ಮಂಗಳಮುಖಿಯರ ಹೊಡೆದಾಟ

ನಿಂತಿಕಲ್ಲ್ : ನಿಂತಿಕಲ್ಲ್ ಸಂತೆ ಮಾರುಕಟ್ಟೆ ಬಳಿ ಮಂಗಳಮುಖಿಯರ ಹೊಡೆದಾಟದ ಘಟನೆ ನಡೆದಿದೆ.  ಇಬ್ಬರು  ಕಲ್ಲು ಎಸೆದು ಕೊಂಡ ಘಟನೆ ಜು. 16 ರಂದು ಮಧ್ಯಾಹ್ನ ನಡೆದಿದೆ. ಒಬ್ಬರ ಕಿವಿ ಭಾಗಕ್ಕೆ ಗಾಯವಾಗಿದ್ದು ಬಳಿಕ ಸ್ಥಳೀಯರು ಬೆಳ್ಳಾರೆ ಆಸ್ಪತ್ರೆಗೆ ಕರೆದೊಯ್ದರು.

ಮಂಗಳಮುಖಿಯರ ಹೊಡೆದಾಟ Read More »

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ : 3 ಆರೋಪಿಗಳಿಗೆ ಜಾಮೀನು

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಅಮಿತ್ ದಿಗ್ವೇಕರ್ ಅಲಿಯಾಸ್ ಅಮಿತ್ ಅಲಿಯಾಸ್ ಪ್ರದೀಪ್ ಮಹಾಜನ್, 7ನೇ ಆರೋಪಿ ಸುರೇಶ್ ಎಚ್.ಎಲ್ ಅಲಿಯಾಸ್ ಟೀಚರ್ ಮತ್ತು 17ನೇ ಆರೋಪಿ ಕೆ.ಟಿ ನವೀನ್ ಕುಮಾ‌ರ್ ಅಲಿಯಾಸ್ ನವೀನ್‌ಗೆ ಕೋರ್ಟ್ ಜಾಮೀನು ನೀಡಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್. ವಿಶ್ವಜಿತ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ : 3 ಆರೋಪಿಗಳಿಗೆ ಜಾಮೀನು Read More »

ಬೆಂಗಳೂರು ಮುಳಿಯದಲ್ಲಿ ಮುಳಿಯ  ಪಾಕೋತ್ಸವ

ಬೆಂಗಳೂರು : ಸಂಧ್ಯಾ ಜಯರಾಮ್ ಹಾಗೂ ಮುಳಿಯ ಜ್ಯುವೆಲ್ಸ್ ಸಹಯೋಗದಲ್ಲಿ ಡಿಕೆನ್ಸನ್ ರಸ್ತೆಯಲ್ಲಿನ ಮಣಿಪಾಲ್ ಸೆಂಟರ್ ಆವರಣದಲ್ಲಿ ಮುಳಿಯ  ಪಾಕೋತ್ಸವ ಭಾನುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯಲಕ್ಷ್ಮೀ ಎಂ. ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಜ್ಯುವೆಲ್ಸ್ ಸಿ.ಎಂ.ಡಿ. ಕೇಶವ ಪ್ರಸಾದ್ ಮುಳಿಯ ವಹಿಸಿದ್ದರು. ಖ್ಯಾತ ಹಿನ್ನಲೆ ಗಾಯಕಿ ಶ್ವೇತ ಪ್ರಭು ಉಪಸ್ಥಿತರಿದ್ದರು. ಪಾಕೋತ್ಸವದಲ್ಲಿ ಶ್ರೀಮಾನ್ – ಶ್ರೀಮತಿ ವಿಭಾಗದಲ್ಲಿ ಪುಷ್ಪಲತಾ – ಕೃಷ್ಣಾನಂದ ಪ್ರಥಮ, ಸವಿತಾ – ಸುರೇಶ್ ದ್ವಿತೀಯ, ಲಾವಣ್ಯ – ನವೀನ್ ತೃತೀಯ ಸ್ಥಾನ

ಬೆಂಗಳೂರು ಮುಳಿಯದಲ್ಲಿ ಮುಳಿಯ  ಪಾಕೋತ್ಸವ Read More »

ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಪುತ್ತೂರು : ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಿಸುತಿರುವ ಅಕ್ಷಯ ಕಾಲೇಜಿನಲ್ಲಿ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್  ಮಂಗಳೂರು ಇವರ ಸಹಯೋಗದಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್ “ ಇಂಟೀರಿಯರ್ ಡಿಸೈನ್ ಅಸೋಸಿಯೇಷನಿಂದ ಒಂದು ತಿಂಗಳ “Auto Desk -3DS Max & 3D Rendering” ಕೋರ್ಸ್ ನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ (BASE) ಅಕಾಡೆಮಿಯ ಸಿಇಓ ನವೀನ ಗುರುರಾಜ್, ಅಡ್ಮಿನ್ ಸುಧಾ ಜಯರಾಮ್, ಟ್ರೈನರ್ ದೀಪ್ತಿ , ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ

ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ Read More »

ಗುಡ್ಡ ಕುಸಿತ ಏಳು ಮಂದಿ ಸಾವು

 ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು  ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 7 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಟ್ಯಾಂಕರ್‌ ಚಾಲಕ, ಕ್ಲೀನರ್‌ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಎನ್‌ಡಿ​ಆರ್​ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಮಂದಿ ಅಲ್ಲಿದ್ದರು ಎನ್ನುವ

ಗುಡ್ಡ ಕುಸಿತ ಏಳು ಮಂದಿ ಸಾವು Read More »

ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು

ಉಡುಪಿ : ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಮೃತಪಟ್ಟಿದ್ದು, ಇದೀಗ ಗಂಭೀರ ಗಾಯಗೊಂಡಿದ್ದ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ. ಅಶ್ವಿನಿ (50) ಮೃತ ಪಟ್ಟವರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಅಶ್ವಿನಿ ಮೃತಪಟ್ಟಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಗಂಭಿರವಾಗಿ ಗಾಯಗೊಂಡಿದ್ದ ಅಶ್ವಿನಿ ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಅವರಿಬ್ಬರ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.

ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು Read More »

ಆಲಡ್ಕ ಶ್ರೀ‌ ಸದಾಶಿವ ದೇವಸ್ಥಾನದ ಗೇಟ್ ಉದ್ಘಾಟನೆ, ಪುಷ್ಪವನ ಲೋಕಾರ್ಪಣೆ

ಪುತ್ತೂರು: ಆಲಡ್ಕ‌ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಖ್ಯ ಗೇಟ್ ಮತ್ತು ಪುಷ್ಪವನದ  ಉದ್ಘಾಟನೆ ಇಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಲಡ್ಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದರಲ್ಲಿ ಉಳಿಕೆಯಾದ ಹಣವನ್ನು‌ ದೇವಸ್ಥಾನದ ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಆಲಡ್ಕ ದೇವಸ್ಥಾನದಲ್ಲಿರುವ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರು ಹಾಗೂ ಬ್ರಹ್ಮಕಲಶ ಸಮಿತಿ ಉತ್ತಮ ಕೆಲಸ ಮಾಡಿರುವುದು ಎಲ್ಲರಿಗೂ‌ ಮಾದರಿಯಾಗಿದೆ ಎಂದು ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇಲ್ಲಿನ

ಆಲಡ್ಕ ಶ್ರೀ‌ ಸದಾಶಿವ ದೇವಸ್ಥಾನದ ಗೇಟ್ ಉದ್ಘಾಟನೆ, ಪುಷ್ಪವನ ಲೋಕಾರ್ಪಣೆ Read More »

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನೀರು | ವಾಹನ ಸವಾರರಿಂದ ಪರದಾಟ

 ಕಡಬ : ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಓಡ್ಲ ಎಂಬಲ್ಲಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ. ರಾಜ್ಯ ಹೆದ್ದಾರಿ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಕ್ರಮವಾಗಿ ಅಗೆದು, ಮಣ್ಣನ್ನು ಚರಂಡಿ ಮೇಲೆ ಹಾಕಿದ ಕಾರಣ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲಾಗದೆ ರಸ್ತೆಯಲ್ಲೇ ಹರಿಯುತ್ತಿದೆ. ನಿರಂತರವಾಗಿ ಸುರಿಯುವ ಮಳೆಯಿಂದಾಗಿ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿದೆ. ರಸ್ತೆ ತೋಡಿನಂತಾಗಿದ್ದು, ಮುಂದೆ ಅಪಾಯಕಾರಿ ತಿರುವು ಇದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನೀರು | ವಾಹನ ಸವಾರರಿಂದ ಪರದಾಟ Read More »

ನಾಳೆ (ಜು.17) : ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಭತ್ತದ ಸಸಿ ನಾಟಿ ಕಾರ್ಯಕ್ರಮ

ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕಬಕ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಗೌಡ ಮಹಿಳಾ ಸಂಘ ಹಾಗೂ ಒಕ್ಕಲಿಗ ಯುವ ಸಂಘದ ಸಹಕಾರದೊಂದಿಗೆ ಭತ್ತದ ಸಸಿ ನಾಟಿ ಕಾರ್ಯಕ್ರಮ ಜು.17 ರಂದು ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶೇವಿರೆ ತಿಮ್ಮಪ್ಪ ಗೌಡರ ಗದ್ದೆಯಲ್ಲಿ ನಾಟಿ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜು.17) : ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಭತ್ತದ ಸಸಿ ನಾಟಿ ಕಾರ್ಯಕ್ರಮ Read More »

ಪುತ್ತೂರು ನಗರಸಭೆಗೆ ನಾಲ್ವರು ನಾಮ ನಿರ್ದೇಶಿತ ಸದಸ್ಯರ ನೇಮಕ

ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು ನಗರಸಭೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ. ರಾಜ್ಯ ಸರಕಾರ ಈ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಚಿಕ್ಕಮುಡ್ನೂರಿನ ಚಿದಾನಂದ ರೈ, ಬಲ್ನಾಡು ನಿವಾಸಿ ಶರೀಫ್‍ ಪಿ, ಬನ್ನೂರಿನ ಶಾರದ ಅರಸ್ ಹಾಗೂ ಪರ್ಲಡ್ಕ ನಿವಾಸಿ ಅಹ್ಮದ್ ಬಷೀರ್ ಅವರನ್ನು ನೇಮಕ ಮಾಡಿದೆ.

ಪುತ್ತೂರು ನಗರಸಭೆಗೆ ನಾಲ್ವರು ನಾಮ ನಿರ್ದೇಶಿತ ಸದಸ್ಯರ ನೇಮಕ Read More »

error: Content is protected !!
Scroll to Top