ಅಪಘಾತ

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ!!

ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ ಮತ್ತಾವರದಲ್ಲಿ ಗುರುವಾರ ಸಂಜೆ ನಡೆದಿದೆ. ಮತ್ತಾವರ ಗ್ರಾಮದ ವಸಂತ (43) ಮೃತಪಟ್ಟವರು. ಸಂಜೆಯ ವೇಳೆ ತೋಟದ ಮನೆಯಲ್ಲಿದ್ದ ಅವರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ವಸಂತ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆನೆ ದಾಳಿಗೆ ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ!! Read More »

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು!

ಕಾರು ಅಪಘಾತದಲ್ಲಿ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡು, ಮಗು ಮೃತಪಟ್ಟ ಘಟನೆ ಬಹರೈನ್‌ನಿಂದ ವರದಿಯಾಗಿದೆ. ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಮೂರು ವರ್ಷದ ಅಯಾನ್ ಅಬ್ದುಲ್ಲಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ದಂಪತಿಗಳು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು! Read More »

ಪಿಕಪ್ – ಆಟೋ ರಿಕ್ಷಾ ಡಿಕ್ಕಿ!

ಪುತ್ತೂರು: ರಿಕ್ಷಾ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾದ ಘಟನೆ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಆಟೋ ರಿಕ್ಷಾ ಚಾಲಕ ರಝಾಕ್ ಜಿಡೆಕಲ್ ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಕಡೆಯಿಂದ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಪುತ್ತೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದ ಮುಂಭಾಗ ಜಖಂಗೊಂಡಿದೆ.

ಪಿಕಪ್ – ಆಟೋ ರಿಕ್ಷಾ ಡಿಕ್ಕಿ! Read More »

ಸ್ಕೂಟಿ ಸಹಿತ ಸಮುದ್ರಕ್ಕೆ ಬಿದ್ದ ಮೀನುಗಾರ! | ಮೃತದೇಹ, ಸ್ಕೂಟಿ ಮೇಲೆತ್ತಿದ ಆಪದ್ಭಾಂಧವ ಈಶ್ವರ್ ಮಲ್ಪೆ

ಉಡುಪಿ: ಮಲ್ಪೆ ಸಮುದ್ರಕ್ಕೆ ಬಿದ್ದು ಮೃತಪಟ್ಟ ತಮಿಳುನಾಡು ಮೂಲದ ಮೀನುಗಾರನ ಮೃತದೇಹವನ್ನು ಹಾಗೂ ಸ್ಕೂಟಿಯನ್ನು ಮುಳುಗು ತಜ್ಞ ಈಶ್ವರ್ ‍ಮಲ್ಪೆ ಪತ್ತೆ ಮಾಡಿ, ಮೇಲೆತ್ತಿದ್ದಾರೆ. ತಮಿಳುನಾಡು ಮೂಲದ ಮೀನುಗಾರ ಮಲ್ಪೆ ಮೀನುಗಾರಿಕಾ ಬಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅವರ ಹೆಸರು ತಿಳಿದುಬಂದಿಲ್ಲ. ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಅಚಾನಕ್ ಆಗಿ ಸಮುದ್ರಕ್ಕೆ ಬಿದ್ದಿದ್ದರು. ಸ್ಥಳಕ್ಕಾಗಮಿಸಿದ ಆಪದ್ಭಾಂಧವ ಈಶ್ವರ್ ಮಲ್ಪೆ ಅವರು, ಸಮುದ್ರಕ್ಕೆ ಧುಮುಕ್ಕಿದ್ದಾರೆ. ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿತ್ತು. ಕ್ರೇನ್ ಬಳಸಿ ಸ್ಕೂಟಿ ಹಾಗೂ ಮೃತದೇಹವನ್ನು ಸ್ಕೂಟಿ ಹಾಗೂ ಮೃತದೇಹವನ್ನು

ಸ್ಕೂಟಿ ಸಹಿತ ಸಮುದ್ರಕ್ಕೆ ಬಿದ್ದ ಮೀನುಗಾರ! | ಮೃತದೇಹ, ಸ್ಕೂಟಿ ಮೇಲೆತ್ತಿದ ಆಪದ್ಭಾಂಧವ ಈಶ್ವರ್ ಮಲ್ಪೆ Read More »

ಮೆಡಿಕಲ್ ಶಾಪಿಗೆ ನುಗ್ಗಿದ ಆಂಬುಲೆನ್ಸ್: ಅಂಗಡಿಗಳಿಗೆ ಹಾನಿ!!

ಜನೌಷಧ ಕೇಂದ್ರಕ್ಕೆ ಆಂಬುಲೆನ್ಸ್ ನುಗ್ಗಿದ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ, ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ರಸ್ತೆ ಪಕ್ಕಕ್ಕೆ ಚಲಿಸಿದೆ. ನೇರವಾಗಿ ಜನೌಷಧ ಕೇಂದ್ರಕ್ಕೆ ಆಂಬುಲೆನ್ಸ್ ನುಗ್ಗಿದ್ದು, ಚಾಲಕ ಗಾಯಗೊಂಡಿದ್ದಾನೆ. ಜನೌಷಧ ಕೇಂದ್ರ ಸೇರಿದಂತೆ ಪಕ್ಕದ ಅಂಗಡಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮೆಡಿಕಲ್ ಶಾಪಿಗೆ ನುಗ್ಗಿದ ಆಂಬುಲೆನ್ಸ್: ಅಂಗಡಿಗಳಿಗೆ ಹಾನಿ!! Read More »

ಆಕ್ಟಿವಾ-ಕಾರು ಅಪಘಾತ !

ಪುತ್ತೂರು: ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಆಕ್ಟಿವಾ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನಡೆದಿದೆ. ಅಪಘಾತದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆಕ್ಟಿವಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಆಕ್ಟಿವಾ-ಕಾರು ಅಪಘಾತ ! Read More »

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ !

ಸುಳ್ಯ: ಸುಳ್ಯ ಕೆ.ವಿ.ಜಿ ಕ್ಯಾಂಪಸ್ ಬಳಿಯ ಬಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಕಣ್ಮರೆಯಾದ ವ್ಯಕ್ತಿ ಶವ ಪತ್ತೆಯಾಗಿದೆ. ಬಟ್ಟೆ ಒಗೆಯಲು ಹಾಗೂ ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬರು ಕಣ್ಮರೆಯಾಗಿದ್ದರು. ಆ ವ್ಯಕ್ತಿಯ ಪತ್ತೆಗಾಗಿ ಸುಳ್ಯ ಆರಕ್ಷಕ ಠಾಣೆ ಸಿಬ್ಬಂದಿಗಳು ಅಗ್ನಿಶಾಮಕ ದಳ ಹಾಗೂ ಪೈಚಾರಿನ ಮುಳುಗು ತಜ್ಞರ ತಂಡ ಶೋಧ ಮುಂದುವರಿಸಿದ್ದರು. ಇದೀಗ ಮೃತ ದೇಹವನ್ನು ನೀರಿನಿಂದ ಮೇಲೇತ್ತಲಾಗಿದೆ ಎಂದು ತಿಳಿದು ಬಂದಿದೆ.

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ ! Read More »

ನದಿಯಲ್ಲಿ ಈಜಲು ತೆರಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು !

ನದಿಯಲ್ಲಿ ಈಜಲು ತೆರಳಿದ್ದ ಮೂವರು ಇಂಜಿನೀಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗದ ಘಟನೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯ ಕೊಂಗಣ ನದಿಯಲ್ಲಿ ನಡೆದಿದೆ. ರಷಿಕ್ ಕುಶಾಲಪ್ಪ (20), ಆಕಾಶ್ ಬಿದ್ದಪ್ಪ (20) ಹಾಗೂ ಸುದೀಶ್ ಅಯ್ಯಪ್ಪ (20) ನೀರುಪಾಲದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಕೊಡಗಿನ ಪೊನ್ನಂಪೇಟೆ ಸಿಇಟಿ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಐವರ ತಂಡ ವೀಕೆಂಡ್ ಕಾರಣಕ್ಕೆ ಕೊಂಗಣ ನದಿಯಲ್ಲಿ ಈಜಲು ತೆರಳಿದ್ದು ಈ ವೇಳೆ ಘಟನೆ ಸಂಭವಿಸಿದೆ. ನೀರಿನ ಹರಿವು ಹೆಚ್ಚಿದ್ದರಿಂದ ಮೂವರು

ನದಿಯಲ್ಲಿ ಈಜಲು ತೆರಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು ! Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ !

ಪುತ್ತೂರು: ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸರ್ವೆ ದೇವಸ್ಥಾನ ಬಳಿ ಇಂದು ಮಧ್ಯಾಹ್ನ ನಡೆದಿದೆ. ಆಲ್ಟೋ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಬೆಳಂದೂರಿನವರೆನ್ನಲಾದ ಮುಸ್ಲಿಂ ಕುಟುಂಬ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಿಂದ ಸಣ್ಣ ಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಫಾತದ ತೀವ್ರತೆಗೆ ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ! Read More »

ಬೈಕ್ ಸಹಸವಾರನ ಮೇಲೆ ಲಾರಿ ಹರಿದು ಮೃತ್ಯು !

ಬಂಟ್ವಾಳ: ಬೈಕೊಂದು ಸ್ಕಿಡ್ ಆಗಿ ಅಡ್ಡಬಿದ್ದು ಬೈಕ್‍ ನಲ್ಲಿದ್ದ ಸಹಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಬಿ.ಸಿ.ರೋಡು ವೃತ್ತದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಬೆಂಗ್ರೆ ನಿವಾಸಿ ರಮೀಜ್‍ (20) ಮೃತಪಟ್ಟ ಸಹಸವಾರ. ಬೈಕ್‍ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಬಿದ್ದಿದ್ದು, ರಮೀಜ್‍ ಅವರ ಮೇಲೆಯೇ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭ ಲಾರಿ ಸಮೇತ ಚಾಲಕ ಪರಾರಿಯಾಗಿದ್ದು, ಬಳಿಕ ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ವೃತ್ತದ ಬಳಿ ಸಂಚಾರ

ಬೈಕ್ ಸಹಸವಾರನ ಮೇಲೆ ಲಾರಿ ಹರಿದು ಮೃತ್ಯು ! Read More »

error: Content is protected !!
Scroll to Top