ಈ ಬಾರಿ ಶಾಲಾರಂಭ ವಿಳಂಬ | ಬೇಸಿಗೆ ರಜೆ ಜೂನ್ 2ನೇ ವಾರದವರೆಗೂ ವಿಸ್ತರಣೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬದ ಹಿನ್ನಲೆಯಲ್ಲಿ ಈ ಭಾರಿ ಬೇಸಿಗೆವಿಸ್ತರಣೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಬಿರು ಬೇಸಿಗೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೀರಿನ ಕೊರತೆ ಕಾಡುತ್ತಿದೆ‌. ಈ ಹಿನ್ನಲೆಯಲ್ಲಿ ಬೇಸಿಗೆ ರಜೆಯನ್ನು ಜೂ.10 ರ ತನಕ ವಿಸ್ತಿರಿಸುವ ನಿರೀಕ್ಷೆಯಿದೆ. ಪ್ರತಿಭಾರಿ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು. ರಿವಿಸನ್ ಹಾಗೂ ಶಾಲಾ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸುವ ಕಾರಣಕ್ಕೆ ಶಾಲಾ ಆರಂಭೋತ್ಸವ, ಶಾಲೆಗೆ ದಾಖಲೀಕರಣದಂತಹ […]

ಈ ಬಾರಿ ಶಾಲಾರಂಭ ವಿಳಂಬ | ಬೇಸಿಗೆ ರಜೆ ಜೂನ್ 2ನೇ ವಾರದವರೆಗೂ ವಿಸ್ತರಣೆ ಸಾಧ್ಯತೆ Read More »

ಕ್ಯಾ.ಬ್ರಿಜೇಶ್ ಚೌಟರಿಗೆ ಉಪ್ಪಿನಂಗಡಿ ಸಿ.ಎ.ಬ್ಯಾಂಕ್‍ ನಿಂದ ಗೌರವ

ಉಪ್ಪಿನಂಗಡಿ: ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಭೇಟಿ ನೀಡಿದರು. ಈ ವೇಳೆ ಸಂಘದ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚುನಾವಣಾ ಉಸ್ತುವಾರಿ ಚನಿಲ ತಿಮ್ಮಪ್ಪ ಶೆಟ್ಟಿ, ಮುಖಂಡ ಚಂದ್ರಶೇಖರ ರಾವ್ ಬಪ್ಪಳಿಗೆ,  ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಪ್ರಮುಖರು, ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನಿಲ್ ದಡ್ಡು ಹಾಗೂ

ಕ್ಯಾ.ಬ್ರಿಜೇಶ್ ಚೌಟರಿಗೆ ಉಪ್ಪಿನಂಗಡಿ ಸಿ.ಎ.ಬ್ಯಾಂಕ್‍ ನಿಂದ ಗೌರವ Read More »

ಫಲಿತಾಂಶವನ್ನೇ ಬದಲಿಸಬಲ್ಲ ಶಕ್ತಿ ಒಂದು ಮತಕ್ಕಿದೆ | ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಲಕ್ಷ್ಮೀಕಾಂತ ರೈ

ಪುತ್ತೂರು: ಮತದಾನದ ದಿನ ನಾನೊಬ್ಬ ಮತದಾನ ಮಾಡದಿದ್ದರೆ ಏನೂ ಆಗದು ಎಂಬ ಭಾವನೆ ಹಲವರಲ್ಲಿದೆ. ಆದರೆ ನಮ್ಮ ಒಂದು ಮತ ಫಲಿತಾಂಶವನ್ನೇ ಬದಲಿಸಬಲ್ಲ ಶಕ್ತಿಯನ್ನು ಹೊಂದಿದೆ. ಇದು ಪ್ರಜೆಗಳ ಹಕ್ಕಾಗಿದ್ದು, ಕರ್ತವ್ಯವೂ ಆಗಿದೆ. ತಪ್ಪದೇ ಮತದಾನ ಮಾಡುತ್ತೇನೆಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು. ಅವರು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಪುತ್ತೂರು

ಫಲಿತಾಂಶವನ್ನೇ ಬದಲಿಸಬಲ್ಲ ಶಕ್ತಿ ಒಂದು ಮತಕ್ಕಿದೆ | ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಲಕ್ಷ್ಮೀಕಾಂತ ರೈ Read More »

ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅರಿಯಡ್ಕ ದಲ್ಲಿ ನಡೆದಿದೆ. ಅರಿಯಡ್ಕದ ದಿ.ಅಣ್ಣಯ್ಯ ನಾಯ್ಕರ ಪುತ್ರ ಕೃಷ್ಣಪ್ಪ (55) ಮೃತಪಟ್ಟವರು. ಮನೆಯ ಹತ್ತಿರದ ತೋಟದಲ್ಲಿ ಮರವೊಂದರ ಗೆಲ್ಲು ಕಡಿಯುತ್ತಿರುವ ಸಂದರ್ಭ ಮರದಿಂದ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಮೃತರು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನಿಂದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢ ಶಾಲೆ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ  ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ಮಾ.23 ರಂದು ನಡೆಯಿತು. ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುತ್ತಿದ್ದ ಶಾಸಕ ಅಶೋಕ್ ರೈ ಯವರು ಶಾಸಕರಾದ ಬಳಿಕ ಎಲ್ಲಾ ರಂಗದಲ್ಲೂ ತನ್ನ ಸೇವೆ

ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನಿಂದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ Read More »

ಮಾಸ್ಕೋದಲ್ಲಿ ಉಗ್ರರ ದಾಳಿ ಖಂಡನೀಯ : ನಿಮ್ಮೊಂದಿಗೆ ನಾವಿದ್ದೇವೆ | ಪ್ರಧಾನಿ ನರೇಂದ್ರ ಮೋದಿಯಿಂದ ಟ್ವೀಟ್

ರಷ್ಯಾದ ಮಾಸ್ಕೋದಲ್ಲಿ ರಾಕ್‍ ಮ್ಯೂಸಿಕ್ ನಡೆಯುವ ಸಂದರ್ಭ ನಡೆಸಿದ ಉಗ್ರರ ದಾಳಿಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು,  ರಷ್ಯಾದ ಜೊತೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಶುಕ್ರವಾರ ರಷ್ಯಾದ ಮಾಸ್ಕೋದ ಮಾಲ್ ಒಂದರದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಏಕಾಏಕಿ ಉಗ್ರರು ಭದ್ರತಾ ಸಿಬ್ಬಂದಿಗಳು ಕೊಂದು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಮಹಿಳೆಯರು ಎನ್ನದೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಸುಮಾರು 70 ಕ್ಕೂ ಅಧಿಕ ಮಂದಿ ಹತರಾಗಿದ್ದು, 150 ಕ್ಕೂ ಅಧಿಕ ಮಂದಿ

ಮಾಸ್ಕೋದಲ್ಲಿ ಉಗ್ರರ ದಾಳಿ ಖಂಡನೀಯ : ನಿಮ್ಮೊಂದಿಗೆ ನಾವಿದ್ದೇವೆ | ಪ್ರಧಾನಿ ನರೇಂದ್ರ ಮೋದಿಯಿಂದ ಟ್ವೀಟ್ Read More »

ತಮಕೂರಿನಲ್ಲಿ ಸುಟ್ಟ ಕಾರಿನಲ್ಲಿ ಮೂವರ ಶವ ಪತ್ತೆ | ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸರ ವಶಕ್ಕೆ

ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ಮೂವರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಸಹಿತ ಇತರ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ತುಮಕೂರಿನ ಕೆರೆಯೊಂದರ ಬಳಿ ಸುಟ್ಟು ಕರಕಲಾದ ಕಾರಿನಲ್ಲಿ ಬೆಳ್ತಂಗಡಿ ಮೂಲದ ಆಟೋ ಚಾಲಕ ಸಾಹುಲ್ ಹಮೀದ್ (45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್ (56) ಹಾಗೂ ಶಿರ್ಲಾಲು ಗ್ರಾಮದ ಸಿದ್ದಿಕ್ (34)

ತಮಕೂರಿನಲ್ಲಿ ಸುಟ್ಟ ಕಾರಿನಲ್ಲಿ ಮೂವರ ಶವ ಪತ್ತೆ | ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸರ ವಶಕ್ಕೆ Read More »

ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಮೃತ್ಯು

ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಂತೂರಿನಲ್ಲಿ ನಡೆದಿದೆ. ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ (29) ಮೃತಪಟ್ಟವರು. ಶಮಿತ್ ನಿನ್ನೆ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ದೈವದ ಕೋಲವೊಂದರಲ್ಲಿ ಪಾಲ್ಗೊಂಡು ತೊಕ್ಕೊಟ್ಟಿನ ಮನೆಗೆ ಕಾರಿನಲ್ಲಿ ಹಿಂತಿರುಗುತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್‍ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ

ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಮೃತ್ಯು Read More »

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ : ವಿವಿಧ ವೈದಿಕ ಕಾರ್ಯಕ್ರಮಗಳು

ಪುತ್ತೂರು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಶ್ರೀ ಚಕ್ರ ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಶ್ವಾನಶಾಂತಿ, ಅದ್ಭುತ ಶಾಂತಿ, ಚೋರಶಾಂತಿ ಹೋಮಾದಿಗಳು ಜರಗಿತು. ಮಧ್ಯಾಹ್ನ 12 ಕ್ಕೆ ಕಲಶಾಭಿಷೇಕ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಸಂಜೆ 5.30 ರಿಂದ ಅಂಕುರಪೂಜೆ, ಶ್ರೀ ಚಕ್ರಪೂಜೆ, ಮಂಟಪ ಸಂಸ್ಕಾರ, ಮಹಾಪೂಜೆ ಮುಂತಾದ ವಿವಿಧ ವೈದಿಕ ಕಾರ್ಯಕ್ರಮಗಳು

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ : ವಿವಿಧ ವೈದಿಕ ಕಾರ್ಯಕ್ರಮಗಳು Read More »

ರಷ್ಯಾದ ಮಾಸ್ಕೋ ಮಾಲ್‍ನಲ್ಲಿ ಉಗ್ರರ ದಾಳಿ | 40 ಮಂದಿ ಮೃತ್ಯು, ಹಲವಾರು ಮಂದಿಗೆ ಗಾಯ

ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ ಉಗ್ರ ದಾಳಿ ನಡೆಸಿದ್ದರ ಪರಿಣಾಮ 40 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಮುಂಬೈ ಉಗ್ರರ ದಾಳಿ ಮಾದರಿ ಇದಾಗಿದ್ದು, ರಾಕ್ ಮ್ಯೂಸಿಕ್ ನಡೆಯುತ್ತಿದ್ದ ಮಾಲ್’ಗೆ ದಾಳಿ ನಡೆಸಿದ 4-5 ಮಂದಿಯಿದ್ದ ಉಗ್ರ ಗುಂಫು ಯದ್ವಾತದ್ವಾ ಗುಂಡು ಹಾರಿಸಿದೆ. ಘಟನೆಯಿಂದ ಸುಮಾರು 40 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಐಸಿಸ್ ಘಟನೆಯ‌ ಹೊಣೆ ಹೊತ್ತಿದೆ. ಎರಡು ದಶಕಗಳ ನಂತರ ನಡೆದ‌ ದೊಡ್ಡ ಘಟನೆ ಇದಾಗಿದ್ದು, ಓರ್ವ ಉಗ್ರನನ್ನು‌ ಸೆರೆಹಿಡಿಯಲಾಗಿದೆ. ಘಟನೆಯಿಂದ ಕಟ್ಟಡದಲ್ಲಿ

ರಷ್ಯಾದ ಮಾಸ್ಕೋ ಮಾಲ್‍ನಲ್ಲಿ ಉಗ್ರರ ದಾಳಿ | 40 ಮಂದಿ ಮೃತ್ಯು, ಹಲವಾರು ಮಂದಿಗೆ ಗಾಯ Read More »

error: Content is protected !!
Scroll to Top