ಫೆ.5 : ತುಳಸೀವನ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ

ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಬಂಟ್ವಾಳ : ಬಂಟ್ವಾಳ ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ 20 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಫೆ.5 ಆದಿತ್ಯವಾರ ನಡೆಯಲಿದೆ. ಬೆಳಗ್ಗೆ 10  ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ […]

ಫೆ.5 : ತುಳಸೀವನ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ Read More »

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ

ಉತ್ಸವಗಳನ್ನು ನಡೆಸಲು ದುಡ್ಡಿದೆ, ಮಕ್ಕಳಿಗೆ ಸಮವಸ್ತ್ರ ಕೊಡಲು ಬರಗಾಲವೇ ಎಂದು ಪ್ರಶ್ನೆ ಬೆಂಗಳೂರು: ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ತೀಕ್ಷ್ಣವಾಗಿ ತರಾಟೆಗೆಗ ತೆಗೆದುಕೊಂಡಿದೆ. ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ,

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ Read More »

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ

ಪಿ. ಬಿ. ಶ್ರೀನಿವಾಸ್ ಬದುಕಿದ್ದೇ ಹಾಗೆ! ಪ್ರತಿವಾದಿ ಭಯಂಕರ ಶ್ರೀನಿವಾಸ್ ಎಂದರೆ ಯಾರಿಗಾದರೂ ಅವರ್ಯಾರು ಎಂದು ಗೊತ್ತಾಗದೆ ಹೋಗಬಹುದು. ಆದರೆ ಪಿ.ಬಿ. ಶ್ರೀನಿವಾಸ್ ಅಂದರೆ ಥಟ್ಟನೆ ಮಾಧುರ್ಯದ ಅಲೆಯೊಂದು ನಮ್ಮನ್ನು ಆವರಿಸಿಬಿಡುತ್ತದೆ. ಅವರು ಹಾಡಿದ ಹಾಡುಗಳು ಎಷ್ಟು ಶ್ರೀಮಂತವೋ ಅವರು ಬದುಕಿದ ರೀತಿಯು ಇನ್ನೂ ಹೆಚ್ಚು ಶ್ರೀಮಂತ ಆಗಿತ್ತು. ಇಂದವರ ಬದುಕಿನ ಕೆಲವು ನಿದರ್ಶನಗಳನ್ನು ತಮ್ಮ ಮುಂದೆ ಇಡಲು ಹೆಮ್ಮೆಪಡುತ್ತೇನೆ. ಹುಟ್ಟಿದ್ದು ಆಂಧ್ರದಲ್ಲಿ, ಅಧಿಕ ಹಾಡು ಹಾಡಿದ್ದು ಕನ್ನಡದಲ್ಲಿ ಪಿಬಿ ಹುಟ್ಟಿದ್ದು ಆಂಧ್ರದಲ್ಲಿ. ಮಾತೃಭಾಷೆ ತೆಲುಗು. ಆದರೆ

ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ Read More »

ಅತ್ಯಾಚಾರ ಪ್ರಕರಣ : ಸ್ವಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಆಶ್ರಮದಲ್ಲಿ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಗಾಂಧಿನಗರ : ಶಿಷ್ಯೆಯ ಅತ್ಯಾಚಾರ ಎಸಗಿದ ಕುರಿತು 2013ರಲ್ಲಿ ದಾಖಲಾದ ಪ್ರಕರಣದಲ್ಲಿ ಅಪರಾಧಿಯಾಗಿರುವ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುಗೆ (77) ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಕ್ಷನ್ 376 ಮತ್ತು 377 ಅಡಿಯಲ್ಲಿ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗಾಂಧಿನಗರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಡಿ.ಕೆ. ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ 50,000 ರೂ. ಪರಿಹಾರ ನೀಡುವಂತೆಯೂ ಅಪರಾಧಿಗೆ ಕೋರ್ಟ್​

ಅತ್ಯಾಚಾರ ಪ್ರಕರಣ : ಸ್ವಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ Read More »

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ : 14 ಸಾವು

ಮೃತರಲ್ಲಿ 10 ಮಹಿಳೆಯರು 3 ಮಕ್ಕಳು ರಾಂಚಿ: ಜಾರ್ಖಂಡ್‌ನ ಧನ್‌ಬಾದ್ ನಗರದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ಬೆಂಕಿಹತ್ತಿಕೊಂಡು ಕನಿಷ್ಠ 14 ಮಂದಿ ಬೆಂಕಿಗೆ ಸಾವಿಗೀಡಾಗಿದ್ದಾರೆ.ಆಶೀರ್ವಾದ್ ಟವರ್ ಜೋರಫಟಕ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.ಧನ್‌ಬಾದ್‌ನ ಜೋರಾಫಾಟಕ್‌ ಎಂಬಲ್ಲಿರುವ ಆಶೀರ್ವಾದ್‌ ಟವರ್ಸ್‌ ಎಂಬ ಬಹುಮಹಡಿ ವಸತಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ನಿನ್ನೆ ರಾತ್ರಿ ಬೆಂಕಿದುರಂತ ಸಂಭವಿಸಿ 14 ಮಂದಿ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ : 14 ಸಾವು Read More »

ಅಕ್ರಮ ಮರ ಸಾಗಾಟ ಪತ್ತೆ : ಮೂವರು ಆರೋಪಿಗಳ ಬಂಧನ,ವಶಕ್ಕೆ ಪಡೆದುಕೊಂಡ ಮರದ ದಿಮ್ಮಿ ಹಾಗೂ ವಾಹನ

ಪುತ್ತೂರು : ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಉಪ್ಪಿನಂಗಡಿ ವಲಯ ಬಂದಾರು ಶಾಖಾ ಉಪವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿ’ಸೋಜಾ ಅವರು ಬೆಳ್ತಂಗಡಿ ತಾಲೂಕಿನ ಮುಗೇರಡ್ಕದಲ್ಲಿ ಪತ್ತೆಹಚ್ಚಿ ಮರ ಹಾಗೂ ವಾಹನ ವಶಪಡಿಸಿಕೊಂಡು, ಮೂವರು ಆರೋಫಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ನಿವಾಸಿ ಕೃಷ್ಣಪ್ಪ ಕೌರಿಕ, ಅಬ್ಬಾಸ್ ಪಾಣೆಮಂಗಳೂರು, ಇರ್ಫಾನ್ ಕಡಬ ಬಂಧಿತ ಆರೋಪಿಗಳು. ಅಶ್ರಫ್ ಅಂಡೆತ್ತಡ್ಕ, ರಹಿಮಾನ್ ಅಂಡೆತ್ತಡ್ಕ, ಚಾಲಕ ಅಶ್ರಫ್ ಪರಾರಿಯಾಗಿದ್ದಾರೆ. ಆರೋಪಿ ಕೃಷ್ಣಪ್ಪ ಕ್ಷೌರಿಕ

ಅಕ್ರಮ ಮರ ಸಾಗಾಟ ಪತ್ತೆ : ಮೂವರು ಆರೋಪಿಗಳ ಬಂಧನ,ವಶಕ್ಕೆ ಪಡೆದುಕೊಂಡ ಮರದ ದಿಮ್ಮಿ ಹಾಗೂ ವಾಹನ Read More »

ನಗರಸಭೆ ನೌಕರರ ಮುಷ್ಕರ : ತ್ಯಾಜ್ಯ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ

ಪುತ್ತೂರು : ಪುತ್ತೂರು ನಗರಸಭೆಯ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ಸೂಪರ್‌ವೈಸರ್‌ಗಳು, ನೀರು ಸರಬರಾಜು ಪಂಪು ಚಾಲಕರು ಮತ್ತಿತರ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರದಲ್ಲಿ ಭಾಗವಹಿಸುತ್ತಿದ್ದು, ಈ ಹಿನ್ನಲೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಪುತ್ತೂರು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ನಗರಸಭೆ ನೌಕರರ ಮುಷ್ಕರ : ತ್ಯಾಜ್ಯ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ Read More »

ಫೆ.5 : ಶಾಂತಿಗೋಡು : ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

ಪುತ್ತೂರು : ಶಾಂತಿಗೋಡು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ  ನೇಮೋತ್ಸವ  ಫೆ.5 ರಂದು ನಡೆಯಲಿದೆ. ನೇಮೋತ್ಸವದ ಅಂಗವಾಗಿ ಫೆ.2 ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗಪೂಜೆ, 3 ರಂದು ಶಾಸ್ತಾವು ದೇವಸ್ಥಾನದಲ್ಲಿ ರಂಗಪೂಜೆ, 4ರಂದು 6.30 ಕ್ಕೆ ಊರವರಿಂದ ಭಜನಾ ಕಾರ್ಯಕ್ರಮ, ಸರೋಳಿ ಮನೆಯಿಂದ ಭಂಡಾರ ಬರುವುದು, ನಂತರ  ಶಿರಾಡಿ ದೈವದ ಭಂಡಾರ ತೆಗೆಯುವುದು.  ಫೆ.5 ರಂದು ಬೆಳಿಗ್ಗೆ ದೈವಗಳ ನೆಮೋತ್ಸವ, ರಾತ್ರಿ ಗಂಟೆ 10ಕ್ಕೆ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು ಎಂದು ದೈವಸ್ಥಾನದ ಪ್ರಕಟಣೆ

ಫೆ.5 : ಶಾಂತಿಗೋಡು : ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ Read More »

ಫೆ.1 ರಿಂದ 6 : ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದ ವರ್ಷಾವಧಿ ಜಾತ್ರೋತ್ಸವ

ಪುತ್ತೂರು : ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ.1 ಬುಧವಾರದಿಂದ 6 ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಫೆ.೧ ಬುಧವಾರ ಸಂಜೆ ಬಲಿವಾಡು, ಹಸಿರುವಾಣಿ ಶೇಖರಣೆ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ದೈವಗಳ ಭಂಡಾರ ಆಗಮನ, ರಾತ್ರಿ ಅತ್ತಾಳ ಪೂಜೆ, ಮಹಾಪೂಜೆ, ಮಂಗಳಾರತಿ ನಡೆಯಲಿದೆ. ಫೆ.2 ರಂದು ಪ್ರಾತಃಕಾಲ ಪೂಜೆ, ದೇವತಾ ಪ್ರಾರ್ಥನೆ, ಬೆಂದ್ರ್‌ತೀರ್ಥ

ಫೆ.1 ರಿಂದ 6 : ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದ ವರ್ಷಾವಧಿ ಜಾತ್ರೋತ್ಸವ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಬಿ.ಸಿ.ಟ್ರಸ್ಟ್‌ನ ಕೇಂದ್ರ ಒಕ್ಕೂಟದ ಪದಗ್ರಹಣ,

ಪ್ರಗತಿ ಬಂಧು ತಂಡಗಳಿಗೆ ಕೃಷಿ ಸಲಕರಣೆಗಳ ವಿತರಣೆ:ಶಾಸಕ ಸಂಜೀವ ಮಠಂದೂರು ವಿಟ್ಲ : ವಿಟ್ಲ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃದಿ ಯೋಜನೆ ಬಿ. ಸಿ ಟ್ರಸ್ಟ್, ವಿಟ್ಲ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಒಕ್ಕೂಟದ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಹಾಗೂ ಪ್ರಗತಿ ಬಂಧು ತಂಡಗಳಿಗೆ ಕೃಷಿ ಸಲಕರಣೆಗಳ ವಿತರಣೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶ ಮಂಗಳವಾರ ವಿಟ್ಲ ಚಂದಳಿಕೆ ಭಾರತ್ ಅಡಿಟೋರಿಯಂನಲ್ಲಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಬಿ.ಸಿ.ಟ್ರಸ್ಟ್‌ನ ಕೇಂದ್ರ ಒಕ್ಕೂಟದ ಪದಗ್ರಹಣ, Read More »

error: Content is protected !!
Scroll to Top