ಪ್ರಾಕೃತಿಕ ವಿಕೋಪ ನಿರ್ವಹಣೆ | ದ.ಕ.ಜಿಲ್ಲೆಗೆ 296 ಇನ್ಸಿಡೆಂಟ್ ಕಮಾಂಡರ್ ಗಳ ನೇಮಕ

ಮಂಗಳೂರು: ದ.ಕ.ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್ ಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು 13 ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರಾಯುಕ್ತರು ಹಾಗೂ ಮಂಗಳೂರು ಮಹಾ ನಗರ ಪಾಲಿಕೆಯ 60 ವಾರ್ಡ್ ಗಳಿಗೆ ಅಭಿಯಂತರನ್ನು  ಮತ್ತು ಮುಖ್ಯಾಧಿಕಾರಿಗಳನ್ನು ಒಳಗೊಂಡಂತೆ 296 ಇನ್ಸಿಡೆಂಟ್ ಕಮಾಂಡರ್ ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್, ವಾರ್ಡ್ ವಾರು ವಿಪತ್ತು ನಿರ್ವಹಣಾ ಯೋಜನೆಯನ್ನು ನಿರ್ಮಿಸಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ಸಂಭವನೀಯ ನೆರೆ ಹಾವಳಿ, ಭೂ ಕುಸಿತ, ತೋಡುಗಳು, ಕಾಲು […]

ಪ್ರಾಕೃತಿಕ ವಿಕೋಪ ನಿರ್ವಹಣೆ | ದ.ಕ.ಜಿಲ್ಲೆಗೆ 296 ಇನ್ಸಿಡೆಂಟ್ ಕಮಾಂಡರ್ ಗಳ ನೇಮಕ Read More »

ಜು.9: ಮಾಸ್ ಲಿಮಿಟೆಡ್ ನಿಂದ ಕಾವುನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ | ಪತ್ರಿಕಾಗೋಷ್ಠಿಯಲ್ಲಿ ಕೆ.ಸೀತಾರಾಮ ರೈ ಸವಣೂರು

ಪುತ್ತೂರು: ಮಂಗಳೂರು ಕೃಷಿಕರ ಸಹಕಾರ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್‍.ರಾಜೇಂದ್ರ ಕುಮಾರ್ ಅವರ ಸಹಕಾರದೊಂದಿಗೆ 10ನೇ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಜು.9 ಮಂಗಳವಾರ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಮಂಗಳೂರು ಮಾಸ್ ಲಿಮಿಟೆಡ್ ನ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಡಿಕೆ ಬೆಳೆಗಾರರಿಗೆ ಅಧಿಕ ದರ ಸಿಗಬೇಕು. ಈ ಕುರಿತು

ಜು.9: ಮಾಸ್ ಲಿಮಿಟೆಡ್ ನಿಂದ ಕಾವುನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ | ಪತ್ರಿಕಾಗೋಷ್ಠಿಯಲ್ಲಿ ಕೆ.ಸೀತಾರಾಮ ರೈ ಸವಣೂರು Read More »

ಜು.31 : ಅಡಿಕೆ ರೈತರಿಗೆ ವಿಮೆ ಪ್ರೀಮಿಯಂ ಕಟ್ಟಲು ಕೊನೆಯ ದಿನ

ಬೆಂಗಳೂರು: ಸರಕಾರ 2024-25ರ ಮುಂಗಾರು ಹಂಗಾಮಿನ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನದ ಆದೇಶ ಹೊರಡಿಸಿದೆ. ಮಲೆನಾಡು ಮತ್ತು ಕರಾವಳಿ ವ್ಯಾಪ್ತಿಯ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಮಾ ನೋಂದಣಿಗೆ ಅವಕಾಶ ಕಲ್ಪಿಸಿದೆ. ವಿಮಾ ಯೋಜನೆಗೆ ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಿಗೆ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಲು ಜು.31 ಅಂತಿಮ ದಿನವಾಗಿದೆ.

ಜು.31 : ಅಡಿಕೆ ರೈತರಿಗೆ ವಿಮೆ ಪ್ರೀಮಿಯಂ ಕಟ್ಟಲು ಕೊನೆಯ ದಿನ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಅನ್ ಬೌಂಡ್’ ತಾಂತ್ರಿಕ ಉತ್ಸವ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅನ್ ಬೌಂಡ್ ಎನ್ನುವ 3 ದಿನಗಳ ತಾಂತ್ರಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಯಿತು. ಬದಲಾದ ತಾಂತ್ರಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ ತನ್ನಲ್ಲಿರುವ ತಾಂತ್ರಿಕ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ನೀಡುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೀಸರ್ಚ್ ಎಂಡ್ ಪ್ರೆಸೆಂಟೇಶನ್, ಪ್ರಾಬ್ಲೆಮ್ ಸಾಲ್ವಿಂಗ್, ಮೆಷಿನ್ ಲರ್ನಿಂಗ್, ಡೇಟಾ ಪ್ರಾಸೆಸಿಂಗ್, ಸರ್ಕ್ಯೂಟ್ ಡಿಸೈನ್ ಎಂಡ್ ಡಿಬಗ್ಗಿಂಗ್, ಸರ್ವೆ, ಮಾಡೆಲಿಂಗ್, ಯುನಿಟ್ಸ್ ಎಂಡ್ ಮೆಶರ್‌ಮೆಂಟ್ಸ್ ಹೀಗೆ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ 4, ಇಲೆಕ್ಟ್ರಾನಿಕ್ಸ್

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಅನ್ ಬೌಂಡ್’ ತಾಂತ್ರಿಕ ಉತ್ಸವ Read More »

ಸಾಮೆತ್ತಡ್ಕ ಶಾಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಚಾಲನೆ

ಪುತ್ತೂರು: ಸಾಮೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ಇಂಗ್ಲೀಷ್ ಮಾಧ್ಯಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಚಾಲನೆ ಚಾಲನೆ ನೀಡಿ ಮಾತನಾಡಿ, ಇಲ್ಲಿನ ಪ್ರತೀಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಕನ್ನಡದ ಜೊತೆ ಆಂಗ್ಲ ಭಷೆಯ ಜ್ಞಾನವೂ ಇಂದಿನ ಕಾಲದ ಅಗತ್ಯ ಬೇಡಿಕೆಯಾಗಿದೆ ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸರಕರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭ ಮಾಡುತ್ತಿದೆ, ಹಳ್ಳಿಯ ಕಟ್ಟಕಡೇಯ ವ್ಯಕ್ತಿಯ ಮಕ್ಕಳೂ ಇಂಗ್ಲೀಷ್ ಕಲಿತರೆ ಮಾತ್ರ ಭಾರತ

ಸಾಮೆತ್ತಡ್ಕ ಶಾಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಚಾಲನೆ Read More »

ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ

ಪುತ್ತೂರು: ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸ್ವ ನಿಧಿಯಿಂದ ಸಮೃದ್ಧಿ ಕಾರ್ಯಕ್ರಮ ನಗರಸಭೆ ಸಭಾಂಗಣದಲ್ಲಿ ನಡೆಯಿತು. ಯೋಜನೆಯ ಸೌಲಭ್ಯಗಳ ಬಗ್ಗೆ ಪೌರಾಯುಕ್ತ ಮಧು ಎಸ್‍. ಮನೋಹರ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಇಸುಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್, ಲೆಕ್ಕಾಧೀಕ್ಷಕ ಸಿ.ಆರ್.ದೇವಾಡಿಗ, ಸಹಾಯಕ ಅಭಿಯಂತರ ಕೃಷ್ಣಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾಕಿರಣ್, ವರಲಕ್ಷ್ಮಿ, ಪ್ರೋಗ್ರಾಮರ್ ವಿನೋದ್ ಜೋಷಿ ಉಪಸ್ಥಿತರಿದ್ದರು. ಜಯಲಕ್ಷ್ಮಿ ಬೇಕಲ್ ಸ್ವಾಗತಿಸಿ, ವಂದಿಸಿದರು. ಸಮುದಾಯ ಸಂಘಟನಾಧಿಕಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ Read More »

ಬಂಟ್ವಾಳ ವಿಹಿಂಪ ಪ್ರಖಂಡದಿಂದ ಧಾರ್ಮಿಕ ಆಚರಣೆ ಕುರಿತು ಚಿಂತನಾ ಬೈಠಕ್

ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ, ಶಾರದೋತ್ಸವದ ವಿವಿಧ ಸಮಿತಿಗಳ ಪ್ರಮುಖರ ಚಿಂತನಾ ಬೈಠಕ್ ಬಿ.ಸಿ.ರೋಡು ಸ್ಪರ್ಶಕಲಾ‌ಮಂದಿರದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಜಿಲ್ಲಾ ಸತ್ಸಂಗ ಪ್ರಮುಖ ಕಶೆಕೋಡಿ ಸೂರ್ಯನಾರಾಯಣ ಭಟ್, ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಧಾರ್ಮಿಕ ಆಚರಣೆಯಲ್ಲಿ ನಾವು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಚಿಂತನೆ ಕುರಿತು ಚರ್ಚಿಸಿದರು.   ಈ ವಿಶೇಷ ಬೈಠಕ್ ನಲ್ಲಿ ತಾಲೂಕಿನ ವಿವಿಧ

ಬಂಟ್ವಾಳ ವಿಹಿಂಪ ಪ್ರಖಂಡದಿಂದ ಧಾರ್ಮಿಕ ಆಚರಣೆ ಕುರಿತು ಚಿಂತನಾ ಬೈಠಕ್ Read More »

ನಾಳೆ (ಜು.2) : ಬಿಜೆಪಿ ಸುಳ್ಯ ಮಂಡಲ, ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ

ಕಡಬ: ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಜು.2 ರಂದು ನಡೆಯಲಿದೆ. ಕಡಬ ತಾಲೂಕು ಕಚೇರಿ ಮುಂಭಾಗ ಬೆಳಿಗ್ಗೆ 10.30 ರಿಂದ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಜು.2) : ಬಿಜೆಪಿ ಸುಳ್ಯ ಮಂಡಲ, ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ Read More »

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಉಂಗುರ, ಕಿವಿಯೋಲೆಗಳ ಮೇಳ | ಜುಲೈ 1 ರಿಂದ ಆರಂಭ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗೆ ಉಂಗುರ ಹಾಗೂ ಕಿವಿಯೋಲೆಗಳ ಮೇಳವನ್ನು ಪುತ್ತೂರು, ಮಡಬಿದ್ರೆ, ಸುಳ್ಯ ಹಾಸನ, ಮತ್ತು ಕುಶಾಲನಗರ ಮಳಿಗೆಗಳಲ್ಲಿ ಜು.1 ರಿಂದ ಆಯೋಜಿಸಿದೆ. ಚಿನ್ನವನ್ನು ಧರಿಸುವುದು ಸೌಂದರ್ಯದ ಸಂಕೇತವಾಗಿದೆ. ಹೂಡಿಕೆಯ ದೃಷ್ಟಿಯಿಂದ ಕೂಡಾ ಲಾಭದಾಯಕ. ಗ್ರಾಹಕರಿಗೆ ವಿವಿಧ ವಿನ್ಯಾಸಗಳ ಉಂಗುರ ಹಾಗೂ ಕಿವಿಯೋಲೆಗಳ ಅಪೂರ್ವ ಸಂಗ್ರಹ ಲಭ್ಯವಿದೆ. ಅದೇ ರೀತಿ Yellow Tag ಆಭರಣಗಳನ್ನು ಆಯ್ಕೆಮಾಡಿ ಅತ್ಯಂತ ಕಡಿಮೆ ತಯಾರಿಕಾ ವೆಚ್ಚದಲ್ಲಿ ಗ್ರಾಹಕರಿಗೆ ಲಭ್ಯವಿದೆ. 1957 ರಲ್ಲಿ ಆರಂಭಗೊಂಡ ಸಂಸ್ಥೆಯು

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಉಂಗುರ, ಕಿವಿಯೋಲೆಗಳ ಮೇಳ | ಜುಲೈ 1 ರಿಂದ ಆರಂಭ Read More »

ನಾಳೆ ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್

ಪುತ್ತೂರು: ಪುತ್ತೂರು-ಹಾರಾಡಿ, ತಾರಿಗುಡ್ಡೆ ಪ್ರದೇಶದಲ್ಲಿ 33 ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ ಪುತ್ತೂರು-ಸವಣೂರು-ನೆಲ್ಯಾಡಿ ಮಧ್ಯೆ ಇರುವ ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಯುವುದರಿಂದ ಜು.2 ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 3 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. 33 ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33 ಕೆವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಮತ್ತು

ನಾಳೆ ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್ Read More »

error: Content is protected !!
Scroll to Top