ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಚೂರಿ ಇರಿತ

ಉಪ್ಪಿನಂಗಡಿ : ಕಾರಿನಲ್ಲಿ ಬಂದ ತಂಡವೊಂದು ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿಳಿಯೂರು ಗ್ರಾಮದ ಕರ್ವೇಲು ಬಳಿ ಎ.12ರಂದು ನಡೆದಿದೆ. ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಇವರು ಜಂಕ್ಷನ್ ಬಳಿ ನಿಂತಿದ್ದ ಸಂದರ್ಭ ಅಲ್ಲಿಗೆ ಕಾರಿನಲ್ಲಿ ಬಂದ ತಂಡ ಚೂರಿಯಿಂದ ಇರಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.ಚೂರಿ ಇರಿತಕ್ಕೆ ಒಳಗಾಗಿ, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಚೂರಿ ಇರಿತ Read More »

ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ಕೊಲೆಯತ್ನ

 ಪುತ್ತೂರು: ಸವಣೂರಿನಲ್ಲಿ ಸಂಬಂಧಿಕರ ಮಧ್ಯೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪಂಚಾಯತ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರತಿದೂರು ದಾಖಲಾಗಿದೆ. ಸವಣೂರು ಗ್ರಾಮದ ಪ್ರಕಾಶ ಎಂ ಎಂಬವರು ದೂರು ನೀಡಿ, ತನ್ನ ತಂದೆ ಕೃಷ್ಣಪ್ಪ ಗೌಡರಿಗೆ ಹಾಗೂ ಪ್ರಕರಣದ ಆರೋಪಿ ದಯಾನಂದರವರಿಗೆ ರಸ್ತೆಯ ವಿಚಾರದಲ್ಲಿ ತಕರಾರಿದ್ದು,ಎ. 10 ರಂದು ರಾತ್ರಿ ತನ್ನ ತೋಟದಲ್ಲಿ ಹಳೇಯ ಬೋರ್‌ವೆಲ್ ಕೆಲಸ ಮಾಡುತ್ತಿದ್ದಾಗ, ಆರೋಪಿ ದಯಾನಂದ ಮತ್ತು ಆತನ ಪತ್ನಿ, ನನ್ನ

ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ಕೊಲೆಯತ್ನ Read More »

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ

ಕನಕಮಜಲು: ಕನಕಮಜಲು ಗ್ರಾಮದ ಸುಣ್ಣಮೂಲೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.  ನೇಣು ಬಿಗಿದುಕೊಂಡ ವ್ಯಕ್ತಿ ಬಾಬಣ್ಣ ಎಂದು ಗುರುತಿಸಲಾಗಿದೆ.ಕೋಳಿ ಅಂಗಡಿಯ ಹತ್ತಿರದಲ್ಲಿ ಇವರ ರೂಮ್ ಇದ್ದು ಅಲ್ಲಿಂದ ಕೋಳಿ ಅಂಗಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು ರೂಮ್ ನಲ್ಲಿ ಇವರು ಒಬ್ಬರೇ ವಾಸಿಸುತ್ತಿದ್ದರು. ಇದೀಗ ಸ್ಥಳಕ್ಕೆ ಪೋಲಿಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ Read More »

ಮಾನವ ಹಕ್ಕು ಆಯೋಗಕ್ಕೆ ಹಂಗಾಮಿ ಅಧ್ಯಕ್ಷ  ನೇಮಕ: ಡಾ. ಟಿ. ಶ್ಯಾಮ್ ಭಟ್

ಬೆಂಗಳೂರು : ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹಂಗಾಮಿ ಅಧ್ಯಕ್ಷರನ್ನಾಗಿ ಆಡಳಿತಾತ್ಮಕ ಸದಸ್ಯರಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ. ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯಪಾಲರು ಡಾ. ಟಿ. ಶ್ಯಾಮ್ ಭಟ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಮುಂದಿನ ಆದೇಶದವರೆಗೆ  ಶ್ಯಾಮ್ ಭಟ್ ಅಧ್ಯಕ್ಷ ಹುದ್ದೆಯಲ್ಲಿರಲಿದ್ದಾರೆ ಎಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಎಸ್ ಸಂಗ್ರೇಶಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಎಸ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ

ಮಾನವ ಹಕ್ಕು ಆಯೋಗಕ್ಕೆ ಹಂಗಾಮಿ ಅಧ್ಯಕ್ಷ  ನೇಮಕ: ಡಾ. ಟಿ. ಶ್ಯಾಮ್ ಭಟ್ Read More »

ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ  ಏಕಾಹ ಭಜನೋತ್ಸವದ ಸಂಭ್ರಮ

ಕಡಬ : ಕಡಬದಲ್ಲಿ ಜರಗುವ ಏಕಾಹ ಭಜನಾ ಮಹೋತ್ಸವ ಜಿಲ್ಲೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಊರ ಜಾತ್ರೆಯಂತೆ ನಡೆಯುವ ಈ ಏಕಾಹ ಭಜನೆಗೆ ಶುಕ್ರವಾರದಂದು ಜನ ಸಾಗರವೇ ಹರಿದು ಬಂದಿದೆ.  ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನಡೆಯುವ ಈ ಏಕಾಹ ಭಜನೋತ್ಸವದ ಸಂಭ್ರಮದಲ್ಲಿ ದ.ಕ.ಜಿಲ್ಲೆಯ ಹಲವು ಕಡೆಗಳಿಂದ ಭಜನಾ ಸಂಘಗಳು ಕಡಬದ ಏಕಾಹ ಭಜನೆಗೆ ಆಗಮಿಸಿ ಭಜನಾ ಸೇವೆಯನ್ನು ಸಲ್ಲಿಸುವುದು ಇಲ್ಲಿನ ಮೆಚ್ಚಿಗೆಗೆ  ಪಾತ್ರವಾಗಿದೆ. ಏಕಾಹ ಭಜನೆ ಆರಂಭವಾದಗಿನಿಂದಲೂ  ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ

ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ  ಏಕಾಹ ಭಜನೋತ್ಸವದ ಸಂಭ್ರಮ Read More »

ಜಮೀನಿಗೆ ಅಕ್ರಮ ಪ್ರವೇಶ : ದೂರು ದಾಖಲು

ಕಡಬ : ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿಬೇಲಿ ಹಾಗೂ ತಡೆಗೋಡೆ ಧ್ವಂಸಗೈದ ಘಟನೆ ದೇವರಹಳ್ಳಿ ಏನೇಕಲ್ಲು ಗ್ರಾಮದಲ್ಲಿ ನಡೆದಿದೆ. ಏನೆಕಲ್ಲು ಗ್ರಾಮದ ನಿವಾಸಿ ರಜನಿರವರ ಏನೆಕಲ್ಲು ಗ್ರಾಮದಲ್ಲಿರುವ ಜಮೀನಿಗೆ ಗುರುವಾರ ಸಂಜೆ ಆರೋಪಿಗಳಾದ ರಾಮಣ್ಣ ಗೌಡ ಹಾಗೂ ಯದುಚಂದ್ರ ಎಂಬವರು ಅಕ್ರಮ ಪ್ರವೇಶಗೈದು, ಜಾಗದಲ್ಲಿದ್ದ ತಂತಿಬೇಲಿ ಹಾಗೂ ತಡೆಗೋಡೆಗಳನ್ನು ಜೆಸಿಬಿ ಮೂಲಕ ಬಲಾತ್ಕಾರವಾಗಿ ಧ್ವಂಸಗೊಳಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 447, 506 ಐಪಿಸಿಯಂತೆ ಪ್ರಕರಣ

ಜಮೀನಿಗೆ ಅಕ್ರಮ ಪ್ರವೇಶ : ದೂರು ದಾಖಲು Read More »

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ

ಸುಳ್ಯ: ಕಾರೊಂದು ಕ್ಯಾಂಟಿನ್‌ಗೆ ನುಗ್ಗಿದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪೆರಾಜೆ ಪೀಚೆಯ ಲಿಖಿತ್, ಪೀಚೆ ಸುಮನ್ ಹಾಗೂ ಹೋಟೆಲ್ ಮಾಲಕ ನೌಫಲ್ ಗಾಯಗೊಂಡವರು. ಕ್ಯಾಂಟಿನ್‌ಗೆ ನುಗ್ಗಿ ಡಿಕ್ಕಿ ಹೊಡೆದ ಕಾರಣ ಚಹಾ ಕುಡಿಯುತ್ತಿದ್ದ ಇಬ್ಬರು ಹಾಗೂ ಕ್ಯಾಂಟೀನ್ ಮಾಲಕರು ಗಾಯಗೊಂಡಿದ್ದಾರೆ. ಅರಂತೋಡು ಕಡೆಗೆ ಹೋಗಿದ್ದ ಪೀಚೆ ಮನೆ ಲಿಖಿತ್ ಮತ್ತು ಸುಮನ್  ನೌಫಲ್ ರ ಹೋಟೆಲ್ ನಲ್ಲಿ ಚಾ ಕುಡಿಯುತ್ತಿದ್ದ ವೇಳೆ  ವೇಗವಾಗಿ ಬಂದ ರಿಡ್ಜ್ ಕಾರು ಕ್ಯಾಂಟಿನ್ ಗೆ ನುಗ್ಗಿ ಅನಾಹುತ

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ | ದಶ ದಿಕ್ಕುಗಳಿಗೆ ಪೇಟೆ ಸವಾರಿ | ಭಕ್ತ ಸಮೂಹದಲ್ಲಿ ಸಂಭ್ರಮ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೈಭವದ ಜಾತ್ರೋತ್ಸವಕ್ಕೆ ಕಳೆದ ಮೂರು ದಿನಗಳ ಹಿಂದೆ ಚಾಲನೆ ನೀಡಲಾಗಿದ್ದು, ಪ್ರತಿದಿನ ರಾತ್ರಿ ಶ್ರೀ ದೇವರು ಒಂದೊಂದು ಕಡೆ ಪೇಟೆ ಸವಾರಿಗೆ ತೆರಳುವ ಮೂಲಕ ಆ ಪ್ರದೇಶದ ಭಕ್ತ ಸಮೂಹದಲ್ಲಿ ಸಂಭ್ರಮ ಮನೆ ಮಾಡಿದೆ. ಮನೆ ಬಾಗಿಲಿಗೆ ತೆರಳು ದೇವರು ಎಂದು ಪ್ರಸಿದ್ಧಿ ಪಡೆದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಪ್ರತಿನಿತ್ಯ ಸಂಜೆ ಶ್ರೀ ದೇವರ ಬಲಿ ಉತ್ಸವ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ | ದಶ ದಿಕ್ಕುಗಳಿಗೆ ಪೇಟೆ ಸವಾರಿ | ಭಕ್ತ ಸಮೂಹದಲ್ಲಿ ಸಂಭ್ರಮ Read More »

ವ್ಯಕ್ತಿತ್ವ ವಿಕಸನಕ್ಕೆ ಮೌಲ್ಯಾಧಾರಿತ ಶಿಕ್ಷಣವೇ ಅಡಿಪಾಯ – ಸ್ವಾಮಿ ವಿವೇಕ ಚೈತನ್ಯಾನಂದ | “ವಿವೇಕ ಸ್ಮೃತಿ” ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಇಂದು ಭಾರತ ಬದಲಾವಣೆಯತ್ತ ಗಮನ ಹರಿಸುತ್ತಿದೆಯಾದರೂ ನಾವು ಆಧ್ಯಾತ್ಮಿಕವಾಗಿ ಬದಲಾಗುತ್ತಿದ್ದೇವೆಯೇ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥತಿ ಇದೆ. ಭಾರತೀಯರು ಸನಾತನ ಧರ್ಮಿಗಳು. ನಮಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪ್ರತಿಯೊಂದು ಮಾನವನ ಜನ್ಮ ಭಗವಂತನ ಸಾಕ್ಷಾತ್ಕಾರವಾಗಿದೆ. ನಾವು ಯಾವುದೇ ಜಾತಿ-ಮತದ ಹಂಗಿಲ್ಲದೆ ಸತ್ಯ- ಧರ್ಮದಿಂದ ಬದುಕಿ ಇತರರಿಗೆ ಮಾದರಿಯಾಗಬೇಕು ಎಂದು ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು. ಅವರು ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, (ಸ್ವಾಯತ್ತ)ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ,

ವ್ಯಕ್ತಿತ್ವ ವಿಕಸನಕ್ಕೆ ಮೌಲ್ಯಾಧಾರಿತ ಶಿಕ್ಷಣವೇ ಅಡಿಪಾಯ – ಸ್ವಾಮಿ ವಿವೇಕ ಚೈತನ್ಯಾನಂದ | “ವಿವೇಕ ಸ್ಮೃತಿ” ಉಪನ್ಯಾಸ ಕಾರ್ಯಕ್ರಮ Read More »

ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಶುಕ್ರವಾರ ಪುತ್ತೂರು ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಮಹಾಬಲ ರೈ ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಕ್ಷೇತ್ರ ಯೋಜನಾಧಿಕಾರಿ ಶಶಿಧರ್ ಎಂ.

ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ Read More »

error: Content is protected !!
Scroll to Top