ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಪುತ್ತೂರು : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಇಂದು ಪತ್ತೆಯಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದೊಳಗೆ ಮೇಲ್ಮಹಡಿಗೆ ತೆರಳುವ ಮೆಟ್ಟಿಲುಗಳ ಕೆಳಗೆ ವ್ಯಕ್ತಿಯೊಬ್ಬರು ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಸಾಮೆತ್ತಡ್ಕ ನಿವಾಸಿ ಶಿವಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಸಾಮೆತ್ತಡ್ಕ 2ನೇ ಕ್ರಾಸ್ ನಿವಾಸಿಯೊಬ್ಬರು ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಪ್ರಸಾದ್ (39) ಆತ್ಮಹತ್ಯೆ ಮಾಡಿಕೊಂಡಡವರು. ಸಾಮೆತ್ತಡ್ಕ ದಿ.ಗಣೇಶ್ ರಾವ್ ಅವರ ಪುತ್ರ ಶಿವಪ್ರಸಾದ್ ಅವಿವಾಹಿತರಾಗಿದ್ದು, ಮಾರುತಿ ಓಮ್ಮಿಯಲ್ಲಿ ಶಾಲಾ ಮಕ್ಕಳನ್ನು ಟ್ರಿಪ್ ಮಾಡುತ್ತಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಪತ್ತೆಯಾಗಿದ್ದಾರೆ. ಮೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಸಾಮೆತ್ತಡ್ಕ ನಿವಾಸಿ ಶಿವಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ Read More »

ಕಾಂಗ್ರೆಸ್ ನಾಯಕ ಎಂ.ಎಸ್‍.ಮಹಮ್ಮದ್ ಶಾಸಕ ಭರತ್ ಶೆಟ್ಟಿಯವರನ್ನು ಭಯೋತ್ಪಾದಕ ಎಂದಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಲ್ಲಿ ಭಯೋತ್ಪಾದನೆ ಮಾಡುವ ಭಯೋತ್ಪಾದಕರು ಎಲ್ಲರೂ ಯಾವ ಸಂತತಿಯವರು ಎಂಬುದು ಜಗಜ್ಜಾಹೀರು ಆಗಿರುವಾಗ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರನ್ನು ಭಯೋತ್ಪಾದಕ ಎಂದು ಕಾಂಗ್ರೇಸ್ ನಾಯಕ ಎಂ.ಎಸ್ ಮಹಮ್ಮದ್ ಹೇಳಿರುವುದು ಖಂಡನೀಯ. ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಧರ್ಮದಲ್ಲಿ ಹುಟ್ಟಿ ಅದರ ಸಂಸ್ಕ್ರತಿಯನ್ನು ಪಾಲಿಸುವವನಿಗೆ ಧರ್ಮದ ಮೇಲೆ ಅಪವಾದ ಹೊರಿಸುವಾಗ ತನ್ನ ಪದವಿಗಿಂತ ದೊಡ್ಡದು ನನ್ನ

ಕಾಂಗ್ರೆಸ್ ನಾಯಕ ಎಂ.ಎಸ್‍.ಮಹಮ್ಮದ್ ಶಾಸಕ ಭರತ್ ಶೆಟ್ಟಿಯವರನ್ನು ಭಯೋತ್ಪಾದಕ ಎಂದಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ Read More »

ಅನಾರೋಗ್ಯದಿಂದ ನಿಧನರಾದ ಮೂಡಂಬೈಲು ರಾದೀಪ್‍ ಪೂಜಾರಿ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

ವಿಟ್ಲ : ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ನಿಧನರಾದ ಮೂಡಂಬೈಲು ನಿವಾಸಿ ರಾದೀಪ್ ಪೂಜಾರಿ ರವರ ನಿವಾಸಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ, ಧೈರ್ಯ ತುಂಬಿದರು. ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರಸನ್ನ ಮಾರ್ತ, ರಘುನಾಥ್ ರೈ ಮತ್ತಿತ್ತರು ಉಪಸ್ಥಿತರಿದ್ದರು.

ಅನಾರೋಗ್ಯದಿಂದ ನಿಧನರಾದ ಮೂಡಂಬೈಲು ರಾದೀಪ್‍ ಪೂಜಾರಿ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ Read More »

ನೀಟ್ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ಎನ್‍ ಎಸ್‍ ಯುಐನಿಂದ ಪ್ರತಿಭಟನೆ

ಪುತ್ತೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಮತ್ತು ಮರು ಪರೀಕ್ಷೆಗೆ ಆಗ್ರಹಿಸಿ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು. ಎನ್‍ ಎಸ್‍ ಯುಐ ಅಧ್ಯಕ್ಷ ಎಡ್ವರ್ಡ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್‍ ಎಸ್‍ ಯುಐ ಮಾಜಿ ಅಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ ಮಾತನಾಡಿ, ನೀಟ್ ಅಕ್ರಮ ಗಂಭೀರ ವಿಷಯವಾಗಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸುತ್ತಿರುವುದು ಖಂಡನೀಯ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂದು

ನೀಟ್ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ಎನ್‍ ಎಸ್‍ ಯುಐನಿಂದ ಪ್ರತಿಭಟನೆ Read More »

ಕೊರಗಜ್ಜನ ಆದಿಸ್ಥಾನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹಿತ ಸೆಲಬ್ರಿಟಿಗಳು | ಹರಕೆ ತೀರಿಸಿದ ಸೆಲೆಬ್ರಿಟಿಗಳು

ಮಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಪ್, ಸೇರಿದಂತೆ ಸುನೀಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದಾರೆ. ತುಳುನಾಡಿನವರೇ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ, ಪುತ್ರಿ, ಅಳಿಯನ ಜೊತೆ ಖ್ಯಾತ ನಟಿ ಕತ್ರಿನಾ ಕೈಫ್ ಕೂಡ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ. ಜುಲೈ 14ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಕಟ್ಟೆ ಕೋಲ ನಡೆದಿದ್ದು,

ಕೊರಗಜ್ಜನ ಆದಿಸ್ಥಾನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹಿತ ಸೆಲಬ್ರಿಟಿಗಳು | ಹರಕೆ ತೀರಿಸಿದ ಸೆಲೆಬ್ರಿಟಿಗಳು Read More »

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಮಹಾಭಾರತ ಸರಣಿ ತಾಳಮದ್ದಲೆ

ಉಪ್ಪಿನಂಗಡಿ:  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ಅಂಗವಾಗಿ ಶ್ರೀ ಮಹಾಭಾರತ ಸರಣಿಯಲ್ಲಿ ತಾಳಮದ್ದಳಲೆ ನಡೆಯಿತು. ಸರಣಿ ಕಾರ್ಯಕ್ರಮದಲ್ಲಿ ನಿವಾತಕವಚ ಕಾಲಕೇಯರ ವಧೆ ತಾಳಮದ್ದಲೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಅರ್ಥಧಾರಿಗಳಾಗಿ ಜಯರಾಮ ಬಲ್ಯ, ಹರೀಶ್ ಆಚಾರ್ಯ ಬಾರ್ಯ ( ನಿವಾತ ಕವಚರು ), ಶ್ರುತಿ  ವಿಸ್ಮಿತ್ ( ದೇವೇಂದ್ರ ಮತ್ತು ಕಾಲಕೇಯರು), ಸಂಜೀವ ಪಾರೆಂಕಿ(ಅಗ್ನಿ), ಶ್ರೀಧರ್  ಮಂಗಳೂರು (ಅರ್ಜುನ),

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಮಹಾಭಾರತ ಸರಣಿ ತಾಳಮದ್ದಲೆ Read More »

ಬರೋಬ್ಬರಿ 46 ವರ್ಷಗಳ ಬಳಿಕ ತೆರೆದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’

ಭುವನೇಶ್ವರ: ಬರೋಬ್ಬರಿ 46 ವರ್ಷಗಳ ಬಳಿಕ ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಆರು ವರ್ಷಗಳ ಬಳಿಕ ಈ ರತ್ನ ಭಂಡಾರದ ಬಾಗಿಲನ್ನು ನಕಲಿ ಕೀಲಿಕ್ಕೆ ಬಳಸಿ ಭಾನುವಾರ ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ತೆರೆಯಲಾಯಿತು. ಪುರಿ ಜಗನ್ನಾಥ ದೇಗುಲದಲ್ಲಿರುವ ರತ್ನ ಭಂಡಾರದಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದ್ದು, ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ. ಅಲ್ಲದೆ ರತ್ನ ಭಂಡಾರ ದೀರ್ಘಕಾಲದಿಂದ

ಬರೋಬ್ಬರಿ 46 ವರ್ಷಗಳ ಬಳಿಕ ತೆರೆದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ Read More »

ವಿದ್ಯುತ್ ಶಾಕ್‍ ಗೆ ಯುವ ಕಬಡ್ಡಿ ಆಟಗಾರ ಮೃತ್ಯು

ಉಪ್ಪಿನಂಗಡಿ : ಪ್ಯೂಸ್ ಹಾಕಲು ಹೋದ ಯುವಕನೋರ್ವ ವಿದ್ಯುತ್ ಶಾಕ್ ಗೊಳಪಟ್ಟು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ. ಪುಲೇರಿ ಗೋಳಿತ್ತಡಿ ಯುವ ಕಬಡ್ಡಿ ಆಟಗಾರ ಹರೀಶ್ (32) ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ವಿದ್ಯುತ್ ಶಾಕ್‍ ಗೆ ಯುವ ಕಬಡ್ಡಿ ಆಟಗಾರ ಮೃತ್ಯು Read More »

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 123 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 18 ಆಗಿದ್ದು ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಗಳ ವಿವರ: ಸಾಮಾನ್ಯ ವರ್ಗ: 62, ಪರಿಶಿಷ್ಟ ಜಾತಿ: 18, ಪರಿಶಿಷ್ಟ ಪಂಗಡ: 4, ಪ್ರವರ್ಗ 1: 5, ಪ್ರವರ್ಗ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

error: Content is protected !!
Scroll to Top