ಮಳೆಗಾಗಿ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಪರ್ಜನ್ಯ ಜಪ

ಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನ‌ಸಂಕಷ್ಡ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ಶಾಸಕರ ಸೂಚನೆಯಂತೆ ಪರ್ಜನ್ಯ ಜ‌ಪ ಭಾನುವಾರ ನೆರವೇರಿತು. ಜಪ ಕಾರ್ಯಕ್ರಮದಲ್ಲಿ‌ಶಾಸಕ ಅಶೋಕ್ ರೈಭಾಗವಹಿಸಿ ಮಳೆಗಾಗಿ ದೇವರಲ್ಲಿ‌ ಪ್ರಾರ್ಥನೆ ಮಾಡಿದರು. ಈ‌ಸಂದರ್ಭದಲ್ಲಿ ಪಂಜಿಗುಡ್ಡೆ ಈಶ್ವರ ಭಟ್, ನ್ಯಾಯವಾದಿ ಜಗನ್ನಿವಾಸ್ ರಾವ್, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಮಳೆಗಾಗಿ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಪರ್ಜನ್ಯ ಜಪ Read More »

ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ | ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ ಅರ್ಪಣೆ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ, ಹಾಗೂ ಪರಿವಾರ ದೈವಗಳ ನೇಮ ನಡಾವಳಿ ಏ.28 ಭಾನುವಾರ ನಡೆಯಿತು. ಶನಿವಾರ ರಾತ್ರಿ ಗಂಟೆ 7 ರಿಂದ ಶ್ರೀ ದೈವಗಳ ಭಂಡಾರ ತೆಗೆದು ಬಳಿಕ ತಂಬಿಲಾದಿಗಳು ಜರಗಿತು. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಏ.28 ಭಾನುವಾರ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಲ್ಲಿಗೆ ಪ್ರಿಯೆ ಉ:ಳ್ಳಾಲ್ತಿ ಅಮ್ಮನವರಿಗೆ ಮಲ್ಲಿಗೆ, ಪಟ್ಟೆ ಸೀರೆಗಳನ್ನು ಸಮರ್ಪಿಸಿದರು. ಬೆಳಿಗ್ಗೆ 6 ರಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆದು

ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ | ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ ಅರ್ಪಣೆ Read More »

ವೈವಾಹಿಕ ಜೀವನ ಪ್ರವೇಶಿಸಿದ ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್

ಪುತ್ತೂರು: ತಾಲೂಕಿನ ಶಾಂತಿಗೋಡು ಗ್ರಾಮದ ಕರ್ಪುತಮೂಲೆಯ, ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್ ಅವರು ಇಂದು ವೈವಾಹಿಕ ಜೀವನ ಪ್ರವೇಶಿಸಿದರು. ಬನ್ನೂರು ಗ್ರಾಮದ ಕುಂಟ್ಯಾನ ದಿ.ಆನಂದ ಪೂಜಾರಿಯವರ ಪುತ್ರಿ ದೀಕ್ಷಿತಾ ಅವರನ್ನು ಎಪಿಎಂಸಿ ಪ್ರಾಂಗಣದಲ್ಲಿರುವ ರೈತ ಭವನ ಸಭಾಂಗಣದಲ್ಲಿ ವಿವಾಹವಾಗುವ ಮೂಲಕ ವೈವಾಹಿಕ ಜೀವನ ಪ್ರವೇಶಿಸಿದರು. ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.

ವೈವಾಹಿಕ ಜೀವನ ಪ್ರವೇಶಿಸಿದ ನ್ಯೂಸ್ ಪುತ್ತೂರು ಸಿಬ್ಬಂದಿ ವಿನೋದ್ Read More »

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಸಭಾ ಕಾರ್ಯಕ್ರಮ ಉದ್ಘಾಟನೆ

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಜಿಯವರು ದ್ವೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮಿಜಿ ದಿವ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಸಭಾ ಕಾರ್ಯಕ್ರಮ ಉದ್ಘಾಟನೆ Read More »

ಧರ್ಮ ರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ | ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆಯಲ್ಲಿ ಕಾರ್ತಿಕ ತಂತ್ರಿ

ಪುತ್ತೂರು: ಧರ್ಮ ರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ದೇವರ ಆರಾದನೆ ದೇವಸ್ಥಾನದಲ್ಲಿ ಮಾತ್ರವಲ್ಲ. ಪ್ರತಿ ಮನೆಯಲ್ಲಿ ನಡೆಯಬೇಕು. ಧರ್ಮ ರಕ್ಷಣೆಯೇ ಉಪಾಸನೆಯ ಅಂಗ. ಯಾವುದೇ ಕ್ಷೇತ್ರದಲ್ಲಿ ನಷ್ಟವಾದ ಚೈತನ್ಯ ತುಂಬಿಸುವುದೇ ಬ್ರಹ್ಮಕಲಶ. ಬ್ರಹ್ಮಕಲಶದ ಬಳಿಕ ಚೈತನ್ಯ ಬೆಳಗಲಿದೆ. ಧರ್ಮದ ಆಚರಣೆ ಮಾಡಿದಾಗ ಮನುಷ್ಯ ಜನ್ಮ ಸಾಥಕ. ಉತ್ತಮ ಕಾರ್ಯಗಳು, ಉತ್ತಮ ಸ್ಥಾನ ಲಭಿಸಲಿದೆ ಎಂದು ಕೆಮ್ಮಿಂಜೆ ಕಾರ್ತಿಕ  ತಂತ್ರಿಯವರು ಹೇಳಿದರು. ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ

ಧರ್ಮ ರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ | ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆಯಲ್ಲಿ ಕಾರ್ತಿಕ ತಂತ್ರಿ Read More »

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು

ಥಾಯ್ಲೆಂಡ್: ಕೇರಳದ ಶಿಕ್ಷಕಿಯೊಬ್ಬರು ಪ್ಯಾರಾಗ್ಲೀಡಿಂಗ್‍ ಮಾಡುವಾಗ ಥಾಯ್ಲೆಂಡ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಚಿರಂಚಿರ ಸರಕಾರಿ ಯುಪಿ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಮ್ಯಾಥ್‍ ಮೃತಪಟ್ಟವರು. ರಾಣಿ ಮ್ಯಾಥ್ ಅವರ ಪತಿ ಕೂಡ ಥಾಯ್ಲೆಂಡ್‌ನಲ್ಲಿದ್ದಾರೆ. ಅವರು ರಜೆಯಲ್ಲಿ ಸುತ್ತಾಡಲು ಥಾಯ್ಲೆಂಡ್ ಗೆ ಹೋಗಿದ್ದರು.. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರದ ನಂತರ ಮೃತದೇಹವನ್ನು ಮನೆಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು Read More »

ಧರೆಗುರುಳಿದ ಬೃಹದಾಕಾರದ ಮರ; ಎರಡು ವಾಹನಗಳು ಜಖಂ

ಪುತ್ತೂರು: ಪುತ್ತೂರಿನ ಬೊಳ್ವಾರ್ ಹರಿಪ್ರಸಾದ್ ಹೊಟೇಲ್ ಬಳಿ ಬೃಹತ್ ಮಾವಿನ ಮರವೊಂದು ಉರುಳಿಬಿದ್ದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮಾವಿನಮರ ಬಿದ್ದ ಕ್ಷಣದಲ್ಲೇ ಮಾವಿನ ಮಿಡಿಗಾಗಿ ಮುಗಿಬಿದ್ದಿದ್ದಾರೆ. ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ಪರದಾಡಿದ ವಾಹನ ಮಾಲೀಕರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸುತ್ತಿದ್ದಾರೆ. ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ತಪ್ಪಿದ ಭಾರೀ ಅವಘಡ ತಪ್ಪಿದಂತಾಗಿದೆ.

ಧರೆಗುರುಳಿದ ಬೃಹದಾಕಾರದ ಮರ; ಎರಡು ವಾಹನಗಳು ಜಖಂ Read More »

ಎ.ವಿ.ಜಿ. ಬೇಸಿಗೆ ಶಿಬಿರ -2024 ಸಮಾರೋಪದೊಂದಿಗೆ ಸಂಪನ್ನ | ಶಿಬಿರದಲ್ಲಿ “ಮಕ್ಕಳ ರಾಜ್ಯ” ನಾಟಕ ಪ್ರದರ್ಶನ

ಪುತ್ತೂರು: ಏ.22 ರಿಂದ 27ರ ತನಕ ನಡೆದ ಎವಿಜಿ ಬೇಸಿಗೆ ಶಿಬಿರ -2024 ಸಮಾರೋಪ ಸಮಾರಂಭದೊಂದಿಗೆ ಇಂದು ಸಂಪನ್ನಗೊಂಡಿತು. ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಸಮಾರೋಪ ಭಾಷಣ ಮಾಡಿ ಶಿಬಿರದ ವೈಶಿಷ್ಟ್ಯತೆಗಳನ್ನು ಕೊಂಡಾಡಿದರು. ಮುಖ್ಯ ಅತಿಥಿಯಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಮತ್ತೋರ್ವ ಮುಖ್ಯ ಅತಿಥಿ, ಐ.ಆರ್ ಸಿ.ಎಂ.ಡಿ. ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲಾ

ಎ.ವಿ.ಜಿ. ಬೇಸಿಗೆ ಶಿಬಿರ -2024 ಸಮಾರೋಪದೊಂದಿಗೆ ಸಂಪನ್ನ | ಶಿಬಿರದಲ್ಲಿ “ಮಕ್ಕಳ ರಾಜ್ಯ” ನಾಟಕ ಪ್ರದರ್ಶನ Read More »

ವೈಭವದಿಂದ ನಡೆಯಿತು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ

ಪುತ್ತೂರು: ಕಳೆದ ಏಳು ದಿನಗಳಿಂದ ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ ಏ.27 ಶನಿವಾರ ವೈಭವದಿಂದ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇಂದು ಮುಂಜಾನೆ 5 ರಿಂದ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ ನಡೆದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ

ವೈಭವದಿಂದ ನಡೆಯಿತು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ Read More »

ಜೆ.ಇ.ಇ. ಮೈನ್ಸ್ -2024 : ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ 343 ನೇ ರ್ಯಾಂಕ್‍

ಪುತ್ತೂರು: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ರಾಷ್ಟ್ರಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 87 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿ ಗಮನ ಸೆಳೆದಿದ್ದಾರೆ. 14 ವಿದ್ಯಾರ್ಥಿಗಳು 95 ಕ್ಕಿಂತಲೂ ಅಧಿಕ ಪರ್ಸೆಂಟೈಲ್ ಫಲಿತಾಂಶ ಪಡೆದಿದ್ದು, 28 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಉತ್ಕೃಷ್ಟ ಫಲಿತಾಂಶ ನೀಡಿದ್ದಾರೆ. ಕೆ ಪ್ರಮಿತ್ ರೈ 99.84 ಪರ್ಸೆಂಟೈಲ್ ಅಂಕಗಳೊಂದಿಗೆ ಇಡಬ್ಲ್ಯುಎಸ್ ವಿಭಾಗದಲ್ಲಿ

ಜೆ.ಇ.ಇ. ಮೈನ್ಸ್ -2024 : ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ 343 ನೇ ರ್ಯಾಂಕ್‍ Read More »

error: Content is protected !!
Scroll to Top