140 ಕೋಟಿ ರೂ. ಜಾಹೀರಾತು ಮೊತ್ತ ಬಾಕಿ!! | ಸಚಿವರ ಪತ್ರದಿಂದ ಬಹಿರಂಗವಾಯ್ತು ರಾಜ್ಯ ಸರಕಾರದ ಪ್ರಚಾರ ವೈಖರಿ!!

ಬೆಂಗಳೂರು: ಗ್ಯಾರೆಂಟಿ ಭಾಗ್ಯಗಳನ್ನು ನೀಡಿರುವ ರಾಜ್ಯ ಸರ್ಕಾರ ಪ್ರಚಾರಕ್ಕೂ ದೊಡ್ಡ ಮೊತ್ತವನ್ನು ವಿನಿಯೋಗಿಸಿದೆ ಎನ್ನುವ ಅಂಶ ಇದೀಗ ಬಯಲಾಗಿದೆ. ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಉಲ್ಲೇಖಿಸಿದ್ದಾರೆ. ಅದರಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಅಧಿಕಾರಕ್ಕೇರಿ ಕೇವಲ ನಾಲ್ಕು ತಿಂಗಳಲ್ಲಿ ಅದೆಷ್ಟು ಮೊತ್ತದ ಜಾಹೀರಾತನ್ನು ನೀಡಿರಬಹುದು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಪತ್ರದಲ್ಲಿ ತಿಳಿಸಿರುವಂತೆ –“ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ […]

140 ಕೋಟಿ ರೂ. ಜಾಹೀರಾತು ಮೊತ್ತ ಬಾಕಿ!! | ಸಚಿವರ ಪತ್ರದಿಂದ ಬಹಿರಂಗವಾಯ್ತು ರಾಜ್ಯ ಸರಕಾರದ ಪ್ರಚಾರ ವೈಖರಿ!! Read More »

ವಿಜ್ಞಾನದಿಂದ ಬದುಕು ಸುಲಲಿತ | ವಿಜ್ಞಾನ ರಶ್ಮಿ ಉದ್ಘಾಟಿಸಿ ಸವಣೂರು ಸೀತಾರಾಮ ರೈ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023ನೇ ಸಾಲಿನ ಗ್ರಾಮೀಣ ವಿಜ್ಞಾನ ಮೇಳವಾದ ವಿಜ್ಞಾನ ರಶ್ಮಿ ಜರುಗಿತು. ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನವೇ ಒಂದು ವಿಜ್ಞಾನ. ವಿಜ್ಞಾನವನ್ನು ಸಮರ್ಪಕವಾಗಿ ತಿಳಿದುಕೊಂಡಾಗ ಬದುಕು ಸುಲಲಿತವಾಗುತ್ತದೆ. ಆದ್ದರಿಂದ ವಿಜ್ಞಾನವನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಭಕ್ತಕೋಡಿಯ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೋಹನ್ ಕುಮಾರ್ ಮಾತನಾಡಿ, ವಿದ್ಯಾರಶ್ಮಿಯ ಸಾರ್ವಜನಿಕ ಕಾಳಜಿ ಅಭಿನಂದನೀಯ. ಸಂಸ್ಥೆಯ ಬಹುಮುಖಿ ಕಾರ್ಯಚಟುಟಿಕೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಒಂದು

ವಿಜ್ಞಾನದಿಂದ ಬದುಕು ಸುಲಲಿತ | ವಿಜ್ಞಾನ ರಶ್ಮಿ ಉದ್ಘಾಟಿಸಿ ಸವಣೂರು ಸೀತಾರಾಮ ರೈ Read More »

ಹಾಲಿನ ದರ ಏರಿಸಲು ಕೆ.ಎಂ.ಎಫ್ ಸಿದ್ಧತೆ!!

ಬೆಂಗಳೂರು: ಹಾಲಿನ ದರ ಮತ್ತೊಮ್ಮೆ ಏರಿಕೆ ಮಾಡುವ ಕುರಿತು ಕೆಎಂಎಫ್ ಮುಂದಾಗಿದೆ ಎಂದು ತಿಳಿದುಬಂದಿದೆ. ಒಕ್ಕೂಟಗಳು ನಷ್ಟದಲ್ಲಿರುವ ಕಾರಣ ನೀಡಿ ಹಾಲಿನ ದರ ಪರಿಷ್ಕರಣೆ ಮಾಡಲು ಹೊರಟಿದ್ದು. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಮುಂದಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ

ಹಾಲಿನ ದರ ಏರಿಸಲು ಕೆ.ಎಂ.ಎಫ್ ಸಿದ್ಧತೆ!! Read More »

ಬೆಳ್ತಂಗಡಿ ಮೂಲದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ!

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿ ಲೀಲಾವತಿ (85) ಅವರು ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಕೆಲವು ಸಮಯಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಳಿಕ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತೀರಾ ಹದಗೆಟ್ಟಿದ್ದು, ಚಿತ್ರರಂಗದ ಹಲವು ನಟರು ಆಗಮಿಸಿ ಆರೋಗ್ಯ ವಿಚಾರಿಸಿದ್ದರು. 1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಜನಿಸಿದ್ದ ಲೀಲಾವತಿ ಅವರು ಕನ್ನಡ, ತೆಲುವು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ, ರಾಜ್ಯದ ಮನೆಮಾತಾಗಿದ್ದರು. ನಾಗಕನ್ನಿಕೆ ಚಿತ್ರದ

ಬೆಳ್ತಂಗಡಿ ಮೂಲದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ! Read More »

ಆರ್ಟಿಕಲ್ 370 ರದ್ದು: ಡಿ. 11ರಂದು ತೀರ್ಪು!

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಸಂವಿಧಾನ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದೆ. ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿ ಹಲವು ಅರ್ಜಿಗಳು ದಾಖಲಾಗಿತ್ತು. ಇವುಗಳ ವಿಚಾರಣೆ ನಡೆಸಿರುವ ಸುಪ್ರೀಂ, ತೀರ್ಪನ್ನು ಡಿ. 11ಕ್ಕೆ ಕಾಯ್ದಿರಿಸಿದೆ. ಕೇಂದ್ರ ಸರಕಾರ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿ ಐತಿಹಾಸಿಕ ನಿರ್ಧಾರವನ್ನು ಘೋಷಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ,

ಆರ್ಟಿಕಲ್ 370 ರದ್ದು: ಡಿ. 11ರಂದು ತೀರ್ಪು! Read More »

ಬೇಲ್ ಪಡೆದು ಆ್ಯಸಿಡ್ ದಾಳಿ ನಡೆಸಿದ ಅತ್ಯಾಚಾರದ ಆರೋಪಿ!!

ಅತ್ಯಾಚಾರ ನಡೆಸಿದ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಮಧ್ಯದೆಹಲಿಯಲ್ಲಿ ನಡೆದಿದೆ. ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅತ್ಯಾಚಾರ ಆರೋಪಿಯನ್ನು ಪ್ರೇಮ್ ಸಿಂಗ್‌ ಎಂದು ಗುರುತಿಸಲಾಗಿದೆ. ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಗುರುವಾರ ಸಂಜೆ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ

ಬೇಲ್ ಪಡೆದು ಆ್ಯಸಿಡ್ ದಾಳಿ ನಡೆಸಿದ ಅತ್ಯಾಚಾರದ ಆರೋಪಿ!! Read More »

ಸಿಎಂ ತವರಲ್ಲಿ ಜೀತಪದ್ದತಿ ಪತ್ತೆ!!

ಸಿಎಂ ತವರು ಜಿಲ್ಲೆಯಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ನೇಪಾಳ ದೇಶದ ತಾಯಿ ಮಕ್ಕಳನ್ನು ಜೀತ ಪದ್ದತಿಗೆ ತಳ್ಳಿ ದುಡಿಸಲಾಗುತ್ತಿತ್ತು. ಇದೀಗ ಅವರ ರಕ್ಷಣೆ ಮಾಡಲಾಗಿದೆ. ಎಚ್.ಡಿ ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದಲ್ಲಿ ಈರೇಗೌಡ ಎಂಬಾತ ತನ್ನ ಜಮೀನಿನಲ್ಲಿ ಕೆಲಸಕ್ಕೆ ನೇಪಾಳ ಮೂಲದ ನಿರ್ಮಲಾ ಎಂಬ ಮಹಿಳೆ, ಆಕೆಯ ಪತಿ ಮತ್ತು ಮಕ್ಕಳನ್ನು ಜೀತಕ್ಕಿರಿಸಿದ್ದ. ಕಳೆದ ಒಂದೂವರೆ ವರ್ಷದಿಂದ ಜೀತ ಮಾಡಿಕೊಂಡಿದ್ದರು. ಜೀತಪದ್ಧತಿ ವಿರೋಧಿಸಿದ್ದಕ್ಕೆ ಪತ್ನಿಯಿಂದ ಪತಿಯನ್ನು ದೂರ

ಸಿಎಂ ತವರಲ್ಲಿ ಜೀತಪದ್ದತಿ ಪತ್ತೆ!! Read More »

ಲೋಕಸಭೆಯಿಂದ ಟಿಎಂಸಿಯ ಮಹುವಾ ಮೊಹಿತ್ರಾ ಉಚ್ಛಾಟನೆ!

ಹೊಸದಿಲ್ಲಿ: ಕೆಲವು ದಿನಗಳಿಂದ ಚರ್ಚೆಯಲ್ಲಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಹಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಮಹುವಾ ಮೊಹಿತ್ರಾ ಉಚ್ಛಾಟನೆಗೆ ನೈತಿಕ ಸಮಿತಿಯು ಶಿಫಾರಸು ಮಾಡಿತ್ತು. ಸಂಸತ್ ನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಹಿತ್ರಾ ಹಣ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ಸಂಸತ್ತಿನ ನೈತಿಕ ಸಮಿತಿಯು ಈ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಅವರನ್ನು ತಪ್ಪಿತಸ್ಥರೆಂದು ವರದಿ ನೀಡಿದೆ. ಅಲ್ಲದೆ ಸಂಸತ್ತಿನ ಕೆಳಮನೆಯಿಂದ ಅವರನ್ನು ಹೊರಹಾಕಲು ಶಿಫಾರಸು ಮಾಡಿತು. ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಮಂಡಿಸಿದ ಮಹುವಾ ಮೊಹಿತ್ರಾ ಅವರನ್ನು

ಲೋಕಸಭೆಯಿಂದ ಟಿಎಂಸಿಯ ಮಹುವಾ ಮೊಹಿತ್ರಾ ಉಚ್ಛಾಟನೆ! Read More »

ಡಿ. 9: ವಿದ್ಯಾಸರಸ್ವತಿ ಮಂದಿರದ ಕ್ರೀಡಾಕೂಟ, ಕ್ರೀಡಾ ಕೊಠಡಿ ಉದ್ಘಾಟನೆ

ಪುತ್ತೂರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ವಾರ್ಷಿಕ ಕ್ರೀಡಾಕೂಟ ಹಾಗೂ ನೂತನ ಕ್ರೀಡಾ ಕೊಠಡಿ ಉದ್ಘಾಟನಾ ಸಮಾರಂಭ ಡಿ. 9ರ ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಉದ್ಯಮಿ ಸಂತೋಷ್ ಕುಮಾರ್ ಕೈಕಾರ ಕ್ರೀಡಾಕೂಟ ಉದ್ಘಾಟಿಸಲಿದ್ದು, ಪುಂಡಿಕಾಯಿ ಪುರೋಹಿತರಾದ ಕೃಷ್ಣ ಶಗ್ರಿತ್ತಾಯ ಕ್ರೀಡಾ ಕೊಠಡಿಯನ್ನು ಉದ್ಘಾಟಿಸುವರು. ವಿದ್ಯಾ ಮಂದಿರದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಡಿ. 9: ವಿದ್ಯಾಸರಸ್ವತಿ ಮಂದಿರದ ಕ್ರೀಡಾಕೂಟ, ಕ್ರೀಡಾ ಕೊಠಡಿ ಉದ್ಘಾಟನೆ Read More »

ಎದೆಯ ಭಾಗದಿಂದಲೇ ಹರಿದ ಬಸ್!! | ಸ್ಥಳದಲ್ಲೇ ಕೊನೆಯುಸಿರೆಳೆದ ಕುಂಞಿರಾಮ ಮಣಿಯಾಣಿ!

ಪುತ್ತೂರು: ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಗಾಳಿಮುಖದಲ್ಲಿ ನಡೆದಿದ್ದು, ಮೃತಪಟ್ಟವರನ್ನು ಕುಂಞಿರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ. ಕೃಷಿಕರಾಗಿದ್ದ ಕುಂಞಿರಾಮ ಮಣಿಯಾಣಿ ಅವರು ಮುಳ್ಳೇರಿಯಾದ ಕೋಳಿಕಾಲ ನಿವಾಸಿ. ಗಾಳಿಮುಖಕ್ಕೆ ಬಂದಿದ್ದ ಅವರು, ಬಸ್ಸಿನಿಂದ ಇಳಿದು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ದುರ್ಘಟನೆ ನಡೆದಿದೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವವರಿದ್ದರು. ಅಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಬಸ್ ಹರಿದಿದೆ. ತಾನು ಬಂದಿದ್ದ

ಎದೆಯ ಭಾಗದಿಂದಲೇ ಹರಿದ ಬಸ್!! | ಸ್ಥಳದಲ್ಲೇ ಕೊನೆಯುಸಿರೆಳೆದ ಕುಂಞಿರಾಮ ಮಣಿಯಾಣಿ! Read More »

error: Content is protected !!
Scroll to Top