ಅಪಘಾತ

ಬೈಕ್- ಇಕೊಮೆಟ್ ಡಿಕ್ಕಿ : ಬೈಕ್ ಸವಾರ ಮೃತ್ಯು

ನೆಲ್ಯಾಡಿ: ಬೈಕ್ ಹಾಗೂ ಇಕೊಮೆಟ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ರಾಷ್ಟ್ರೀಯ ಹೆದ್ದಾಠರಿ 75 ರ ನೆಲ್ಯಾಡಿ ಸಮೀಪ ಅಪಘಾತ ನಡೆದಿದ್ದು, ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟಿನ  ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸುರೇಂದ್ರ ಮಹತೋ(೩೫)ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೆಂಟ್ರಿಗ್ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ರಾತ್ರಿ ಹೊಸಮಜಲು ಕಡೆಯಿಂದ ನೆಲ್ಯಾಡಿಗೆ ಬರುತ್ತಿದ್ದ ವೇಳೆ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಇಕೊಮೆಟ್ ಕೌಕ್ರಾಡಿ ಗ್ರಾ.ಪಂ.ನ ಮುಂಭಾಗ ಡಿಕ್ಕಿಯಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ […]

ಬೈಕ್- ಇಕೊಮೆಟ್ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ಮಣ್ಣು ಅಗೆತ ಸಂದರ್ಭ ಬರೆ ಕುಸಿದು ಮೂವರು ಮೃತ್ಯು

ಮಡಿಕೇರಿ: ಕಟ್ಟಡ ಕಾಮಗಾರಿ ಹಿನ್ನಲೆಯಲ್ಲಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಬರೆ ಕುಸಿದು ಮೂವರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ಮಡಿಕೇರಿಯ ಸ್ಟೀವರ್ಟ್ ಹಿಲ್ ಬಳಿ ನಡೆದಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಬಸವ, ಲಿಂಗಪ್ಪ, ಆನಂದ ಎಂದು ಗುರುತಿಸಲಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಓರ್ವನ ಮೃತದೇಹ ಪತ್ತೆಯಾಗಿದ್ದು ಮತ್ತಿಬ್ಬರಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ಶೋಧ ಕಾರ್ಯಾ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಮಣ್ಣು ಅಗೆತ ಸಂದರ್ಭ ಬರೆ ಕುಸಿದು ಮೂವರು ಮೃತ್ಯು Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು

ಉತ್ತರ ಪ್ರದೇಶ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹರ್ದೋಯ್’ನ ಸವಯಜ್ ಪುರ ಕೊಟ್ಟಾಲಿ ಪ್ರದೇಶದ ಬಿಲ್ ಹೌರ್-ಕತ್ರಾ ರಸ್ತೆಯ ಖಮಾರಿಯಾ ತಿರುವಿನ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತರು ಪಚ್ ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದವರಾಗಿದ್ದು, ಒಂದೇ ಕುಟುಂಬದವರು ಎನ್ನಲಾಗಿದೆ. ಅಪಘಾತದ

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು Read More »

ಸ್ಕೂಟರ್ ಡಿಕ್ಕಿ : ಪಾದಚಾರಿಗೆ ಗಾಯ

ಕೌಡಿಚ್ಚಾರ್: ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಕೌಡಿಚ್ಚಾರ್ ನಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ನಾರಾಯಣ ರೈ (67) ಗಾಯಗೊಂಡವರು. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಹೈಲ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಪರಿಣಾಮ ನಾರಾಯಣ ರೈ ಅವರು ಗಂಭೀರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಕೂಟರ್ ಡಿಕ್ಕಿ : ಪಾದಚಾರಿಗೆ ಗಾಯ Read More »

ಬಸ್‍ ಗೆ ಟಿಪ್ಪರ್ ಡಿಕ್ಕಿ

ಪುತ್ತೂರು: ಟಿಪ್ಪರೊಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂದಿನಿಂದ ಡಿಕ್ಕಿಯಾದ ಘಟನೆ ನಡೆದಿದೆ. ಅರುಣಾ ಥಿಯೇಟರ್ ಬಳಿ ಅಪಘಾತ ಸಂಭವಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಡಿಕ್ಕಿಯ ಪರಿಣಾಮ ಬಸ್ ನ ಹಿಂಭಾಗಕ್ಕೆ ಹಾನಿಯಾಗಿದೆ. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಬ್ಲಾಕ್ ಆಗಿದ್ದು, ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಸ್‍ ಗೆ ಟಿಪ್ಪರ್ ಡಿಕ್ಕಿ Read More »

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ

ಕೇರಳ: ಎರ್ನಾಕುಲಂನಲ್ಲಿರುವ ಕನ್ವೆನ್ಷನ್‌ ಸೆಂಟರ್‌  ನಲ್ಲಿ ಭೀಕರ ಸ್ಫೋಟ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, 23 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದೊಂದು ಉಗ್ರರ ದಾಳಿಯ ಶಂಕೆ ವ್ಯಕ್ತವಾಗಿದೆ. ಈ ಘಟನೆ ಎರ್ನಾಕುಲಂನ ಕಲಮಶ್ಶೇರಿಯಲ್ಲಿರುವ ಜಾಮ್ರಾ ಇಂಟರ್‌ನ್ಯಾಷನಲ್‌ ಸಭಾಭವನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಬೆಳಗ್ಗಿನ ಪ್ರಾರ್ಥನೆಗಾಗಿ ನೂರಾರು ಜನ ಸೇರಿದ್ದು, ಬೆಳಿಗ್ಗೆ

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ Read More »

ತೋಡಿಗೆ ಬಿದ್ದ ಕಾರು : ಚಾಲಕ ಅಪಾಯದಿಂದ ಪಾರು

ಪುತ್ತೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಘಟನೆ  ಭಾನುವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಅಪಘಾತದ ಪರಿಣಾಮ ತೋಡಿನ ಪಕ್ಕದ ಸ್ಲ್ಯಾಬ್‍ ಗೆ ಕಾರು ಡಿಕ್ಕಿಯಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ತೋಡಿಗೆ ಬಿದ್ದ ಕಾರು : ಚಾಲಕ ಅಪಾಯದಿಂದ ಪಾರು Read More »

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ

ಕುಂಬಳೆ: ನಿಲ್ಲಿಸಿದ್ದ ಆಟೋರಿಕ್ಷಾವೊಂದಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣ ನಾಶಗೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬಾಯಾರು ಬಳ್ಳೂರು ನಿವಾಸಿ ರವಿಕುಮಾರ್ ಎಂಬವರ ಆಟೋರಿಕ್ಷಾ ಬೆಂಕಿಗಾಹುತಿಯಾಗಿದ್ದು, ರೋಗಿ ಒಬ್ಬರನ್ನು ರಿಕ್ಷಾದಲ್ಲಿ ಕುಂಬಳೆ ಆಸ್ಪತ್ರೆಗೆ ತಲುಪಿಸಿ, ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಲ್ಲಿಸಲಾಗಿತ್ತು. ರವಿಕುಮಾರ್ ಸ್ವಲ್ಪ ದೂರದಲ್ಲಿ ನಿಂತು ಓರ್ವರಲ್ಲಿ ಮಾತನಾಡುತ್ತಿದ್ದಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾದರೂ ರಿಕ್ಷಾ ಸಂಪೂರ್ಣ ಉರಿದು ಸುಟ್ಟುಹೋಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ Read More »

ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಅಂಕಿತಾ ಮೃತ್ಯು

ಉಜಿರೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ 3ನೇ ತರಗತಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ಉಜಿರೆಯಲ್ಲಿ ನಡೆದಿದೆ. ದಿ.ಅಶೋಕ್ ಹಾಗೂ ಜಯಶ್ರೀ ದಂಪತಿ ಪುತ್ರಿ ಅಂಕಿತಾ ಮೃತಪಟ್ಟ ವಿದ್ಯಾರ್ಥಿನಿ ಬದನಾಜೆ ಹಿ.ಪ್ರಾ. ಶಾಲೆಯ ಎದುರು ರಸ್ತೆ ದಾಟುತ್ತಿರುವ ಸಂದರ್ಭ ಬೈಕ್‍ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಅಂಕಿತಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಅಂಕಿತಾ ಮೃತ್ಯು Read More »

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ವ್ಯಕ್ತಿ ಮೃತ್ಯು!

ಪುತ್ತೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕರಾಯ ಗ್ರಾಮದ ಪೆದಮಲೆಯಲ್ಲಿ ನಡೆದಿದೆ. ಮೃತರನ್ನು ಕರಾಯ ಗ್ರಾಮದ ಸಗುಣ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಅಂಗಾರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಯಂತ ಕುಮಾರ್ ಎಂಬವರ ಮನೆಯಲ್ಲಿ ಕೆಲಸಕ್ಕೆ ಹೋಗಿದ್ದ ಸಗುಣ ಅವರು, ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದಾರೆ. ಸ್ಥಳೀಯರು ಆರೈಕೆ ಮಾಡಿ, ಪುತ್ತೂರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ವ್ಯಕ್ತಿ ಮೃತ್ಯು! Read More »

error: Content is protected !!
Scroll to Top