ಪ್ರಜ್ವಲ್ ರೈ ಗಡಿಪಾರು ಆದೇಶಕ್ಕೆ ನ್ಯಾಯಾಲಯ ತಡೆ

ಪುತ್ತೂರು : ಎ.ಆರ್. ವಾರಿಯರ್ಸ್ ಮುಖ್ಯಸ್ಥ ಪ್ರಜ್ವಲ್ ರೈ ಪಾತಾಜೆ ಅವರಿಗೆ ಗಡಿಪಾರು ಆದೇಶ ಹೊರಡಿಸಿ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗದ ದಂಡಾಧಿಕಾರಿಯವರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 55ರಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಅವರನ್ನು ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿತ್ತು. ರಾಜಕೀಯ ಪಕ್ಷವೊಂದರಲ್ಲಿ ಗುರುತಿಕೊಂಡಿರುವ ಪ್ರಜ್ವಲ್ ರೈ ಪಾತಾಜೆಯವರ ವಿರುದ್ದ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಸೇರಿದಂತೆ […]

ಪ್ರಜ್ವಲ್ ರೈ ಗಡಿಪಾರು ಆದೇಶಕ್ಕೆ ನ್ಯಾಯಾಲಯ ತಡೆ Read More »

ವಾಟ್ಸ್ಆ್ಯಪ್ ಬಳಕೆದಾರರಿಗೆ ಚಾಟ್ ಎನ್‍ ಕ್ರಿಪ್ಟ್ ಭೇದಿಸಲು ಹೊರಟ ಭಾರತ ಸರಕಾರ | ಭಾರತದಿಂದ ನಿರ್ಗಮಿಸುವುದಾಗಿ ದೆಹಲಿ ಹೈಕೋರ್ಟ್‍ ಗೆ ತಿಳಿಸಿದ ವಾಟ್ಸಪ್

ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಸೇವೆಯನ್ನ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಚಾಟ್ ಎನ್‌ಕ್ರಿಪ್ಟ್ ಅನ್ನು ಭೇದಿಸಲು ಹೊರಟಿದೆ. ಇದು ಬಳಕೆದಾರರಿಗೆ ಅಸುರಕ್ಷಿತವಾಗಿದೆ. ಈ ಹಿನ್ನಲೆಯಲ್ಲಿ  ಭಾರತದಿಂದ ನಿರ್ಗಮಿಸುವುದಾಗಿ ದೆಹಲಿ ಹೈಕೋರ್ಟ್‌ಗೆ ವಾಟ್ಸ್ ಆ್ಯಪ್ ತಿಳಿಸಿದೆ. ಭಾರತ ಸರ್ಕಾರ ವಾಟ್ಸ್ಆ್ಯಪ್ ಗೌಪ್ಯತೆಯ ದೃಷ್ಟಿಯ ವಿಚಾರವಾಗಿ ಹೋರಾಡುತ್ತಿದೆ. ಅದರಲ್ಲೂ ಚಾಟ್, ಕರೆ, ವೀಡಿಯೋ ಕರೆಗಳನ್ನು ಸುರಕ್ಷಿತವಾಗಿರಿಸಲು ವಾಟ್ಸ್ಆ್ಯಪ್ ಹೋರಾಡುತ್ತಲೇ ಬಂದಿದೆ. ಆದರೆ ಸರಕಾರ ಸಂದೇಶದ ಮೂಲವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಕೋರ್ಟ್ ಮೊರೆ ಹೋಗಿದೆ. ಮೆಟಾ-ಮಾಲೀಕತ್ವದ

ವಾಟ್ಸ್ಆ್ಯಪ್ ಬಳಕೆದಾರರಿಗೆ ಚಾಟ್ ಎನ್‍ ಕ್ರಿಪ್ಟ್ ಭೇದಿಸಲು ಹೊರಟ ಭಾರತ ಸರಕಾರ | ಭಾರತದಿಂದ ನಿರ್ಗಮಿಸುವುದಾಗಿ ದೆಹಲಿ ಹೈಕೋರ್ಟ್‍ ಗೆ ತಿಳಿಸಿದ ವಾಟ್ಸಪ್ Read More »

ಕೇಂದ್ರದಿಂದ ರಾಜ್ಯ ಸರಕಾರಕ್ಕೆ 3,454 ಕೋಟಿ ಬರ ಪರಿಹಾರ ಘೋಷಣೆ

ಬೆಂಗಳೂರು: ಕೇಂದ್ರ ಸರಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ನೆರೆ ಪರಿಹಾರವೆಂದು ತಮಿಳುನಾಡಿಗೆ 275 ಕೋಟಿ ರೂ. ಪರಿಹಾರ ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,174 ಕೋಟಿ ಹಣ ಬೇಡಿಕೆ ಇಟ್ಟಿತ್ತು. ಬೇಡಿಕೆ ಇಟ್ಟು ಇಷ್ಟು ದಿನಗಳು ಕಳೆದರೂ ಕೇಂದ್ರ ಸರಕಾರ ಬರ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಬಳಿಕ ಕೇಂದ್ರ ಸರಕಾರ ಬರ ಪರಿಹಾರ

ಕೇಂದ್ರದಿಂದ ರಾಜ್ಯ ಸರಕಾರಕ್ಕೆ 3,454 ಕೋಟಿ ಬರ ಪರಿಹಾರ ಘೋಷಣೆ Read More »

ಏ.28: ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ, ಹಾಗೂ ಪರಿವಾರ ದೈವಗಳ ನೇಮ ನಡಾವಳಿ ಏ.28 ಭಾನುವಾರ ರಂದು ನಡೆಯಲಿರುವುದು. ಏ.27 ರಂದು ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ ಗಂಟೆ 12 :15 ರಿಂದ ಸಂಜೆ ಗಂಟೆ 6:30 ರ ವರೆಗೆ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ರಂಗಪೂಜೆ ನಡೆಯಲಿದೆ. ಶ್ರೀ ದಂಡನಾಯಕ ದೈವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 10.30 ಕ್ಕೆ ಮಕರತೋರಣಾರೋಹಣ ರಾತ್ರಿ ಗಂಟೆ 7 ರಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು, ತಂಬಿಲಾದಿಗಳು ನಡೆದು ಪ್ರಸಾದ

ಏ.28: ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ʼಫಿಲೋ ಫೋರ್ಟೆ 2024ʼ

ಪುತ್ತೂರು: ಸಂತ ಫಿಲೋಮಿನಾ  ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ  ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ʼಫಿಲೋ ಫೋರ್ಟೆ-2024ʼ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ದೀಪ ಬೆಳಗಿಸಿ ಚಾಲನೆ ನೀಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ವಿದ್ಯಾರ್ಥಿ ಸಂಘದ ವತಿಯಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತಹ ವೇದಿಕೆ ಉದಯೋನ್ಮುಖ ಕಲಾವಿದರಿಗೆ ಅತಿ ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ನಿಯೋಜಿತ ಕಾರ್ಯಗಳು ಮುಂತಾದ ಒತ್ತಡಗಳಿದ್ದು ಈ ದಿನ ಯಾವುದೇ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ʼಫಿಲೋ ಫೋರ್ಟೆ 2024ʼ Read More »

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು

ಪುತ್ತೂರು : ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಕ್ರಂಪಾಡಿಯಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕ ಜೈಸನ್ (30) ಮೃತಪಟ್ಟವರು. ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ರಿಕ್ಷಾ ಮಧ್ಯೆ ಡಿಕ್ಕಿ  ಸಂಭವಿಸಿದೆ. ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದು ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು Read More »

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ

ಪುತ್ತೂರು:  ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ರಾಜ್ಯದಲ್ಲಿ ಶೇ.64.57 ಮತ ಚಲಾವಣೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿದಿತ್ತು. ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು- ಶೇ.72.69, ದಕ್ಷಿಣ ಕನ್ನಡ-ಶೇ.72.30, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ- ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು

ಲೋಕಸಭೆ ಚುನಾವಣೆ : ದ.ಕ. ಶೇ.72.30, ಉಡುಪಿ ಶೇ.72.69 ಮತ ಚಲಾವಣೆ | ಎಲ್ಲೆಡೆ ಶಾಂತಿಯುತ ಮತದಾನ Read More »

ಲೋಕಸಭೆ ಚುನಾವಣೆ : 164 ಬೂತ್‍ ಗಳಿಗೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ವಿಧಾನಸಭಾ ಕ್ಷೇತದ 164 ಬೂತ್‍ ಗಳಿಗೆ ಭೇಟಿ ನೀಡಿದರು. ಭೇಟಿ ನೀಡಿದ ಎಲ್ಲಾ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಯಿತು. ಈ ಮೂಲಕ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಲೋಕಸಭೆ ಚುನಾವಣೆ : 164 ಬೂತ್‍ ಗಳಿಗೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್

ಎಣ್ಮೂರು: ಎಣ್ಮೂರು ಗ್ರಾಮದ ಹೇಮಳ ಶಾಲಾ ಮತದಾನ ಕೇಂದ್ರದಲ್ಲಿ ಮತದಾನ ಕೇಂದ್ರದ ಒಳಗಾಗಲೀ, ಹೊರಗಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಇಲ್ಲದಿರುವ ಕುರಿತು ವರದಿಯಾಗಿದೆ. ಮತದಾನ ಕೇಂದ್ರದೊಳಗೆ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕಾದರೆ ಆ ಮತದಾನ ಕೇಂದ್ರಕ್ಕೆ ಒಳಪಟ್ಟ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆಗಬೇಕು. ಈ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಯಾರೂ ಕಾರ್ಯಕರ್ತರಿರದಿರುವ ಕಾರಣ ಕಾಂಗ್ರೆಸ್‌ಗೆ ಪೋಲಿಂಗ್ ಏಜೆಂಟ್ ಇಲ್ಲ. ಅದಲ್ಲದೆ ಮತದಾನ ಕೇಂದ್ರಕ್ಕಿಂತ 100 ಮೀಟರ್ ಅಂತರದಲ್ಲಿ ಪಕ್ಷ ಕಾರ್ಯಕರ್ತರು ಕುಳಿತು ಮತದಾರರಿಗೆ ಮಾಹಿತಿ ನೀಡಬಹುದಾದರೂ ಅಲ್ಲಿ

ಈ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪೋಲಿಂಗ್ ಏಜೆಂಟೇ ಇಲ್ಲ | ಯಾವ ಮತಗಟ್ಟೆ ? ಇಲ್ಲಿದೆ ಡಿಟೈಲ್ಸ್ Read More »

ಹಸೆಮಣೆ ಏರುವ ಮೊದಲು ಮತದಾನ ಮಾಡಿದ ಮದುಮಗಳು

ಪುತ್ತೂರು : ಹಸೆಮಣೆ ಏರುವ ಮೊದಲು ಮದುಮಗಳು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ರಿಪೋರ್ಟ‌ರ್ ಅಂಕಿತಾ ರೈ ಸಣಂಗಳರವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಹಸೆಮಣೆ ಏರುವ ಮೊದಲು ಮತದಾನ ಮಾಡಿದರು. ಕೆಯ್ಯೂರು ಬೂತ್ ಸಂಖ್ಯೆ 196ರಲ್ಲಿ ಮತ ಚಲಾಯಿಸಿದರು.

ಹಸೆಮಣೆ ಏರುವ ಮೊದಲು ಮತದಾನ ಮಾಡಿದ ಮದುಮಗಳು Read More »

error: Content is protected !!
Scroll to Top