ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ

ಉಪ್ಪಿನಂಗಡಿ: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಉಪ್ಪಿನಂಗಡಿ ಹೋಬಳಿ ಘಟಕದ   ಅಧ್ಯಕ್ಷ ಕರುಣಾಕರ ಸುವರ್ಣ ಹಾಗೂ  ಇತರ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ್ ಕುಮಾರ್ ಅವರ ಮನೆಯ ಮಣಿ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಮಹಾಭಾರತ ಅನುಸಂಧಾನ’ ಕುರಿತು ದತ್ತಿ ನಿಧಿ ಉಪನ್ಯಾಸವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ  ತೋಳ್ಪಾಡಿ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಶ್ರೀ […]

ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ Read More »

ನ್ಯೂಸ್ ಪುತ್ತೂರು ತಂಡದಿಂದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವಾ ಕಾರ್ಯ | ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ನಳಿಲು ದೇವಸ್ಥಾನ

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಸಂಸ್ಥೆಯ ಮೂಲಕ ಟ್ರಸ್ಟ್ ಅಧ್ಯಕ್ಷರು ಹಾಗೂ ನಿರ್ದೇಶಕರಿಂದ ಕೊಳ್ತಿಗೆ ಗ್ರಾಮದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಸೇವಾ ಕಾರ್ಯ ನಡೆಯಿತು. ಭಾನುವಾರ ಸಂಜೆ ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗಾಗಿ ತರಕಾರಿ ಹಚ್ಚುವ ಕೆಲಸದೊಂದಿಗೆ ಸೇವಾ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಹಾಗೂ ಎಲ್ಲಾ ನಿರ್ದೇಶಕರು ಮತ್ತು ನ್ಯೂಸ್ ಪುತ್ತೂರಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಕಾರ್ಯಕ್ಕೆ ಬ್ರಹ್ಮಕಲಶೋತ್ಸವ

ನ್ಯೂಸ್ ಪುತ್ತೂರು ತಂಡದಿಂದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವಾ ಕಾರ್ಯ | ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ನಳಿಲು ದೇವಸ್ಥಾನ Read More »

ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು : ಶ್ರದ್ದಾ ಕೇಂದ್ರಗಳ ಅಭಿವೃದ್ದಿಯಾದರೆ ಆ ಊರು ಸುಭಿಕ್ಷೆಯಾಗುತ್ತದೆ. ದೇವಾಲಯಗಳ ಬ್ರಹ್ಮಕಲಶೋತ್ಸವದಲ್ಲಿ ಪ್ರತಿಯೊಬ್ಬರು  ಭಾಗವಹಿಸಿ ತನ್ನದೆ ಆದ ಸೇವೆ ನೀಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ, ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.  ಅವರು  ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ರಾತ್ರಿ  ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಧಾರ್ಮಿಕ ಕೇಂದ್ರಗಳಲ್ಲಿನ ನಿರಂತರ ಧಾರ್ಮಿಕ ಚಟುವಟಿಕೆ  ಧರ್ಮದ ಉಳಿವಿಗೆ ಕಾರಣವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯುತ್ತಾ   ದೇವರ ಕಾರ್ಯದಲ್ಲಿ ತನ್ನನ್ನು

ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ Read More »

ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ : ನಳಿನ್ ಕುಮಾರ್ ಕಟೀಲ್

ಮಂಗಳೂರು:  ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು  ಕಾರ್ಯಾಗಾರ ನಡೆಸುವುದಾಗಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದ್ದು, ಇದರ ಉದ್ದೇಶ ಏನು ? ಕಾರ್ಯಾಗಾರ ನಡೆಸುವವರು ಯಾರು ? ಎನ್ನುವ ಆತಂಕ ಸಹಜವಾಗಿಯೇ ಜನರಲ್ಲಿ ಮೂಡಿದೆ ಎಂದು ಸಂಸ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಜೆಟ್ ಭಾಷಣದಲ್ಲಿ ಸಾಮಾನ್ಯವಾಗಿ ಅರ್ಥಿಕ ಸಂಪನ್ಮೂಲ ಕ್ರೋಡೀಕರಣ ಮತ್ತು ಅಭಿವೃದ್ದಿ ಯೋಜನೆಗಳಿಗೆ ಹಣ ಹಂಚಿಕೆ ಬಗ್ಗೆ ರಾಜ್ಯದ ಜನತೆಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ದ್ವೇಷದ

ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ : ನಳಿನ್ ಕುಮಾರ್ ಕಟೀಲ್ Read More »

ಜೆಬಿಎಫ್ ಉದ್ಯೋಗಿಗಳಿಗೆ ಜಿಎಂಪಿಎಲ್ (ಗೇಲ್-ಇಂಡಿಯಾ) ನಲ್ಲಿ ಶೀಘ್ರದಲ್ಲೇ ಖಾಯಂ ಉದ್ಯೋಗ | ಕೇಂದ್ರ ಪೆಟ್ರೋಲಿಯಂ ಸಚಿವರ ಭರವಸೆ

ಮಂಗಳೂರು: ನವದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪೂರಿಯವರನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರು ಭೇಟಿಯಾಗಿ ಮಂಗಳೂರಿನ ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರಿಗೆ ನೇರವಾಗಿ ಖಾಯಂ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದರು. ಜೆಬಿಎಫ್ ಉದ್ಯೋಗಿಗಳ ಬೇಡಿಕೆಯನ್ನು ಸಚಿವರಿಗೆ ವಿವರವಾಗಿ ಮನವರಿಕೆ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ಸಕರಾತ್ಮಕ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ

ಜೆಬಿಎಫ್ ಉದ್ಯೋಗಿಗಳಿಗೆ ಜಿಎಂಪಿಎಲ್ (ಗೇಲ್-ಇಂಡಿಯಾ) ನಲ್ಲಿ ಶೀಘ್ರದಲ್ಲೇ ಖಾಯಂ ಉದ್ಯೋಗ | ಕೇಂದ್ರ ಪೆಟ್ರೋಲಿಯಂ ಸಚಿವರ ಭರವಸೆ Read More »

ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸೇವಾ ಚಟುವಟಿಕೆಯ ಅಂಗವಾಗಿ ಟ್ರಸ್ಟ್  ಮತ್ತು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಜೊತೆಯಾಗಿ ಹೃದಯದ ಸಮಸ್ಯೆಯಿಂದ ಬಳಲುತಿರುವ ಕೊರಗಪ್ಪ ನಾಯ್ಕ ಬರೆಕೋಲಾಡಿ ಅವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಸುಮಾರು 25,750 ರೂ. ಸಹಾಯಧನ ನೀಡಲಾಯಿತು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚೆಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯ  ಅಶೋಕ್ ಕುಮಾರ್ ಪುತ್ತಿಲ, ಮುಂಡೂರು ಹಾಲು ಉತ್ಪದಕ ಸಹಕಾರ

ಚಿಕಿತ್ಸೆಗೆ ಸಹಾಯಧನ ಹಸ್ತಾಂತರ Read More »

ದ.ಕ.ಜಿಲ್ಲೆಯ ಲೋಕಸಭಾ ಚುನಾವಣೆಗೆ ಮೂವರ ಹೆಸರು ಪಟ್ಟಿಯಲ್ಲಿ | ಯಾರಿಗೆ ಸೀಟು ಒಲಿಯಲಿದೆ : ಕಾದು ನೋಡಬೇಕಾಗಿದೆ | ದ.ಕ. ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಶತಪ್ರಯತ್ನ

ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡದಿಂದ ಮೂವರು ಹೆಸರು ಈಗಾಗಲೇ ಕೇಳಿ ಬರುತ್ತಿದ್ದು, ಹಿರಿಯ ಮುಖಂಡ ಮಾಜಿ ಸಚಿವ ಬಿ. ರಮಾನಾಥ ರೈ, ಯುವ ಮುಖಂಡ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಯುವ ಕಾಂಗ್ರೆಸ್ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್ ಗೌಡ ಬುಡ್ಲೆಗುತ್ತು. ಈ ಮೂವರಲ್ಲಿ ಒಬ್ಬರನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಜಿಲ್ಲೆಯ 8 ವಿದಾನಸಭಾ ಕ್ಷೇತ್ರದ ಬ್ಲಾಕ್ ಗಳು ರಮಾನಾಥ ರೈ ಹೆಸರನ್ನು ಶಿಫಾರಸ್ಸು ಮಾಡಿ

ದ.ಕ.ಜಿಲ್ಲೆಯ ಲೋಕಸಭಾ ಚುನಾವಣೆಗೆ ಮೂವರ ಹೆಸರು ಪಟ್ಟಿಯಲ್ಲಿ | ಯಾರಿಗೆ ಸೀಟು ಒಲಿಯಲಿದೆ : ಕಾದು ನೋಡಬೇಕಾಗಿದೆ | ದ.ಕ. ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಶತಪ್ರಯತ್ನ Read More »

ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ

ಪುತ್ತೂರು: ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಶನಿವಾರ ಅನಾವರಣ ಮಾಡಲಾಯಿತು. ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಭಾವಚಿತ್ರ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಸುಲೋಚನಾ, ರಾಮಣ್ಣ ನಾಯ್ಕ್, ಎಫ್. ಡಿ. ಎ. ಆಗಿರುವ ದಯಾನಂದ ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ Read More »

ಫೆ.22: ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ

ಪೆರ್ನೆ: ಪೆರ್ನೆ ಗ್ರಾಮದ ಮಾಡತ್ತಾರು ಕೊರತಿಕಟ್ಟೆ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಫೆ.22 ಗುರುವಾರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಹಲವು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವ ಹಾಗೂ ನಾಗ ಸನ್ನಿಧಿಯಲ್ಲಿ  ಫೆ.22 ರಂದು ಬೆಳಿಗ್ಗೆ 8.30 ಕ್ಕೆ ದೇವತಾಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ , ನಾಗಬನದಲ್ಲಿ

ಫೆ.22: ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ Read More »

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ ಕ್ಕೆ ಚಾಲನೆ | ಫೆ.29 ರ ತನಕ ನಡೆಯಲಿದೆ ಕರಿಮಣಿ ಉತ್ಸವ

ಪುತ್ತೂರು:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ’ಕ್ಕೆ ಫೆ.16 ರಂದು ಚಾಲನೆ ನೀಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾ ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಾಂಗಲ್ಯದಲ್ಲಿ ಮಂಗಲ ಶಬ್ಧವಿದೆ. ಮಂಗಲವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸಿದಾಗಲೇ ಮುತ್ತೈದೆಭಾಗ್ಯದ ಜೊತೆಗೆ ಗೃಹಿಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ ಕ್ಕೆ ಚಾಲನೆ | ಫೆ.29 ರ ತನಕ ನಡೆಯಲಿದೆ ಕರಿಮಣಿ ಉತ್ಸವ Read More »

error: Content is protected !!
Scroll to Top