ಅಪಘಾತ

ಮಹಿಳೆಗೆ ಬಸ್ ಡಿಕ್ಕಿ ಹೊಡೆದು ಮೃತ್ಯು !

ಸುಳ್ಯ: ಮಹಿಳೆಯೊಬ್ಬರಿಗೆ ಕೆಎಸ್‍ ಆರ್‍ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ರಸ್ತೆ ದಾಟುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಂದಾಜು 40 ವರ್ಷದ ಮಹಿಳೆಯಾಗಿದ್ದು, ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ […]

ಮಹಿಳೆಗೆ ಬಸ್ ಡಿಕ್ಕಿ ಹೊಡೆದು ಮೃತ್ಯು ! Read More »

ವಿಷ ಜಂತು ಕಡಿದು ವ್ಯಕ್ತಿ ಮೃತ್ಯು !

ಬಂಟ್ವಾಳ: ವ್ಯಕ್ತಿಯೋರ್ವರಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ನಗ್ರಿಯಲ್ಲಿ ನಡೆದಿದೆ. ನಗ್ರಿ ನಿವಾಸಿ ಅಂದ್ರು ಡಿ’ಸೋಜಾ (60) ಮೃತಪಟ್ಟವರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಂದ್ರು ಡಿ’ಸೋಜಾ ಅವರಿಗೆ ವಿಷ ಜಂತು ಕಡಿದಿದೆ. ತಕ್ಷಣ ಹಳ್ಳಿ ಔಷಧಿ ಮಾಡಲಾಗಿತ್ತು. ಗಾಯ ಉಲ್ಷಣವಾಗಿತ್ತು. ಗುಣಮುಖ ಕಾಣದೇ ಇದ್ದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಜಂತು ಕಡಿದು ವ್ಯಕ್ತಿ ಮೃತ್ಯು ! Read More »

ರೈಲು ಡಿಕ್ಕಿ ಹೊಡೆದು ಕಾರ್ಮಿಕ ಮೃತ್ಯು !

ಬಂಟ್ವಾಳ : ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಿ.ಸಿ.ರೋಡು ಸಮೀಪದ ‌ಮಾರ್ನಬೈಲು ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಮೂಲತಃ ಮಡಂತ್ಯಾರು ಪಣಕಜೆ ನಿವಾಸಿ, ಪ್ರಸ್ತುತ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಮಾರ್ನಬೈಲು ದಾಸರಗುಡ್ಡೆಯಲ್ಲಿ ವಾಸವಾಗಿರುವ ಹರಿಶ್ಚಂದ್ರ (37) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕರಾಗಿರುವ ಹರಿಶ್ಚಂದ್ರ ಇಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದು, ರೈಲ್ವೆ ಹಳಿಯನ್ನು ದಾಟುವ ಸಂದರ್ಭ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ರೈಲ್ವೆ ಪೋಲೀಸ್ ಇಲಾಖೆಯ ಎ.ಎಸ್.ಐ.ಜಾನ್ ಕೊರಿಯ ಕೋಸ್ ಸ್ಥಳಕ್ಕೆ

ರೈಲು ಡಿಕ್ಕಿ ಹೊಡೆದು ಕಾರ್ಮಿಕ ಮೃತ್ಯು ! Read More »

ಮೀನುಗಾರಿಕೆ ಬೋಟ್ ಮುಳುಗಡೆ ! | ಬೋಟ್‍ಗೆ ಹಾನಿ

ಉಳ್ಳಾಲ: ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್‌ ಬೋಟೊಂದು ಬಂಡೆಗೆ ಬಡಿದು ಮುಳುಗಿದ ಘಟನೆ ಉಳ್ಳಾಲದಲ್ಲಿ ಶುಕ್ರವಾರ ನಸುಕಿನ ವೇಳೆ ನಡೆದಿದೆ. ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಣೆ ಮಾಡಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‍ಗೆ ಹಾನಿಯಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ `ನವಾಮಿ – ಶಿವಾನಿ’ ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ಪ್ರವೀಣ್ ಸುವರ್ಣ, ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹಯದ್ದೂರ್,

ಮೀನುಗಾರಿಕೆ ಬೋಟ್ ಮುಳುಗಡೆ ! | ಬೋಟ್‍ಗೆ ಹಾನಿ Read More »

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು!!

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಮೃತಳ ಕುಟುಂಬಸ್ಥರು ಅನ್ನಪೂರ್ಣ ಅವರು ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದು ರೈಲಿನಿಂದ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮಹಿಳೆಯರಿಗಾಗಿ ಮೀಸಲಿದ್ದ ರೈಲ್ವೆ ಬೋಗಿಯಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಹಿಳೆಯರಿಗೆ ಪ್ರತ್ಯೇಕ ಇರುವ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು. ಜೊತೆಗೆ ಸಹೋದರ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು!! Read More »

ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ!

ಕಡಬ: ರಿಕ್ಷಾವೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಸಮೀಪದ ಜೋಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಕುಂತೂರಿನಿಂದ ಆಲಂಕಾರು ಕಡೆಗೆ ಬರುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ! Read More »

ರೈಲು  ಡಿಕ್ಕಿ : ಇಬ್ಬರು ಮೃತ್ಯು

ಕಾಸರಗೋಡು: ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಪಳ್ಳಂ ರೈಲ್ವೇ ಸೇತುವೆ ಬಳಿ ಇಂದು ಮುಂಜಾನೆ ನಡೆದಿದೆ. 20 ರಿಂದ 25 ವರ್ಷದೊಳಗಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಮುಂಜಾನೆ ಸುಮಾರು 5.30 ರ ಹೊತ್ತಿಗೆ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ದೂರಿನದಂತೆ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೈಲು  ಡಿಕ್ಕಿ : ಇಬ್ಬರು ಮೃತ್ಯು Read More »

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !!

ಬಂಟ್ವಾಳ: ಆಕಸ್ಮಿಕ ಬೆಂಕಿ ತಗುಲಿ ಫೈವುಡ್ ಫ್ಯಾಕ್ಟರಿ ಭಸ್ಮವಾಗಿ 2 ಲಕ್ಷ ರೂ. ನಷ್ಟ ಉಂಟಾದ ಘಟನೆ ಸಜೀಪ ಸಮೀಪದ ಕೋಟೆಕಣಿಯಲ್ಲಿ ನಡೆದಿದೆ. ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ರಾಶಿ ಹಾಕಿದ್ದ ಮರದ ಅವಶೇಷದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಸಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾ‌ರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ಭಾಗವಹಿಸಿದ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !! Read More »

ಪೋಳ್ಯದಲ್ಲಿ ಅಪಘಾತ: ಶಿಕ್ಷಕಿ ಅನಿತಾ ಮೃತ್ಯು!

ಪುತ್ತೂರು: ಮುರ ಸಮೀಪದ ಪೋಳ್ಯದಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಅನಿತಾ ಎಂದು ಗುರುತಿಸಿದ್ದು, ನೇರಳಕಟ್ಟೆ ಶಾಲಾ ಶಿಕ್ಷಕಿ ಎಂದು ಹೇಳಲಾಗಿದೆ. ದ್ವಿಚಕ್ರ ವಾಹನದಲ್ಲಿ ಪತಿ ಹಾಗೂ ತನ್ನ ಮಗುವಿನೊಂದಿಗೆ ಸಂಚರಿಸುತ್ತಿದ್ದ ಅನಿತಾ ಅವರು, ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪತಿ ಸುರೇಶ್ ಕುಲಾಲ್ ಹಾಗೂ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಪುತ್ತೂರು ನಗರ

ಪೋಳ್ಯದಲ್ಲಿ ಅಪಘಾತ: ಶಿಕ್ಷಕಿ ಅನಿತಾ ಮೃತ್ಯು! Read More »

ಕಾರು ಡಿಕ್ಕಿ, ಹುಲಿ ಸಾವು

ಮೈಸೂರು: ಮೈಸೂರು – ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಹುಲಿಗೆ ಕಾರು ಢಿಕ್ಕಿ ಹೊಡೆದು, ಹುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಾವನ್ನಪ್ಪಿದ ಹುಲಿಯ ವಯಸ್ಸು ಸುಮಾರು ಒಂದೂವರೆ ವರ್ಷ ಎಂದು ಹೇಳಲಾಗಿದ್ದು, ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚರಿಸುವ ವೇಳೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹುಲಿ ದಾಟುತ್ತಿತ್ತು. ಈ ಸಂದರ್ಭ

ಕಾರು ಡಿಕ್ಕಿ, ಹುಲಿ ಸಾವು Read More »

error: Content is protected !!
Scroll to Top