ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ
ಉಪ್ಪಿನಂಗಡಿ: ಕೆಲವೇ ಕ್ಷಣಗಳೊಳಗೆ ಪೆರ್ನೆಯ ಒಂದೇ ಪ್ರದೇಶದಲ್ಲಿ ಎರಡು ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಜ.8 ಸೋಮವಾರ ಸಂಜೆ ಪೆರ್ನೆ ಜಂಕ್ಷನ್‍ನಿಂದ ಕೆಲವೇ ಅಂತರ ದೂರದಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್‍ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಹಾಗೂ ಗ್ಯಾರೇಜ್‍ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ ಮೇಲಿನ ಘಟನೆ ನಡೆದ […]
ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ Read More »