಿಯೇ ‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’ ಎಂಬ ವಾದ ಎನ್‌ಐಎ ತನಿಖೆಯಿಂದ ಇನ್ನಷ್ಟು ಬಲಗೊಂಡಿದೆ. ಖಲಿಸ್ತಾನ್- ಗ್ಯಾಂಗ್‌ಸ್ಟರ್‌ಗಳ ನಂಟನ್ನು ಕತ್ತರಿಸಲು ಹೊರಟಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪಂಜಾಬ್, ಹರ್ಯಾಣ, ದಿಲ್ಲಿ- ಎನ್‌ಸಿಆರ್, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದೆ. ಖಲಿಸ್ತಾನಿ- ಪಾಕಿಸ್ತಾನದ ಐಎಸ್‌ಐ ಮತ್ತು ಗ್ಯಾಂಗ್‌ಸ್ಟರ್‌ಗಳ

‘ಕೆನಡಾ ಖಲಿಸ್ತಾನಿ ಉಗ್ರರ ಸ್ವರ್ಗ’: ಮತ್ತೊಮ್ಮೆ ಬಯಲು ಮಾಡಿದ ಎನ್.ಐ.ಎ. | ಖಲಿಸ್ತಾನಿ- ಪಾಕ್ ನಂಟಿನ ಮಾಹಿತಿಯೂ ಬಹಿರಂಗ!! Read More »

error: Content is protected !!
Scroll to Top