ಸ್ಥಳೀಯ ಸುದ್ದಿ

ಜಿ.ಎಲ್. ಆಚಾರ್ಯದಲ್ಲಿ ಆಟಿ ಸೇಲ್: ಇನ್ನು ಮೂರೇ ದಿನ

ಪುತ್ತೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಆಟಿ ಸೇಲ್ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಈ ಆರ್ ಇರಲಿದ್ದು ಚಿನ್ನ, ಬೆಳ್ಳಿ, ವಜ್ರಾಭರಣಗಳಿಗೆ ಆಕರ್ಷಕ ಉಡುಗೊರೆ ಪ್ರಕಟಿಸಲಾಗಿದೆ. ಚಿನ್ನಾಭರಣ ಖರೀದಿಗೆ ನೇರ 300/- ರೂ. ರಿಯಾಯಿತಿ, 1 ಕ್ಯಾರಟ್ ಗ್ಲೋ ವಜ್ರಾಭರಣ ಖರೀದಿಯ ಮೇಲೆ ರೂ. 5000/- ನೇರ ರಿಯಾಯಿತಿ ಇದೆ. ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದ ಹಾಗೆ ಕೆ.ಜಿ. ಗೆ 3000/- ರೂ. ರಿಯಾಯಿತಿ […]

ಜಿ.ಎಲ್. ಆಚಾರ್ಯದಲ್ಲಿ ಆಟಿ ಸೇಲ್: ಇನ್ನು ಮೂರೇ ದಿನ Read More »

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ

ಕಾರ್ಕಳ: ಮೃತನ ಕಿಡ್ನಿ, ಹೃದಯ, ಕಣ್ಣುಗಳನ್ನು ದಾನ ಮಾಡುವ ಮೂಲಕ ನಂದಳಿಕೆಯ ಕುಟುಂಬವೊಂದು ಸಾವಿನ ನೋವಿನಲ್ಲೂ ಮತ್ತೊಂದಷ್ಟು ಜನರಿಗೆ ಸಾಂತ್ವನವಾಗುವ ಮೂಲಕ ಮಾದರಿಯಾಗಿದ್ದಾರೆ. ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ಮಣ್ಣಿನ ನಂದಳಿಕೆಯ ನಿತೀಶ್ ಎನ್(46) ಮೃತಪಟ್ಚಿದ್ದರು. ಇವರ ಪತ್ನಿ ಮತ್ತು ತಾಯಿ ಮೃತರ ಕಣ್ಣು, ಕಿಡ್ನಿ, ಹೃದಯವನ್ನು ದಾನ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ನಿತೀಶ್ ಅವರು ಒಂದು ಕಣ್ಣಿನ ದೃಷ್ಟಿಯ ತೊಂದರೆ ಅನುಭವಿ ಸುತ್ತ ಬಿದ್ದು, ತಪಾಸಣೆಗಾಗಿ ಬೆಂಗಳೂರಿಗೆ ಬಂದಿದ್ದರು. ತಪಾಸಣೆಯ ಸಂದರ್ಭದಲ್ಲಿ ತೊಂದರೆಯಾಗಿ ಆ್ಯಂಜಿಯೋಪ್ಲಾಸ್ಟ್

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ Read More »

ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರದ ಮಹತ್ವದ ನಿರ್ಧಾರ ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳ ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು

ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

ಪುತ್ತೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಜೆರಾಕ್ಸ್ ಮಾಡಿ ಬರುವುದಾಗಿ ಹೋಗಿ ಬಳಿಕ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಪುತ್ತೂರು ಪಡ್ನೂರು ನಿವಾಸಿ ಗಿರಿಜಾ ದೇವಿ ಮತ್ತು ಮಂಟು ಪಾಸ್ವಾನ ದಂಪತಿಗಳ ಪುತ್ರಿ ರೂಪ (೧೯) ನಾಪತ್ತೆಯಾದ ಯುವತಿ. ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ತಂದೆ ಉಡುಪಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದು ಮನೆಯಲ್ಲಿ ರೂಪ ಮತ್ತು ಆಕೆಯ ತಮ್ಮ ವಾಸವಿದ್ದು ನಿನ್ನೆ ಜೆರಾಕ್ಸ್ ಮಾಡಿಸಲು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ Read More »

ಗುರುವಾಯನಕೆರೆ ಹೆದ್ದಾರಿಯಲ್ಲಿ ಮರಣ ಗುಂಡಿಗಳು | ವಾಹನ ಚಾಲಕರು ಕಂಗಾಲು  ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳು

ಬೆಳ್ತಂಗಡಿ : ಗುರುವಾಯನಕೆರೆ ಕಾರ್ಕಳ ರಸ್ತೆಯಲ್ಲಿ ಹೊಂಡ – ಗುಂಡಿಗಳು ನಿರ್ಮಾಣಗೊಂಡಿದೆ . ಇದರಿಂದಾಗಿ ವಾಹನ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.    ಮಳೆ ಬಂದ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ತುಂಬಿದಾಗ , ಗುಂಡಿಯ ಆಳ ತಿಳಿಯದೆ ದ್ವಿಚಕ್ರ ವಾಹನಗಳನ್ನು ಒಳಗೊಂಡಂತೆ ಇತರ ಸಣ್ಣ-ಪುಟ್ಟ ವಾಹನಗಳು ಬಿದ್ದು ಸವಾರರು ಗಾಯಗೊಳ್ಳುತ್ತಿರುವುದು ದಿನನಿತ್ಯವೂ  ಸಂಭವಿಸುತ್ತಿದೆ . ಹೊಂಡ – ಗುಂಡಿಗಳ ದುರಸ್ತಿ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ

ಗುರುವಾಯನಕೆರೆ ಹೆದ್ದಾರಿಯಲ್ಲಿ ಮರಣ ಗುಂಡಿಗಳು | ವಾಹನ ಚಾಲಕರು ಕಂಗಾಲು  ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳು Read More »

ನಾಳೆ ಮಂಗಳೂರು ಆಕಾಶವಾಣಿಯಲ್ಲಿ ಸೀತಾರಾಮ ಕೇವಳರ ಚಿಂತನ

ಪುತ್ತೂರು: ಅಂತಾರಾಷ್ಟ್ರೀಯ  ರೆಡ್ ಕ್ರಾಸ್ ದಿನ (ಕ್ರೆಸೆಂಟ್ ಡೇ) ಕುರಿತಾಗಿ ಸೀತಾರಾಮ ಕೇವಳ ಅವರು ಮಂಡಿಸಿದ ಚಿಂತನವು  ಬೆಳಿಗ್ಗೆ 6.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ಕೇವಳ ಅವರ ಇನ್ನೂ ಮೂರು ಇತರ ಚಿಂತನಗಳು ( ರಾಷ್ಟ್ರೀಯ  ಕ್ವಿಟ್ ಇಂಡಿಯಾ ಡೇ, ಆಹಾರದ ಸಮರ್ಪಕ ಬಳಕೆ ಮತ್ತು ಉತ್ಸವಗಳು ಹೇಗಿರಬೇಕು ) ಕ್ರಮವಾಗಿ 2025ರ ಜೂನ್ 8, ಜುಲೈ 8 ಮತ್ತು ಆಗಸ್ಟ್ 8ರಂದು ಮುಂಜಾನೆ 6.30ಕ್ಕೆ ಪ್ರಸಾರವಾಗಲಿವೆ.

ನಾಳೆ ಮಂಗಳೂರು ಆಕಾಶವಾಣಿಯಲ್ಲಿ ಸೀತಾರಾಮ ಕೇವಳರ ಚಿಂತನ Read More »

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಮಂಗಳೂರು : ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ Read More »

ನಗರದಲ್ಲಿ ರಸ್ತೆಗಳ ದುರಸ್ತಿಗೆ ಟೆಂಡರ್ ದಾರರಿಗೆ ಸೂಚನೆ : ಬಾಲಚಂದ್ರ ಕೆಮ್ಮಿಂಜೆ

ಪುತ್ತೂರು: ನಗರದಲ್ಲಿ ಈಗಾಗಲೇ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯನ್ನು ತಕ್ಷಣ ದುರಸ್ತಿ ಹಾಗೂ ಡಾಮರೀಕರಣ ಮಾಡಲು ಟೆಂಡರ್ ದಾರರಿಗೆ ಸೂಚನೆ ನೀಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದ್ದಾರೆ. ಈ ಕುರಿತು ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ನಗರದ ಜನತೆಯ ಬಹುನಿರೀಕ್ಷೆಯಂತೆ ಸಂಪೂರ್ಣ ಡಾಮರೀಕರಣ, ಪ್ಯಾಚ್ ವರ್ಕ್ ಗಳನ್ನು ಮಾಡುವ ನಿಟ್ಟಿನಲ್ಲಿ ಟೆಂಡರ್ ಕರೆಯಲು ಅಕಾಲಿಕ ಮಳೆ ಹಾಗೂ ಚುನಾವಣೆ ಸಂದರ್ಭದಲ್ಲಿ ಆಗಿಲ್ಲ. ಇದೀಗ ಸುಮಾರು 7.83 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ

ನಗರದಲ್ಲಿ ರಸ್ತೆಗಳ ದುರಸ್ತಿಗೆ ಟೆಂಡರ್ ದಾರರಿಗೆ ಸೂಚನೆ : ಬಾಲಚಂದ್ರ ಕೆಮ್ಮಿಂಜೆ Read More »

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿ ನ. 12ರಂದು ಆರಂಭಗೊಂಡಿತು. ಯಕ್ಷಗಾನ ಗುರು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್, ಕಾರ್ಯದರ್ಶಿ ಭಾಸ್ಕರ್ ಎಂ.ಎಸ್, ಮಂಜುನಾಥೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಬೆಟ್ಟಂಪಾಡಿ, ಭಜನಾ ಮಂಡಳಿಯ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸನತ್ ಬರಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರು ಶಶಿಕುಮಾರ್ ಕಾವು ಅವರು ತರಬೇತಿ ಕಾರ್ಯಾಗಾರ ನಡೆಸಿದರು.

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ Read More »

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!!

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಲವಾರು ಝಳಪಿಸಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ‌‌ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!! Read More »

error: Content is protected !!
Scroll to Top