ರೈಲು ಬಡಿದು ಟ್ರ್ಯಾಕ್ ಮ್ಯಾನ್ ನವೀನ್ ಮೃತ್ಯು | ಕೆಲ ಸಮಯದ ಹಿಂದಷ್ಟೇ ಕೆಲಸಕ್ಕೆ ಸೇರಿದ ನವೀನ್

ಕಾಸರಗೋಡು: ರೈಲು ಹಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ರೈಲು ಬಡಿದು ಟ್ರ್ಯಾಕ್ ಮ್ಯಾನ್ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಆಂಧ್ರ ಪ್ರದೇಶದ ನವೀನ್ (26)ಮೃತಪಟ್ಟವರು. ಕುಂಬಳೆ ಸಮೀಪದ ಶಿರಿಯ ಸೇತುವೆ ಬಳಿ ಘಟನೆ ನಡೆದಿದ್ದು, ಬಂದ್ಯೋಡು ಮುಟ್ಟಂನಿಂದ ಶಿರಿಯ ತನಕ ಹಳಿ ತಪಾಸಣೆಗೆ ನವೀನ್‌ಗೆ ನೀಡಲಾಗಿತ್ತು. ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್ ರೈಲು ಬಡಿದಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ, ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು, […]

ರೈಲು ಬಡಿದು ಟ್ರ್ಯಾಕ್ ಮ್ಯಾನ್ ನವೀನ್ ಮೃತ್ಯು | ಕೆಲ ಸಮಯದ ಹಿಂದಷ್ಟೇ ಕೆಲಸಕ್ಕೆ ಸೇರಿದ ನವೀನ್ Read More »

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪ.ಪೂ ಕಾಲೇಜಿನ ನಿಹಾಲ್ ರಾಜ್ ಗೆ ಬೆಳ್ಳಿ ಪದಕ

ಪುತ್ತೂರು: ಬಿಹಾರದ ಸರಸ್ವತಿ ವಿದ್ಯಾಮಂದಿರ ಬೆಟ್ಟಯ್ಯದಲ್ಲಿ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ ರಾಜ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ. ಅವರು ಕಬಕ ನಿವಾಸಿ ಬಿ. ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪ.ಪೂ ಕಾಲೇಜಿನ ನಿಹಾಲ್ ರಾಜ್ ಗೆ ಬೆಳ್ಳಿ ಪದಕ Read More »

ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಸ್ತ್ರ ವಿತರಣೆ, ಸಹಭೋಜನ | ಯಾವುದೇ ರಾಜಕೀಯ ಪಕ್ಷ, ಧರ್ಮ, ಜಾತಿ ಬೇಧವಿಲ್ಲ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸಹಭೋಜನ ಕಾರ್ಯಕ್ರಮದ ಅಂಗವಾಗಿ ಈ ಬಾರಿ 50 ಸಾವಿರ ಮಂದಿಗೆ ವಸ್ತವಿತರಣೆ ಮಾಡಲಾಗುವುದು. ಅದಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ರೈ ರೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿ ವಸ್ತ್ರ ವಿತರಣೆ ಅಂಗವಾಗಿ ಮಹಿಳೆಯರಿಗೆ ಸೀರೆ ಹಾಗೂ ಪುರುಷರು ಮತ್ತು ಮಕ್ಕಳಿಗೆ

ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಸ್ತ್ರ ವಿತರಣೆ, ಸಹಭೋಜನ | ಯಾವುದೇ ರಾಜಕೀಯ ಪಕ್ಷ, ಧರ್ಮ, ಜಾತಿ ಬೇಧವಿಲ್ಲ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ Read More »

ಕುಸಿದು ಬಿದ್ದು ವಿದ್ಯಾರ್ಥಿನಿ ಉಷಾ ಮೃತ್ಯು

ಚಿಕ್ಕಮಗಳೂರು: ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಉಷಾ (13) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು 108 ಆಂಬುಲೆನ್ಸ್ ಮೂಲಕ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.  ಮೃತ ಉಷಾ ಹಲವು ವರ್ಷಗಳಿಂದ ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದಳು ಎಂದು ವಸತಿ ಶಾಲೆಯ

ಕುಸಿದು ಬಿದ್ದು ವಿದ್ಯಾರ್ಥಿನಿ ಉಷಾ ಮೃತ್ಯು Read More »

ಸರಕಾರಿ ಶಾಲಾ ಶಿಕ್ಷಕರ ಕೊರತೆ ಪರಿಹರಿಸಲಾಗಿದೆ | ಕಕ್ಕೂರು ಸ. ಹಿ. ಪ್ರಾ. ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಪರಿಹರಿಸಲಾಗಿದೆ. ಮಾತ್ರವಲ್ಲದೆ ಶಾಲೆಗಳಿಗೆ ವಿಷಯವಾರು ಶಿಕ್ಷಕರ ನೇಮಕಾತಿಯೂ ನಡೆದಿದ್ದು ಗುಣಮಟ್ಡದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಸರಕಾರಿ ಹಿಪ್ರಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ‘ಸೃಜನ ದರ್ಶನ’ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆ ಇರಬೇಕಾಗಿದೆ. ಶಿಕ್ಷಕರೊಳಗೆ ಪರಸ್ಪರ ಹೊಂದಾಣಿಕೆಯ ಕೊರತೆ ಇದ್ದಲ್ಲಿ‌ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೊಂದಾಣಿಕೆಯಲ್ಲಿ

ಸರಕಾರಿ ಶಾಲಾ ಶಿಕ್ಷಕರ ಕೊರತೆ ಪರಿಹರಿಸಲಾಗಿದೆ | ಕಕ್ಕೂರು ಸ. ಹಿ. ಪ್ರಾ. ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ Read More »

ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ | ಮುಖ್ಯ ಪೇದೆಯ ಬಂಧನ

ಚಿಕ್ಕಬಳ್ಳಾಪುರ:  ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮುಖ್ಯ ಪೇದೆಯೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಹೊರಠಾಣೆಯ ಮುಖ್ಯಪೇದೆ ಸಿದ್ದರಾಮರೆಡ್ಡಿ ಬಂಧಿತ ಆರೋಪಿ. ಬೆಳಗ್ಗೆ ವೇಳೆ ಪೊಲೀಸ್‌ ಡ್ಯೂಟಿ ಮಾಡೋದು, ರಾತ್ರಿಯಾಗುತ್ತಿದ್ದಂತೆ ಕಳ್ಳತನದ ಡ್ಯೂಟಿ ಮಾಡುತ್ತಿದ್ದ ಮುಖ್ಯಪೇದೆ ಸಿದ್ದರಾಮರೆಡ್ಡಿ ಇದೀಗ ಬಂಧಿಸಿ ಅಟ್ಟಲಾಗಿದೆ. ಪೊಲೀಸಪ್ಪನೇ ಕಳ್ಳತನಕ್ಕೆ ಇಳಿಯೋದೂ ಅಲ್ಲದೆ; ಎಂಓಬಿ ಅಪರಾಧಿಯೊಬ್ಬನನ್ನು ಕೂಡ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಈ ಘನಂಧಾರಿ ಪೊಲೀಸಪ್ಪ ಎಂಬುದು ಮತ್ತಷ್ಟು ಬೇಸರದ ಸಂಗತಿ. ಕೇರಳ ಮತ್ತು

ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ | ಮುಖ್ಯ ಪೇದೆಯ ಬಂಧನ Read More »

ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ವಸ್ತ್ರ ವಿತರಣೆ | ಕೊಂಬೆಟ್ಟು ಕ್ರೀಡಾಂಗಣದಲ್ಲಿ ಚಪ್ಪರ ಮುಹೂರ್ತ

ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆಂಡ್  ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.13 ರಂದು ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರ ವಿತರಣೆ ಹಾಗೂ ಸಹಭೋಜನಾ ಕಾರ್ಯಕ್ರಮವು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು ಚಪ್ಪರ ಮುಹೂರ್ತ ಸೋಮವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ ಮುಖ್ಯಸ್ಥರಾದ ಸುಮಾ ಅಶೋಕ್ ರೈ, ಸೀತಾರಾಮ ರೈ ಹೆಗ್ಗಡೆ ಹಿತ್ತಿಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,

ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ವಸ್ತ್ರ ವಿತರಣೆ | ಕೊಂಬೆಟ್ಟು ಕ್ರೀಡಾಂಗಣದಲ್ಲಿ ಚಪ್ಪರ ಮುಹೂರ್ತ Read More »

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ | ಕೊಲೆ ಆರೋಪದಲ್ಲಿ ಕಾರು ಚಾಲಕ ಕಿರಣ್ ಬಂಧನ

ಬೆಂಗಳೂರು: ಸರ್ಕಾರಿ ಕರ್ತವ್ಯದಲ್ಲಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಕೊಲೆಗೆ ಸಂಬಂಧಪಟ್ಟಂತೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದ್ದು, ಪ್ರತಿಮಾ ಅವರ ಹಿಂದಿನ ಕಾರು ಚಾಲಕನೊಬ್ಬ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸುಬ್ರಮಣ್ಯ ಠಾಣೆಯ ಪೊಲೀಸ್ ಅಧಿಕಾರಿಗಳು ಕಾರು ಚಾಲಕ ಕಿರಣ್ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣನೇ ಹತ್ಯೆ ಮಾಡಿರಬಹುದು ಎಂಬ ಶಂಕೆ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ | ಕೊಲೆ ಆರೋಪದಲ್ಲಿ ಕಾರು ಚಾಲಕ ಕಿರಣ್ ಬಂಧನ Read More »

ಸ್ಕೂಟರ್-ಜೀಪು ಅಪಘಾತ | ಸ್ಕೂಟರ್ ಹಿಂಬದಿ ಸವಾರ ಇಫ್ರಾಝ್ ಮೃತ್ಯು

ಕಾಸರಗೋಡು: ಸ್ಕೂಟರ್ – ಜೀಪು ನಡುವೆ ಅಪಘಾತ ಸಂಭವಿಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾಸರಗೋಡಿನ ಪೈವಳಿಕೆಯಲ್ಲಿ ನಡೆದಿದೆ. ಪೈವಳಿಕೆ ಲಾಲ್ ಬಾಗ್ ನಿವಾಸಿ ಇಫ್ರಾಝ್ ಮೃತಪಟ್ಟ ವಿದ್ಯಾರ್ಥಿ. ಈತ ಉಪ್ಪಳ ತಹಾನಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಗೆಳೆಯನೊಂದಿಗೆ ಮಸೀದಿಯಿಂದ ಮರಳುತ್ತಿದ್ದಾಗ ಮನೆ ಸಮೀಪವೇ ಈ ಅಪಘಾತ ನಡೆದಿದೆ. ಮುಂಭಾಗದಲ್ಲಿ ತೆರಳುತ್ತಿದ್ದ ಜೀಪು ತಿರುವೊಂದರಲ್ಲಿ ಏಕಾಏಕಿ ಬ್ರೇಕ್ ಹಾಕಿದೆ. ಆಗ ಹಿಂಭಾಗದಲ್ಲಿ ಬರುತ್ತಿದ್ದ ಸ್ಕೂಟರ್ ಜೀಪಿಗೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.

ಸ್ಕೂಟರ್-ಜೀಪು ಅಪಘಾತ | ಸ್ಕೂಟರ್ ಹಿಂಬದಿ ಸವಾರ ಇಫ್ರಾಝ್ ಮೃತ್ಯು Read More »

ಮೊಗಪ್ಪೆ- ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಪುತ್ತೂರು: ಮಾಡುವ ಕೆಲಸ ಚೆನ್ನಾಗಿರಬೇಕು. ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಪರಿಶೀಲನೆ ಮಾಡಬೇಕು, ಅರ್ದಂಬರ್ಧಕಾಮಗಾರಿ ನಡೆಸಿ ಸ್ಥಳ ಖಾಲಿ ಮಾಡಬಾರದು. ಯಾರಿಗೂ ಪರ್ಸಂಟೇಜ್ ಕೊಡ್ಲಿಕ್ಕೆ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ. ಅವರು ಕೊಳ್ತಿಗೆ ಗ್ರಾಮದ ಮೊಗಪ್ಪ-ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಜನರ ದುಡ್ಡಿನ ಹಣದಿಂದಲೇ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂಬ ಪರಿಜ್ಞಾನ ಗುತ್ತಿಗೆದಾರನಿಗೆ ಇರಬೇಕು. ಅವರಿಗೆ ಕೊಡ್ಲಿಕ್ಕೆ , ಇವರಿಗೆ ಕೊಡ್ಲಿಕ್ಕೆ ಇದೆ

ಮೊಗಪ್ಪೆ- ಕುರ್ಲಪ್ಪಾಡಿ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ Read More »

error: Content is protected !!
Scroll to Top