ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ | ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಮೃತ್ಯು

ಕೇರಳ: ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಆಯೇಷಾ ರಿದಾ (13) ಹಾಗೂ ಫಾತಿಮಾ ಮೊಹಿನಾ (11) ಮೃತಪಟ್ಟವರು. ಮೃತ ವಿದ್ಯಾರ್ಥಿಗಳು ಕಲ್ಪಕಂಚೇರಿ ಕಲ್ಲಿಂಗಪರಮ್ ಎಂ.ಎಸ್‍.ಎಂ.ಎಚ್‍.ಎಸ್‍. ತಿರುರು ಉಪಜಿಲಾ ಶಾಲೆಯ ಒಂಬತ್ತು ಮತ್ತು ಆರನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ. ನಿಲಂಬೂರ್ ಕರುಳ್ಳೆ ವನಂ ರೇಂಜ್‌ನ ನೆಡುಂಕಯಾಟ್ ಸೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಪಾಲ್ಗೊಳ್ಳಲು ಶಾಲೆಯ 49 ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರ […]

ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ | ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಮೃತ್ಯು Read More »

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ | ಅಗ್ರಪೂಜೆ ತಾಳಮದ್ದಳೆ

ಉಪ್ಪಿನಂಗಡಿ:  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ ಪ್ರಯುಕ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ  ಸರಣಿಯಲ್ಲಿ ಅಗ್ರಪೂಜೆ  ತಾಳಮದ್ದಲೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ಸುರೇಶ್ .ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಕುಂಬ್ಳೆ ಶ್ರೀಧರ ರಾವ್ (ಭೀಷ್ಮ), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಧರ್ಮರಾಯ),  ದಿವಾಕರ ಆಚಾರ್ಯ ಗೇರುಕಟ್ಟೆ (ಸಹದೇವ ಮತ್ತು  ಶ್ರೀ ಕೃಷ್ಣ), ಗೋಪಾಲ ಶೆಟ್ಟಿ ಕಳೆಂಜ (ಭೀಮ), ಗೀತಾ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ | ಅಗ್ರಪೂಜೆ ತಾಳಮದ್ದಳೆ Read More »

ಫೆ.15: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಕುರಿತು ಸಮಾಲೋಚನಾ ಸಭೆ

ಪುತ್ತೂರು: ಹಿರಿಯ ವಿದ್ವಾಂಸರು, ವಿಮರ್ಶಕರೂ ಆಗಿರುವ ಲಕ್ಷ್ಮೀಶ ತೋಳ್ಪಾಡಿ  ಅವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮನ್ನು ಆಯೋಜಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಫೆ.15 ಗುರುವಾರ 4 ಗಂಟೆಗೆ ಅನುರಾಗ ವಠಾರದಲ್ಲಿ ನಡೆಯಲಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ, ಹಿರಿಯ ಸಾಹಿತಿ ಪುರಂದರ ಭಟ್ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಲಭಿಸಿದ ಪ್ರಶಸ್ತಿ ಕೇವಲ

ಫೆ.15: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಕುರಿತು ಸಮಾಲೋಚನಾ ಸಭೆ Read More »

ಯುವ ಒಕ್ಕಲಿಗ ಗೌಡ ಸಂಘದ ‘ಯುವ ಕ್ರೀಡಾ ಸಂಭ್ರಮ-2024’ | ಕ್ರೀಡಾಜ್ಯೋತಿ  ವಾಹನ ಜಾಥಾಕ್ಕೆ ಚಾಲನೆ

ಪುತ್ತೂರು: ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಆತಿಥ್ಯದಲ್ಲಿ ಪುತ್ತೂರು ತಾಲೂಕು ಮಟ್ಟದ ‘ಯುವ ಕ್ರೀಡಾ ಸಂಭ್ರಮ-2024’ದ ಕ್ರೀಡಾಜ್ಯೋತಿ ವಾಹನ ಜಾಥಾಕ್ಕೆ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು. ಪ್ರಗತಿಪರ ಕೃಷಿಕೆ ಯಶೋಧ ಮೋನಪ್ಪ ಗೌಡ ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಜ್ಯೋತಿ  ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಚಾಲನೆ ನೀಡಿದರು. ಬಳಿಕ ಕ್ರೀಡಾಜ್ಯೋತಿಯನ್ನು ಕ್ರೀಡಾ ಸಂಭ್ರಮ ನಡೆಯುವ ತೆಂಕಿಲ ವಿವೇಕಾನಂದ

ಯುವ ಒಕ್ಕಲಿಗ ಗೌಡ ಸಂಘದ ‘ಯುವ ಕ್ರೀಡಾ ಸಂಭ್ರಮ-2024’ | ಕ್ರೀಡಾಜ್ಯೋತಿ  ವಾಹನ ಜಾಥಾಕ್ಕೆ ಚಾಲನೆ Read More »

ಹೆಸರಿಗಾಗಿ ಮಾತ್ರ ಕೆಡ್ಡಸ ಆಚರಣೆ ಆಗಬಾರದು | ಒಕ್ಕಲಿಗ ಗೌಡ ಸಂಘದ ಮಹಿಳಾ ಘಟಕದಿಂದ ನಡೆದ ಕೆಡ್ಡಸ ಆಚರಣೆ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಉಷಾ

ಪುತ್ತೂರು: ಕೆಡ್ಡಸವನ್ನು ಕೇವಲ ಹೆಸರಿಗಾಗಿ ಮಾತ್ರ ಆಚರಣೆ ಮಾಡಬಾರದು. ಬದಲಾಗಿ ಕಾಯಾ-ವಾಚಾ-ಮನಸಾ ಆಚರಣೆಯಲ್ಲಿ ಒಳಗೊಂಡಿರಬೇಕು. ಆಗ ಪ್ರತೀ ಮನೆಯಲ್ಲಿ ಕೆಡ್ಡಸ ಆಚರಣೆ ಮಹತ್ವ ಪಡೆಯಲು ಸಾಧ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕಿ ಉಷಾ ಅಭಿಪ್ರಾಯಪಟ್ಟರು. ಅವರು ಶನಿವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಒಕ್ಕಲಿಗ ಗೌಡ ಸೇವಾ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಕೆಡ್ಡಸ ಆಚರಣೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣಿಗೆ ಹೇಗೆ ವಿಶೇಷ ಗೌರವ ನೀಡುತ್ತಾರೋ ಹಾಗೇ

ಹೆಸರಿಗಾಗಿ ಮಾತ್ರ ಕೆಡ್ಡಸ ಆಚರಣೆ ಆಗಬಾರದು | ಒಕ್ಕಲಿಗ ಗೌಡ ಸಂಘದ ಮಹಿಳಾ ಘಟಕದಿಂದ ನಡೆದ ಕೆಡ್ಡಸ ಆಚರಣೆ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಉಷಾ Read More »

ಫೆ.20-21 ಬ್ರಹ್ಮರಕೋಡಿ ಕುಟುಂಬ ತರವಾಡು ಮನೆಯ ಧರ್ಮದೈವ, ಪರಿವಾರ ದೈವಗಳ ಪುನಃ ಪ್ರತಿಷ್ಠೆ | ಫೆ.27-28 : ನೇಮೋತ್ಸವ

ಪುತ್ತೂರು: ಬ್ರಹ್ಮರಕೋಡಿ ಕುಟುಂಬದ ತರವಾಡು ಮನೆಯ ಧರ್ಮದೈವ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠೆ ಫೆ.20 ಹಾಗೂ 21 ರಂದು ಮತ್ತು ನೇಮೋತ್ಸವ ಫೆ.27 ಹಾಗೂ 28 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಹಾಗೂ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.20 ರಂದು ಸಂಜೆ 4 ಕ್ಕೆ ತಂತ್ರಿಗಳ ಆಗಮನ, ಸಂಜೆ 6 ರಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪುಣ್ಯಹಾಂತ ನಡೆಯಲಿದೆ. ಫೆ.21

ಫೆ.20-21 ಬ್ರಹ್ಮರಕೋಡಿ ಕುಟುಂಬ ತರವಾಡು ಮನೆಯ ಧರ್ಮದೈವ, ಪರಿವಾರ ದೈವಗಳ ಪುನಃ ಪ್ರತಿಷ್ಠೆ | ಫೆ.27-28 : ನೇಮೋತ್ಸವ Read More »

ಗ್ರಾಮೀಣ ಜನತೆಯ ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿದೆ | ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಸರಕಾರಿ ಕಚೇರಿಯಿಂದ ಕಚೇರಿಗೆ ಅಲೆಯುವ ಕೆಲಸ ಪ್ರಸ್ತುತ ದಿನಗಳಲ್ಲಿ ಕಷ್ಟಸಾಧ್ಯವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿರುವುದು ಶ್ಲಾಘನೀಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಶನಿವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಂಟಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ   ಮಾತನಾಡಿದರು. ಕಳೆದ ಬಾರಿ ನೆರೆ ಬಂದು

ಗ್ರಾಮೀಣ ಜನತೆಯ ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿದೆ | ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ Read More »

ಸವಣೂರು ವಿದ್ಯಾರಶ್ಮಿಯಲ್ಲಿ ಯು.ಕೆ.ಜಿ. ಯ ಘಟಿಕೋತ್ಸವ

ಸವಣೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೇ ಸಾಲಿನ ಯು.ಕೆ.ಜಿ. ತರಗತಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನವನ್ನು ಏರ್ಪಡಿಸಲಾಯಿತು. ಸಮಾರಂಭವನ್ನು ಕಸ್ತೂರಿಕಲಾ ಎಸ್. ರೈ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಯಾಗಿ ಆರೆಲ್ತಡಿ ಅಂಗನವಾಡಿ ಶಿಕ್ಷಕಿ ಮಮತಾ ಸಿ. ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ, ಮಕ್ಕಳನ್ನು ರೂಪಿಸುವ ಕೆಲಸ ಕೇವಲ ಶಾಲೆಯದ್ದು ಮಾತ್ರವಲ್ಲ. ಬದಲಿಗೆ ಅದು ಶಿಕ್ಷಕರು ಮತ್ತು ಪೋಷಕರು ಇಬ್ಬರಿಗೂ ಸೇರಿದ್ದು. ಎರಡೂ ಕೈ ಸೇರಿದಾಗ ಚಪ್ಪಾಳೆ ಆಗುವಂತೆ ಶಾಲೆ

ಸವಣೂರು ವಿದ್ಯಾರಶ್ಮಿಯಲ್ಲಿ ಯು.ಕೆ.ಜಿ. ಯ ಘಟಿಕೋತ್ಸವ Read More »

ಇನ್ಸಾಟ್ -3ಡಿಎಸ್ ಬಾಹ್ಯಾಕಾಶ ನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು | ಫೆ.17 ರಂದು ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಿಎಸ್‌ಎಲ್ವಿ-ಎಫ್ 14 ಮಿಷನ್ ಭಾಗವಾಗಿ, ಇನ್ಸಾಟ್ -3 ಡಿಎಸ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಫೆ.17 ರಂದು ಸಂಜೆ 5:30 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ. ಈ ಮೂಲಕ ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ನ 16ನೇ ಹಾರಾಟ ಮಾಡಲಿದ್ದು, ಜ.25, 2024 ರಂದು ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ತರಲಾಗಿದೆ. ಇನ್ಸಾಟ್-3ಡಿಎಸ್ ಹವಾಮಾನ

ಇನ್ಸಾಟ್ -3ಡಿಎಸ್ ಬಾಹ್ಯಾಕಾಶ ನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು | ಫೆ.17 ರಂದು ಉಡಾವಣೆ Read More »

ಹಿಂಜಾವೇ ಮುಖಂಡರ ಗಡಿಪಾರು | ಉಪವಿಭಾಗೀಯ ದಂಡಾಧಿಕಾರಿಯವರ ನೋಟೀಸ್ ಗೆ ನ್ಯಾಯಾಲಯದಿಂದ ತಡೆ

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮುಖಂಡರ ಗಡಿಪಾರಿಗೆ ಸಂಬಂಧಿಸಿದಂತೆ ಉಪವಿಭಾಗೀಯ ದಂಡಾಧಿಕಾರಿಯವರ ನೋಟೀಸ್ ಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆ ನೀಡಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ದಿನೇಶ್ ಪಂಜಿಗ ಮತ್ತು ಬೆಳ್ತಂಗಡಿಯ ಯಶೋಧರ ಅವರಿಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಉಪವಿಭಾಗೀಯ ದಂಡಾಧಿಕಾರಿ ನೋಟೀಸ್ ಜಾರಿ ಮಾಡಿದ್ದರು. ನೀವು

ಹಿಂಜಾವೇ ಮುಖಂಡರ ಗಡಿಪಾರು | ಉಪವಿಭಾಗೀಯ ದಂಡಾಧಿಕಾರಿಯವರ ನೋಟೀಸ್ ಗೆ ನ್ಯಾಯಾಲಯದಿಂದ ತಡೆ Read More »

error: Content is protected !!
Scroll to Top