ಅನಾರೋಗ್ಯದಿಂದ ಶಾಲಾ ವಿದ್ಯಾರ್ಥಿ ಸಂಕೇತ್ ನಿಧನ
ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ಕನ್ನಡ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಸಂಕೇತ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ಮೃತರಿಗೆ ತಂದೆ, ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ಶಾಲಾ ನಿರ್ದೇಶಕ ಬಿಷಪ್ ಯಾಕೂಬ್ ಮೊರ್ ಅಂತೋನಿಯಾಸ್, ಸಂಚಾಲಕ ರೆ.ಫಾ ಹನಿ ಜೇಕಬ್, ಮೆನೇಜರ್ ಸನ್ನಿ ಜಾನ್, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ
ಅನಾರೋಗ್ಯದಿಂದ ಶಾಲಾ ವಿದ್ಯಾರ್ಥಿ ಸಂಕೇತ್ ನಿಧನ Read More »










