ಕಾರಿಗೆ ಡಿಕ್ಕಿ ಹೊಡೆದ ಜಲ್ಲಿ ಸಾಗಾಟದ ಲಾರಿ; ಸ್ಥಳೀಯರಿಂದ ಪ್ರತಿಭಟನೆ! | ಈಯರ್ ಫೋನ್ ಹಾಕಿ ಹಾಡು ಕೇಳುತ್ತಾ ಸಾಗುವ ಲಾರಿ ಚಾಲಕರು: ಸ್ಥಳೀಯರ ಆರೋಪ!
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಜಲ್ಲಿ ಸಾಗಾಟದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಲೊರೆಟ್ಟೋ ಎಂಬಲ್ಲಿ ನಡೆದಿದೆ. ಬೃಹತ್ ಗಾತ್ರದ ಲಾರಿಗಳ ಅಟ್ಟಹಾಸದಿಂದ ಬೇಸತ್ತಿದ್ದ ಸ್ಥಳೀಯರು, ಇದೇ ಸಂದರ್ಭ ಪ್ರತಿಭಟನೆ ನಡೆಸಿದರು. ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ತೆರಳುತ್ತಿದ್ದ ಮೈಸೂರು ಮೂಲದ ಕೃಷ್ಣ ಅರಸ ಅಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಿಸಿರೋಡಿನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆಯನ್ನು ಕೆ.ಎನ್.ಆರ್.ಸಿ. ಕಂಪೆನಿ […]