ರಿಕ್ಷಾ ಚಾಲಕ ವಿನೋದ್ ನಿಧನ
ಪುತ್ತೂರು: ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಆಟೋ ರಿಕ್ಷಾ ಚಾಲಕ ವಿನೋದ್ (23) ಸೋಮವಾರ ನಿಧನರಾದರು. ಭಕ್ತಕೋಡಿಯಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದ ವಿನೋದ್ ಅವರಿಗೆ ಎರಡು ತಿಂಗಳ ಜ್ವರ ಕಾಣಿಸಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು. ಭಾನುವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಆದಾಗಲೇ ಅವರು ಕೊನೆಯುಸಿರೆಳೆದಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ರಿಕ್ಷಾ ಚಾಲಕ ವಿನೋದ್ ನಿಧನ Read More »










